ರಾಜ್ಯಸಭೆ ಚೇರ್ಮನ್‌ ಜಗದೀಪ್‌ ಧನ್‌ಕರ್‌ಗೆ ಕೈ ತೋರಿಸಿ ಮಾತನಾಡಿದ ಜಯಾ ಬಚ್ಛನ್‌, ಬಿಜೆಪಿ ಆಕ್ರೋಶ!

ತಮ್ಮ ವರ್ತನೆಗಳ ಕಾರಣದಿಂದಾಗಿ ಸದಾ ಸುದ್ದಿಯಲ್ಲಿರುವ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆ ಜಯಾ ಬಚ್ಛನ್‌, ಮತ್ತೊಮ್ಮೆ ಸದನದಲ್ಲಿ ತಮ್ಮ ವರ್ತನೆಯ ಕಾರಣಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ವೈರಲ್‌ ವಿಡಿಯೋದಲ್ಲಿ ರಾಜ್ಯಸಭೆ ಚೇರ್ಮನ್‌ ಹಾಗೂ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಅವರತ್ತ ಬೆರಳು ತೋರಿಸಿ ಮಾತನಾಡಿದ್ದು ವಿವಾದಕ್ಕೆ ಕಾರಣವಾಗಿದೆ.

Jaya Bachchan showed finger to Chairman Jagdeep Dhankhar in Rajya Sabha BJP Protest san

ನವದೆಹಲಿ (ಫೆ.12): ಹಿರಿಯ ನಟಿ ಹಾಗೂ ರಾಜ್ಯಸಭಾ ಸದಸ್ಯೆ ಜಯಾ ಬಚ್ಛನ್‌ ಮತ್ತೊಮ್ಮೆ ತಮ್ಮ ವರ್ತನೆಯ ಕಾರಣದಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಜನರು ಸಮಾಜವಾದಿ ಪಕ್ಷದ ಸಂಸದೆಯ ಅತಿರೇಕದ ವರ್ತನೆ ಹಾಗೂ ಕೋಪಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯಸಭೆಯ ಕಲಾಪದ ವೇಳೆ ಸದನದ ಚೇರ್ಮನ್‌ ಹಾಗೂ ಉಪರಾಷ್ಟ್ರಪತಿಯೂ ಆಗಿರುವ ಜಗದೀಪ್‌ ಧನ್‌ಕರ್‌ ಅವರಿಗೆ ಕೈ ತೋರಿಸಿ ಮಾತನಾಡಿದ್ದು ಸಂಸದ್‌ ಟಿವಿಯ ವಿಡಿಯೋದಲ್ಲಿ ಸೆರೆಯಾಗಿದೆ. ರಾಜ್ಯಸಭೆಯಲ್ಲಿ ಕಲಾಪ ನಡೆಸಿಕೊಡುವ ಸ್ಪೀಕರ್‌ ಸ್ಥಾನದಲ್ಲಿರುವ ವ್ಯಕ್ತಿಗೆ ಸಿಟ್ಟಿನಿಂದ ಕೈಬೆರಳು ತೋರಿಸಿ ಮಾತನಾಡುವ ಮೂಲಕ ಅವರ ಸ್ಥಾನಕ್ಕೆ ಜಯಾ ಬಚ್ಛನ್‌ ಅವಮಾನಿಸಿದ್ದಾರೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಜನರು ಕಿಡಿಕಾರಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ, ಸಮಾಜವಾದಿ ಪಕ್ಷದ ಸಂಸದೆ ಧನ್‌ಕರ್‌ ಅವರಿಗೆ ಕೈಬೆರಳು ತೋರಿಸುವ ಮೂಲಕ ಅಸಂಸದೀಯ ವರ್ತನೆ ತೋರಿದ್ದಾರೆ ಎಂದು ಆಪಾದಿಸಲಾಗಿದೆ. ಅದಲ್ಲದೆ, ಜಯಾ ಬಚ್ಛನ್‌ ಅವರು ಸದನದಲ್ಲಿ ಕೋಪದ ಮುಖವನ್ನು ಹೊತ್ತುಕೊಂಡಿರುವ ಬಗ್ಗೆಯೂ ಜನರು ಕಿಡಿಕಾರಿದ್ದಾರೆ.


