ಪದೇ ಪದೇ ವಿದ್ಯುತ್ ಕಡಿತದಿಂದ ಕಂಗೆಟ್ಟಿದ ಗ್ರಾಮಸ್ಥರು ತಾವೇ ಸ್ವಂತವಾಗಿ ಟರ್ಬೈನ್ ತಯಾರಿಸಿದ ಕೇದಾರ್ ಪ್ರಸಾದ್ ಮಹ್ತೋ ಗ್ರಾಮದ ಹೊಳೆಗೆ ಅಳವಡಿಸಿ ವಿದ್ಯುತ್ ಉತ್ಪಾದನೆ
ರಾಂಚಿ: ಪದೇ ಪದೇ ವಿದ್ಯುತ್ ಕಡಿತದಿಂದ ತೊಂದರೆಗೀಡಾದ ಜಾರ್ಖಂಡ್‌ನ (Jharkhand) ರಾಮ್‌ಗಢ್‌ನಲ್ಲಿ(Ramgarh) 33 ವರ್ಷದ ಕೇದಾರ್ ಪ್ರಸಾದ್ ಮಹ್ತೋ (Kedar Prasad Mahto)ಎಂಬವರು ತಮ್ಮ 18 ವರ್ಷಗಳ ಕಠಿಣ ಪರಿಶ್ರಮದ ನಂತರ ತಮ್ಮ ಹಳ್ಳಿಯ ಸಮೀಪ ಹರಿಯುವ ಸಣ್ಣ ತೊರೆಗೆ ಟರ್ಬೈನ್ ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ಕೈಯಿಂದ ತಯಾರಿಸಿದ ಟರ್ಬೈನ್ ಈಗ 5 KW ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಇದು ಹಳ್ಳಿಯ ಬೀದಿಗಳು ಮತ್ತು ದೇವಸ್ಥಾನವನ್ನು ಬೆಳಗಿಸುತ್ತಿದೆ. 2004 ರಲ್ಲಿ ಅವರು ಶಾಲೆಯಲ್ಲಿದ್ದಾಗಲೇ ಕುತೂಹಲದಿಂದ ವಿದ್ಯುತ್ ಉತ್ಪಾದಿಸಲು ನಿರ್ಧರಿಸಿದರು ಮತ್ತು 12 ವೋಲ್ಟ್ ವಿದ್ಯುತ್ ಉತ್ಪಾದಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಮಹತೋ ಹೇಳಿದರು. ಆ ನಂತರ ಹಿಂತಿರುಗಿ ನೋಡಲೇ ಇಲ್ಲ.
ನಾನು ನನ್ನ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಲೇ ಇದ್ದೆ ಮತ್ತು ಮಳೆನೀರಿನಲ್ಲಿ ಕೊಚ್ಚಿಹೋದ ನನ್ನ ಹಳ್ಳಿ ಬಯಾಂಗ್‌ನಿಂದ (Byang) ಸುಮಾರು ಒಂದು ಕಿಲೋಮೀಟರ್‌ನಲ್ಲಿರುವ ಸೆನೆಗರ್ಹಾ (Senegarha) ನದಿಯ ಅಮ್ಜಾರಿಯಾದಲ್ಲಿ (Amjharia) ಮೊದಲ ಪ್ರಯೋಗವನ್ನು ಮಾಡಿದೆ. ನಂತರ ನದಿಯ ಮಧ್ಯದಲ್ಲಿ ಕಾಂಕ್ರೀಟ್ ಕಾಲಮ್ ಮಾಡುವ ಮೂಲಕ ಮತ್ತೆ ಪ್ರಾರಂಭಿಸಿ ಆರ್ಮೇಚರ್ (armature), ಮ್ಯಾಗ್ನೆಟ್, ಕಾಯಿಲ್ ಮತ್ತು ಇತರ ಭಾಗಗಳೊಂದಿಗೆ ಟರ್ಬೈನ್ ಅನ್ನು ಅಳವಡಿಸಿ ಅಂತಿಮವಾಗಿ ಯಶಸ್ವಿಯಾದೆ, ಎಂದು ಅವರು ಹೇಳಿದರು.
