Asianet Suvarna News Asianet Suvarna News

ಅಮೇಠಿ, ರಾಯ್‌ಬರೇಲಿಯಿಂದ ಸ್ಪರ್ಧೆ ಇಲ್ಲ? ಗಾಂಧಿ ಕುಟುಂಬದ ಭದ್ರಕೋಟೆಯಲ್ಲಿ ಕಡಿಮೆಯಾಗುತ್ತಿದೆ ಪ್ರಭಾವ!

ಅಮೇಠಿ, ರಾಯ್‌ಬರೇಲಿಯಿಂದ ಗಾಂಧಿಗಳ ಸರ್ಧೆ ಇಲ್ಲ?. ಪ್ರಭಾವ ಕಡಿಮೆ ಆಗುತ್ತಿದೆ ಅಂತಿವೆಯಂತೆ ಸಮೀಕ್ಷೆಗಳು. ಹೀಗಾಗಿ ಇಲ್ಲಿ ಪ್ರಿಯಾಂಕಾ, ರಾಹುಲ್‌ ಸ್ಪರ್ಧೆ ಇಲ್ಲ ಎಂದಿದೆ ಮೂಲಗಳು.

Gandhi Family Unlikely To Contest From Amethi, Rae Bareli gow
Author
First Published Mar 18, 2024, 7:41 AM IST

ಲಖನೌ (ಮಾ.18): ಈ ಲೋಕಸಭೆ ಚುನಾವಣೆಯಲ್ಲಿ ಗಾಂಧಿ ಕುಟುಂಬದ ಸದಸ್ಯರು ತಮ್ಮ ಕುಟುಂಬದ ಕೋಟೆಗಳು ಎನ್ನಿಸಿಕೊಂಡಿರುವ ಉತ್ತರ ಪ್ರದೇಶದ ರಾಯ್‌ ಬರೇಲಿ ಹಾಗೂ ಅಮೇಠಿಯಿಂದ ಸ್ಪರ್ಧಿಸುವುದಿಲ್ಲ ಎಂದು ಮೂಲಗಳು ಹೇಳಿವೆ.

ಕೇರಳದ ವಯನಾಡ್‌ನಿಂದ ರಾಹುಲ್ ಗಾಂಧಿ ಈಗಾಗಲೇ ಉಮೇದುವಾರಿಕೆ ಘೋಷಿಸಿಕೊಂಡಿದ್ದಾರೆ. ಆದರೆ ತಾವು 2019ರಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಅವರ ವಿರುದ್ಧ ಸೋತ ಅಮೇಠಿ ಕ್ಷೇತ್ರದ ಬಗ್ಗೆ ಮೌನ ತಾಳಿದ್ದಾರೆ. ಪ್ರಿಯಾಂಕಾ ಗಾಂಧಿ ಕೂಡ ತಾಯಿ ಸೋನಿಯಾ ಗಾಂಧಿ ಬಿಟ್ಟುಕೊಟ್ಟಿರುವ ರಾಯ್‌ಬರೇಲಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಯಾವುದೇ ಹೇಳಿಕೆ ನೀಡುತ್ತಿಲ್ಲ.

ರಾಹುಲ್ ಗಾಂಧಿ ನ್ಯಾಯ ಯಾತ್ರೆ ಸಮಾರೋಪದಲ್ಲಿ ವಿಪಕ್ಷಗಳ ಶಕ್ತಿ ಪ್ರದರ್ಶನ!

ಸಮೀಕ್ಷೆಯೊಂದರ ಪ್ರಕಾರ ಎರಡೂ ಕ್ಷೇತ್ರಗಳಲ್ಲಿ ಗಾಂಧಿಗಳ ಪ್ರಭಾವ ಕಡಿಮೆಯಾಗುತ್ತಿದೆ. 2019 ರಲ್ಲಿ ಅಮೇಠಿಯಲ್ಲಿ ರಾಹುಲ್ ಸೋತಿದ್ದರು. ಮತ್ತು ಸಮೀಕ್ಷೆಯ ಪ್ರಕಾರ ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ ಜನಪ್ರಿಯತೆ ಕಡಿಮೆಯಾಗಿದೆ. ಹೀಗಾಗಿ ಗಾಂಧಿ ಕುಟುಂಬವು 2024ರ ಚುನಾವಣೆಗೆ ಈ ಅಮೂಲ್ಯ ಕ್ಷೇತ್ರಗಳನ್ನು ತ್ಯಜಿಸುತ್ತಿದೆ ಎಂದು ಮೂಲಗಳು ಹೇಳಿವೆ.

