Asianet Suvarna News Asianet Suvarna News

ಇಸ್ರೇಲ್ ರಾಯಭಾರ ಕಚೇರಿ ಸ್ಫೋಟ ಪ್ರಕರಣ: ದೆಹಲಿ ಪೊಲೀಸರಿಂದ ನಾಲ್ವರು ವಿದ್ಯಾರ್ಥಿಗಳ ಬಂಧನ!

  • ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿ ಸ್ಫೋಟ ಪ್ರಕರಣ
  • ಚನಿಖೆ ಚುರುಕುಗೊಳಿಸಿದ ದೆಹಲಿ ಪೊಲೀಸ್
  • ಜಮ್ಮ ಮತ್ತು ಕಾಶ್ಮೀರದ ನಾಲ್ವರು ವಿದ್ಯಾರ್ಥಿಗಳು ಅರೆಸ್ಟ್
Delhi Police arrest 4 Jammu Kashmir Students in connection with israel Embassy blast ckm
Author
Bengaluru, First Published Jun 24, 2021, 7:07 PM IST

ದೆಹಲಿ(ಜೂ.24):  ಇಸ್ರೇಲ್ ರಾಯಭಾರ ಕಚೇರಿ ಸನಿಹದ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ಈ ವರ್ಷದ ಆರಂಭದಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ದೆಹಲಿ ಸ್ಪೆಷಲ್ ಪೊಲೀಸ್ ಸೆಲ್ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಿ ದೆಹಲಿಗೆ ಕರೆತಂದಿದ್ದಾರೆ.

ದೆಹಲಿಯ ಇಸ್ರೇಲ್ ದೂತವಾಸ ಕಚೇರಿ ಸ್ಫೋಟ ಪ್ರಕರಣ; ಶಂಕಿತರಿಬ್ಬರ ವಿಡಿಯೋ ಬಹಿರಂಗಪಡಿಸಿದ NIA!

ಬಂಧಿತ ವಿದ್ಯಾರ್ಥಿಗಳು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ನಿವಾಸಿಗಳು. ಸ್ಥಳೀಯ ನ್ಯಾಯಾಲಯದಿಂದ ಟ್ರಾನ್ಸಿಸ್ಟ್ ರಿಮಾಂಡ್ ಪಡೆದು, ಪ್ರತ್ಯೇಕ FIR ಅಡಿಯಲ್ಲಿ ವಿದ್ಯಾರ್ಥಿಗಳನ್ನು ಆರಸ್ಟ್ ಮಾಡಲಾಗಿದೆ. ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಾಂಬ್ ಸ್ಪೋಟ ಸಂಬಂಧ ಇದೇ ವಿದ್ಯಾರ್ಥಿಗಳನ್ನು ಮೊದಲು ಪ್ರಶ್ನಿಸಲಾಗಿತ್ತು. ಆದರೆ ತನಿಖೆಯಲ್ಲಿ ಸ್ಫೋಟದ ದಿನದಂದು ಒಂದೇ ಸಮಯದಲ್ಲಿ ಈ ವಿದ್ಯಾರ್ಥಿಗಳ ಫೋನ್ ಸ್ವಿಚ್ ಆಫ್ ಆಗಿದೆ. ಇದರ ಜೊತೆಗೆ ಕೆಲ ಮಹತ್ವದ ಮಾಹಿತಿಗಳು ಲಭ್ಯವಾಗಿದೆ. ಹೀಗಾಗಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಇತ್ತೀಚೆಗೆ ರಾಷ್ಟ್ರೀಯ ತನಿಖಾ ದಳ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರಿಬ್ಬರ ಸಿಸಿಟಿವಿ ವಿಡಿಯೋ ಬಿಡುಗಡೆ ಮಾಡಿತ್ತು. ಈ ಶಂಕಿತರನ್ನು ಗುರುತಿಸಿದರೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿತ್ತು.

ದಿಲ್ಲಿ ಸ್ಫೋಟ ಹಿಂದೆ ಇರಾನ್‌ ಕೈವಾಡ?: ತನ್ನ ಗಣ್ಯರ ಹತ್ಯೆಗೆ ಇರಾನ್‌ನಿಂದ ಪ್ರತೀಕಾರ ಶಂಕೆ! 

ಇಸ್ರೇಲ್ ರಾಯಭಾರಿ ಕಚೇರಿ ಸ್ಫೋಟ ಪ್ರಕರಣ:
ಜನವರಿ 29, 2021ರ ಸಂಜೆ 5.05ರ ವೇಳೆ ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಬಳಿ ಕಡಿಮೆ ತೀವ್ರತೆ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಬಾಂಬ್ ಸ್ಫೋಟಕ ಪ್ರಕರಣ ಭಾರತವನ್ನೇ ಬೆಚ್ಚಿ ಬೀಳಿಸಿತ್ತು. ಕಾರಣ ಘಟನೆ ವೇಳೆ ಕೂಗಳತೆ ದೂರದಲ್ಲಿ ಅಂದರೆ ಕೇವಲ 2.5 ಕೀ.ಮೀ ದೂರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪಥಿ ರಾಮನಾಥ್ ಕೋವಿಂದ್ ಭಾಗವಿಸಿದ್ದ ಕಾರ್ಯಕ್ರಮ ನಡೆಯುತ್ತಿತ್ತು. 

Follow Us:
Download App:
  • android
  • ios