Asianet Suvarna News Asianet Suvarna News

ಜಮ್ಮು ಕಾಶ್ಮೀರ: ಕಣಿವೆ ನಾಡಿನಲ್ಲಿ ಶಾಂತಿ ಸ್ಥಾಪನೆಯಾಗುವ ಆಶಾಕಿರಣ!

* ಕಣಿವೆ ನಾಡಿನಲ್ಲಿ ಶಾಂತಿ ಮರುಸ್ಥಾಪನೆ

* ಸಂಘರ್ಷ, ಗಲಭೆ, ಹಿಂಸಾಚಾರದಿಂದಲೇ ಫೇಮಸ್ ಆಗಿದ್ದ ಕಣಿವೆ ನಾಡು

* ಕಣಿವೆ ನಾಡಿಗೆ ರಾಜ್ಯ ಸ್ಥಾನಮಾನ ಸಿಗುವ ಸಾಧ್ಯತೆ

Jammu and Kashmir Opening windows towards peace by Lt Gen Syed Ata Hasnain pod
Author
Bangalore, First Published Jun 26, 2021, 5:07 PM IST
  • Facebook
  • Twitter
  • Whatsapp

ಲೇಖಕರು: ಲೆಫ್ಟಿನೆಂಟ್ ಜನರಲ್ ಸೈಯದ್ ಅಟಾ ಹಸ್ನೈನ್ (ನಿವೃತ್ತ)
ಶ್ರೀನಗರ: 15 ಕಾರ್ಪ್ಸ್ ಮಾಜಿ ಕಮಾಂಡರ್ ಮತ್ತು ಕಾಶ್ಮೀರದ ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ.

ಜಮ್ಮು ಮತ್ತು ಕಾಶ್ಮೀರ ಮತ್ತು ಶಾಂತಿ ಇವೆರಡೂ ಪದಗಳು ಒಂದೇ ಕಡೆ ಇರಲು ಸಾಧ್ಯವಿಲ್ಲ ಅಥವಾ ತಾಳೆ ಹಾಕುವುದಿಲ್ಲ. ಸಾಮಾನ್ಯವಾಗಿ ಸಂಘರ್ಷ, ಗಲಭೆ, ಹಿಂಸಾಚಾರದಿಂದಲೇ ಕಣಿವೆ ನಾಡು ಹೆಚ್ಚು ಸದ್ದು ಮಾಡುತ್ತಿರುತ್ತದೆ. ಇದು ಇಂದು ನಿನ್ನೆಯ ಮಾತಲ್ಲ, ಅನೇಕ ವರ್ಷಗಳಿಂದ ಹೀಗೇ ಸಾಗಿ ಬಂದಿದೆ. ಹೀಗಾಗೇ ಈ ಪ್ರದೇಶದಲ್ಲಿ ಶಾಂತಿಯ ಬಗ್ಗೆ ಯಾರಾದರೂ ಮಾತನಾಡಿದರೆ ಜನರು ಆಶ್ಚರ್ಯ ಪಡುತ್ತಾರೆ. ಹೀಗಿರುವಾಗ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಭವಿಷ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು 2021 ರ ಜೂನ್ 24 ರಂದು ಪ್ರಧಾನಿ ನರೇಂದ್ರ ಮೋದಿ ನಡೆಸಿದ ಸಭೆಯ ಅಜೆಂಡಾ ಇಲ್ಲಿ ಶಾಂತಿ ನಿರ್ಮಾಣದ ಗುರಿ ಹೊಂದಿದೆ. ಈ ಸಭೆಯಲ್ಲಿ ಎರಡೂ ಕೇಂದ್ರಾಡಳಿತ ಪ್ರದೇಶಗಳ ಪ್ರಮುಖ ನಾಯಕರನ್ನು ಆಹ್ವಾನಿಸಲಾಗಿತ್ತು. ಇವರಲ್ಲಿ ಕೆಲವರು ಕಳೆದ ಕೆಲ ತಿಂಗಳ ಹಿಂದೆ ಗೃಹ ಬಂಧನದಲ್ಲಿದ್ದರೆಂಬುವುದು ಉಲ್ಲೇಖನೀಯ. ಒಬ್ಬರು ರಾಜಕೀಯವಾಗಿ ಪ್ರಸ್ತುತವಾಗಬೇಕಾದರೆ ಈ ವಿಷಯಗಳನ್ನು ಮುಂದಕ್ಕೆ ಕೊಂಡೊಯ್ಯಬೇಕು ಎಂಬುವುದು ಪ್ರಜಾಪ್ರಭುತ್ವ ಮತ್ತು ರಾಜಕೀಯದ ಸೌಂದರ್ಯವಾಗಿದೆ. 

