ಜೈ ಭಜರಂಗಿ: ದೇಗುಲ ಮುಂದೆ ಭಕ್ತಿಗೀತೆಗೆ ಬಾಲಕಿಯ ನೃತ್ಯ: ವಿಡಿಯೋ ವೈರಲ್

ಇಲ್ಲೊಂದು ಕಡೆ ಪುಟ್ಟ ಹುಡುಗಿಯೊಬ್ಬಳು  ಭಕ್ತಿಗೀತೆಗೆ ದೇಗುಲದ ಮುಂದೆ ಭಾವಪರವಶಳಾಗಿ ನೃತ್ಯ ಮಾಡುತ್ತಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Jai Bhajrangi Little Hanuman devotees dance to the devotional song in front of the temple video goes viral akb

ನವದೆಹಲಿ: ಸೋಶಿಯಲ್ ಮೀಡಿಯಾದ ಈ ಕಾಲಘಟ್ಟದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪ್ರತಿಯೊಬ್ಬರು ತಮ್ಮ ಮೊಬೈಲ್ ಹಿಡಿದುಕೊಂಡು  ಡಾನ್ಸ್ ಮಾಡುವುದು ವೀಡಿಯೋ ರೆಕಾರ್ಡ್ ಮಾಡುವುದು ಸಾಮಾನ್ಯ ಎನಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಕೆಲವರು ಎಗ್ಗು ಸಿಗ್ಗಿಲ್ಲದೇ ಸಿನಿಮಾ ಹಾಡುಗಳಿಗೆ ನೃತ್ಯ ಮಾಡುವುದನ್ನು ಕೂಡ ನೀವು ನೋಡಿರಬಹುದು. ಆದರೆ ಇಲ್ಲೊಂದು ಕಡೆ ಪುಟ್ಟ ಹುಡುಗಿಯೊಬ್ಬಳು  ಭಕ್ತಿಗೀತೆಗೆ ದೇಗುಲದ ಮುಂದೆ ಭಾವಪರವಶಳಾಗಿ ನೃತ್ಯ ಮಾಡುತ್ತಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ನೈನಿತಾಲ್‌ನ ನೈನಾದೇವಿ ದೇಗುಲದಲ್ಲಿ ಪುಟಾಣಿ ಬಾಲಕಿ ವೀರ್ ಹನುಮಾನಾ ಅತೀ ಬಲವಾನಾ ಎಂಬ ಹಾಡಿಗೆ ನೃತ್ಯ ಮಾಡುತ್ತಿದ್ದಾಳೆ. ಈ ವೀಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ವೀಡಿಯೋದಲ್ಲಿ ಪುಟಾಣಿ ಹುಡುಗಿ ನೈನಾ ದೇವಿ ದೇವಾಲಯದ ಪವಿತ್ರ ಆವರಣದಲ್ಲಿ ಮನೋಹರವಾಗಿ ನೃತ್ಯ ಮಾಡುತ್ತಿದ್ದಾಳೆ. ಅವಳ ನೃತ್ಯದ ಶೈಲಿ ಆ ಸಂತೋಷ ಉತ್ಸಾಹ ಭಾವಪರವಶತೆಗೆ  ಜನ ಭೇಷ್ ಎಂದಿದ್ದಾರೆ.  ಆದರೆ ಕೆಲವರು ಇದಕ್ಕೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಗುಲಗಳು ಭಕ್ತಿಕೇಂದ್ರಗಳು ದೇಗುಲದ ಗೌರವವನ್ನು ಕಾಪಾಡಬೇಕು. ಅಲ್ಲೆಲ್ಲಾ ಡಾನ್ಸ್ ಮಾಡಬಾರದು ರೀಲ್ಸ್ ಮಾಡುತ್ತಾ ದೇಗುಲದ ವಾತಾವರಣವನ್ನು ಹಾಳು ಮಾಡಬಾರದು ಎಂದು ಕಾಮೆಂಟ್ ಮಾಡಿದ್ದಾರೆ. ಇಂತಹ ಚಟುವಟಿಕೆಗಳು ದೇಗುಲದ ಪಾವಿತ್ರ್ಯತೆಗೆ ಧಕ್ಕೆ ತರುತ್ತವೆ ಎಂದು ಟೀಕಿಸಿದ್ದಾರೆ. ಆದರೆ ಬಹುತೇಕರು ಜೈ ಶ್ರೀರಾಮ್ ಜೈ ಹನುಮಾನ್ ಎಂದು ಕಾಮೆಂಟ್ ಮಾಡಿದ್ದಲ್ಲದೇ, ನಮ್ಮ ಸಂಸ್ಕೃತಿ ಸಂಸ್ಕಾರ ಧಾರ್ಮಿಕತೆಯನ್ನು ಮಗುವಿಗೆ ಬಾಲ್ಯದಲ್ಲೇ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ. ದೀವಿಶಾ ಸಿಂಗ್ (Divisha Singh) ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಈ ವೀಡಿಯೋ ಅಪ್‌ಲೋಡ್ ಆಗಿದೆ. 

