ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಸಭೆಗೆ ಹೋಗಬಹುದು ಎಂಬ ಚರ್ಚೆ ಜೋರಾಗಿದೆ. ಈ ನಡುವೆ ಅವರ ಮಗ ನಿಶಾಂತ್ ಕುಮಾರ್ ಹೆಸರು ಕೂಡ ಮುನ್ನೆಲೆಗೆ ಬಂದಿದೆ.
india-news Mar 05 2026
Author: Gowthami K Image Credits:Getty
Kannada
ನಿತೀಶ್ ಕುಮಾರ್ ರಾಜ್ಯಸಭೆಗೆ ಹೋಗುವ ಚರ್ಚೆ ನಡುವೆ ಮಗನದ್ದೇ ಸುದ್ದಿ
ನಿಶಾಂತ್ ಕುಮಾರ್ ಅವರು ಜುಲೈ 20, 1975 ರಂದು ಜನಿಸಿದರು. ಇವರು ನಿತೀಶ್ ಕುಮಾರ್ ಮತ್ತು ಮಂಜು ಸಿನ್ಹಾ ದಂಪತಿಯ ಏಕೈಕ ಪುತ್ರ. ಶೀಘ್ರದಲ್ಲೇ ರಾಜಕೀಯಕ್ಕೆ ಎಂಟ್ರಿ ಕೊಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
Image credits: Getty
Kannada
ಯಾರು ಈ ನಿಶಾಂತ್ ಕುಮಾರ್?
2007ರಲ್ಲಿ ನಿಶಾಂತ್ ತಾಯಿ ನಿಧನರಾದರು. ನಿಶಾಂತ್ ಇನ್ನೂ ಅವಿವಾಹಿತರಾಗಿದ್ದು, ಹೆಚ್ಚಿನ ಸಮಯವನ್ನು ಪಾಟ್ನಾದಲ್ಲೇ ಕಳೆಯುತ್ತಾರೆ. ಇಲ್ಲಿಯವರೆಗೂ ರಾಜಕೀಯ ವೇದಿಕೆ ಮತ್ತು ರ‍್ಯಾಲಿಗಳಿಂದ ದೂರವೇ ಉಳಿದಿದ್ದರು.
Image credits: Getty
Kannada
ಇಲ್ಲಿಯವರೆಗೆ ರಾಜಕೀಯದಿಂದ ದೂರವೇ ಉಳಿದಿದ್ದ ನಿಶಾಂತ್
ಕೆಲವೊಮ್ಮೆ ತಂದೆಯ ಜೊತೆ ಔಪಚಾರಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರೂ, ಪಕ್ಷದಲ್ಲಿ ಯಾವುದೇ ಹುದ್ದೆ ಅಥವಾ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲ.
Image credits: Getty
Kannada
ನಿಶಾಂತ್ ಕುಮಾರ್ ಶಿಕ್ಷಣ
ಪ್ರಾಥಮಿಕ ಶಿಕ್ಷಣವನ್ನು ಪಾಟ್ನಾದ ಸೇಂಟ್ ಕರೆನ್ಸ್ ಶಾಲೆ. ನಂತರ ಮಸ್ಸೂರಿಯ ಮಾನವ ಭಾರತಿ ಇಂಟರ್‌ನ್ಯಾಷನಲ್ ಸ್ಕೂಲ್, 12ನೇ ತರಗತಿ ಬಳಿಕ ರಾಂಚಿಯ ಬಿಐಟಿ ಮೆಸ್ರಾದಿಂದ ಸಾಫ್ಟ್‌ವೇರ್ ಎಂಜಿನಿಯರಿಂಗ್ ಪದವಿ ಪಡೆದರು.
Image credits: Getty
Kannada
ನಿಶಾಂತ್ ಕುಮಾರ್ ವೈಯಕ್ತಿಕ ಜೀವನ
ಕುಟುಂಬದವರ ಪ್ರಕಾರ, ನಿಶಾಂತ್‌ಗೆ ಆಧ್ಯಾತ್ಮಿಕ ಜೀವನದ ಕಡೆಗೆ ಹೆಚ್ಚು ಒಲವಿದೆ. ಅವರು ಸಾರ್ವಜನಿಕ ಚರ್ಚೆಗಳು ,ರಾಜಕೀಯ ಹೇಳಿಕೆಗಳಿಂದ ದೂರ ಉಳಿದಿದ್ದಾರೆ. ಇದೇ ಕಾರಣಕ್ಕೆ ಮಾಧ್ಯಮಗಳ ಮುನ್ನೆಲೆಯಿಂದಲೂ ದೂರವಿದ್ದರು.