Nykaa ಸ್ಥಾಪಕಿ ಫಲ್ಗುಣಿ ನಾಯರ್: ಬಿಲಿಯನೇರ್ ಉದ್ಯಮಿಯ ಯಶೋಗಾಥೆ
ಈ ಕೈಯಿಂದ ತಯಾರಿಸಿದ ಟರ್ಬೈನ್ ಒಂದು ಬಾರಿಗೆ 100 ವ್ಯಾಟ್‌ಗಳ 40 ರಿಂದ 45 ಬಲ್ಬ್‌ಗಳನ್ನು ಬೆಳಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು. ಟರ್ಬೈನ್, ಡೈನಮೋ ಮತ್ತು ಜನರೇಟರ್ ಅನ್ನು ಸ್ವಂತವಾಗಿ ತಯಾರಿಸಲು ಮಹತೋ 18 ವರ್ಷಗಳನ್ನು ಮೀಸಲಿಟ್ಟರು ಮತ್ತು ಅವರು ತಮ್ಮ ಪದವಿಯನ್ನು ಪೂರ್ಣಗೊಳಿಸಲು ಸಾಧ್ಯವಾಗದಷ್ಟು ಯೋಜನೆಯಲ್ಲಿ ತೊಡಗಿಸಿಕೊಂಡರು.
ಈ ಕ್ಷೇತ್ರದಲ್ಲಿನ ನನ್ನ ಆಸಕ್ತಿಯಿಂದಾಗಿ, ನಾನು ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದೆ, ಅದು ನಂತರ ನನ್ನ ಆದಾಯದ ಮೂಲವಾಯಿತು. ನಾನು ಯಾವುದೇ ಹಣವನ್ನು ಉಳಿಸಿದರೂ, ನನ್ನ ಉತ್ಸಾಹದ ಮೇಲೆ ನಾನು ಹೂಡಿಕೆ ಮಾಡುತ್ತೇನೆ, ಎಂದು ಮಹತೋ ಹೇಳಿದರು, ಅವರು ತಮ್ಮ ಜೇಬಿನಿಂದ ಈ ಯೋಜನೆಗೆ ಸುಮಾರು 3 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ನನ್ನ ಗ್ರಾಮವನ್ನು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡುವುದು ಮತ್ತು ಅದರ ಮೂಲೆ ಮೂಲೆಗಳನ್ನು ಬೆಳಗಿಸುವುದು ನನ್ನ ಕಲ್ಪನೆ" ಎಂದು ಅವರು ಹೇಳಿದರು.
ಕನ್ನಡ ಕಲಿಸುವ 32 ವರ್ಷದ ಶಿಕ್ಷಕಗೆ ಒಲಿದ 7.5 ಕೋಟಿ ರು. : ಇಲ್ಲಿದೆ ಅವರ ಯಶೋಗಾಥೆ
ಆರಂಭದಲ್ಲಿ, ಮಹ್ತೋ ಅವರ ಕುಟುಂಬ ಸದಸ್ಯರು ಯೋಜನೆಗೆ ಅವರ ಸಮರ್ಪಣೆಗೆ ವಿರೋಧ ವ್ಯಕ್ತಪಡಿಸಿದ್ದರು, ಆದರೆ ಕ್ರಮೇಣ ಮನೆಯವರು ಅವರ ಪ್ರತಿಭೆಯನ್ನು ಶ್ಲಾಘಿಸಲು ಪ್ರಾರಂಭಿಸಿದರು. ಸ್ಥಳೀಯರು ಕೂಡ ಇವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾವು ಅವನ ಬಗ್ಗೆ ಹೆಮ್ಮೆಪಡುತ್ತೇವೆ. ರಾಜ್ಯ ಸರ್ಕಾರ ಅವರಿಗೆ ಬೆಂಬಲ ನೀಡಿದರೆ, ಅವರು ಇಡೀ ಪ್ರದೇಶವನ್ನು ಬೆಳಗಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂದು ನಾವು ನಂಬುತ್ತೇನೆ ಎಂದು ಗ್ರಾಮಸ್ಥರು ಹೇಳಿದರು.
ಗ್ರಾಮದ ಮುಖಂಡ ಸೂರಜ್ ನಾಥ್ ಭೋಕ್ತಾ (Suraj Nath Bhokta), ಮಹತೋ ಅವರನ್ನು ಶ್ಲಾಘಿಸಿದರು. ಇತ್ತೀಚೆಗೆ, ಸರಸ್ವತಿ ಪೂಜೆಯ ಸಮಯದಲ್ಲಿ ವಿದ್ಯುತ್ ಕಡಿತಗೊಂಡಾಗ, ಪೂಜಾ ಮಂಟಪವನ್ನು ಬೆಳಗಿಸಲು ಕೇದಾರ್ ಪ್ರಸಾದ್ ಮಹ್ತೋ ವಿದ್ಯುತ್ ಒದಗಿಸಿದವರು ಎಂದು ಅವರು ಹೇಳಿದರು.