Viral Video: ಪ್ರಧಾನಿಯಿಂದಲೂ ಶೇರ್‌ ಆಯ್ತು ಪುಟ್ಟ ಬಾಲಕಿ ಶಾಲ್ಮಲಿಯ 'ಪಲ್ಲವಗಳ ಪಲ್ಲವಿಯಲಿ'

ಇನ್ನು ಈ  ದೇಗುಲದ ಬಗ್ಗೆ ಹೇಳುವುದಾದರೆ ಹಿಮಾಚಲ (Himachal Pradesh) ಪ್ರದೇಶ ರಾಜ್ಯದ ನೈನಿತಾಲ್‌ನಲ್ಲಿರುವ ನೈನಾದೇವಿ (Naina Devi Temple) ದೇಗುಲವೂ  51 ಶಕ್ತಿ ಪೀಠಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ತಂದೆ ದಕ್ಷನಿಂದ ಅವಮಾನಿತಳಾಗಿ ಯಜ್ಞಕುಂಡಕ್ಕೆ ಹಾರುವ ಸತಿಯನ್ನು ಪತಿ ಭಗವಾನ್ ಶಿವನು ಹೊತ್ತೊಯ್ಯುತ್ತಿದ್ದಾಗ ಆ ಸುಟ್ಟ ದೇಹದಿಂದ ಕಣ್ಣುಗಳು ಕೆಳಗೆ ಬಿದ್ದ ಸ್ಥಳವೇ ನೈನಿತಾಲ್‌ ಆಗಿದ್ದು, ಇದೇ ಕಾರಣಕ್ಕೆ ಇಲ್ಲಿ ನೈನಿದೇವಿ ದೇಗುಲವಿದೆ.  ಇಲ್ಲಿ ದೇವಿಯನ್ನು ಕಣ್ಣುಗಳ ರೂಪದಲ್ಲಿ ಪೂಜಿಸಲಾಗುತ್ತದೆ. ಹಿಂದೂ ಧರ್ಮಗ್ರಂಥಗಳು ನೈನಾ ದೇವಿ ದೇವಾಲಯದ ಐತಿಹಾಸಿಕ ಪ್ರಾಮುಖ್ಯತೆ ಇದೆ. 

ಪುರಾಣದ ಕತೆಯ ಪ್ರಕಾರ ಸತಿಯು ತನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ಶಿವನನ್ನು ಮದುವೆಯಾಗುತ್ತಾಳೆ. ಇದರಿಂದ ಆಕೆಯ ಮೇಲೆ ತಂದೆ ದಕ್ಷ  ಸಿಟ್ಟಾಗಿರುತ್ತಾನೆ. ಈ ಮಧ್ಯೆ ಆಕೆಯ ತಂದೆ ದಕ್ಷ, ಯಾಗವೊಂದನ್ನು ಮಾಡಿದ್ದು, ಅದಕ್ಕೆ ದೇವಾನುದೇವತೆಗಳಿಗೆಲ್ಲಾ ಆಹ್ವಾನ ನೀಡುತ್ತಾನೆ. ಆದರೆ ಶಿವನಿಗೆ ಮಾತ್ರ ಆಹ್ವಾನ ನೀಡದೇ ಅವಮಾನಿಸುತ್ತಾರೆ. ತನ್ನ ಪತಿಗೆ ಆದ ಅವಮಾನದಿಂದ ನೊಂದ ಸತಿ ಅದೇ ಯಜ್ಞಕುಂಡಕ್ಕೆ ಹಾರಿ ಪ್ರಾಣ ಬಿಡುತ್ತಾಳೆ. ನಂತರ ಪಾರ್ವತಿಯಾಗಿ ಮರುಜನ್ಮ ಪಡೆಯುತ್ತಾಳೆ.

ರಸ್ತೆಬದಿ ಇದ್ದ ನಿಶ್ಯಕ್ತ ವೃದ್ಧನಿಗೆ ನೀರು ಕುಡಿಸಿದ ಪುಟಾಣಿ: ವಿಡಿಯೋ ವೈರಲ್‌

 

Latest Videos
Follow Us:
Download App:
  • android
  • ios