Asianet Suvarna News Asianet Suvarna News

ಪಾಕಿಸ್ತಾನ ಸರ್ಕಾರದಲ್ಲಿ ಸಚಿವೆಯಾದ ಭಯೋತ್ಪಾದಕ ಯಾಸಿನ್‌ ಮಲೀಕ್‌ ಪತ್ನಿ!

ಪಾಕಿಸ್ತಾನದ ನಿವಾಸಿ ಹಾಗೂ ಭಯೋತ್ಪಾದಕ ಯಾಸಿನ್ ಮಲಿಕ್ ಪತ್ನಿ ಮುಶಾಲ್ ಹುಸೇನ್ ಪಾಕ್‌ ಸರ್ಕಾರದಲ್ಲಿ ಸಚಿವೆಯಾಗುವ ಸಾಧ್ಯತೆ ಇದೆ. ತನ್ನ ಪತಿಯನ್ನು ರಕ್ಷಣೆ ಮಾಡುವಂತೆ ಪಾಕಿಸ್ತಾನ ಹಾಗೂ ಅಂತಾರಾಷ್ಟ್ರೀಯ ಸಂಘಟನೆಗಳ ಮುಂದೆ ಈಕೆ ಸಾಕಷ್ಟು ಬಾರಿ ಮನವಿ ಮಾಡಿದ್ದಾಳೆ.

JKLF  Terrorist Yasin Malik wife will become a minister in Pakistan san
Author
First Published Aug 17, 2023, 9:15 PM IST

ನವದೆಹಲಿ (ಆ.17):  ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಮತ್ತು ಭಯೋತ್ಪಾದಕ ನಿಧಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ಯಾಸಿನ್ ಮಲಿಕ್ ಅವರ ಪತ್ನಿ ಮುಶಾಲ್ ಹುಸೇನ್ ಅವರು ಪಾಕಿಸ್ತಾನದ ಮಧ್ಯಂತರ ಸರ್ಕಾರದಲ್ಲಿ ಸಚಿವರಾಗಲಿದ್ದಾರೆ. ಪಾಕಿಸ್ತಾನದಲ್ಲಿ ಪ್ರಧಾನಿ ಶಹಬಾಜ್ ಷರೀಫ್ ರಾಜೀನಾಮೆ ನೀಡಿದ ನಂತರ, ಅನ್ವರ್ ಉಲ್ ಹಕ್ ಕಾಕರ್ ಅವರನ್ನು ದೇಶದ ಹಂಗಾಮಿ ಪ್ರಧಾನಿಯನ್ನಾಗಿ ಮಾಡಲಾಗಿದೆ. ಅವರು ಕಾಕರ್ ಅವರ ಕ್ಯಾಬಿನೆಟ್‌ನಲ್ಲಿ ಮಾನವ ಹಕ್ಕುಗಳ ವಿಚಾರದಲ್ಲಿ ಪ್ರಧಾನ ಮಂತ್ರಿಯ ವಿಶೇಷ ಸಹಾಯಕರಾಗಿರುತ್ತಾರೆ. ಪಾಕಿಸ್ತಾನದಲ್ಲಿ ನೆಲೆಸಿರುವ ಮಲಿಕ್ ಪತ್ನಿ ಮುಶಾಲ್ ತನ್ನ ಪತಿ ನಿರಪರಾಧಿಯಾಗಿರುವುದರಿಂದ ಆತನನ್ನು ರಕ್ಷಿಸುವಂತೆ ಪಾಕಿಸ್ತಾನ ಹಾಗೂ ಅಂತಾರಾಷ್ಟ್ರೀಯ ಸಂಘಟನೆಗಳ ಮುಖಂಡರಿಗೆ ನಿರಂತರವಾಗಿ ಮನವಿ ಮಾಡುತ್ತಿದ್ದಾಳೆ.

ಯಾರೀಕೆ ಮುಶಾಲ್ ಹುಸೇನ್?: ಯಾಸಿನ್ ಮಲಿಕ್ ಅವರ ಪತ್ನಿ ಮುಶಾಲ್ ಹುಸೇನ್ ಪಾಕಿಸ್ತಾನ ಮೂಲದವರು. ಅವರ ತಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾಂತ ಅರ್ಥಶಾಸ್ತ್ರಜ್ಞರಾಗಿದ್ದರೆ, ಅವರ ತಾಯಿ ಪಾಕಿಸ್ತಾನ್ ಮುಸ್ಲಿಂ ಲೀಗ್‌ನ ಮಹಿಳಾ ವಿಭಾಗದ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಮುಶಾಲ್ ಅವರ ಸಹೋದರ ಹೈದರ್ ಅಲಿ ಮಾಲ್ಕಿ ಅವರು ಅಮೆರಿಕಾದಲ್ಲಿ ವಿದೇಶಾಂಗ ನೀತಿ ವಿಚಾರದ ಪ್ರಾಧ್ಯಾಪಕರಾಗಿದ್ದಾರೆ. ಮುಶಾಲ್‌ಗೆ ಪೇಟಿಂಗ್ಸ್‌ ಎಂದರೆ ತುಂಬಾ ಬಹಳ ಇಷ್ಟ. ಅವರು ಆರನೇ ವಯಸ್ಸಿನಲ್ಲಿ ಚಿತ್ರಕಲೆ ಆರಂಭ ಮಾಡಿದ್ದರಯ. ಅದರಲ್ಲೂ ಅರೆ-ನಗ್ನ ವರ್ಣಚಿತ್ರಗಳಿಗೆ ಇವರು ಬಹಳ ಜನಪ್ರಿಯರಾಗಿದ್ದಾರೆ. ಅವರು ಕಾಶ್ಮೀರದ ಜನರ ಸಂಕಷ್ಟದ ಸ್ಥಿತಿಯನ್ನು ಬಿಂಬಿಸುವ ಅನೇಕ ಚಿತ್ರಗಳನ್ನು ಬಿಡಿಸಿದ್ದಾರೆ. ಅದರೊಂದಿಗೆ ಈಕೆ ಪಾಕಿಸ್ತಾನದಲ್ಲಿ ಶಾಂತಿ ಮತ್ತು ಸಂಸ್ಕೃತಿ ಸಂಸ್ಥೆಯ ಅಧ್ಯಕ್ಷರೂ ಆಗಿದ್ದಾರೆ. ಈ ಸಂಸ್ಥೆಯು ಜಾಗತಿಕ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಕೆಲಸ ಮಾಡುತ್ತದೆ ಮತ್ತು ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಕೆಲಸ ಮಾಡುತ್ತದೆ.

