ಉದ್ದ ಕೂದಲಿದೆ ಎನ್ನುವ ಕಾರಣಕ್ಕೆ ಜಯಾ ಬಚ್ಚನ್ ಮದುವೆಯಾದೆ; ಅಮಿತಾಭ್ ಬಚ್ಚನ್

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮದುವೆ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಜಯಾ ಬಚ್ಚನ್ ಅವರಿಗೆ ಉದ್ದವಾದ ಕೂದಲು ಇದ್ದ ಕಾರಣಕ್ಕೆ ಮದುವೆಯಾದೆ ಎಂದು ಹೇಳಿದರು. 

Amitabh Bachchan revealed he married Jaya Bachchan because of her long hair sgk

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಸದ್ಯ ಕೌನ್ ಬನೇಗಾ ಕರೋಡ್ ಪತಿ 14 ನಡೆಸಿಕೊಡುತ್ತಿದ್ದಾರೆ. ಈ ಶೋನಲ್ಲಿ ಬಿಗ್ ಬಿ ಅನೇಕ ಇಂಟ್ರಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡುತ್ತಾರೆ. ಸ್ಟಾರ್ ಕಲಾವಿದರ ಜೀವನದ ಬಗ್ಗೆ ತಿಳಿದುಕೊಳ್ಳಲು ಎಲ್ಲರಿಗೂ ಕುತೂಹಲ ವಿರುತ್ತದೆ. ಕೆಬಿಸಿಯ ಹಾಟ್ ಸೀಟ್‌ನಲ್ಲಿ ಕುಳಿತ ಸ್ಪರ್ಧಿಗಳು ಬಿಗ್ ಬಿಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಅಮಿತಾಭ್ ಖುಷಿ ಖುಷಿಯಾಗಿಯೇ ಉತ್ತರ ನೀಡುತ್ತಾರೆ. ಇದೀಗ ಅಮಿತಾಭ್  ಬಚ್ಚನ್ ಮದುವೆಯ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಜಯ್ ಬಚ್ಚನ್ ಅವರನ್ನು ಮದುವೆಯಾದ ಕಾರಣಗಳಲ್ಲಿ ಒಂದನ್ನು ರಿವೀಲ್ ಮಾಡಿದ್ದಾರೆ. 

ಬಿಗ್ ಬಿ ಅಮಿತಾಭ್ ಬಚ್ಚನ್ ಮುಂದೆ ಪ್ರಿಯಾಂಕಾ ಮಹರ್ಷಿ ಸ್ಪರ್ಧಿಯಾಗಿ ಹಾಟ್ ಸೀಟ್ ಏರಿದ್ದರು. ಪ್ರಿಯಾಂಕಾ ಅವರ ಉದ್ದವಾದ ಕೂದಲನ್ನು ನೋಡಿ ಅಮಿತಾಭ್ ಹೊಗಳಿದರು. ಬಳಿಕ ತಾನು ಜಯಾ ಅರನ್ನು ಮದುವೆಯಾಗಲು ಕಾರಣ ಉದ್ದ ಕೂದಲು ಕೂಡ ಒಂದು ಎಂದು ಹೇಳಿದ್ದಾರೆ. ಹಾಟ್ ಸೀಟ್ ಏರಿದ್ದ ಸ್ಪರ್ಧಿ ಪ್ರಿಯಾಂಕಾ ಉದ್ದ ಕೂದಲು ನೋಡಿ ಅಮಿತಾಭ್ ತುಂಬಾ ಇಷ್ಟಪಟ್ಟರು. ಬಳಿಕ ಕೂದಲನ್ನು ಎಲ್ಲರಿಗೂ ತೋರಿಸುವಂತೆ ಹೇಳಿದರು. ಪ್ರಿಯಾಂಕಾ ತನ್ನ ಕೂದಲನ್ನು ಮುಂದೆ ಹಾಕಿಕೊಂಡರು. ನಂತರ ಅಮಿತಾಭ್, 'ಜಯಾ ಉದ್ದವಾದ ಕೂದಲನ್ನು ಹೊಂದಿದ್ದರು. ಹಾಗಾಗಿ ಅವಳನ್ನು ಮದುವೆಯಾಗಿದೆ'  ಎಂದು ಹೇಳಿದರು. ಸದ್ಯ ಈ ಸಂಚಿಕೆಯ ಪ್ರೋಮೋ ರಿಲೀಸ್ ಆಗಿದ್ದು ಅಭಿಮಾನಿಗಳ ಗಮನ ಸೆಳೆಯುತ್ತಿದೆ. 

