Asianet Suvarna News Asianet Suvarna News

Medicine For Covid 19 : ಈಗ ಕೋವಿಡ್‌ ನೇಸಲ್‌ ಸ್ಪ್ರೇ ಅಭಿವೃದ್ಧಿ

  • ತಂತ್ರಜ್ಞಾನ ಕೇಂದ್ರದ ವಿಜ್ಞಾನಿಗಳಿಂದ ನೇಸಲ್‌ ಸ್ಪ್ರೇ (ಮೂಗಿನ ಮೂಲಕ ತೆಗೆದುಕೊಳ್ಳುವ ಸ್ಪ್ರೇ)ಯ ಅಭಿವೃದ್ಧಿ 
  • ಕೋವಿಡ್‌-19ರ ತಡೆಗಟ್ಟುವಿಕೆಗಾಗಿ ಬೆಂಗಳೂರಿನ ಐಟಿಸಿ ಜೀವ ವಿಜ್ಞಾನ ಹಾಗೂ ತಂತ್ರಜ್ಞಾನ ಕೇಂದ್ರದಿಂದ ಅಭಿವೃದ್ಧಿ
ITC starts clinical trials of nasal spray for COVID 19 snr
Author
Bengaluru, First Published Nov 26, 2021, 6:43 AM IST
  • Facebook
  • Twitter
  • Whatsapp

 ನವದೆಹಲಿ (ನ.26): ಕೋವಿಡ್‌-19ರ (Covid 19) ತಡೆ ಗಟ್ಟುವಿಕೆಗಾಗಿ ಬೆಂಗಳೂರಿನ ಐಟಿಸಿ (Bengaluru ITC) ಜೀವ ವಿಜ್ಞಾನ ಹಾಗೂ ತಂತ್ರಜ್ಞಾನ ಕೇಂದ್ರದ ವಿಜ್ಞಾನಿಗಳು ನೇಸಲ್‌ ಸ್ಪ್ರೇ (ಮೂಗಿನ ಮೂಲಕ ತೆಗೆದುಕೊಳ್ಳುವ ಸ್ಪ್ರೇ)ಯನ್ನು ಅಭಿವೃದ್ಧಿ ಪಡಿಸಿದ್ದು ಗುರುವಾರ ವೈದ್ಯಕೀಯ ಪ್ರಯೋಗಗಳನ್ನು ಆರಂಭಿಸಲಾಗಿದೆ. ಮೂಗಿನ (Nose) ಹೊಳ್ಳೆಗಳಿಂದ ದೇಹ ಪ್ರವೇಶಿಸುವ ವೈರಸ್‌ನ್ನು (Virus ) ಅಲ್ಲೇ ನಾಶಗೊಳಿಸಲು ವಿನ್ಯಾಸಗೊಳಿಸಲಾದ ಸ್ಪ್ರೇ ಸುರಕ್ಷಿತವಾಗಿದ್ದು ಕೋವಿಡ್‌-19ರ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಪರಿಣಾಮಕಾರಿಯಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. 

ಕ್ಲಿನಿಕಲ್‌ ಟ್ರಯಲ್‌ (Clinical Trial)  ರೆಜಿಸ್ಟ್ರಿಯಿಂದ ಎಲ್ಲ ಅಗತ್ಯ ಅನುಮೋದನೆಯನ್ನು ಪಡೆದುಕೊಂಡ ನಂತರ ಸ್ಯಾವ್ಲಾನ್‌ ಬ್ರಾಂಡ್‌ನಡಿಯಲ್ಲಿ (Barnd) ಈ ನೇಸಲ್‌ ಸ್ಪ್ರೇ ಮಾರು ಕಟ್ಟೆಗೆ ಬರಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ. ಇದರ ಪ್ರಯೋಗ ಯಶಶ್ವಿ ಆದಲ್ಲಿ ಕೋವಿಡ್‌ ಗೆ ಇನ್ನೊಂದು ಔಷಧ ದೊರೆತಂತೆ ಆಗಲಿದೆ. 

ಹಾವು ಕಡಿತಕ್ಕೆ ಬೆಂಗಳೂರಲ್ಲೇ ಔಷಧಿ : 

