Asianet Suvarna News Asianet Suvarna News

KCRಗೆ ಸಡ್ಡು ಹೊಡೆಯಲು ಜಗನ್‌ ಸೋದರಿ ಪಾದಯಾತ್ರೆ!

*ಕೆಸಿಆರ್‌ಗೆ ಸಡ್ಡುಹೊಡೆಯಲು ಜಗನ್‌ ಸೋದರಿ ಪಾದಯಾತ್ರೆ
* 4 ಸಾವಿರ ಕಿ.ಮೀ. ಪಾದಯಾತ್ರೆ ಆರಂಭ!
*2023ರಲ್ಲಿ ತೆಲಂಗಾಣದಲ್ಲಿ 119  ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ!

Jagan Reddys Sisters Sharmila Foot March in Telangana In Challenge To KCR
Author
Bengaluru, First Published Oct 24, 2021, 11:26 AM IST
  • Facebook
  • Twitter
  • Whatsapp

ಹೈದರಾಬಾದ್‌ (ಅ. 24) :  ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ದಿವಂಗತ ವೈ.ಎಸ್‌.ರಾಜಶೇಖರ್‌ ರೆಡ್ಡಿ (Y S Rajashekar Reddy) ಪುತ್ರಿ ವೈ.ಎಸ್‌.ಶರ್ಮಿಳಾ (Y S Sharmila) ತೆಲಂಗಾಣದಾದ್ಯಂತ 4 ಸಾವಿರ ಕಿಲೋಮೀಟರ್‌ ಪಾದಯಾತ್ರೆ ಕೈಗೊಂಡಿದ್ದಾರೆ. ಮುಖ್ಯಮಂತ್ರಿ ಹುದ್ದೆಗೇರಲು 2003ರಲ್ಲಿ ಅವರ ತಂದೆ ಮತ್ತು 2019ರಲ್ಲಿ ಅವರ ಸಹೋದರ ಜಗನ್‌ ನಡೆಸಿದ ರೀತಿಯೇ ಶರ್ಮಿಳಾ ಈಗ ಪಾದಯಾತ್ರೆ ಕೈಗೊಂಡಿದ್ದಾರೆ.

ಈಗಾಗಲೇ ಬುಧವಾರದಿಂದಲೇ ಪಾದಯಾತ್ರೆ ಪ್ರಾರಂಭವಾಗಿದ್ದು, 47 ವರ್ಷದ ಶರ್ಮಿಳಾ ನಿತ್ಯ 12ರಿಂದ 15 ಕಿಲೋಮೀಟರ್‌ ನಡೆಯುತ್ತಿದ್ದು, ಮುಂದಿನ ವರ್ಷ ಪಾದಯಾತ್ರೆ ಪೂರ್ಣಗೊಳ್ಳಲಿದೆ. ಅಧಿಕಾರದಲ್ಲಿರುವ ಟಿಆರ್‌ಎಸ್‌ ಕೆಳಗಿಳಿಸುವುದೇ ತನ್ನ ಗುರಿ ಎಂದು ಶರ್ಮಿಳಾ ಹೇಳಿಕೊಂಡಿದ್ದಾರೆ. ಜುಲೈ 8ರಂದೇ ಅವರ ತಂದೆಯ ಹುಟ್ಟುಹಬ್ಬದಂದು ಶರ್ಮಿಳಾ ವೈಎಸ್‌ಆರ್‌ ತೆಲಂಗಾಣ (YSR Telangana) ಎಂಬ ಪಕ್ಷವನ್ನು ಪ್ರಾರಂಭಿಸಿದ್ದು, ತೆಲಂಗಾಣ ರಚನೆಯಿಂದ ಕೇವಲ ಮುಖ್ಯಮಂತ್ರಿ ಕೆ .ಚಂದ್ರಶೇಖರ್‌ ರಾವ್‌ (K ChandraShekar Rao) ಅವರ ಕುಟುಂಬಕ್ಕೆ ಮಾತ್ರ ಪ್ರಯೋಜನವಾಗಿದೆ ಎಂದು ಕಿಡಿಕಾರಿದ್ದಾರೆ. 

