Asianet Suvarna News Asianet Suvarna News

ಗನ್ ಹಿಡಿದು ಬಂದವರನ್ನು ದೊಣ್ಣೆ ಹಿಡಿದು ಓಡಿಸಿದ ಜ್ಯುವೆಲ್ಲರಿ ಶಾಪ್ ಮಾಲೀಕ : ವೀಡಿಯೋ ವೈರಲ್

ಗನ್‌ ಹಿಡಿದು ಜ್ಯುವೆಲ್ಲರಿ ಶಾಪ್ ದರೋಡೆಗೆ ಬಂದ ನಾಲ್ವರು ದರೋಡೆಕೋರರನ್ನು ಅಂಗಡಿ ಮಾಲೀಕ ದೊಣ್ಣೆ ಹಿಡಿದು ಓಡಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Jewelery shop owner chased away armed robbers by stick in Thane video goes viral akb
Author
First Published Aug 15, 2024, 9:14 AM IST | Last Updated Aug 15, 2024, 9:14 AM IST

ಥಾಣೆ: ಗನ್‌ ಹಿಡಿದು ಜ್ಯುವೆಲ್ಲರಿ ಶಾಪ್ ದರೋಡೆಗೆ ಬಂದ ನಾಲ್ವರು ದರೋಡೆಕೋರರನ್ನು ಅಂಗಡಿ ಮಾಲೀಕ ದೊಣ್ಣೆ ಹಿಡಿದು ಓಡಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ಥಾಣೆಯ ಜ್ಯುವೆಲ್ಲರಿ ಶೋ ರೂಮ್‌ನಲ್ಲಿ ಈ ಘಟನೆ ನಡೆದಿದೆ. ನಾಲ್ವರು ದರೋಡೆಕೋರರು ಗನ್ ಹಿಡಿದು ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿದ್ದು, ಈ ವೇಳೆ ಧೈರ್ಯ ತೋರಿದ ಜ್ಯುವೆಲ್ಲರಿ ಶಾಪ್‌ನಲ್ಲಿದ್ದ ವ್ಯಕ್ತಿ ಅಲ್ಲಿದ್ದ ದೊಣ್ಣೆಯನ್ನು ಹಿಡಿದು ದರೋಡೆಕೋರರನ್ನು ಓಡಿಸಿದ್ದಾನೆ. ಈ ದೃಶ್ಯ ಅಂಗಡಿಯಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.  ಈ ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು, ಇತರರಿಗಾಗಿ ಶೋಧ ನಡೆಸಲಾಗುತ್ತಿದೆ. 

ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾಣಿಸುವಂತೆ, ನಾಲ್ವರು ಮಸ್ಕ್‌ ಧರಿಸಿದ ವ್ಯಕ್ತಿಗಳು ಗನ್ ಹಿಡಿದು ಜ್ಯುವೆಲ್ಲರಿ ಶಾಪ್‌ ಪ್ರವೇಶಿಸಿದ್ದಾರೆ. ಅಲ್ಲದೇ ಅಲ್ಲಿದ್ದವನಿಗೆ ಗನ್ ತೋರಿಸಿ ಬೆದರಿಸಲು ಯತ್ನಿಸಿದ್ದಲ್ಲದೇ, ಅಲ್ಲಿದ್ದ ವಸ್ತುಗಳನ್ನೆಲ್ಲಾ ದೋಚಲು ಯತ್ನಿಸಿದ್ದಾರೆ. ಆದರೆ ಧೈರ್ಯಗೆಡದ ಜ್ಯುವೆಲ್ಲರಿ ಶಾಪ್‌ನಲ್ಲಿದ್ದ ವ್ಯಕ್ತಿ ಅಲ್ಲೇ ಇದ್ದ ದೊಣ್ಣೆಯೊಂದನ್ನು ತೆಗೆದುಕೊಂಡು ಅವರತ್ತ ಬೀಸಿದ್ದು, ದರೋಡೆಕೋರರೆಲ್ಲರೂ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.  ಕೆಲ ವರದಿಗಳ ಪ್ರಕಾರ, ಈ ವೇಳೆ ಕಳ್ಳರು ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದ್ದು, ಆದರೆ ಅದರ ಬಗ್ಗೆ ಯಾವುದೇ ಖಚಿತತೆ ಇಲ್ಲ, ಜೊತೆಗೆ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, 