ಕಡಿಮೆ ಸ್ಕ್ರೀನಲ್ಲಿ ಬಿಡುಗಡೆಯಾದರೂ ಬಾಕ್ಸ್ ಆಫೀಸಲ್ಲಿ ಹವಾ ಸೃಷ್ಟಿಸುತ್ತಿದೆ ಉಂಚೈ

 ಅಮಿತಾಭ್ ಬಚ್ಚನ್ ಅವರು ಜಯಾ ಬಚ್ಚನ್ ಅವರನ್ನು ಮೊದಲು ಭೇಟಿಯಾಗಿದ್ದು 1971ರಲ್ಲಿ. ಹೃಷಿಕೇಶ್ ಮುಖರ್ಜಿ ಅವರ ಗುಡ್ಡಿ ಸಿನಿಮಾದಲ್ಲಿ. ಬಳಿಕ ಇಬ್ಬರೂ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಜಂಜೀರ್, ಅಭಿಮಾನ್, ಚುಪ್ಕೆ ಚುಪ್ಕೆ, ಶೋಲೆ ಮತ್ತು ಕಭಿ ಖುಷಿ ಕಭಿ ಘಮ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅಮಿತಾಭ್ ಮತ್ತು ಜಯಾ ಬಚ್ಚನ್ ಇಬ್ಬರೂ 1973 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಮಿತಾಭ್-ಜಯಾ ದಂಪತಿಗೆ ಇಬ್ಬರು ಮಕ್ಕಳು. ಅಭಿಷೇಕ್ ಮತ್ತು ಶ್ವೇತಾ ನಂದಾ.

ಮದುವೆಗೆ ಮುನ್ನ ಜಯಾ ಬಚ್ಚನ್ ಅವರಿಗೆ ಅಮಿತಾಬ್ ಈ ಷರತ್ತುಗಳನ್ನು ಹಾಕಿದ್ದರಂತೆ!

ಅಮಿತಾಭ್ ಬಚ್ಚನ್ ಸಿನಿಮಾಗಳ ಬಗ್ಗೆ ಹೇಳುವುದಾದರೆ, ಊಂಚೈ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ಅನುಪಮ್ ಖೇರ್, ಬೊಮ್ಮನ್ ಇರಾನಿ, ಪರಿಣೀತಿ ಚೋಪ್ರಾ ಸೇರಿದಂತೆ ಅನೇಕರು ನಟಿಸಿದ್ದರು. ಸದ್ಯ ಅನೇಕ ಸಿನಿಮಾಗಳಲ್ಲಿ ಅಮಿತಾಭ್ ನಟಿಸುತ್ತಿದ್ದಾರೆ. ಹಿಂದಿ ಸಿನಿಮಾ ಜೊತೆಗೆ ತೆಲುಗು ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಇನ್ನು ಹೆಸರಿಡದ ಸಿನಿಮಾದಲ್ಲಿ ಅಮಿತಾಭ್ ನಟಿಸುತ್ತಿದ್ದಾರೆ. ಈ ಸಿನಿಮಾಗೆ ನಾಗ್ ಅಶ್ವಿನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. 

Latest Videos
Follow Us:
Download App:
  • android
  • ios