Asianet Suvarna News Asianet Suvarna News

ಲಸಿಕಾ ತಯಾರಕರ ಜೊತೆ ಮೋದಿ ಮಾತುಕತೆ; ಪ್ರಧಾನಿ ಕೊಂಡಾಡಿದ ಆದರ್ ಪೂನಾವಲ್ಲ!

 • ಭಾರತ 100 ಕೋಟಿ ಲಸಿಕೆ ಗಡಿ ದಾಟಿದ ಬೆನ್ನಲ್ಲೇ ಉತ್ಪಾದಕರ ಜೊತೆ ಮೋದಿ ಮಾತುಕತೆ
 • 7 ಲಸಿಕಾ ಉತ್ಪಾದಕರ ಭೇಟಿಯಾಗಿ ಮಾತುಕತೆ ನಡೆಸಿದ ಪ್ರಧಾನಿ ಮೋದಿ
 • ಮೋದಿ ದೂರದೃಷ್ಟಿಯಿಂದ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ
 • ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ ಸೀರಂ ಸಂಸ್ಥೆ ಮುಖ್ಯಸ್ಥ
   
Narendr Modi interacted with vaccine manufacturers Adar Poonawalla hails PM vision ckm
Author
Bengaluru, First Published Oct 23, 2021, 6:25 PM IST
 • Facebook
 • Twitter
 • Whatsapp

ನವದೆಹಲಿ(ಅ.23):  ಕೋವಿಡ್(Covid) ವಿರುದ್ಧದ ಹೋರಾಟದಲ್ಲಿ ಭಾರತ ಮಹತ್ವದ ಮೈಲಿಗಲ್ಲು ದಾಟಿದೆ. 100 ಕೋಟಿ(Vaccine Century) ಲಸಿಕೆ ಗಡಿ ದಾಟಿರುವ ಭಾರತ, ಇದೀಗ ಎರಡನೇ ಡೋಸ್‌ನತ್ತ ಭಾರತ ಗಮನ ಹರಿಸಿದೆ. ಈ ಸಾಧನೆಯನ್ನು  ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದರು. ಇದರ ಬೆನ್ನಲ್ಲೇ ಲಸಿಕಾ ಉತ್ಪಾದಕರನ್ನು(vaccine manufacturers) ಭೇಟಿಯಾದ ಮೋದಿ ಮಾತುಕತೆ ನಡೆಸಿದ್ದಾರೆ.

100 ಕೋಟಿ ಲಸಿಕೆ ಸಂಭ್ರಮ : ತಮ್ಮ Profile Picture ಬದಲಿಸಿದ ಪ್ರಧಾನಿ ಮೋದಿ!

ಭಾರತದಲ್ಲಿರುವ 7 ಲಸಿಕಾ ಉತ್ಪಾದಕರಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಭಾರತ್ ಬಯೋಟೆಕ್, ಡಾ. ರೆಡ್ಡೀಸ್ ಲ್ಯಾಬರೋಟರಿ, ಝೈಡಸ್ ಕ್ಯಾಡಿಲಾ, ಜೆನೋವಾ ಬಯೋಫಾರ್ಮ್, ಬಯೋಲಾಜಿಕಲ್ ಇ ಹಾಗೂ ಪ್ಯಾನೇಸಿಯಾ ಬಯೋಟೆಕ್ ಕಂಪನಿಗಳ ಮುಖ್ಯಸ್ಥರ ಜೊತೆ ಮೋದಿ(PM Narendra Modi) ಮಾತುಕತೆ ನಡೆಸಿದ್ದಾರೆ.

ಸಭೆಯ ಆರಂಭದಲ್ಲಿ ಭಾರತದ 100 ಕೋಟಿ ಲಸಿಕೆ ಸಾಧನೆಗೆ ಕಾರಣರಾದ ಲಸಿಕಾ ಉತ್ಪಾದಕ ಕಂಪನಿಗಳು ಹಾಗೂ ಸಿಬ್ಬಂಧಿ ವರ್ಗಕ್ಕೆ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಬಳಿಕ ಮುಂಬರುವ ದಿನಗಳಲ್ಲಿ ಭಾರತದಲ್ಲಿ ಲಸಿಕೆ ಪೂರೈಕೆ, ಲಸಿಕೆ ಉತ್ಪಾದನೆ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಕೋವಿಡ್ ಲಸಿಕೆ ಸಂಶೋಧನೆ ಹಾಗೂ ಅಭಿವೃದ್ಧಿ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