2005ರಲ್ಲಿ ಮುಶಾಲ್‌, ಯಾಸೀನ್‌ ಮಲೀಕ್‌ನನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದರು. ಈ ವೇಳೆ ಯಾಸೀನ್‌ ಪ್ರತ್ಯೇಕತಾವಾದಿ ಚಳವಳಿಗೆ ಬೆಂಬಲ ಕೋರುವ ಸಲುವಾಗಿ ಇಸ್ಲಾಮಾಬಾದ್‌ಗೆ ಹೋಗಿದ್ದರು. ಫೈಜ್ ಅಹ್ಮದ್ ಫೈಜ್ ಅವರ ಜನಪ್ರಿಯ ಕವಿತೆ ಹಮ್ ದೇಖೇಂಗೆಯನ್ನು ಯಾಸಿನ್ ವಾಚಿಸಿದ ಕಾರ್ಯಕ್ರಮದಲ್ಲಿ ಮುಶಾಲ್ ಸಹ ಭಾಗವಹಿಸಿದ್ದರು. ನಂತರ ಇಬ್ಬರೂ 2009 ರಲ್ಲಿ ವಿವಾಹವಾದರು. ಮುಶಾಲ್‌, ಯಾಸೀನ್‌ ಮಲೀಕ್‌ ಅವರಿಗಿಂತ 20 ವರ್ಷ ಕಿರಿಯವರು.

ಇನ್ನು ಇತ್ತೀಚೆಗೆ ಸುಪ್ರೀಂ ಕೋರ್ಟ್‌, ಯಾಸಿನ್ ಮಲಿಕ್ ಅವರ ವೈಯಕ್ತಿಕ ಹಾಜರಾತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಕೋರ್ಟ್‌ನಲ್ಲಿ ಯಾಸೀನ್‌ ಮಲೀಕ್‌ ಖುದ್ದಾಗಿ ಹಾಜರರಿಬೇಕು ಅನ್ನೋದಕ್ಕೆ ಯಾವುದೇ ತೀರ್ಪು ನೀಡಿಲ್ಲ. ಹಾಗಿದ್ದರೂ ಆತನನ್ನು ಜೈಲಿನಿಂದ ಹೊರತಂದಿದ್ದೇಕೆ ಎಂದು ಪ್ರಶ್ನೆ ಮಾಡಿತ್ತು.  ಯಾಸಿನ್ ಮಲಿಕ್ ಸುಪ್ರೀಂ ಕೋರ್ಟ್ ಗೆ ಹಾಜರಾದ ಬಗ್ಗೆ ಕೇಂದ್ರ ಸರ್ಕಾರವೂ ಕಳವಳ ವ್ಯಕ್ತಪಡಿಸಿತ್ತು.

Trailer Review: ನೀಲಿ ಬಣ್ಣದ ನೂಲಿನಿಂದ ಸಮುದ್ರವನ್ನು ಹೊಲಿಯುವ ಕವನ 'ಸಪ್ತ ಸಾಗರದಾಚೆ ಎಲ್ಲೋ'

ತಿಹಾರ್ ಜೈಲಿನ ಅಧಿಕಾರಿಗಳು ಬಿಗಿ ಭದ್ರತೆಯ ನಡುವೆ ಮಲಿಕ್ ಅವರನ್ನು ಸುಪ್ರೀಂ ಕೋರ್ಟ್‌ಗೆ ಕರೆತಂದಿದ್ದರು. ಜಮ್ಮು ನ್ಯಾಯಾಲಯದ ಆದೇಶದ ವಿರುದ್ಧ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ನಂತರ, ಯಾಸಿನ್ ಮಲಿಕ್ ಅವರ ವೈಯಕ್ತಿಕ ಹಾಜರಾತಿ ಪ್ರಕರಣದಲ್ಲಿ ನಾಲ್ವರು ಅಧಿಕಾರಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ದೆಹಲಿ ಕಾರಾಗೃಹ ಇಲಾಖೆಯ ಒಬ್ಬ ಉಪ ಅಧೀಕ್ಷಕರು, ಇಬ್ಬರು ಸಹಾಯಕ ಅಧೀಕ್ಷಕರು ಮತ್ತು ಹೆಡ್ ವಾರ್ಡನ್ ಅವರನ್ನು ಅಮಾನತುಗೊಳಿಸಲಾಗಿದೆ.

ಅನುಮತಿ ಇಲ್ಲದೇ ಯಾಸಿನ್‌ ಕರೆತಂದ ಸಿಬ್ಬಂದಿ ಮೇಲೆ ಸುಪ್ರೀಂ ಗರಂ, 4 ಜೈಲಾಧಿಕಾರಿಗಳು ವಜಾ

Follow Us:
Download App:
  • android
  • ios