Asianet Suvarna News Asianet Suvarna News

ಜಾನ್ಸನ್‌ ಲಸಿಕೆ ಡೆಲ್ಟಾ ಮೇಲೂ ಪರಿಣಾಮಕಾರಿ

  • ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕಂಪನಿ ಅಭಿವೃದ್ಧಿಪಡಿಸಿರುವ ಸಿಂಗಲ್‌ ಡೋಸ್‌ ಕೊರೋನಾ ಲಸಿಕೆ
  • ವಿಶ್ವದಾದ್ಯಂತ ಹಾವಳಿ ಎಬ್ಬಿಸುತ್ತಿರುವ ಡೆಲ್ಟಾರೂಪಾಂತರಿ ವೈರಸ್‌
  • ಸಾಂಕ್ರಾಮಿಕವಾದ ಎಲ್ಲಾ ವೈರಸ್‌ಗಳ ಮೇಲೂ ಪರಿಣಾಮಕಾರಿ
Johnson vaccine most effective For Delta virus snr
Author
Bengaluru, First Published Jul 3, 2021, 11:37 AM IST

ನವದೆಹಲಿ (ಜು.03): ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕಂಪನಿ ಅಭಿವೃದ್ಧಿಪಡಿಸಿರುವ ಸಿಂಗಲ್‌ ಡೋಸ್‌ ಕೊರೋನಾ ಲಸಿಕೆಯು, ಇದೀಗ ವಿಶ್ವದಾದ್ಯಂತ ಹಾವಳಿ ಎಬ್ಬಿಸುತ್ತಿರುವ ಡೆಲ್ಟಾರೂಪಾಂತರಿ ವೈರಸ್‌ ಸೇರಿದಂತೆ ಹೆಚ್ಚು ಸಾಂಕ್ರಾಮಿಕವಾದ ಎಲ್ಲಾ ವೈರಸ್‌ಗಳ ಮೇಲೂ ಪರಿಣಾಮಕಾರಿ ಎಂದು ಸಾಬೀತಾಗಿದೆ. ಜೊತೆಗೆ ಲಸಿಕೆ ಪಡೆದ ಬಳಿಕ ದೇಹದಲ್ಲಿ ಉತ್ಪತ್ತಿಯಾಗುವ ರೋಗ ನಿರೋಧಕ ಶಕ್ತಿಯು ಕನಿಷ್ಠ 8 ತಿಂಗಳ ಕಾಲ ರಕ್ಷಣೆ ನೀಡುತ್ತದೆ ಎಂದು ಕಂಪನಿ ಪ್ರಕಟಿಸಿದೆ.

'ಕೇಂದ್ರ ಲಸಿಕೆ ಕೊಟ್ಟ ಬಳಿಕ ಅಭಿಯಾನಕ್ಕೆ ವೇಗ, ರಾಜ್ಯಗಳ ಬಳಿ ಯೋಜನೆ ಕೊರತೆ'!

ಇದುವರೆಗಿನ ಅಧ್ಯಯನದ ವೇಳೆ ತೀವ್ರ/ಗಂಭೀರ ಸ್ವರೂಪದ ಸೋಂಕಿನ ಮೇಲೆ ಶೇ.85ರಷ್ಟುರಕ್ಷಣೆ ನೀಡುತ್ತದೆ ಮತ್ತು ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವಿನಿಂದ ರಕ್ಷಣೆ ನೀಡುತ್ತದೆ. ಜೊತೆಗೆ ಡೆಲ್ಟಾವೈರಸ್‌ ಹಾವಳಿ ಹೆಚ್ಚಾಗಿರುವ ದಕ್ಷಿಣ ಆಫ್ರಿಕಾ, ಬ್ರೆಜಿಲ್‌ ಸೇರಿದಂತೆ ಪರೀಕ್ಷೆ ನಡೆಸಲಾದ ಎಲ್ಲಾ ಕಡೆಯಲ್ಲೂ ಸೋಂಕಿನ ವಿರುದ್ಧ ಲಸಿಕೆ ಹೆಚ್ಚಿನ ರಕ್ಷಣೆ ನೀಡಿದೆ. ಒಂದು ಡೋಸ್‌ ಪಡೆದವರಲ್ಲಿ ಉತ್ಪತ್ತಿಯಾದ ಪ್ರತಿಕಾಯಗಳು, ಡೆಲ್ಟಾ, ಬೀಟಾ, ಗಾಮಾ ಮಾದರಿಗಳನ್ನೂ ನಾಶ ಮಾಡಿದ್ದು ಪ್ರಯೋಗದ ವೇಳೆ ಸಾಬೀತಾಗಿದೆ ಎಂದು ಕಂಪನಿ ಹೇಳಿದೆ.

ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಲಸಿಕೆ ಜುಲೈನಲ್ಲಿ ಭಾರತಕ್ಕೆ? .

ಈ ಲಸಿಕೆಗೆ ಅಮೆರಿಕದ ಎಫ್‌ಡಿಎ ಹಿಂದೆಯೇ ಅನುಮೋದನೆ ನೀಡಿತ್ತಾದರೂ, ಲಸಿಕೆ ಪಡೆದವರಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಂಡುಬಂದ ಬಳಿಕ ಲಸಿಕೆ ಮೇಲೆ ತಾತ್ಕಾಲಿಕ ನಿಷೇಧ ಹೇರಿತ್ತು.

ಈ ನಡುವೆ ಲಸಿಕೆಯನ್ನು ಭಾರತದಲ್ಲೂ ಬಿಡುಗಡೆ ಮಾಡಲು ಕಂಪನಿ ಈಗಾಗಲೇ ಭಾರತ ಸರ್ಕಾರದ ಮಾತುಕತೆ ನಡೆಸುತ್ತಿದೆ. ಅಮೆರಿಕದ ಎಫ್‌ಡಿಎ ಅನುಮೋದನೆ ಪಡೆದ ಲಸಿಕೆಗಳು ಭಾರತದಲ್ಲಿ ಮತ್ತೆ ಪ್ರಯೋಗಕ್ಕೆ ಒಳಪಡಬೇಕಿಲ್ಲ ಎಂದು ಡಿಜಿಸಿಎ ಈಗಾಗಲೇ ಹೇಳಿರುವ ಕಾರಣ, ಲಸಿಕೆ ಯಾವುದೇ ಸಮಯದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

Follow Us:
Download App:
  • android
  • ios