ಹಾಡಹಗಲೇ ಚಿನ್ನದಂಗಡಿ ಮಾಲೀಕನಿಗೆ ಇರಿದು ಜ್ಯುವೆಲ್ಲರಿ ಶಾಪ್ ದರೋಡೆ: ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಹಾಗೆಯೇ ಥಾಣೆಯಲ್ಲಿ ನಡೆದ ಮತ್ತೊಂದು ದರೋಡೆ ಪ್ರಕರಣದಲ್ಲಿ 22 ವರ್ಷ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. 31,500 ರೂ ಮೌಲ್ಯದ ಅವರ ಅತ್ಯಮೂಲ್ಯ ವಸ್ತುಗಳನ್ನು ಕಳ್ಳರು ದೋಚಿಕೊಂಡು ಹೋಗಲು ನೋಡಿದ ವೇಳೆ ಮಹಿಳೆ ಅದನ್ನು ತಡೆಯುವ ಪ್ರಯತ್ನ ಮಾಡಿದಾಗ ಅವರಿಗೆ ಈ ಬಡಿದಾಟದಲ್ಲಿ ಗಾಯಗಳಾಗಿವೆ. ಥಾಣೆಯ ಕಿಸನ್‌ನಗರದಲ್ಲಿ ಮುಂಜಾನೆ 3.30ರ ಸುಮಾರಿಗೆ ಈ ಘಟನೆ ನಡೆದಿತ್ತು. ಮಹಿಳೆ ತಮ್ಮ ಮನೆಯ ಮೊದಲ ಮಹಡಿಯ ಕೊಠಡಿಯಲ್ಲಿ ಮಲಗಿದ್ದಾಗ, ಘಟನೆ ನಡೆದಿದ್ದು, ಕಿಟಕಿಯಲ್ಲಿದ್ದ ಸಣ್ಣ ಜಾಗದಲ್ಲಿ ಕಳ್ಳ ಒಳಗೆ ಬಂದಿದ್ದ. 

ಹಾಲಿವುಡ್ ಸಿನಿಮಾ ಸ್ಟೈಲ್‌ನಲ್ಲಿ ಭಾರತ ಮೂಲದ ಜ್ಯುವೆಲ್ಲರಿ ಶಾಪ್ ದರೋಡೆ: ಮೂರೇ ನಿಮಿಷದಲ್ಲಿ ಶಾಪ್ ಖಾಲಿ

ಅವಳ ಕತ್ತನ್ನು ಹಿಡಿದು ಎಳೆದಾಡಿದ ಆತ ಚಿನ್ನದ ಉಂಗುರು ಮಂಗಳಸೂತ್ರವನ್ನು ಕಿತ್ತುಕೊಂಡು ಓಡಲು ಯತ್ನಿಸಿದ್ದ. ಈ ವೇಳೆ ಆತನ್ನು ಅಟ್ಟಿಸಿಕೊಂಡು ಹೋದ ಕಳ್ಳ ಆಕೆಯತ್ತ ಚಾಕು ಎಸೆದಿದ್ದು, ಇದರಿಂದ ಮಹಿಳೆಯ ಕೈಗೆ ಗಾಯಗಳಾಗಿವೆ. ಗಾಯದಿಂದಾಗಿ ಅವರಿಗೆ ಕಳ್ಳನನ್ನು ಬೆನ್ನಟ್ಟಲು ಸಾಧ್ಯವಾಗಿಲ್ಲ, ಥಾಣೆಯ ಶ್ರೀನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 

 

Latest Videos
Follow Us:
Download App:
  • android
  • ios