Narendra Modi Speech Highlights: ಭಾರತದ ಶಕ್ತಿಗೆ ವಿಶ್ವವೇ ನಿಬ್ಬೆರಗು: ಮೋದಿ ಮಾತು

ಎಲ್ಲರ ಸಹಕಾರದಿಂದ ಭಾರತ 100 ಕೋಟಿ ಲಸಿಕೆ ಸಾಧನೆ ಮಾಡಿದೆ. ಇದೀಗ ಲಸಿಕಾ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಬೇಕಿದೆ. ಈ ಮೂಲಕ ಸಂಪೂರ್ಣ ಭಾರತವನ್ನು ಕೋವಿಡ್‌ನಿಂದ ಮುಕ್ತ ಮಾಡಬೇಕಿದೆ ಎಂದು ಮೋದಿ ಹೇಳಿದ್ದಾರೆ. 

ಇದೇ ವೇಳೆ ಮಾತನಾಡಿದ ಕೋವೀಶೀಲ್ಡ್ ಲಸಿಕಾ ತಯಾರಿಕಾ ಕಂಪನಿ ಮುಖ್ಯಸ್ಥ ಆದರ್ ಪೂನಾವಲ್ಲ, ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿಯನ್ನು ಕೊಂಡಾಡಿದ್ದಾರೆ. ಭಾರತ ಇತರ ಎಲ್ಲಾ ದೇಶಗಳಿಂತ ಉತ್ತಮ ಹಾಗೂ ವೇಗವಾಗಿ ಲಸಿಕೆ ಉತ್ಪಾದನೆ ಮಾಡುತ್ತಿದೆ. ಹಲವು ರಾಷ್ಟ್ರಗಳು ಲಸಿಕೆಗಾಗ ಭಾರತವನ್ನೇ ಅವಲಂಬಿಸಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ತೆಗೆದುಕೊಂಡ ನಿರ್ಧಾರಗಳನ್ನು ಆದರ್ ಶ್ಲಾಘಿಸಿದ್ದಾರೆ.

 

ಪ್ರಧಾನಿ ಮೋದಿ ಲಸಿಕೆ ಸಂಶೋಧನೆ, ಉತ್ಪಾದನೆ, ವಿತರಣೆ ಸೇರಿದಂತೆ  ಎಲ್ಲಾ ಹಂತದಲ್ಲಿ ಎಲ್ಲರನ್ನೂ ಜೊತೆಯಾಗಿ ಮುನ್ನಡೆಸಿದ್ದಾರೆ.ಒಗ್ಗಟ್ಟಾಗಿ ಹೋರಾಡಿದ ಫಲದಿಂದ ಇಂದು ಭಾರತ ಕೋವಿಡ್ ವಿರುದ್ಧ ನಿಯಂತ್ರಣ ಸಾಧಿಸಿದೆ ಎಂದು ಅದಾರ್ ಹೇಳಿದ್ದಾರೆ.

ಭಾರತದಲ್ಲಿ ತಯಾರಿಸಿದ ಲಸಿಕೆಗೆ ಕೋವಿಡ್ ಮಾತ್ರವಲ್ಲ, ರೂಪಾಂತರಿ ತಳಿಗಳಿಗೂ ಪರಿಣಾಮಕಾರಿಯಾಗಿದೆ. ದೇಶದಲ್ಲಿ ಕೊರೋನಾ ನಿಯಂತ್ರಿಸಲು ನಮ್ಮ ಕಂಪನಿ ಬದ್ಧವಾಗಿದೆ. ಕೇಂದ್ರದ ಸಹಕಾರದೊಂದಿದೆ ಲಸಿಕೆ ಉತ್ಪಾದನೆಗೆ ಮತ್ತಷ್ಟು ವೇಗ ನೀಡಲಾಗಿದೆ. ಈ ಮೂಲಕ ಕ್ಷಿಪ್ರಗತಿಯಲ್ಲಿ ಭಾರತವನ್ನು ಸಂಪೂರ್ಣ ಲಸಿಕಾ ದೇಶವನ್ನಾಗಿ ಮಾಡಲು ಪ್ರಯತ್ನಿಸುತ್ತೇವೆ ಎಂದು ಆದಾರ್ ಹೇಳಿದ್ದಾರೆ.


 

Follow Us:
Download App:
 • android
 • ios