Asianet Suvarna News Asianet Suvarna News

'ಗಾಂಧೀಜಿ ತೋರಿದ ದಾರಿಯಲ್ಲಿ ಮೋದಿ ಸರ್ಕಾರ'

ಭಾರತ ಸ್ವಾವಲಂಬಿಯಾಗುವ ಜೊತೆಗೆ ಹಳ್ಳಿಗಳ ಉದ್ಧಾರವಾಗಬೇಕು ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು ಆದೇ ದಾರಿಯಲ್ಲಿ ಪ್ರಧಾನಿ ಮೋದಿ ಸರ್ಕಾರ ಸಾಗುತ್ತಿದೆ ಎಂದ ಶಾಸಕ ಸಿ.ಎಸ್‌.ನಿರಂಜನಕುಮಾರ್‌  

Narendra Modi Govt Follows Mahatma Gandhiji Root
Author
First Published Oct 3, 2022, 6:04 AM IST

ಗುಂಡ್ಲುಪೇಟೆ(a.03) :ಭಾರತ ಸ್ವಾವಲಂಬಿಯಾಗುವ ಜೊತೆಗೆ ಹಳ್ಳಿಗಳ ಉದ್ಧಾರವಾಗಬೇಕು ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು ಅದೇ ದಾರಿಯಲ್ಲಿ ಪ್ರಧಾನಿ ಮೋದಿ ಸರ್ಕಾರ ಸಾಗುತ್ತಿದೆ ಎಂದು ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದ ಸಭಾ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ (National Festival) ಆಚರಣೆ ಸಮಿತಿ, ತಾಲೂಕು ಆಡಳಿತ ಆಯೋಜಿಸಿದ್ದ ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಾತ್ಮ ಗಾಂಧೀಜಿ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಇಂದು ಭಾರತ ಸಾಗುತ್ತಿದೆ. ಅಹಿಂಸ ಪಾಲಕರಾದ ಗಾಂಧಿ(Mahathma Gandhiji) ತಮ್ಮ ಜೀವನದುದ್ದಕ್ಕು ಅಹಿಂಸೆ ಮಾರ್ಗ ಪಾಲಿಸಿಕೊಂಡು ಬಂದರು ಎಂದರು.

ಈ ಕಾರಣದಿಂದಲೇ ಗಾಂಧೀಜಿ ಮೇಲೆ ಅಪಾರ ನಂಬಿಕೆಯಿಟ್ಟು ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ನೂರಾರು ಹೋರಾಟ, ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟರು ಎಂದರು.

ತಹಸೀಲ್ದಾರ್‌ ಸಿ.ಜಿ. ರವಿಶಂಕರ್‌ ಮಾತನಾಡಿ, ಭಾರತ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಹಾಗೂ ಅಹಿಂಸ ಮಾರ್ಗದಲ್ಲಿ ಬದುಕು ಸಾಧಿಸಿದ ಹಿನ್ನೆಲೆ ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಪ್ರತಿಮೆಯಿಟ್ಟು ಪೂಜೆ ಸಲ್ಲಿಸುತ್ತಿದ್ದಾರೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಎಂ. ಶೈಲಕುಮಾರ್‌ ಮಾತನಾಡಿ ಅಬ್ದುಲ್‌ ಕಲಾಂ ಒಮ್ಮೆ ನೆಲ್ಸನ್‌ ಮಂಡೆಲಾರನ್ನು ಕುರಿತು ನೀವು ಸೆರೆಮನೆ ಅನುಭವಿಸಿದ ಕೋಣೆ ನೋಡಬೇಕು ಎಂದು ಬಯಕೆ ವ್ಯಕ್ತಪಡಿಸುತ್ತಾರೆ.

ಆಗ ನೆಲ್ಸನ್‌ ಮಂಡೆಲಾ 10-10 ಅಡಿಯ ಸ್ಟೀಲ್‌ ಪೆಟ್ಟಿಯೊಳಗೆ ಸುಮಾರು ವರ್ಷಗಳ ಕಾಲ ಸೆರೆ ವಾಸ ಅನುಭವಿಸಿದ್ದನ್ನು ತೋರಿಸಿದಾಗ ಇದನ್ನು ಕಂಡು ಆಶ್ಚರ್ಯರಾದ ಕಲಾಂ ಹೇಗೆ ಸಾಧ್ಯವಾಯಿತು ಎಂದು ಕೇಳಿದಾಗ ಉತ್ತರಿಸಿದ ಮಂಡೆಲಾ ದಕ್ಷಿಣ ಆಫ್ರಿಕಾದಲ್ಲೂ ಹೋರಾಟದ ಕಿಚ್ಚು ಹಚ್ಚಲು ಗಾಂಧಿ ಕಾರಣ ಎಂದು ತಿಳಿಸಿದರು ಎಂದರು.

