Nykaa ಸ್ಥಾಪಕಿ ಫಲ್ಗುಣಿ ನಾಯರ್: ಬಿಲಿಯನೇರ್ ಉದ್ಯಮಿಯ ಯಶೋಗಾಥೆ
ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ವಯಸ್ಸಿನ ಜೊತೆ ಹಲವು ಮಿತಿಗಳನ್ನು ಮುರಿದು ಹೊಸ ಯಶಸ್ಸಿನ ಕಥೆ ಬರೆದಿರುವ ಮಹಿಳೆಯ ಕಥೆ ಇಲ್ಲಿದೆ. ಈ ಮಹಿಳೆಯ ಹೆಸರು ಫಲ್ಗುಣಿ ನಾಯರ್ (Falguni Nayar). ರಿಟೈರ್ ಮೆಂಟ್ ತೆಗೆದುಕೊಳ್ಳಲು ಜನ ಯೋಚಿಸುವ ವಯಸ್ಸಿನಲ್ಲಿ ಆ ವಯಸ್ಸಿಗೆ ಕೆಲಸ ಬಿಟ್ಟು ಕಾಸ್ಮೆಟಿಕ್ ಬ್ಯುಸಿನೆಸ್ ಆರಂಭಿಸಿದವರು ಫಲ್ಗುಣಿ ನಾಯರ್. ಈಕೆ ಕೇವಲ 9 ವರ್ಷಗಳಲ್ಲಿ ದೇಶದ ಶ್ರೀಮಂತ ಉದ್ಯಮಿ ಪಟ್ಟಿಗೆ ಸೇರಿಕೊಂಡರು. ಅದರ ಫಲ್ಗುಣಿ ನಾಯರ್ ಯಾರು ಮತ್ತು ಅವರು ತಮ್ಮ ಬ್ಯುಸಿಸೆಸ್ ಹೇಗೆ ಪ್ರಾರಂಭಿಸಿದರು ಎಂಬ ವಿವರ ಇಲ್ಲಿದೆ.
Falguni Nayar Founder and CEO, Nykaa Because of Falguni Nayar, the Indian e-commerce company Nykaa based on beauty and fashion products is still thriving and growing.
ಅಷ್ಟಕ್ಕೂ ಈ ಫಲ್ಗುಣಿ ನಾಯರ್ ಯಾರು? ಫಲ್ಗುಣಿ ನಾಯರ್ ಅವರು 19 ಫೆಬ್ರವರಿ 1963 ರಂದು ಜನಿಸಿದರು. ನಾಯರ್ ಅವರ ವೃತ್ತಿಜೀವನವು AF ಫರ್ಗುಸನ್ ಕಂಪನಿಯೊಂದಿಗೆ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಆಗಿ ಪ್ರಾರಂಭವಾಯಿತು.
ನಂತರ 1993 ರಲ್ಲಿ ಅವರು ಕೊಟಕ್ ಮಹೀಂದ್ರಾ ಗ್ರೂಪ್‌ಗೆ ಸೇರಿಕೊಂಡರು ಮತ್ತು 19 ವರ್ಷಗಳ ಕಾಲ ಕೆಲಸ ಮಾಡಿದರು. ಅವರು 2005ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾದರು ಮತ್ತು 2012 ರವರೆಗೆ ಈ ಸ್ಥಾನದಲ್ಲಿ ಇದ್ದರು.
ಕೆಲಸದ ಸಮಯದಲ್ಲಿ, ಅವರು IIM ಅಹಮದಾಬಾದ್‌ನಲ್ಲಿ ತಮ್ಮ MBA ಮಾಡಿದರು ಮತ್ತು ಇಲ್ಲಿಂದ ಅವರು ವ್ಯಾಪಾರ ಮಾಡುವ ಆಲೋಚನೆಯನ್ನು ಪಡೆದರು. ಫಲ್ಗುಣಿ ಕೆಕೆಆರ್ ಇಂಡಿಯಾ ಮುಖ್ಯಸ್ಥ ಸಂಜಯ್ ನಾಯರ್ ಅವರ ಪತ್ನಿ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು, ಹಳೆಯದನ್ನು ಬಿಟ್ಟುಬಿಡುವುದು ಬಹಳ ಮುಖ್ಯ ಎಂದು ಅವರು ನಿರ್ಧರಿಸಿದರು. ಆದ್ದರಿಂದ ಅವರು ಕೆಲಸ ಬಿಡಲು ನಿರ್ಧರಿಸಿದರು.
