ವಿಶ್ವದ ಅತ್ಯಂತ ಜನಪ್ರಿಯ ಜಾಗತಿಕ ನಾಯಕರಲ್ಲಿ ಒಬ್ಬರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 10 ಕೋಟಿ ಹಿಂಬಾಲಕರನ್ನು ಗಳಿಸಿದ್ದಾರೆ. ಈ ಮೂಲಕ ಈ ಮೈಲಿಗಲ್ಲು ತಲುಪಿದ ಮೊದಲ ವಿಶ್ವನಾಯಕ ಎನ್ನಿಸಿಕೊಂಡಿದ್ದಾರೆ.

ನವದೆಹಲಿ : ವಿಶ್ವದ ಅತ್ಯಂತ ಜನಪ್ರಿಯ ಜಾಗತಿಕ ನಾಯಕರಲ್ಲಿ ಒಬ್ಬರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 10 ಕೋಟಿ ಹಿಂಬಾಲಕರನ್ನು ಗಳಿಸಿದ್ದಾರೆ. ಈ ಮೂಲಕ ಈ ಮೈಲಿಗಲ್ಲು ತಲುಪಿದ ಮೊದಲ ವಿಶ್ವನಾಯಕ ಎನ್ನಿಸಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದುವರೆಗೆ ಯಾವ ನಾಯಕರೂ ಈ ಪ್ರಮಾಣದ ಫಾಲೋವರ್ಸ್‌ ಹೊಂದಿಲ್ಲ. ಇದಕ್ಕೆ ಅವರ ಜಾಗತಿಕ ಪ್ರಭಾವ, ಜನಪ್ರಿಯತೆಯ ಜತೆ ಭಾರತದ ಜನಸಂಖ್ಯೆಯೂ ಕಾರಣ ಎಂದು ವಿಶ್ಲೇಷಿಸಲಾಗಿದೆ.

2014ರಲ್ಲಿ ಮೋದಿ ಇನ್‌ಸ್ಟಾಗ್ರಾಂ ಸೇರಿಕೊಂಡಿದ್ದರು. ವರ್ಷ ಕಳೆದಂತೆ ಈ ಸಂಖ್ಯೆ ಏರುತ್ತಲೇ ಆಗಿದೆ. ತಾವು ಭಾಗವಹಿಸುವ ಕಾರ್ಯಕ್ರಮ, ಕೈಗೊಳ್ಳುವ ಕ್ರಮ, ಪ್ರವಾಸ ಇತ್ಯಾದಿಗಳ ಬಗ್ಗೆ ಇದರಲ್ಲಿ ಪೋಸ್ಟ್‌ ಮಾಡುತ್ತಿರುತ್ತಾರೆ.

ಇತರ ವಿಶ್ವನಾಯಕರು:

ದಿನಕ್ಕೊಮ್ಮೆಯಾದರೂ ಸುದ್ದಿಯಾಗುವ ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರ ಹಿಂಬಾಲಕರ ಸಂಖ್ಯೆ ಮೋದಿಯವರ ಅರ್ಧದಷ್ಟೂ ಇಲ್ಲ! ಅವರು ಬರೀ 4.3 ಕೋಟಿ ಫಾಲೋವರ್ಸ್‌ ಹೊಂದಿದ್ದಾರೆ. ಉಳಿದಂತೆ ಇಂಡೋನೇಷಿಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರಿಗೆ 1.5 ಕೋಟಿ, ಬ್ರೆಜಿಲ್‌ ಅಧ್ಯಕ್ಷ ಲುಲಾ ಡ ಸಿಲ್ವಾ 1.4 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ.

ಭಾರತದಲ್ಲಿ ಮೋದಿ ಬಳಿಕ ಅತಿಹೆಚ್ಚು ಫಾಲೋವರ್ಸ್‌ ಇರುವುದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ (1.6 ಕೋಟಿ) ಅವರಿಗೆ. ಬಳಿಕ ರಾಹುಲ್‌ ಗಾಂಧಿಯವರಿಗೆ (1.2 ಕೋಟಿ).

ಯಾರು ಎಷ್ಟು ಫೇಮಸ್‌

ನರೇಂದ್ರ ಮೋದಿ 10.0 ಕೋಟಿ

ಡೊನಾಲ್ಡ್‌ ಟ್ರಂಪ್‌ (ಅಮೆರಿಕ) 4.32 ಕೋಟಿ

ವ್ಲಾಡಿಮಿರ್ ಜೆಲೆನ್ಸ್ಕಿ(ಉಕ್ರೇನ್‌) 1.61 ಕೋಟಿ

ಸುಬಿಯಂತೋ (ಇಂಡೋನೇಷ್ಯಾ) 1.5 ಕೋಟಿ

ಲುಲ ಡಿ ಸಿಲ್ವಾ (ಬ್ರೆಜಿಲ್‌) 1.44 ಕೋಟಿ

ಜೈವೀರ್ ಮಿಲಿ (ಅರ್ಜೆಂಟೀನಾ) 6.4 ಕೋಟಿ

ಎಮ್ಯಾನುವಲ್‌ ಮ್ಯಾಕ್ರಾನ್ (ಫ್ರಾನ್ಸ್‌) 6.1 ಕೋಟಿ