Asianet Suvarna News Asianet Suvarna News

ಧುಮ್ಮಿಕ್ಕುವ ಜಲಪಾತವಲ್ಲ... ಹಿಮ ತೆರವು ಕಾರ್ಯದ ಮನಮೋಹಕ ದೃಶ್ಯ

ಕಣಿವೆ ನಾಡು ಹಿಮದ ಬೀಡು ಜಮ್ಮುಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಹಾದಿಗೆ ಬಿದ್ದ ಹಿಮವನ್ನು ತೆರವುಗೊಳಿಸುವ ಕಾರ್ಯಾಚರಣೆ ಶುರುವಾಗಿದೆ.

Its not a waterfalls, visuals of snow clearance project in Jammu kashmir akb
Author
First Published Nov 9, 2022, 12:21 PM IST

ಜಮ್ಮುಕಾಶ್ಮೀರ: ಕಣಿವೆ ನಾಡು ಹಿಮದ ಬೀಡು ಜಮ್ಮುಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಹಾದಿಗೆ ಬಿದ್ದ ಹಿಮವನ್ನು ತೆರವುಗೊಳಿಸುವ ಕಾರ್ಯಾಚರಣೆ ಶುರುವಾಗಿದೆ. ಬಾರ್ಡರ್ ರೋಡ್ ಆರ್ಗನೈಜೇಷನ್ ವತಿಯಿಂದ ಈ ಮಹತ್ವದ ತೆರವು ಕಾರ್ಯ ಆರಂಭವಾಗಿದೆ. ಈ ಯೋಜನೆಗೆ ಬಿಕಾನ್ ಎಂದು ಹೆಸರಿಡಲಾಗಿದೆ. ಝೊಜಿಲಾ ಪಾಸ್ ಹಾಗೂ ಇತರ ಚೆಕ್‌ಪೋಸ್ಟ್‌ಗಳಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿದೆ. 

ಸಾಮಾನ್ಯವಾಗಿ ಚಳಿಗಾಲದಲ್ಲಿ(Winter session) ಕಣಿವೆನಾಡಿನಲ್ಲಿ ವ್ಯಾಪಕವಾಗಿ ಹಿಮಪಾತವಾಗುತ್ತವೆ. ಇದರಿಂ ರಸ್ತೆಗಳೆ ಮುಚ್ಚಲ್ಪಟ್ಟು, ಸಂಪರ್ಕ ಕಡಿತಗೊಳ್ಳುತ್ತವೆ. ಪರಿಣಾಮ ಗರ್ಭಿಣಿಯರು (Pragnency), ಅನಾರೋಗ್ಯಕ್ಕೆ ಒಳಗಾದವರು ಆಸ್ಪತ್ರೆ (Hospital) ತಲುಪಲು ರಸ್ತೆ ಸಂಪರ್ಕವಿಲ್ಲದೇ ಪರದಾಡುವ ಸಂದರ್ಭಗಳು ಈ ಹಿಂದೆ ಒದಗಿ ಬಂದಿದ್ದವು. ಈ ಸಂದರ್ಭಗಳಲೆಲ್ಲಾ ಭಾರತೀಯ ಯೋಧರು (Indian Soldiers) ಸ್ಥಳಿಯ ಜನರ ನೆರವಿಗೆ ಧಾವಿಸಿ ಬಂದಿದ್ದಾರೆ. 

ಕಳೆದ ವರ್ಷ ಹಿಮಪಾತದಿಂದಾಗಿ (Snow Fall) ರಸ್ತೆ ಸ್ಥಗಿತಗೊಂಡ ಹಿನ್ನೆಲೆ ತುಂಬು ಗರ್ಭಿಣಿಯೊರ್ವಳನ್ನು ಭಾರತೀಯ ಯೋಧರು ಸ್ಟ್ರೆಚರ್ ಮೇಲೆ ಮಲಗಿಸಿ ಹೆಗಲಿನ ಮೇಲೆ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ಸಾಗಿಸಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಯೋಧರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ ಈಗ ಈ ಹಿಮ ತೆರವು ಗೊಳಿಸುವ ಯೋಜನೆಯಿಂದ ರಸ್ತೆಗಳು ಸ್ವಲ್ಪ ಹೊತ್ತಿನಲ್ಲೇ ಸಂಪರ್ಕಕ್ಕೆ ಮುಕ್ತವಾಗಿ ಸಿಗಲಿದ್ದು, ಇಂತಹ ಸಮಸ್ಯೆಗಳು ಎದುರಾಗದು. 

Jammu Kashmirದಲ್ಲಿ ಹಿಂದೆಂದೂ ಇಲ್ಲದಷ್ಟು ಚಳಿ ಚಳಿ.. ತಾಪಮಾನ ಎಷ್ಟು ಗೊತ್ತಾ?

ಸಾವಿಗೂ ಅಂಜದ ವೀರ: ಭೀಕರ ಹಿಮಪಾತದ ಮಧ್ಯೆ ಗಟ್ಟಿಯಾಗಿ ನಿಂತ ಪರ್ವತಾರೋಹಿ.. ವಿಡಿಯೋ ವೈರಲ್

ಇನ್ನು ರಸ್ತೆಯಿಂದ ಹಿಮವನ್ನು ತೆರವುಗೊಳಿಸುವ ವಿಡಿಯೋವನ್ನು ಸುದ್ದಿಸಂಸ್ಥೆ ಎಎನ್‌ಐ ತನ್ನ ಟ್ವಿಟ್ಟರ್‌ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಈ ದೃಶ್ಯಾವಳಿಗಳು ಮನಮೋಹಕವಾಗಿವೆ. ಜಲಪಾತದಲ್ಲಿ ನೀರು ಧುಮ್ಮಿಕ್ಕುವಂತೆ ಈ ದೃಶ್ಯ ಕಾಣಿಸುತ್ತಿದೆ. ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದಾರೆ.

ಭಾರಿ ಹಿಮಪಾತದಿಂದ ರಸ್ತೆ ಸ್ಥಗಿತ... ಜೆಸಿಬಿ ಏರಿ ಮದುವೆ ಮನೆಗೆ ಬಂದ ವರ

Follow Us:
Download App:
  • android
  • ios