ಮುಖ್ಯ ಶಿಕ್ಷಕ ಮಲ್ಲು ಮಾತನಾಡಿ ಗಾಂಧಿ ಬಹುಮುಖ ಪ್ರತಿಭೆ, ಎಲ್ಲಾ ರಾಷ್ಟ್ರಗಳು ಹಿಂಸಾತ್ಮಕವಾಗಿ ಸ್ವಾತಂತ್ರ್ಯ ಪಡೆದು ಕೊಂಡರೆ, ಭಾರತದಲ್ಲಿ ಗಾಂಧೀಜಿ ಮಾತ್ರ ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯ ಪಡೆದರು ಎಂದರು.

ಸಮಾರಂಭದಲ್ಲಿ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಎಚ್‌.ಎಂ.ಮಹೇಶ್‌, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀಕಂಠ ರಾಜೇ ಅರಸು, ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕ ನಂಜುಂಡೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಸಿ. ಶಿವಮೂರ್ತಿ, ಪುರಸಭೆ ಸದಸ್ಯ ಸಿದ್ದಯ್ಯ ಸೇರಿದಂತೆ ವಿವಿಧ ಸಂಘಟನೆ ಪ್ರಮುಖ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಪುರಸಭೆ ಅಧ್ಯಕ್ಷ ಮತ್ತೆ ಗೈರು :ಕಳೆದ ಮೂರು ದಿನಗಳ ಹಿಂದೆ ಪಟ್ಟಣದಲ್ಲಿ ನಡೆದ ಗ್ರಾಮೀಣ ದಸರಾ ಸಮಾರಂಭಕ್ಕೆ ಗೈರಾಗಿದ್ದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಪುರಸಭೆ ಸದಸ್ಯರು ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗೈರಾಗಿದ್ದಾರೆ.

ಸಹಜವಾಗಿ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಸಂಸದ, ವಿಧಾನ ಪರಿಷತ್‌ ಸದಸ್ಯರು.ಕಾಡಾ ಅಧ್ಯಕ್ಷರು ತಾಲೂಕು ಮಟ್ಟದ ಸಮಾರಂಭದಲ್ಲಿ ಗೈರಾಗುವುದು ಸಹಜ.

ಆದರೆ ಪಟ್ಟಣದಲ್ಲಿ ಶಾಸಕರು ಹಾಜರಿರುವ ಎಲ್ಲಾ ಸಭೆ, ಸಮಾರಂಭದಲ್ಲಿ ಹಾಜರಿರುತ್ತಿದ್ದ ಪುರಸಭೆ ಅಧ್ಯಕ್ಷ ಮತ್ತವರ ಬೆಂಬಲಿಗ ಸದಸ್ಯರು, ಗ್ರಾಮೀಣ ದಸರಾ ಮತ್ತು ಗಾಂಧಿ ಜಯಂತಿ ಕಾರ್ಯಕ್ರಮಗಳ ಸತತ ಗೈರಾಗಿರುವ ಒಳಾರ್ಥ ನಿಗೂಢವಾಗಿದೆ.

  • ಭಾರತ ಸ್ವಾವಲಂಬಿಯಾಗುವ ಜೊತೆಗೆ ಹಳ್ಳಿಗಳ ಉದ್ಧಾರವಾಗಬೇಕು ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು
  • ಅದೇ ದಾರಿಯಲ್ಲಿ ಪ್ರಧಾನಿ ಮೋದಿ ಸರ್ಕಾರ ಸಾಗುತ್ತಿದೆ ಎಂದು ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಹೇಳಿದರು.
  • ಮಹಾತ್ಮ ಗಾಂಧೀಜಿ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಇಂದು ಭಾರತ ಸಾಗುತ್ತಿದೆ
Follow Us:
Download App:
  • android
  • ios