Asianet Suvarna News Asianet Suvarna News

ಪ್ರಧಾನಿ ಮೋದಿ-ಜಮ್ಮು ಕಾಶ್ಮೀರ ಸರ್ವ ಪಕ್ಷ ಸಭೆ ಅಂತ್ಯ; ಇಲ್ಲಿದೆ ಮೀಟಿಂಗ್ ಪ್ರಮುಖಾಂಶ!

  • ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಮುಖಂಡರ ಜೊತೆಗೆ ಮೋದಿ ಸಭೆ
  • ದೆಹಲಿಯಲ್ಲಿರುವ ಪ್ರಧಾನಿ ನಿವಾಸದಲ್ಲಿ ನಡೆದ ಸಭೆ ಅಂತ್ಯ
  • ಸರ್ವ ಪಕ್ಷಗಳ ಸಭೆಯ ಪ್ರಮುಖಾಂಶ ಇಲ್ಲಿದೆ
Leaders should work in national interest PM Modi on Jammu kashmir all party meeting ckm
Author
Bengaluru, First Published Jun 24, 2021, 7:49 PM IST

ನವದೆಹಲಿ(ಜೂ.24):  ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಲು, ಹೊಸ ಬದಲಾವಣೆ ತರಲು ಪ್ರಧಾನಿ ನರೇಂದ್ರ ಮೋದಿ ಇಂದು ಸರ್ವಪಕ್ಷ ನಾಯಕರ ಜೊತೆ ಸಭೆ ನಡೆಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ 14 ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಯ ನಾಯಕರ ಮಾತುಗಳನ್ನು ತಾಳ್ಮೆಯಿಂದ ಆಲಿಸಿದ ಮೋದಿ, ಜಮ್ಮು ಮತ್ತು ಕಾಶ್ಮೀರ ಉತ್ತಮ ಭವಿಷ್ಯಕ್ಕಾಗಿ ನಡೆದ ಈ ಚರ್ಚೆ ಫಲಪ್ರದವಾಗಿ ಎಂದರು. 

 

ಶ್ರೀನಗರ ಸೇರಿ ಕಾಶ್ಮೀರ ಕಣಿವೆಯ ಎಲ್ಲಾ 15 ರೈಲು ನಿಲ್ದಾಣದಲ್ಲಿ Wi-Fi ಸೇವೆ!

ಪ್ರಧಾನಿ ಅಧೀಕೃತ ನಿವಾಸದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗರ್ವನರ್ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆ ಬಲಪಡಿಸಲವು ಸಂಪೂರ್ಣ ಬದ್ಧ. ಡಿಡಿಸಿ ಚುನಾವಣೆ ಯಶಸ್ವಿಯಾಗಿ ನಡೆಸಿದ್ದೇವೆ. ಇದೀಗ ವಿಧನಾಸಭಾ ಚುನಾವಣೆ ನಡೆಸುವುದು ಆದ್ಯತೆಯಾಗಿದೆ ಎಂದು ಮೋದಿ ಹೇಳಿದರು.

 

ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ಸಾವು ಕೂಡ ಅತ್ಯಂತ ನೋವು ತರುತ್ತದೆ. ನಮ್ಮ ಯುವಪೀಳಿಗೆಯನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ.  ಕಣಿವೆ ರಾಜ್ಯದ ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕಿದೆ. ಇದಕ್ಕೆ ಪ್ರತಿಯಾಗಿ ಅವರು ದೇಶಕ್ಕೆ ಅಪಾರ ಕೂಡುಗೆ ನೀಡಲಿದ್ದಾರೆ ಎಂದು ಮೋದಿ ಹೇಳಿದರು. 

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಆರ್ಟಿಕಲ್ 370 ಮರು ಜಾರಿ: ಸಿಂಗ್ ಹೇಳಿಕೆಗೆ ಬಿಜೆಪಿ ಕಿಡಿ!

ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿನ ಅಭಿವದ್ಧಿ ಕಾರ್ಯಗಳ ಕುರಿತು ಪ್ರಧಾನಿ ಮೋದಿ ಚರ್ಚಿಸಿದರು.  ಈ ಅಭಿವೃದ್ಧಿ ಜಮ್ಮು ಮತ್ತು ಕಾಶ್ಮೀರ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.  ಭ್ರಷ್ಟಾರಾ ಮುಕ್ತ ಆಡಳಿತವನ್ನು ಅನುಭವಿಸಿದಾಗ ಜನರಲ್ಲಿ ವಿಶ್ವಾಸವನ್ನು ಪ್ರೇರಿಪಿಸುತ್ತದೆ. ಇದೀಗ ಕಣಿವೆ ರಾಜ್ಯದಲ್ಲಿ ಗೋಚರಿಸುತ್ತಿದೆ ಎಂದು ಮೋದಿ ಹೇಳಿದರು.

ರಾಜಕೀಯ ಭಿನ್ನಾಭಿಪ್ರಾಯಗಳು ಇದ್ದೇ ಇದೆ. ಆದರೆ ರಾಷ್ಟ್ರದ ಹಿತದೃಷ್ಟಿಯಿಂದ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಇದು ಜಮ್ಮು ಕಾಶ್ಮೀರ ಜನರಿಗೆ ನೆರವಾಗಲಿದೆ.  ವಿಶೇಷವಾಗಿ ಕಣಿವೆ ರಾಜ್ಯದ ಜನರಿಗೆ ಸುರಕ್ಷತೆ ವಾತಾವರಣ ನಿರ್ಮಿಸಬೇಕಿದೆ. ಸುರಕ್ಷತೆ ಪ್ರಮುಖ ಅದ್ಯತೆಯಾಗಿದೆ ಎಂದು ಮೋದಿ ಹೇಳಿದ್ದಾರೆ. 

ಸತತ 3 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಪ್ರಧಾನಿ ಮೋದಿ, ಸರ್ವಪಕ್ಷ ನಾಯಕರು ಮಕ್ತವಾಗಿ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಚರ್ಚೆ ನಡೆಸಿದ್ದಾರೆ. ಪ್ರತಿಯೊಬ್ಬರ ಮಾತುಗಳನ್ನು, ಮನವಿಯನ್ನು ಆಲಿಸಿದ್ದೇನೆ. ಈ ಅಭಿವೃದ್ಧಿ ಚರ್ಚೆಯಲ್ಲಿ ಪಾಲ್ಗೊಂಡ ನಾಯಕರಿಗೆ ಮೋದಿ ವಿಶೇಷ ಧನ್ಯವಾದ ಅರ್ಪಿಸಿದ್ದಾರೆ.

Follow Us:
Download App:
  • android
  • ios