ಈ ಬಾರಿಯ ಬಜೆಟ್ ಅಧಿವೇಶನದ ಕಲಾಪದ ವಿಡಿಯೋ ಇದಾಗಿದೆ. ಸದನದಲ್ಲಿ ಗದ್ದಲ ಸೃಷ್ಟಿಸಿದ ಹಾಗೂ ಕಲಾಪಗಳಿಗೆ ಅಡ್ಡಿಯಾದ ಕಾರಣಕ್ಕೆ ಕಾಂಗ್ರೆಸ್‌ ಸಂಸದೆ ರಜನಿ ಪಟೇಲ್‌ ಅವರನ್ನು ಪ್ರಸ್ತುತ ನಡೆಯುತ್ತಿರುವ ಅಧಿವೇಶನದ ಉಳಿದ ದಿನಗಳ ಕಲಾಪದಿಂದ ಅಮಾನತು ಮಾಡಲಾಗಿದೆ. ಈ ವಿಚಾರದಲ್ಲಿ ಸಮಾಜವಾದಿ ಪಕ್ಷದ ಸಂಸದೆಯಾಗಿರುವ ಜಯಾ ಬಚ್ಛನ್‌ ಪ್ರತಿಭಟನೆ ನಡೆಸುವ ಮೂಲಕ ಕಾಂಗ್ರೆಸ್‌ ಸಂಸದರನ್ನು ಬೆಂಬಲಿಸಿದ್ದರು. ಗದ್ದಲ ಸೃಷ್ಟಿಸಿದ್ದಾರೆ ಎಂದು ಹೇಳಲಾಗಿರುವ ರಜನಿ ಪಟೇಲ್‌ ಅವರಿಗೆ ಮಾತನಾಡಲು ಅವಕಾಶವನ್ನೇ ನೀಡಲಿಲ್ಲ ಎಂದು ಎಸ್‌ಪಿ ಸಂಸದೆ ಹೇಳಿದ್ದಾರೆ. ಪ್ರತಿಭಟನೆಗ ನಡುವೆ ಸದನದ ಪ್ಮರುಖ ಭಾಗದಿಂದ ಹಾದು ಹೋಗುತ್ತಿರುವಾಗ ಜಯಾ ಬಚ್ಛನ್‌, ಧನ್‌ವಕ್‌ ಅವರಿಗೆ ಬೆರಳು ತೋರಿಸಿ ಮಾತನಾಡಿದರು.
ಅವರ ಈ ವರ್ತನೆಗೆ ಜಯಾ ಬಚ್ಛನ್‌ ಅವರ ಟ್ವಿಟರ್ ಪೇಜ್‌ನಲ್ಲಿಯೇ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಬಿಜೆಪಿ ನಾಯಕರು ಕೂಡ ಜಯಾ ಅವರ ವರ್ತನೆಯನ್ನು ಖಂಡಿಸಿದ್ದಾರೆ.

ಛತ್ತೀಸ್‌ಗಢದ ಬಿಲಾಸ್‌ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅರುಣ್ ಸಾ ಅವರು ಜಯಾ ಬಚ್ಚನ್ ಜಿ ಅವರು ರಂಗಭೂಮಿ ಮತ್ತು ಪ್ರಜಾಪ್ರಭುತ್ವದ ಅತ್ಯುನ್ನತ ವೇದಿಕೆಯ ನಡುವಿನ ವ್ಯತ್ಯಾಸವನ್ನು ಉಳಿಸಿಕೊಳ್ಳಬೇಕು ಎಂದು ಬರೆದಿದ್ದಾರೆ. ಯುವ ಪೀಳಿಗೆ ನೀವು ಸದನದಲ್ಲಿ ಏನು ಮಾಡುತ್ತಿರೋ ಅದನ್ನೇ ಅನುಸರಿಸುತ್ತದೆ ಆ ಎಚ್ಚರಿಕೆಯಲ್ಲಿರಬೇಕು ಎಂದಿದ್ದಾರೆ.