ಯಾರಿಗೆ ಈ ಕಣಿವೆ ರಾಜ್ಯದ ಬಗ್ಗೆ ಸ್ಪಷ್ಟವಾಗಿ ತಿಳಿದಿದೆಯೋ ಅವರೆಲ್ಲರಿಗೂ 2019 ರಿಂದ ಆಗಸ್ಟ್ 5ರಿಂದ ಜಮ್ಮು ಮತ್ತು ಕಾಶ್ಮೀರದ ಭಾಗವನ್ನು ಭಾರತ ಜೊತೆ ಸಂಪೂರ್ಣವಾಗಿ ಏಕೀಕರಿಸುವ ಅಜೆಂಡಾ ಭಾರತಕ್ಕಿತ್ತು ಎಂಬುವುದು ಅರಿವಿಗೆ ಬಂದಿರುತ್ತದೆ. ಆರ್ಟಿಕಲ್ 370ನ್ನು ತೆಗೆದು ಹಾಕಿ ಸರ್ಕಾರ ಕಣಿವೆ ನಾಡು ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದೆ. ಈ ಪ್ರಕ್ರಿಯೆ ಬಳಿಕ ಇದು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಆಗಿ ಮಾರ್ಪಟ್ಟಿದೆ. ಈ ನಡುವೆ ಇಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭದ್ರತಾ ಪಡೆ ನಿಯೋಜಿಸಲಾಗಿದೆ.

ಪ್ರಧಾನಿ ಮೋದಿ-ಜಮ್ಮು ಕಾಶ್ಮೀರ ಸರ್ವ ಪಕ್ಷ ಸಭೆ ಅಂತ್ಯ; ಇಲ್ಲಿದೆ ಮೀಟಿಂಗ್ ಪ್ರಮುಖಾಂಶ!

ಆಡಳಿತ ದಕ್ಷತೆಯನ್ನು ಹೆಚ್ಚಿಸಲು ಮತ್ತು ಭ್ರಷ್ಟಾಚಾರವನ್ನು ಕಡಿಮೆ ಮಾಡಲು ಮತ್ತು ನಾಗರಿಕರಿಗೆ ಮತ್ತಷ್ಟು ಹತ್ತಿರವಾಗಲು ಇಲ್ಲಿನ ಕೇಂದ್ರಾಡಳಿತ ಅಧಿಕಾರಿಗಳು ಭಾರೀ ಪ್ರಯತ್ನ ನಡೆಸುತ್ತಿವೆ. ಜನರಲ್ಲೂ ಉತ್ತಮ ಭವಿಷ್ಯದ ಆಕಾಂಕ್ಷೆ ಇತ್ತಾದರೂ, ಪ್ರತ್ಯೇಕತೆವಾದ ದೂರವಾಗಿರಲಿಲ್ಲ. ಹೀಗಾಗಿ ಆರ್ಟಿಕಲ್ 370 ರದ್ದುಗೊಂಡ ಬೆನ್ನಲ್ಲೇ ಭದ್ರತಾ ಪಡೆಗಳು ಪ್ರತ್ಯೇಕತಾವಾದಿ ನಾಯಕರನ್ನು ವಶಕ್ಕೆ ತೆಗೆದುಕೊಂಡಿದ್ದರು. ಇದು ಇಲ್ಲಿನ ಜನರನ್ನು ಕೆರಳಿಸಿತ್ತು. ಹೀಗಾಗಿ ಅನೇಕರು ಬೀದಿಗಿಳಿದು ಪ್ರತಿಭಟಿಸಿದ್ದರು. ಇಂಟರ್ನೆಟ್ ಮೊಬೈಲ್ ಸಂವಹನವನ್ನು ದೀರ್ಘಕಾಲದವರೆಗೆ ಸ್ಥಗಿತಗೊಳಿಸಲಾಯಿತು. ನಿಯಂತ್ರಣ ರೇಖೆಯಾದ್ಯಂತ ಪ್ರಾಕ್ಸಿ ಮಾಸ್ಟರ್ಸ್‌ನೊಂದಿಗೆ ಸಮನ್ವಯ, ತರಬೇತಿ, ಪ್ರೇರಣೆ ಮತ್ತು ಬಾಹ್ಯ ಸಂವಹನವು ಹೆಚ್ಚಾಗಿ ನಿಷ್ಪರಿಣಾಮಕಾರಿಯಾಗಿ ಉಳಿದಿದೆ ಎಂದು ಖಚಿತಪಡಿಸಲಾಯಿತು. ಈ ನಡೆ ಅನೇಕ ಮಾನವ ಹಕ್ಕುಗಳ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿತ್ತು.