ಲಸಿಕಾ ತಯಾರಕರ ಜೊತೆ ಮೋದಿ ಮಾತುಕತೆ; ಪ್ರಧಾನಿ ಕೊಂಡಾಡಿದ ಆದರ್ ಪೂನಾವಲ್ಲ!

ಈ ಬಗ್ಗೆ ಟ್ವೀಟ್‌ ಮಾಡಿರುವ ವೈ ಎಸ್‌ ಶರ್ಮಿಳಾ ʼನಿಮ್ಮ YSR ಮಗು ಇಂದಿನಿಂದ ಮೂಲೆಮೂಲೆ ಮುಟ್ಟಿ ಜನರ ಕಷ್ಟಗಳನ್ನು ಅರಿತು ಅವರ ಕಣ್ಣೀರು ಒರೆಸಲು ಮತ್ತು ವೈ.ಎಸ್.ಆರ್ ಆಡಳಿತವನ್ನು ಮರಳಿ ತರಲು ಕೊನೆಯವರೆಗೂ ಹೋರಾಡುತ್ತದೆ. 4000 ಕಿಲೋಮೀಟರ್ ಪಾದಯಾತ್ರೆಯಲ್ಲಿ  ನನ್ನನ್ನು ಗೌರವಿಸಿ ಆಶೀರ್ವದಿಸುತ್ತೀರಿ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ ಎಂದು ಹೇಳಿದ್ದಾರೆ.

 

Covid 19: ದೀಪಾವಳಿ ನಂತರ ದೇಶದ ಅಲ್ಲಲ್ಲಿ ಸೋಂಕು ಏರಿಕೆ, ಮತ್ತೊಂದು ದೊಡ್ಡ ಅಲೆ ? ಏನಂತಾರೆ ತಜ್ಞರು ?

2013ರಲ್ಲಿ ಅವರ ಸಹೋದರ ಜಗನ್‌ ಮೋಹನ್‌ ರೆಡ್ಡಿ (Jagan Mohan Reddy) ಜೈಲಿನಲ್ಲಿದ್ದಾಗ ಶರ್ಮಿಳಾ ವೈಎಸ್‌ಆರ್‌ ಕಾಂಗ್ರೆಸ್‌ಗಾಗಿ 3ಸಾವಿರ ಕಿಲೋಮೀಟರ್‌ ಪಾದಯಾತ್ರೆ ಕೈಗೊಂಡಿದ್ದರು. ಆದರೆ  ಆಂಧ್ರದಲ್ಲಿ ಸಹೋದರ ಸಿಎಂ ಆದ ಬಳಿಕ ಶರ್ಮಿಳಾ ರಾಜಕೀಯವಾಗಿ ಅಂತರ ಕಾಯ್ದುಕೊಂಡಿದ್ದಾರೆ. ಶರ್ಮಿಳಾ ಪಾದಯಾತ್ರೆ ವೇಳೆ ಗ್ರಾಮಗಳಿಗೆ ಭೇಟಿ ನೀಡಿ, ಸಮಸ್ಯೆಗಳನ್ನು ಆಲಿಸುತ್ತಿದ್ದು, ಟಿಆರ್‌ಎಸ್‌ ಜತೆಗೆ ಕಾಂಗ್ರೆಸ್‌, ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸುತ್ತಿದ್ದಾರೆ. 

'ವೈಎಸ್‌ಆರ್‌ ತೆಲಂಗಾಣ' ಪಕ್ಷಕ್ಕೆ ಚಾಲನೆ ನೀಡಿದ್ದ ಜಗನ್‌ ಸೋದರಿ!