ಈಗ ರಾಜ್ಯಸಭೆಗೆ ತೆರಳಿರುವ ಸೋನಿಯಾ ಗಾಂಧಿ ಮೊದಲು 1999ರಲ್ಲಿ ಅಮೇಠಿಯಲ್ಲಿ ಗೆದ್ದಿದ್ದರು. ನಂತರ ರಾಯ್‌ಬರೇಲಿಗೆ ವಲಸೆ ಹೋಗಿ ಪುತ್ರ ರಾಹುಲ್‌ ಗಾಂಧಿಗೆ ಅಮೇಠಿ ಬಿಟ್ಟುಕೊಟ್ಟಿದ್ದರು. ಆದರೆ ಮೊದಲು ಗೆದ್ದರೂ ರಾಹುಲ್‌ 2019ರಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋತಿದ್ದರು. ಆದರೆ ಸೋಲಿನ ಸುಳಿವು ಅರಿತು ಕೇರಳದ ವಯನಾಡಿನಲ್ಲೂ ಸ್ಪರ್ಧಿಸಿದ್ದ ಕಾರಣ ಅಲ್ಲಿ ಗೆದ್ದಿದ್ದರು.

ಇನ್ಫೋಸಿಸ್ ಷೇರಿನ ಲಾಭಾಂಶ ತೆಗೆದುಕೊಂಡು ಬೇರೆಯಾದ ನಾರಾಯಣ ಮೂರ್ತಿ ಮಗ ರೋಹನ್ ಮೂರ್ತಿ!

ರಾಹುಲ್ ಅಮೇಠಿ ಅಭಿವೃದ್ಧಿಗೆ ಗಮನ ಹರಿಸಲಿಲ್ಲ: ಸ್ಮೃತಿ ಇರಾನಿ
ಅಮೇಠಿ: 10 ವರ್ಷದ ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಮತ್ತು ಉತ್ತರ ಪ್ರದೇಶದಲ್ಲಿ ಅವರ ಸಹೋದ್ಯೋಗಿ ಅಖಿಲೇಶ್ ಯಾದವ್ ಸರ್ಕಾರ ಇದ್ದಾಗ ರಾಹುಲ್ ಗಾಂಧಿ ಅಮೇಠಿ ಅಭಿವೃದ್ಧಿಗೆ ಗಮನ ಹರಿಸಲಿಲ್ಲ. 50 ವರ್ಷಗಳಲ್ಲಿ ಮಾಡಲಾಗದ ಕೆಲಸಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಐದು ವರ್ಷದಲ್ಲಿ ಮಾಡಲಾಗಿದೆ. ಕಾಂಗ್ರೆಸ್‌ಗೆ ಇಲ್ಲಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಧೈರ್ಯವಿಲ್ಲ. ಅಮೇಠಿ ಕ್ಷೇತ್ರವು ಇಂದು ಅಭಿವೃದ್ಧಿ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿದೆ. ಚುನಾವಣೆಯಲ್ಲಿ ಸೋತ ನಂತರ ಕೊರೋನಾ ಸಮಯದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅವರು ಅಮೇಠಿಯನ್ನು ಅನಾಥ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಅಖಿಲೇಶ್ ಯಾದವ್‌ ಕೂಡ ಕಾಣಿಸಲಿಲ್ಲ, ಅಮೇಠಿಯಲ್ಲಿ ತಮ್ಮೊಂದಿಗೆ ಯಾರೂ ಇಲ್ಲ ಎಂಬುದು ಜನರಿಗೆ ಅರಿವಾಗಿದೆ ಎಂದು ಅಮೇಠಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ತಿಳಿಸಿದ್ದಾರೆ.

Follow Us:
Download App:
  • android
  • ios