ಜಿಲ್ಲಾ ವಿಕಾಸ್ ಪರಿಷತ್ ಚುನಾವಣೆಗಳು ಇಲ್ಲಿ ನಡೆದಿದ್ದರೂ ಜಮ್ಮು ಕಾಶ್ಮೀರಕ್ಕೆ ಕೇಂದ್ರಾಡಳಿತ ಪ್ರದೇಶದಿಂದ, ರಾಜ್ಯದ ಯದಾಗಿಸ್ಥಾನಮಾನ ನೀಡಿ ವಿಧಾನಸಭಾ ಚುನಾವಣೆ ನಡೆಸದಿರಲು ಎರಡು ಕಾರಣಗಳಿವೆ. ಮೊದಲನೆಯದಾಗಿ ಕೊರೋನಾ ಸೋಂಕು ಹಾಗೂ ಎರಡನೆಯದಾಗಿ ರಾಜಕೀಯ ಮನಸ್ಥಿತಿ ಮತ್ತು ವಾಸ್ತವಿಕತೆಯು ಹೊಸ ಸಾಂವಿಧಾನಿಕ ಪರಿಸ್ಥಿತಿಯಿಂದ ತಂದ ಬದಲಾವಣೆಗಳಿಂದಾಗಿ ಹೀಗೆ ಮಾಡಿರಲಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಆಂತರಿಕ ಪರಿಸ್ಥಿತಿ ಮತ್ತು ಹೊಸ ರಾಜಕೀಯ ಕ್ರಮಗಳ ಬಗ್ಗೆ ಕೇಂದ್ರ ನಾಯಕತ್ವದ ಮೌಲ್ಯಮಾಪನದ ಾಗತ್ಯವಿದೆ. ಆದರೂ ಸದ್ಯ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಭದ್ರತಾ ವಾತಾವರಣ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಮತ್ತಷ್ಟು ಸರಿಪಡಿಸಲು ಹಾಗೂ ಶಾಂತಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅವಕಾಶ ಒದಗಿಸಿದೆ.

ಅತ್ತ ಅಫ್ಘಾನಿಸ್ತಾನದಿಂದ ತನ್ನ ಎಲ್ಲಾ ಸೈನ್ಯವನ್ನು ಹಿಂತೆಗೆದುಕೊಂಡ ಪರಿಣಾಮ, ತಾಲೀಬಾನಿಯರು ಪಾಕಿಸ್ತಾನದ ಕಾಬೂಲ್‌ ಬಾಗಿಲು ಬಡಿಯಲಾರಂಭಿಸಿದರು. ಅತ್ತ ಅಮೆರಿಕದ ನರಕಯಾತನೆ ಹೀಗಿರುವಾಗ ಪಾಕಿಸ್ತಾನದ ಗಮನವು ಪಶ್ಚಿಮದತ್ತ ತಿರುಗಿತು. ತನ್ನ ಒಂದು ತಪ್ಪು ನಡೆ ತನ್ನ ಭೂಭಾಗದಲ್ಲಿ ವಿದೇಶಿ ಶಕ್ತಿಗಳು ತಮ್ಮ ಪ್ರಭಾವವನ್ನು ಹೆಚ್ಚಿಸಲು ಕಾರಣವಾಗಬಹುದು ಎಂದು  ಪಾಕಿಸ್ತಾನಕ್ಕೆ ತಿಳಿದಿದೆ. ಇದು ಪಾಕಿಸ್ತಾನದ ಆಂತರಿಕ ಭದ್ರತೆ ಮೇಲೂ ಪರಿಣಾಮ ಬೀರಬಹುದು. ಹೀಗಾಗೇ ತನ್ನ ಭದ್ರತಾ ಪಡೆಗಳನ್ನು ಪ್ರಮಾಣಾನುಗುಣವಾಗಿ ನಿಯೋಜಿಸುವುದರೊಂದಿಗೆ ಸ್ಥಿರಗೊಳಿಸಲು ಪಾಕಿಸ್ತಾನಕ್ಕೆ ಎರಡು ಮೂರು ವರ್ಷಗಳಿಗಿಂತ ಹೆಚ್ಚು ಸಮಯ ಬೇಕಾಯಿತು.

