Asianet Suvarna News Asianet Suvarna News

ಶಿಷ್ಯ ಪಾಕಿಸ್ತಾನಕ್ಕೆ ಗುರು ಚೀನಾ ಅಂಡರ್‌ವೇರ್ ಉಡುಗೊರೆ; ಇಂಟರ್‌ನ್ಯಾಶನಲ್ ಕಾಮಿಡಿ!

ಅಂತಾರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲೀಗೆ ಗುರಿಯಾದ  ಚೀನಾ-ಪಾಕಿಸ್ತಾನ/ ಅಂಡರ್ ವೇರ್ ನಿಂದ ತಯಾರಿಸಿದ ಮಾಸ್ಕ್ ಕಳಿಸಿಕೊಟ್ಟ ಚೀನಾ/ ಸೋಶೀಯಲ್ ಮೀಡಿಯಾದಲ್ಲಿ ಎರಡು ದೇಶಗಳ ಮಾನ ಹರಾಜು

China Sends Masks to Pakistan Made Of Underwear Amid COVID-19 Outbreak
Author
Bengaluru, First Published Apr 5, 2020, 4:01 PM IST

ಇಸ್ಲಾಮಾಬಾದ್(ಏ.05)  ಪಾಕಿಸ್ತಾನ ಮತ್ತು ಚೀನಾದ ಸಂಬಂಧಗಳ ಬಗ್ಗೆ ವಿಶ್ವಕ್ಕೆ ಹೊಸದಾಗಿ ಏನು ಹೇಳಬೇಕಾಗಿಲ್ಲ. ಪಾಕಿಸ್ತಾನವನ್ನು ಭಾರತದ ಮೇಲೆ ಚೀನಾ ಆಗಾಗ ಚೂ ಬಿಡುತ್ತಿರುವ ಸಂಗತಿಯೂ ಗುಪ್ತವಾಗಿ ಏನು ಉಳಿದಿಲ್ಲ. 

ಆದರೆ ಈ ಕೊರೋನಾ ವಿರುದ್ಧದ ಹೋರಾಟದಲ್ಲಿ ಚೀನಾ ತನ್ನ ಮಾನ ಹರಾಜು ಹಾಕಿಕೊಳ್ಳುವುದು ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಮತ್ತು ಚೀನಾ  ಇಬ್ಬರನ್ನು ನೋಡಿ ನಗಬೇಕಾದ ಸ್ಥಿತಿ ಉಂಟಾಗಿದೆ. ಇದಕ್ಕೆ ಕಾರಣ ಚೀನಾ ಮಾಡಿರುವ ಒಂದು ಕಿತಾಪತಿ.

ಜನ ಜಂಗುಳಿ ತಪ್ಪಿಸಲು ಇದಕ್ಕಿಂತ ದೊಡ್ಡ ಮಾಸ್ಟರ್ ಪ್ಲಾನ್ ಇಲ್ಲ

ಕೊರೋನಾ ನಿಯಂತ್ರಿಸಲು ಪಾಕಿಸ್ತಾನ ಗುಣಮಟ್ಟದ ಎನ್95 ಮಾಸ್ಕ್ ಗಳಿಗೆ ಚೀನಾದ ಮುಂದೆ ಬೇಡಿಕೆ ಇಟ್ಟಿತ್ತು. ಈ ಬೇಡಿಕೆಯನ್ನು ಪುರಸ್ಕರಿಸಿದ ಚೀನಾ ಮಾಸ್ಕ್ ಗಳನ್ನು ಕಳುಹಿಸಿಕೊಟ್ಟಿದೆ ಆದರೆ ಇಲ್ಲೆ ಇರುವುದು ಮಜಾ. 

ಚೀನಾ ಕಳಿಸಿದ ಮಾಸ್ಕ್ ಗಳನ್ನು ದೊಡ್ಡ ನಂಬಿಕೆಯಿಂದ ಪಾಕಿಸ್ತಾನ ತನ್ನೆಲ್ಲ ಆಸ್ಪತ್ರೆಗಳಿಗೆ, ಯಾರಿಗೆ ಅಗತ್ಯವಿದೆಯೋ ಅವರಿಗೆ ಕಳುಹಿಸಿಕೊಟ್ಟಿದೆ. ಆದರೆ ಪಾಕ್ ನ ದೊಡ್ಡಣ್ಣ ಸರಿಯಾದ ಮೋಸವನ್ನೇ ಮಾಡಿದ್ದ. ಅಂಡರ್ ವೇರ್ ಬಟ್ಟೆಯಿಂದ ತಯಾರಾದ ಮಾಸ್ಕ್ ಕಂಡು ಪಾಕಿಸ್ತಾನಿಯರೇ ಹೌಹಾರಿದ್ದಾರೆ

ಈ ವಿಚಾರ ಪಾಕಿಸ್ತಾನದ ಟಿವಿ ಮಧ್ಯಮಗಳಲ್ಲಿ ಪ್ರಸಾರವಾದ ಬಳಿಕ ವಿಡಿಯೋ ವೈರಲ್ ಆಗಿದೆ. ಪಾಕಿಸ್ತಾನ ಸರ್ಕಾರ ಚೀನಾ ಬಳಿ 2 ಲಕ್ಷ ಫೇಸ್ ಮಾಸ್ಕ್, 2 ಸಾವಿರ ಎನ್ 95 ಮಾಸ್ಕ್, 5 ವೆಂಟಿಲೇಟರ್, 2 ಸಾವಿರ ಟೆಸ್ಟಿಂಗ್ ಕಿಟ್ಸ್, 2 ಸಾವಿರ ಮೆಡಿಕಲ್ ರಕ್ಷಣಾ ವಸ್ತ್ರಗಳನ್ನು ಕಳಹಿಸಬೇಕು ಎಂದು ಮನವಿ ಮಾಡಿತ್ತು. ಪಾಕಿಸ್ತಾನಕ್ಕೂ ಕೊರೋನಾ ಭೀತಿ ಆವರಿಸಿದ್ದು ಕೊರೋನಾ ಪೀಡಿತರನ್ನು ಪಾಕಿಸ್ತಾನ  ತನ್ನ ಆಕ್ರಮಿತ ಕಾಶ್ಮೀರ ಭಾಗಕ್ಕೆ ತಂದು ಬಿಡುತ್ತಿದೆ ಎಂದು ವರದಿಯಾಗಿದೆ. ಒಟ್ಟಿನಲ್ಲಿ ಎರಡು ದೇಶಗಳ ನಡುವಿನ ವ್ಯವಹಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲೀಗೆ ಗುರಿಯಾಗಿದೆ.

Follow Us:
Download App:
  • android
  • ios