* ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಲಸಿಕೆ ಜುಲೈನಲ್ಲಿ ಭಾರತಕ್ಕೆ?* ಸಿಂಗಲ್‌ ಡೋಸ್‌ ಲಸಿಕೆ ಇದು* 1860 ರು. ದರ ನಿಗದಿ ಸಾಧ್ಯತೆ

ನವದೆಹಲಿ(ಜೂ.27): ಅಮೆರಿಕದ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಸಂಸ್ಥೆ ಅಭಿವೃದ್ಧಿಪಡಿಸಿದ ಒಂದೇ ಡೋಸ್‌ನ ಕೋವಿಡ್‌ ಲಸಿಕೆಯು ಜುಲೈ ತಿಂಗಳಿನಲ್ಲಿ ಭಾರತಕ್ಕೆ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಕೆಲವೇ ಕೆಲವು ಸಾವಿರ ಡೋಸ್‌ಗಳ ಲಸಿಕೆ ಮಾತ್ರವೇ ಲಭ್ಯವಾಗಲಿವೆ ಎಂದು ಗೊತ್ತಾಗಿದೆ.

ಒಂದೇಡೋಸ್‌ನ ಲಸಿಕೆ ಇದಾಗಿದ್ದು, ಭಾರತದಲ್ಲಿ 1860 ರು. ದರ ಇರಲಿದೆ ಎನ್ನಲಾಗಿದೆ. ಹೊಸ ನಿಯಮದ ಪ್ರಕಾರ ವಿದೇಶೀ ಲಸಿಕೆಗಳನ್ನು ಭಾರತದಲ್ಲಿ ಕ್ಲಿನಿಕಲ್‌ ಟ್ರಯಲ್‌ ನಡೆಸಬೇಕು ಎಂದೇನಿಲ್ಲ. ಒಪ್ಪಿಗೆ ಪಡೆದ ಬಳಿಕ ನೇರವಾಗಿ ಲಸಿಕೆ ನೀಡಬಹುದಾಗಿದೆ.

ಈ ಲಸಿಕೆಯನ್ನು ಸುರಕ್ಷಿತವಾಗಿ ಶೇಖರಿಸಿಡಲು ‘ಫೆä್ರೕಝನ್‌’ ವ್ಯವಸ್ಥೆಯ ಅಗತ್ಯವಿಲ್ಲ. ಆರೋಗ್ಯ ಮೂಲಭೂತ ಸೌಕರ್ಯದಲ್ಲಿ ಅಷ್ಟಾಗಿ ಅಭಿವೃದ್ಧಿ ಹೊಂದದ ಭಾರತದಂಥ ರಾಷ್ಟ್ರಗಳಲ್ಲೂ ಈ ಲಸಿಕೆಯನ್ನು ಸುರಕ್ಷಿತವಾಗಿಡಬಹುದಾಗಿದೆ.

ಸೌಮ್ಯ ಸ್ವಭಾವದ ಸೋಂಕಿತರಿಗೆ ಈ ಲಸಿಕೆ ಶೇ.66.3ರಷ್ಟುಮತ್ತು ಗಂಭೀರ ಪ್ರಮಾಣದ ಸೋಂಕು ಇರುವವರಿಗೆ ಈ ಲಸಿಕೆ ಶೇ.76.3ರಷ್ಟುಪರಿಣಾಮಕಾರಿಯಾಗಿದೆ. ಲಸಿಕೆ ಪಡೆದ 28 ದಿನ ನಂತರ ಕೋವಿಡ್‌ ಬಂದರೆ ಆಸ್ಪತ್ರೆಗೆ ದಾಖಲಾಗುವುದರಿಂದ ಶೇ.100ರಷ್ಟುರಕ್ಷಣೆ ನೀಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.