ಇಸ್ರೇಲ್ ರಾಯಭಾರ ಕಚೇರಿ ಸ್ಫೋಟ ಪ್ರಕರಣ: ದೆಹಲಿ ಪೊಲೀಸರಿಂದ ನಾಲ್ವರು ವಿದ್ಯಾರ್ಥಿಗಳ ಬಂಧನ!

ಇತ್ತ ಜಮ್ಮು ಕಾಶ್ಮೀರದಲ್ಲೂ ಥರ್ಡ್‌ ಫ್ರಂಟ್‌ ನಾಯಕರು ಪಾಕಿಸ್ತಾನದ ಪರವಿಲ್ಲ. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ತನ್ನದೇ ಆದ ಅನಿಶ್ಚಿತ ಆರ್ಥಿಕ ಪರಿಸ್ಥಿತಿ ಮತ್ತು ಅದು ಇನ್ನೂ ಉಳಿದಿರುವ ಎಫ್‌ಎಟಿಎಫ್ ಮೇಲ್ವಿಚಾರಣೆಯನ್ನು ಗಮನದಲ್ಲಿಟ್ಟುಕೊಂಡು ಪಾಕಿಸ್ತಾನ ನಿಯಂತ್ರಣ ರೇಖೆಯ ಉದ್ದಕ್ಕೂ ಕದನ ವಿರಾಮದಲ್ಲಿರಲು ನಿರ್ಧರಿಸಿತು. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಸಕ್ರಿಯ ಹಸ್ತಕ್ಷೇಪಕ್ಕೆ ಕಾರಣವಾಯಿತು. ಹೀಗಿದ್ದರೂ ಜಮ್ಮು ಮತ್ತು ಕಾಶ್ಮೀರದಲ್ಲಿ, 370 ನೇ ವಿಧಿ ತಕ್ಷಣದ ಪುನಃಸ್ಥಾಪನೆಗೆ ಒತ್ತಾಯಿಸುವ ಮೂಲಕ ತನ್ನ ಪ್ರಭಾವವನ್ನು ಉಳಿಸಿಕೊಳ್ಳಲು ಪಾಕಿಸ್ತಾನ ಬಯಸಿದೆ. ಏಕೆಂದರೆ ಈ ಪ್ರದೇಶದ ಮೇಲೆ ಅದಕ್ಕೆ ಯಾವುದೇ ಹಕ್ಕಿಲ್ಲ ಎಂದು ಅದು ಚೆನ್ನಾಗಿ ತಿಳಿದಿದೆ.

ಹೀಗಾಗಿ ಜಮ್ಮು ಕಾಶ್ಮೀರದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಕಡಿಮೆಯಾಯಿತು. ಅಲ್ಲದೇ ಪಾಕಿಸ್ತಾನದ ಸಕ್ರಿಯ ಹಸ್ತಕ್ಷೇಪದ ವ್ಯಾಪ್ತಿಯಿಂದ ಹೊರಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮಾನ್ಯೀಕರಣದ ಪ್ರಕ್ರಿಯೆಯು ವೇಗದಲ್ಲಿ ಮುಂದುವರಿಯಬಹುದು. ಹೊಸ ರಾಜಕೀಯ ಸಮುದಾಯವನ್ನು ನಿರ್ಮಿಸುವ ಪ್ರಯತ್ನಗಳು ಅಪೇಕ್ಷಿತ ಯಶಸ್ಸನ್ನು ಸಾಧಿಸದೆ, ಅದು ಮತ್ತೆ ಹಳೆಯ ಗಾರ್ಡ್‌ಗೆ ಮರಳಿದೆ, ಡಿಡಿಸಿ ಚುನಾವಣೆಯಂತೆ ಇದು ರಾಜಕೀಯ ಪ್ರವಚನದ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಆಶ್ಚರ್ಯಕರವಾಗಿ ಪ್ರದರ್ಶಿಸಿತು. ಹೀಗಿರುವಾಗ ಈ ಅವಕಾಶವನ್ನು ವ್ಯರ್ಥ ಮಾಡದಿರಲು ಕೇಂದ್ರ ನಾಯಕರು ನಿರ್ಧರಿಸಿದರು ಹಾಘೂ ಏಕತೆಯ ವೇದಿಕೆಯಲ್ಲಿ ಇಲ್ಲಿಯವರೆಗೆ ಒಟ್ಟಿಗೆ ಬಂದಿರುವ ಹಳೆಯ ನಾಯಕರ ಕಡೆಗೆ ತನ್ನ ರಾಜಕೀಯ ನಿಲುವನ್ನು ಬದಲಾಯಿಸಿದರು.