ವೈಎಸ್‌ಆರ್‌ ಕಾಂಗ್ರೆಸ್‌ ಮುಖ್ಯಸ್ಥ ಜಗನ್‌ ಮೋಹನ್‌ ರೆಡ್ಡಿ ಅವರ ಸೋದರಿ ವೈ.ಎಸ್‌ ಶರ್ಮಿಳಾ ಅವರು ‘ವೈಎಸ್‌ಆರ್‌ ತೆಲಂಗಾಣ’ ಎಂಬ ಹೊಸ ಪಕ್ಷಕ್ಕೆ ಅಧಿಕೃತ ಚಾಲನೆ ನೀಡಿದ್ದರು. 2021 ಜುಲೈನಲ್ಲಿ ಪಕ್ಷದ ಕಾರ‍್ಯಕರ್ತರ ಸಮ್ಮುಖದಲ್ಲಿ ತಮ್ಮ ಹೊಸ ಪಕ್ಷದ ಬಾವುಟ ಮತ್ತು ಧ್ಯೇಯೋದ್ಧೇಶಗಳನ್ನು ಪ್ರಚುರಪಡಿಸಿದ ಶರ್ಮಿಳಾ ಅವರು, ಪಕ್ಷ ಸ್ಥಾಪನೆಯಾದ 100ನೇ ದಿನಕ್ಕೆ ರಾಜ್ಯಾದ್ಯಂತ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದ್ದರು. ತಮ್ಮ ತಂದೆ ಹಾಗೂ ಆಂಧ್ರದ ಮಾಜಿ ಮುಖ್ಯಮಂತ್ರಿ ರಾಜಶೇಖರ್‌ ರೆಡ್ಡಿ ಅವರ ಆಕಾಂಕ್ಷೆಯಂತೆ ರಾಜಣ್ಣ ರಾಜ್ಯಂ ಆಡಳಿತ ನೀಡುವುದೇ ತಮ್ಮ ಧ್ಯೇಯ. ರಾಜ್ಯದ ಜನತೆಗೆ ಕಲ್ಯಾಣ, ಸ್ವ-ಸಮೃದ್ಧಿ ಮತ್ತು ಗುಣಮಟ್ಟದ ಜೀವನ ಕಲ್ಪಿಸುವುದೇ ವೈಎಸ್‌ಆರ್‌ ತೆಲಂಗಾಣದ ಮುಖ್ಯ ಉದ್ದೇಶವಾಗಿದೆ ಎಂದು ಶರ್ಮಿಳಾ ಹೇಳಿದ್ದರು.  

ತೆಲಂಗಾಣದಲ್ಲಿ ಜಗನ್‌ ಸೋದರಿಯಿಂದ ಹೊಸ ಪಕ್ಷ ಸ್ಥಾಪನೆ!

ಅಧಿಕಾರದ ಗದ್ದುಗೆ ಏರಲು ವೈಎಸ್‌ಆರ್ ಮತ್ತು ಜಗನ್ ಮೋಹನ್ ರೆಡ್ಡಿ ಇಬ್ಬರೂ ಪಾದಯಾತ್ರೆಯ ತಂತ್ರವನ್ನು ಬಳಸಿದ್ದರು.  ಸದ್ಯದ ಮಟ್ಟಿಗೆ ವೈಎಸ್‌ಆರ್  ಪುತ್ರಿ ಶರ್ಮಿಳಾ  ಇನ್ನೂ ಯಾವುದೇ ರಾಜಕೀಯ ಪ್ರಮುಖರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಸಾಧ್ಯವಾಗಿಲ್ಲ. 2019 ರ ಚುನಾವಣೆಗೆ ಮುನ್ನ ವೈಎಸ್‌ಆರ್ ಕಾಂಗ್ರೆಸ್‌ಗೆ ಸಹಾಯ ಮಾಡಿದ ಪ್ರಶಾಂತ್ ಕಿಶೋರ್ ಅವರ ಮಾರ್ಗದರ್ಶನವನ್ನು ಶರ್ಮಿಳಾ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ. 2023ರಲ್ಲಿ ತೆಲಂಗಾಣದಲ್ಲಿ 119  ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆಗಳು ನಡೆಯಲಿವೆ. 

Follow Us:
Download App:
  • android
  • ios