ಒಡಿಶಾ ರೈಲು ದುರಂತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ ವಿಶ್ವದ ದೊಡ್ಡಣ್ಣ ಜೋ ಬೈಡೆನ್‌, ಕ್ಸಿ ಜಿನ್‌ಪಿಂಗ್‌

ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮೂರು ರೈಲುಗಳನ್ನು ಒಳಗೊಂಡ ಅಪಘಾತವು ಸುಮಾರು ಮೂರು ದಶಕಗಳಲ್ಲಿ ಭಾರತದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತಗಳಲ್ಲಿ ಒಂದಾಗಿದೆ. ಈ ವೇಳೆ ಕನಿಷ್ಠ 288 ಜನರು ಮೃತಪಟ್ಟಿದ್ದಾರೆ ಮತ್ತು 1,100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

joe biden says he is heartbroken by train crash in india xi jinping shocked at odisha tragedy ash

ನವದೆಹಲಿ (ಜೂನ್ 4, 2023): ಒಡಿಶಾದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ರೈಲು ಅಪಘಾತದ ಬಗ್ಗೆ ಅನೇಕ ವಿದೇಶಿ ಗಣ್ಯರು ಸಹ ಸಂತಾಪ ಸೂಚಿಸಿದ್ದು, ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ವಿಶ್ವದ ದೊಡ್ಡಣ್ಣ ಯುಎಸ್ ಅಧ್ಯಕ್ಷ ಜೋ ಬೈಡೆನ್‌ ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು 280 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ದುರಂತ ಸುದ್ದಿಯಿಂದ ಎದೆಗುಂದಿದ್ದೇವೆ ಎಂದು ಹೇಳಿದ್ದಾರೆ.

ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮೂರು ರೈಲುಗಳನ್ನು ಒಳಗೊಂಡ ಅಪಘಾತವು ಸುಮಾರು ಮೂರು ದಶಕಗಳಲ್ಲಿ ಭಾರತದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತಗಳಲ್ಲಿ ಒಂದಾಗಿದೆ. ಈ ವೇಳೆ ಕನಿಷ್ಠ 288 ಜನರು ಮೃತಪಟ್ಟಿದ್ದಾರೆ ಮತ್ತು 1,100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇದನ್ನು ಓದಿ: Odisha Train Accident: ಸಾವಲ್ಲೂ ರಾಜಕೀಯ; ನಾರ್ಸಿಸಿಸ್ಟಿಕ್ ಪ್ರಚಾರ ಮಂತ್ರಿ ಎಂದು ಮೋದಿ ವಿರುದ್ಧ ಆರ್‌ಜೆಡಿ ವಾಗ್ದಾಳಿ

“(ಪ್ರಥಮ ಮಹಿಳೆ ಡಾ) ಜಿಲ್ (ಬೈಡೆನ್) ಮತ್ತು ನಾನು ಭಾರತದಲ್ಲಿ ನಡೆದ ಮಾರಣಾಂತಿಕ ರೈಲು ಅಪಘಾತದ ದುರಂತ ಸುದ್ದಿಯಿಂದ ಎದೆಗುಂದಿದ್ದೇವೆ. ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಮತ್ತು ಈ ಭೀಕರ ಘಟನೆಯಲ್ಲಿ ಗಾಯಗೊಂಡ ಅನೇಕರಿಗೆ ನಮ್ಮ ಪ್ರಾರ್ಥನೆಗಳು ಹೋಗುತ್ತವೆ" ಎಂದು ಜೋ ಬೈಡೆನ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತವು ನಮ್ಮ ಎರಡು ರಾಷ್ಟ್ರಗಳನ್ನು ಒಂದುಗೂಡಿಸುವ ಕುಟುಂಬ ಹಾಗೂ ಸಂಸ್ಕೃತಿಯ ಸಂಬಂಧಗಳಲ್ಲಿ ಬೇರೂರಿರುವ ಆಳವಾದ ಬಂಧಗಳನ್ನು ಹಂಚಿಕೊಳ್ಳುತ್ತದೆ ಮತ್ತು ಅಮೆರಿಕದಾದ್ಯಂತ ಜನರು ಭಾರತದ ಜನರೊಂದಿಗೆ ದುಃಖಿಸುತ್ತಾರೆ. ಚೇತರಿಕೆಯ ಪ್ರಯತ್ನ ಮುಂದುವರಿದಂತೆ, ನಾವು ಭಾರತದ ಜನರನ್ನು ನಮ್ಮ ಆಲೋಚನೆಗಳಲ್ಲಿ ಹಿಡಿದಿಟ್ಟುಕೊಳ್ಳುತ್ತೇವೆ’’ ಎಂದು ಜೋ ಬೈಡೆನ್‌ ಹೇಳಿದರು.