ಜಮ್ಮು ಕಾಶ್ಮೀರದ ಕೆಲ ರಾಜಕಾರಣಿಗಳನ್ನು ಮಾತುಕತೆಗೆ ಕರೆದು ಪ್ರಾದೇಶಿಕ ರಾಜಕಾರಣದಲ್ಲಿ ಹರಡಿದ್ದ ವಿಷವನ್ನು ಪ್ರಭಾವಹೀನಗೊಳಿಸಲು ಸರ್ಕಾರ ಯಶಸ್ವಿಯಾಗಿದೆ. ಈ ಮೂಲಕ ಪ್ರಮುಖ ವಿಷಯಗಳ ಬಗ್ಗೆ ಗಮನಹರಿಸಲು ಹಾದಿ ಸಿಕ್ಕಂತಾಗಿದೆ. ಜೊತೆಗೆ ಆರ್ಟಿಕಲ್ 370 ಮರು ಹೇರಿಕೆಯ ಬೇಡಿಕೆಯೂ ಸಹ ಪರಿಗಣನೆಯಲ್ಲಿದೆ ಎಂಬುದು ಸ್ಪಷ್ಟವಾಗಿದೆ. ಈ ಒಪ್ಪಂದವು ಕನಿಷ್ಠ ಕಣಿವೆನಾಡಿಗೆ ರಾಜ್ಯದ ಸ್ಥಾನಮಾನ ನೀಡುತ್ತದೆ ಎಂಬ ಭರವಸೆ ನಾಯಕರಿಗೆ ಕೊಟ್ಟಿದೆ. ಜಮ್ಮು ಮತ್ತು ಕಾಶ್ಮೀರದ ಸ್ಥಾನಮಾನವನ್ನು ಕೇಂದ್ರಾಡಳಿತ ಪ್ರದೇಶದಲ್ಲಿ ಡೌನ್‌ಗ್ರೇಡ್‌ ಮಾಡುವುದು ವಾಸ್ತವವಾಗಿ ಒಂದು ಟ್ರಂಪ್ ಕಾರ್ಡ್ ಎಂದು ಈಗ ತಿಳಿದುಬಂದಿದ. ಇದರೊಂದಿಗೆ ಕೇಂದ್ರ ನಾಯಕತ್ವ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ನಾಯಕತ್ವವನ್ನು ನಿಯಂತ್ರಣದಲ್ಲಿಡಲು ರಾಜಕೀಯ ಪ್ರಯತ್ನ ಮಾಡಿದೆ. 

ಲಷ್ಕರ್‌ನ ಟಾಪ್ ಉಗ್ರವಾದಿ ಮುದಾಸಿರ್ ಪಂಡಿತ್ ಸೇರಿ ಮೂವರ ಎನ್ಕೌಂಟರ್!

ಮೂರು ಗಂಟೆಗಳ ಸಭೆಯ ಬಳಿಕ ನೀಡಲಾಗುವ ರಾಜಕೀಯ ಹೇಳಿಕೆಗಳ ಬಗ್ಗೆ ಅನೇಕ ಕುತೂಹಲಗಳಿದ್ದವು. ಆದರೆ ಇಂತಹ ಸಭೆಗಳಿಂದ ಯಾಔಉದೇ ನಿರೀಕ್ಷೆಗಳನ್ನಿಟ್ಟುಕೊಳ್ಳದಿರುವುದೇ ಜಾಣತನ. ಹೀಗಿದ್ದರೂ ಕೇಂದ್ರ ನಾಯಕರು ನಿಸ್ಸಂದೇಹವಾಗಿ ಸ್ಪಷ್ಟಪಡಿಸಿದ ಸಂಗತಿಯೆಂದರೆ, ದೇಶ ಹಾಗೂ ಜಮ್ಮು ಕಾಶ್ಮೀರದ ರಾಜಕೀಯದ ಬಗ್ಗೆ ಹೆಚ್‌ಚು ಚರ್ಚಿಸಬೇಕೆಂದಿಲ್ಲ. ಇಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಪೂರ್ಣ ಪ್ರಜಾಪ್ರಭುತ್ವವನ್ನು ಇಲ್ಲಿ ಪುನಃಸ್ಥಾಪಿಸಲಾಗುತ್ತದೆ ಆದರೆ ಚುನಾವಣೆಗೆ ಮುಂಚಿತವಾಗಿ ಪೂರ್ಣ ರಾಜ್ಯದ ಸ್ಥಾನಮಾನ ನಿಡಲಾಘುವುದಿಲ್ಲ ಎಂದಿದೆ.

