Asianet Suvarna News Asianet Suvarna News

ರಾಹುಲ್ ಗಾಂಧಿಗೆ ಮಾನನಷ್ಟ ಮೊಕದ್ದಮೆ ಶಾಕ್, ಅರ್ಜಿ ತಿರಸ್ಕರಿಸಿ ಖುದ್ದು ಹಾಜರಾಗಲು ಕೋರ್ಟ್ ಸೂಚನೆ!

ಲೋಕಸಭಾ ಚುನಾವಣೆ ಹೊತ್ತಲ್ಲಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ಗೆ ಸಂಕಷ್ಟ ಹೆಚ್ಚಾಗುತ್ತಿದೆ. 2018 ಮಾನನಷ್ಟ ಮೊಕದ್ದಮೆ ಪ್ರಕರಣ ಮುನ್ನಲೆಗೆ ಬಂದಿದೆ. ರಾಹುಲ್ ಗಾಂಧಿ ಅರ್ಜಿ ತಿರಸ್ಕರಿಸಿದ ಕೋರ್ಟ್, ಖುದ್ದು ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿದೆ.
 

Jharkhand MP MLA Court order Rahul Gandhi to appear court for 2018 defamation case ckm
Author
First Published Mar 18, 2024, 6:21 PM IST

ಜಾರ್ಖಂಡ್(ಮಾ.18) ಲೋಕಸಭಾ ಚುನಾವಣೆ ಕಾವು ಏರುತ್ತಿದೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿಗೆ ಹಳೇ ಪ್ರಕರಣದ ತಲೆನೋವು ಹೆಚ್ಚಾಗಿದೆ. 2018ರ ಮಾನ ನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆ ವೇಳೆ ರಾಹುಲ್ ಗಾಂಧಿ ಅರ್ಜಿ ತಿರಸ್ಕರಿಸಿದ ಸಂಸದ-ಶಾಸಕರ ವಿಶೇಷ ನ್ಯಾಯಾಲಯ, ಖುದ್ದು ಹಾಜರಾಗುವಂತೆ ಸೂಚಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಜಡ್ಜ್ ರಿಶಿ ಕುಮಾರ್ ರಾಹುಲ್ ಗಾಂಧಿಗೆ ವಿನಾಯಿತಿ ನೀಡಲು ನಿರಾಕರಿಸಿದ್ದಾರೆ. ಮುಂದಿನ ವಿಚಾರಣೆ ವೇಳೆಗೆ ರಾಹುಲ್ ಗಾಂಧಿ ಖುದ್ದು ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿದೆ.

2018ರಲ್ಲಿ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದೀಗ ಬಿಜೆಪಿಯಲ್ಲಿ ಯಾರೇ ಕೊಲೆಗಾರರು ರಾಷ್ಟ್ರೀಯ ಬಿಜೆಪಿ ಪಕ್ಷದ ಅಧ್ಯಕ್ಷರಾಗಬಹುದು ಎಂದು ಹೇಳಿಕೆ ನೀಡಿದ್ದರು. 2018ರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉದ್ದೇಶಿಸಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದರು. ದೆಹಲಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಭೆಯಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ದ ಬಿಜೆಪಿ ಆಕ್ರೋಶ ಹೊರಹಾಕಿತ್ತು. ಆದರೆ ಜಾರ್ಖಂಡ್ ಬಿಜೆಪಿ ಯುವ ಮೋರ್ಚಾ ಉಪಾಅಧ್ಯಕ್ಷ ಪ್ರತಾಪ್ ಕಟಿಯಾರ್ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೊಡಿದ್ದರು.ಜಾರ್ಖಂಡ್ ಚಾಯಬಸಾ ಶಾಸಕ-ಸಂಸದರ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು.

ಅಮೇಠಿ, ರಾಯ್‌ಬರೇಲಿಯಿಂದ ಸ್ಪರ್ಧೆ ಇಲ್ಲ? ಗಾಂಧಿ ಕುಟುಂಬದ ಭದ್ರಕೋಟೆಯಲ್ಲಿ ಕಡಿಮೆಯಾಗುತ್ತಿದೆ ಪ್ರಭಾವ!

