ರೈಲು ಪ್ರಯಾಣದ ನಡುವೆ ಶಾಸನಕನಿಂದ ಒಳಉಡುಪಿನಲ್ಲೇ ರ‍್ಯಾಂಪ್ ವಾಕ್ ಜೆಡಿಯು ಶಾಸಕನ ವರ್ತನೆಗೆ ಇತರ ಪ್ರಯಾಣಿಕರ ಆಕ್ರೋಶ, ತರಾಟೆ ಪೊಲೀಸರು ಮಧ್ಯಪ್ರವೇಶಿ ಪರಿಸ್ಥಿತಿ ಶಾಂತ, ವಿವಾದಕ್ಕೆ ಸಮಜಾಯಿಷಿ

ನವದೆಹಲಿ(ಸೆ.03): ಶಾಸಕರ ವರ್ತನೆಯನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಳ್ಳುವುದು ಮೊದಲೇನಲ್ಲ. ಆದರೆ ಈ ರೀತಿಯ ವರ್ತನೆ ಇದೇ ಮೊದಲ ಬಾರಿಗೆ ವರದಿಯಾಗಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷದ ಶಾಸಕ ಗೋಪಾಲ್ ಮಂಡಲ್ ರೈಲಿನಲ್ಲಿ ನಿಕ್ಕರ್ ಹಾಗೂ ಬನಿಯನ್‌ನಲ್ಲಿ ಮಾತ್ರ ಓಡಾಡಿರುವುದು ಇತರ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇಷ್ಟೇ ಅಲ್ಲ ಶಾಸಕನನ್ನೇ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆದಿದೆ.

ಶಿಷ್ಯ ಪಾಕಿಸ್ತಾನಕ್ಕೆ ಗುರು ಚೀನಾ ಅಂಡರ್‌ವೇರ್ ಉಡುಗೊರೆ; ಇಂಟರ್‌ನ್ಯಾಶನಲ್ ಕಾಮಿಡಿ!

ಪಾಟ್ನಾದಿಂದ ದೆಹಲಿಗೆ ತೆರಳುವ ತೇಜಸ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನಲ್ಲಿ ಶಾಸಕ ಗೋಪಾಲ್ ಮಂಡಲ್ ಅಂಡರ್‌ವೇರ್‌ನಲ್ಲಿ ಓಡಾಡಿದ್ದಾರೆ. ಎಸಿ ಕೋಚ್‌ನಲ್ಲಿರುವ ಇತರ ಮಹಿಳಾ ಪ್ರಯಾಣಿಕರಿಗೆ ಮುಜುಗರವಾಗಿದೆ. ಹೀಗಾಗಿ ಇತರ ಪ್ರಯಾಣಿಕರು ಶಾಸಕರ ವರ್ತನೆಯನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಟಿಕೆಟ್ ಅಧಿಕಾರಿ, ರೈಲ್ವೇ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಿ ಗೋಪಾಲ್ ಮಂಡಲ್‌ಗೆ ವಸ್ತ್ರ ಧರಿಸಿ ಪ್ರಯಾಣಿಸಲು ಸೂಚನೆ ನೀಡಿದ್ದಾರೆ. ಶಾಸಕನ ಅಂಡರ್‌ವೇರ್ ವಾಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಗೋಪಾಲ್ ಮಂಡಲ್ ಸಮಜಾಯಿಷಿ ನೀಡಿದ್ದಾರೆ.

ಎಲ್ಲ ಕಾಣುವ ಗೌನ್ ಧರಿಸಿ ಪುರುಷರ ವಾರ್ಡ್‌ಗೆ ಬಂದ ನರ್ಸ್, ತೊಂದರೆ ಆಗಿಲ್ವಂತೆ!

ರೈಲು ಹತ್ತಿದ ಕೆಲ ಹೊತ್ತಲ್ಲಿ ನನ್ನ ಹೊಟ್ಟೆ ತಳಮಳಗೊಂಡಿದೆ. ಹೀಗಾಗಿ ರೆಸ್ಟ್ ರೂಂ ಹೋಗುವ ಸಲುವಾಗಿ ಅಂಡರ್‌ವೇರ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ ಎಂದು ಗೋಪಾಲ್ ಮಂಡಲ್ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಪೈಜಾಮ ಕಳಚಿ ವಾಶ್‌ರೂಂಗೆ ತೆರಳಿದ್ದೇನೆ. ನಾನಗೆ 60 ವರ್ಷ ವಯಸ್ಸು, ಕೋಚ್‌ನಲ್ಲಿ ಯಾವುದೇ ಮಹಿಳಾ ಹಾಗೂ ಹುಡುಗಿಯರ ಇರಲಿಲ್ಲ ಎಂದು ಗೋಪಾಲ್ ಮಂಡಲ್ ಆರೋಪಗಳಿಗೆ ಉತ್ತರ ನೀಡಿದ್ದಾರೆ.

Scroll to load tweet…

ಅತಿಸಾರದಿಂದ ಬಳಲಿದ ನನಗೆ ವಾಶ್‌ರೂಂಗೆ ಹೋಗಿ ಬರುವುದು ಅನಿವಾರ್ಯವಾಗಿತ್ತು. ಹೀಗಾಗಿ ಬೇರೆ ದಾರಿ ಕಾಣದೆ ಅಂಡರ್‌ವೇರ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಸಹ ಪ್ರಯಾಣಕರು ನನ್ನ ವಯಸ್ಸು ನೋಡದೆ ಅತೀ ಪ್ರತಿಕ್ರಿಯಿಸಿದ್ದಾರೆ ಎಂದು ಗೋಪಾಲ್ ಮಂಡಲ್ ಹೇಳಿದ್ದಾರೆ.