ಯಾವುದೇ ರಾಜಕಾರಣಿಗಳಿಗೂ ಡಿಲಿಮಿಟೇಶನ್ ಬಗ್ಗೆ ಯಾವುದೇ ಆಕ್ಷೇಪ ಇಲ್ಲ. ಡಿಲಿಮಿಟೇಶನ್ ಒಂದು ಕೊಳಕು ಪದದಂತೆ ಕಂಡು ಬರಬಹುದು. ಆದರೆ ಜಮ್ಮು ಕಾಶ್ಮೀರದಲ್ಲಿ ಸಾಂವಿಧಾನಿಕ ಅಗತ್ಯಕ್ಕೆ ಅನುಗುಣವಾಗಿ 1963, 1975 ಮತ್ತು 1995 ರಲ್ಲಿ ಇದು ನಡೆದಿದೆ ಎಂಬುವುದು ಉಲ್ಲೇಖನೀಯ.

'ದಿಲ್ ಕಿ ದೂರಿ ಔರ್ ದಿಲ್ಲಿ ಕೀ ದೂರಿ' ಎಂದು ಮೋದಿ ಹೇಳಿದ್ದ ಮಾತನ್ನು ಕಡಿಮೆ ಮಾಡಬೇಕಾಗಿದೆ. ಹೃದಯ ಮತ್ತು ಮನಸ್ಸುಗಳನ್ನು ಗೆಲ್ಲುವ ಭಾರತೀಯ ಸೇನೆಯ ಹಳೆಯ ಪರಿಕಲ್ಪನೆಯನ್ನು ಉತ್ತೇಜಿಸಬೇಕು. ಅದಕ್ಕೀಗ ರಾಜಕೀಯ ಬೆಂಬಲ ಕೂಡಾ ಸಿಗಬೇಕು. ಭವಿಷ್ಯದಲ್ಲಿ ದೆಹಲಿ ಮತ್ತು ಶ್ರೀನಗರ ಮಾತುಕತೆ ಮತ್ತು ಸಮಾಲೋಚನೆಗಳ ಫಲಿತಾಂಶ ಏನೇ ಇರಲಿ, ಆದರೆ ದೆಹಲಿ ಮತ್ತು ಶ್ರೀನಗರ, ಜಮ್ಮು ಒಂದೇ ತರಂಗಾಂತರದಲ್ಲಿರುವುದು ರಾಷ್ಟ್ರ ವಿರೋಧಿ ಪ್ರವೃತ್ತಿಯನ್ನು ಸೋಲಿಸಲು ಮತ್ತು ಜಮ್ಮು ಕಾಶ್ಮೀರದಲ್ಲಿ ಪ್ರಾಕ್ಸಿ-ಪರಿಣಾಮವನ್ನು ಹತೋಟಿಯಲ್ಲಿಡಲು ಅಗತ್ಯವಾಗಿದೆ. ಈ ವಿಚಾರವಾಗಿ ಹೆಚ್ಚಿನ ಸಮಾಲೋಚನೆ ಮತ್ತು ಅಭಿಪ್ರಾಯ ಹಂಚಿಕೆ ಪ್ರಾರಂಭವಾಗುತ್ತದೆ ಮತ್ತು ಇವೆರಡೂ ಅತೀ ಅಗತ್ಯ ಎಂಬುವುದು ನನ್ನ ಅಭಿಪ್ರಾಯ. 

ಈ ಅಂಕಣ ಜೂನ್ 26ರಂದು ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾಗಿದೆ. 

ಈ ಸುದ್ದಿಯನ್ನು ಇಂಗ್ಲೀಷ್‌ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ: Jammu and Kashmir: Opening windows towards peace

Follow Us:
Download App:
  • android
  • ios