ಬಿಜೆಪಿ ದೆಹಲಿ ವಕ್ತಾರ ಅಯಾಜ್ ಸೆಹ್ರಾವತ್ ಅವರು "ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಅವರ ನಡವಳಿಕೆ ನಾಚಿಕೆಗೇಡು" ಎಂದು ಬರೆದಿದ್ದಾರೆ. ರಾಜಸ್ಥಾನದ ಬಿಜೆಪಿ ನಾಯಕ ಲಕ್ಷ್ಮೀಕಾಂತ್ ಭಾರದ್ವಾಜ್ ಕೂಡ ಜಯಾ ವರ್ತನೆಯನ್ನು ಟೀಕಿಸಿದ್ದಾರೆ "ಅಹಂಕಾರಿ ಜಯಾ ಬಚ್ಚನ್ ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿಗೆ ಬೆರಳು ತೋರಿಸಿದ್ದಾರೆ. ಇಂಥ ಜನರು ಪ್ರಜಾಪ್ರಭುತ್ವದ ದೇವಾಲಯವನ್ನು ಹೇಗೆ ಪ್ರವೇಶಿಸುತ್ತಾರೆ ಅನ್ನೋದೇ ಅಶ್ಚರ್ಯ' ಎಂದು ಹೇಳಿದ್ದಾರೆ.

ಶೂಟಿಂಗ್ ವೇಳೆ ಪೊದೆಗಳ ಹಿಂದೆ ಮುಟ್ಟಿನ ಬಟ್ಟೆ ಬದಲಾಯಿಸುತ್ತಿದ್ದೆವು: ಪೀರಿಯೆಡ್ಸ್ ಅನುಭವ ಬಿಚ್ಚಿಟ್ಟ ಜಯಾ ಬಚ್ಚನ್

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಲಹೆಗಾರ ಕಾಂಚನ್ ಗುಪ್ತಾ ಅವರು, ಯುಪಿಎ ಅಧಿಕಾರದಲ್ಲಿದ್ದಾಗ ಜಯಾ ಬಚ್ಚನ್ ಅವರು ನೆಹರು ಕುಟುಂಬದ ಬಗ್ಗೆ ತೀವ್ರವಾದ ಟೀಕೆಗಳನ್ನು ಮಾಡಿದ್ದ ವಿಡಿಯೋ ನೆನಪಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಅಂದು ಜಯಾ ಬಚ್ಛನ್‌ ಅವರು ಮಾಡಿದ್ದ ಕಾಮೆಂಟ್‌ಗೆ ಸ್ವತಃ ಅಮಿತಾಬ್‌ ಬಚ್ಛನ್‌ ಕ್ಷಮೆ ಯಾಚಿಸಲು ಬಂದಿದ್ದರು. ಕ್ಷಮೆಯಾಚನೆಯ ಕೊನೆಯಲ್ಲಿ 'ಅವರು ರಾಜರು, ನಾವು ಸಾಮಾನ್ಯರು' ಎಂದು ಹೇಳಿದ್ದು ನೆನಪಾಗುತ್ತಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಉದ್ದ ಕೂದಲಿದೆ ಎನ್ನುವ ಕಾರಣಕ್ಕೆ ಜಯಾ ಬಚ್ಚನ್ ಮದುವೆಯಾದೆ; ಅಮಿತಾಭ್ ಬಚ್ಚನ್

ವೈರಲ್‌ ಆಗಿರುವ ವಿಡಿಯೋ ಫೆ.9ರಂದು ನಡೆದ ಕಲಾಪದ ಅವಧಿಯದ್ದು ಎನ್ನಲಾಗಿದೆ. ರಜನಿ ಪಟೇಲ್‌ ಅವರನ್ನು ಅಮಾನತು ಮಾಡಿದ್ದ ಕುರಿತಾಗಿ ಮಾತನಾಡಿದ್ದ ಜಯಾ ಬಚ್ಛನ್‌, "ಇದು ತುಂಬಾ ಅವಮಾನಕರ ರೀತಿಯಲ್ಲಿ ಮಾಡಲಾಗಿದೆ ಎಂದು ನಾನು ಭಾವಿಸುತ್ತೇನೆ. ಇದು ಆಗಬಾರದಿತ್ತು. ಅವರಿಂದ ತಪ್ಪಾಗಿದೆ ಎಂದು ಸಭಾಪತಿ ಭಾವಿಸಿದರೆ, ಅವರು ಅದನ್ನು ಸಮಿತಿಗೆ ಕಳುಹಿಸಬೇಕಿತ್ತು. ಅವರು ಅದನ್ನು ಕಳುಹಿಸಿದ್ದಾರೆಯೇ ಎಂದು ತಿಳಿದಿಲ್ಲ. ಆಕೆಗೆ ಸ್ಪಷ್ಟೀಕರಣ ನೀಡಲು ಅವಕಾಶವನ್ನೇ ನೀಡಿಲ್ಲ' ಎಂದು ಹೇಳಿದ್ದರು.

Latest Videos
Follow Us:
Download App:
  • android
  • ios