ಈಗಾಗಲೇ ರಾಹುಲ್ ಗಾಂಧಿಗೆ ಕೆಲ ಭಾರಿ ಕೋರ್ಟ್‌ಗೆ ಹಾಜರಾಗಲು ಸಮನ್ಸ್ ನೀಡಲಾಗಿತ್ತು. ಆದರೆ ರಾಹುಲ್ ಗಾಂಧಿ ಖುದ್ದ ಹಾಜರಾಗಿಲ್ಲ. ಈ ಬಾರಿ ರಾಹುಲ್ ಗಾಂಧಿ ಪರ ವಕೀಲರು ಹಾಜರಾಗಿ ಖುದ್ದು ಹಾಜರಾತಿಗೆ ವಿನಾಯಿತಿ ಕೋರಿದ್ದಾರೆ. ಲೋಕಸಭಾ ಚುನಾವಣೆ ಸೇರಿದಂತೆ ಹಲವು ಕಾರಣಗಳನ್ನು ರಾಹುಲ್ ಗಾಂಧಿ ಪರ ವಕೀಲರು ಮಂಡಿಸಿದ್ದರು. ಆದರೆ ಈ ವಾದ ಒಪ್ಪಿಕೊಳ್ಳದ ಕೋರ್ಟ್ ಖುದ್ದು ಹಾಜರಾತಿಗೆ ಸೂಚಿಸಿದ್ದಾರೆ.

2024ರ ಜನವರಿ ತಿಂಗಳಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಕುರಿತು ವಿವಾದಾತ್ಮ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದ ರಾಹುಲ್ ಗಾಂಧಿ, ಕೋರ್ಟ್ ಹೇಳಿಕೆ ನೀಡಲು ತಡ ಮಾಡಿದ್ದಕ್ಕೆ, 500 ರೂಪಾಯಿ ದಂಡ ವಿಧಿಸಲಾಗಿತ್ತು. ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಆರ್‌ಎಸ್‌ಎಸ್‌ ಕೈವಾಡವಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ರಾಹುಲ್‌ ಗಾಂಧಿ ಹೇಳಿಕೆಯನ್ನು ಖಂಡಿಸಿ ಆರ್‌ಎಸ್ಎಸ್‌ ಕಾರ್ಯಕರ್ತ ವಿವೇಕ್‌ ಚಂಪಾನೇಕರ್‌ ಸಿವಿಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಈ ಬಗ್ಗೆ ಹೇಳಿಕೆ ನೀಡುವಂತೆ ರಾಹುಲ್‌ ಗಾಂಧಿಗೆ ಕೋರ್ಟ್‌ ನೋಟಿಸ್‌ ನೀಡಿತ್ತು. ಈ ಬಗ್ಗೆ ರಾಹುಲ್ ವಕೀಲರು ಲಿಖಿತ ವರದಿಯನ್ನು ಸಲ್ಲಿಸಿ, ತಮ್ಮ ಕಕ್ಷಿದಾರ ಸಂಸದರಾಗಿರುವ ಕಾರಣ ದೇಶಾದ್ಯಂತ ಪ್ರವಾಸ ಕೈಗೊಳ್ಳಬೇಕಾಗಿದೆ.ಹೀಗಾಗಿ ಹೇಳಿಕೆ ನೀಡುವುದು ತಡವಾಗಿದೆ ಎಂದು ಹೇಳಿ ಕೋರ್ಟ್‌ನ ಕ್ಷಮೆ ಕೇಳಿದ್ದರು. 881 ದಿನಗಳ ವಿಳಂಬವನ್ನು ಕ್ಷಮಿಸಿದ ನ್ಯಾಯಾಲಯ, ಹೇಳಿಕೆಯನ್ನು ಸ್ವೀಕರಿಸಿ 500 ರೂಪಾಯಿ ದಂಡ ವಿಧಿಸಿತ್ತು.

ಇವಿಎಂ, ಇಡಿ, ಸಿಬಿಐ ಇಲ್ಲದೇ ಮೋದಿ ಚುನಾವಣೆ ಗೆಲ್ಲಲ್ಲ: ರಾಹುಲ್‌ ಗಾಂಧಿ
 

Follow Us:
Download App:
  • android
  • ios