ಫಲ್ಗುಣಿ ನಾಯರ್ ಅವರು 2012 ರಲ್ಲಿ ಇ-ಕಾಮರ್ಸ್ ಕಂಪನಿ ನೈಕಾವನ್ನು ಪ್ರಾರಂಭಿಸಿದರು. ಈ ಪ್ಲಾಟ್‌ಫಾರ್ಮ್‌ನಲ್ಲಿ ಸೌಂದರ್ಯ ಮತ್ತು ಪರ್ಸನಲ್ ಕೇರ್‌ಗೆ ಸಂಬಂಧಿಸಿದ ಉತ್ಪನ್ನಗಳನ್ನು ಕಾಣಬಹುದು. ಈ ಕಂಪನಿಯು ಹುಡುಗಿಯರು ಮತ್ತು ಮಹಿಳೆಯರಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಈ ವೇದಿಕೆಯು ಮಹಿಳೆಯರಲ್ಲಿ ಸೌಂದರ್ಯ ಉತ್ಪನ್ನಗಳ ಖರೀದಿಗೆ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ.
മുംബൈയിൽ താമസക്കാരിയായ നൈകായുടെ ഫാൽഗുനി നയറും കുടുംബവും 5410 കോടി രൂപ ആസ്തിയുമായി പട്ടികയിൽ പത്താം സ്ഥാനത്താണ്.
ಫಲ್ಗುಣಿ ಮಹಿಳೆಯರ ಈ ಅಗತ್ಯವನ್ನು ಅರ್ಥಮಾಡಿಕೊಂಡರು ಮತ್ತು ಅದನ್ನು ಆನ್‌ಲೈನ್ ಮಾರುಕಟ್ಟೆಯಾಗಿ ಪ್ರಾರಂಭಿಸಿದರು. ಅದರ ನಂತರ ಅವರು ತಮ್ಮದೇ ಆದ ಸೌಂದರ್ಯ ಮತ್ತು ಪರ್ಸನಲ್ ಕೇರ್ ಬ್ರಾಂಡ್ ಅನ್ನು
ಸ್ಥಾಪಿಸಿದರು. ಅವರ ಬಳಿ 35 ಮಳಿಗೆಗಳಿವೆ. ಇದು ಮಾತ್ರವಲ್ಲದೆ, ಅವರ Nykaa ಫ್ಯಾಷನ್‌ಗಳು ಉಡುಪುಗಳು, ಪರಿಕರಗಳು, ಫ್ಯಾಷನ್ ಸಂಬಂಧಿತ ಉತ್ಪನ್ನಗಳು ಮತ್ತು 4,000 ಕ್ಕೂ ಹೆಚ್ಚು ಸೌಂದರ್ಯ, ಪರ್ಸನಲ್ ಕೇರ್ ಮತ್ತು ಫ್ಯಾಷನ್ ಬ್ರ್ಯಾಂಡ್‌ಗಳನ್ನು ಒಳಗೊಂಡಿದೆ.
इस लिस्ट में Nykaa की फाउंडर फल्गुनी नायर (Falguni Nayar) 5410 करोड़ की संपत्ति के साथ इस लिस्ट में दसवें नंबर पर हैं। Nykaa एक ई-कॉमर्स कंपनी है।
ಫಲ್ಗುಣಿ ನೈಕಾದಲ್ಲಿ (Nykaa) 1600 ಕ್ಕೂ ಹೆಚ್ಚು ಜನರ ತಂಡವನ್ನು ಮುನ್ನಡೆಸುತ್ತಾರೆ. ಇತ್ತೀಚೆಗೆ, ಸಂಸ್ಥೆಯ ಷೇರುಗಳಲ್ಲಿ ಅದ್ಭುತವಾದ ಏರಿಕೆ ಕಂಡುಬಂದಿದೆ, ಅದರ ನಂತರ ಫಲ್ಗುಣಿ ನಾಯರ್ ಅವರ ನಿವ್ವಳ ಮೌಲ್ಯವು $ 6.5 ಬಿಲಿಯನ್ ಮೀರಿದೆ. ಫಲ್ಗುಣಿ ನಾಯರ್ ದೇಶದ ಅತ್ಯಂತ ಶ್ರೀಮಂತ ಸ್ವಯಂ ನಿರ್ಮಿತ ಮಹಿಳೆಯಾಗಿದ್ದಾರೆ ಮತ್ತು ಅವರ ಕಂಪನಿ Nykaa ಸ್ಟಾಕ್ ಎಕ್ಸ್‌ಚೇಂಜ್‌ಗೆ ಪ್ರವೇಶಿಸಿದ ಭಾರತದ ಮೊದಲ ಮಹಿಳಾ ನೇತೃತ್ವದ ಕಂಪನಿಯಾಗಿದೆ.