ಇದನ್ನೂ ಓದಿ: ಕೈಕಾಲುಗಳಿಲ್ಲದ ದೇಹಗಳು, ರಕ್ತದ ಹೊಳೆ: ಪ್ರತ್ಯಕ್ಷದರ್ಶಿಗಳು ಹಂಚಿಕೊಂಡ ರೈಲು ಅಪಘಾತ ಸ್ಥಳದ ಭಯಾನಕ ಕಥೆ ಹೀಗಿದೆ..

ಈ ಮಧ್ಯೆ, ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರು ಸಹ ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು "ಮೊದಲ ಪ್ರತಿಸ್ಪಂದಕರು ಮತ್ತು ವೈದ್ಯಕೀಯ ಸಿಬ್ಬಂದಿಗಳ ವೀರೋಚಿತ ಪ್ರಯತ್ನಗಳನ್ನು ನಾವು ವೀಕ್ಷಿಸುತ್ತಿರುವಾಗ, ಈ ದುರಂತ ಕ್ಷಣದಲ್ಲಿ ನಾವು ಭಾರತದ ಜನರೊಂದಿಗೆ ನಿಲ್ಲುತ್ತೇವೆ" ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸಮುದಾಯದ ಸಹಾನುಭೂತಿಯ ಸಂದೇಶಗಳಿಗಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. “ಒಡಿಶಾದಲ್ಲಿ ನಡೆದ ರೈಲ್ವೆ ಅಪಘಾತದ ಬಗ್ಗೆ ಸಹಾನುಭೂತಿಯ ಸಂದೇಶಗಳಿಗಾಗಿ ಜಾಗತಿಕ ಪಾಲುದಾರರಿಗೆ ಆಳವಾದ ಕೃತಜ್ಞತೆಗಳು. ಈ ದುಃಖದ ಸಮಯದಲ್ಲಿ ಅವರ ಒಗ್ಗಟ್ಟು ಶಕ್ತಿಯ ಮೂಲವಾಗಿದೆ’’ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಒಡಿಶಾ ರೈಲು ಅಪಘಾತ ಎಫೆಕ್ಟ್‌: 48 ರೈಲುಗಳು ರದ್ದು, 39 ರೈಲುಗಳ ಮಾರ್ಗ ಬದಲಾವಣೆ; ವಿವರ ಇಲ್ಲಿದೆ..

ಚೀನಾದಿಂದಲೂ ಸಂತಾಪ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಯುಕೆ ಪ್ರಧಾನಿ ರಿಷಿ ಸುನಕ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಮತ್ತು ಇತರರು ಸೇರಿದಂತೆ ಹಲವಾರು ವಿಶ್ವ ನಾಯಕರು ರೈಲು ಅಪಘಾತದ ಕುಟುಂಬಗಳಿಗೆ ತಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಭೀಕರ ರೈಲು ಅಪಘಾತದ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತ್ಯೇಕ ಸಂತಾಪ ಸಂದೇಶಗಳನ್ನು ಕಳುಹಿಸಿದ್ದಾರೆ. ತಮ್ಮ ಸಂದೇಶದಲ್ಲಿ, ಕ್ಸಿ ಜಿನ್‌ಪಿಂಗ್‌ ಅವರು ಭಾರಿ ಸಾವುನೋವುಗಳಿಗೆ ಕಾರಣವಾದ ಅಪಘಾತದ ಬಗ್ಗೆ ತಿಳಿದು ಆಘಾತಕ್ಕೊಳಗಾಗಿದ್ದಾರೆ ಎಂದು ಹೇಳಿದರು. ಚೀನಾ ಸರ್ಕಾರ ಮತ್ತು ಜನರ ಪರವಾಗಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ದುಃಖಿತ ಕುಟುಂಬಗಳಿಗೆ ಮತ್ತು ಗಾಯಾಳುಗಳಿಗೆ ಪ್ರಾಮಾಣಿಕ ಸಹಾನುಭೂತಿಯನ್ನು ವ್ಯಕ್ತಪಡಿಸಿದ್ದು, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು. ಚೀನಾದ ಪ್ರಧಾನಿ ಲಿ ಕಿಯಾಂಗ್ ಕೂಡ ಪ್ರಧಾನಿ ಮೋದಿ ಅವರಿಗೆ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿ ದೊಡ್ಡ ರೈಲು ಅಪಘಾತಗಳ ವಿವರ ಹೀಗಿದೆ..

Latest Videos
Follow Us:
Download App:
  • android
  • ios