 ರಾಜ್ಯದಲ್ಲಿ ವಿಷ ಸರ್ಪದ (Snake) ನಂಜಿನಿಂದ ಉಂಟಾಗುವ ಸಾವು ಹಾಗೂ ಅನಾರೋಗ್ಯ (Health issues) ಸಮಸ್ಯೆಗಳನ್ನು 2030ರ ವೇಳೆಗೆ ಶೇ.50 ರಷ್ಟು ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರಿನಲ್ಲಿ (Bengaluru) ಪ್ರತಿ ನಂಜು (  Anti Venom) ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಸರ್ಕಾರ ಚಾಲನೆ ನೀಡಿದೆ.2021-22ನೇ ಸಾಲಿನ ಬಜೆಟ್‌ನಲ್ಲಿ (Budget) 7 ಕೋಟಿ ವೆಚ್ಚದಲ್ಲಿ ಪ್ರತಿ ನಂಜು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆ ಮಾಡುವುದಾಗಿ ಘೋಷಿಸಿ 2 ಕೋಟಿ ರು. ಹಣವನ್ನೂ ಮೀಸಲಿಟ್ಟಿತ್ತು. ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯಿಂದ ಬೆಂಗಳೂರಿನ  ಹೆಲಿಕ್ಸ್‌ ಬಯೋಟೆಕ್‌ ಪಾರ್ಕ್ನಲ್ಲಿರುವ ಐಬಿಎಬಿ (IBAB) ಸಂಸ್ಥೆ ಆವರಣದಲ್ಲಿ ಪ್ರತಿನಂಜು ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಚಾಲನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾವು ಕಡಿತದಿಂದ ಉಂಟಾಗುವ ಸಾವು - ನೋವು ಕಡಿಮೆ ಮಾಡಲು ಕೈಗೆಟಕುವ ದರದಲ್ಲಿ ಹಾಗೂ ಸುಲಭವಾಗಿ ದೊರಕುವ ಪ್ರತಿ ನಂಜನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೇಂದ್ರ ಸ್ಥಾಪಿಸಲಾಗಿದೆ. ಐಐಎಸ್‌ಸಿಯ (IISC) ಎಕಲಾಜಿಕಲ್‌ ಸೈನ್ಸ್‌ನಲ್ಲಿರುವ ‘ಎವಲ್ಯೂಷನರಿ ವೆನಾಮಿಕ್ಸ್‌ ಲ್ಯಾಬ್‌’ (Evolutionary Venomics Lab) ಸಹಯೋಗದಲ್ಲಿ ಕೇಂದ್ರ ಸ್ಥಾಪಿಸುತ್ತಿದ್ದು, ಐಬಿಎಬಿ (IBAB) ಸಂಸ್ಥೆಯು ನೋಡಲ್‌ ಅನುಷ್ಠಾನ ಸಂಸ್ಥೆ ಆಗಿ ಹಾಗೂ ಐಐಎಸ್‌ಸಿ (IISC) ಪಾಲುದಾರ ಸಂಸ್ಥೆಯ ಆಗಿ ಕಾರ್ಯನಿರ್ವಹಿಸಲಿದೆ.

500 ಸರ್ಪಗಳ ಸಂಗ್ರಹ:  ಈ ಕೇಂದ್ರದಿಂದ ಅತ್ಯಾಧುನಿಕ ಸರ್ಪಾಗಾರ (serpentarium) ಸೌಲಭ್ಯವನ್ನು ಸ್ಥಾಪಿಸಿ ಅಂದಾಜು 23 ಸರ್ಪ (Snake) ವೈವಿಧ್ಯ ವರ್ಗಗಳಿಗೆ ಸೇರಿದ 500 ಸರ್ಪ, ಚೇಳು,ಜೇಡ ಮತ್ತಿತರ ವಿಷಕಾರಿ ಜಂತುಗಳನ್ನು ಸಂರಕ್ಷಿಸಲಾಗುವುದು. ಹಾವು ಕಚ್ಚಿರುವುದಕ್ಕೆ ಪ್ರಥಮ ಚಿಕಿತ್ಸೆ ಹಾಗೂ ಸರ್ಪ ವರ್ಗಗಳ ವಿಧವನ್ನು ಗುರುತಿಸುವುದು, ಅಪಾಯದಿಂದ ಪಾರು ಮಾಡುವುದು ಹಾಗೂ ಹಾವುಗಳನ್ನು ಸ್ಥಳಾಂತರಿಸಲು ಅರಣ್ಯ ಇಲಾಖೆಯಿಂದ (Forest Department) 500 ಮಂದಿಗೆ ತರಬೇತಿ ನೀಡಲಾಗುವುದು.

ಹಾವು ಕಚ್ಚಿರುವುದನ್ನು ಗುರುತಿಸಲು ಹಾಗೂ ಚಿಕಿತ್ಸೆಯಲ್ಲಾಗುವ ಬೆಳವಣಿಗೆಗಳ ಬಗ್ಗೆ ಸುಮಾರು 50 ಕಾರ್ಯನಿರತ ವೈದ್ಯರಿಗೆ ತರಬೇತಿ ನೀಡಲಾಗುವುದು. ಸಂಶೋಧಕರಿಗೆ ಮತ್ತು ಪ್ರತಿನಂಜು ಉತ್ಪಾದಕರುಗಳಿಗೆ ಪ್ರಮಾಣೀಕರಿಸಿದ ಗುಣಮಟ್ಟದ ನಂಜು ಮಾದರಿಗಳನ್ನು ಒದಗಿಸುವುದು ಈ ಕೇಂದ್ರದ ಪ್ರಮುಖ ಜವಾಬ್ದಾರಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಯಿಂದ ಸರ್ಪಗಳ ಹಾವಳಿ ಹೆಚ್ಚು : ಕೆಲ ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಇದರಿಂದ ಹಾವುಗಳು ವಾಸಸ್ಥಳಗಳಿಗೆ ಬರುವ ಪ್ರಕರಣಗಳು ಹೆಚ್ಚಾಗಿದೆ. ಹಳ್ಳಿಗಾಡು ಪ್ರದೇಶಗಳಲ್ಲದೇ ನಗರ ಪ್ರದೇಶಗಳಲ್ಲಿಯೂ ಹಾವುಗಳ ಹಾವಳಿ ಅಧಿಕವಾಗುತ್ತಿದೆ. 

ಊಟದಲ್ಲಿ ಹಾವಿನ ಮರಿ: ತಾಲೂಕಿನ ಅಬ್ಬೆತುಮಕೂರು ಮಠದ ವಿಶ್ವರಾಧ್ಯ ವಿದ್ಯಾವರ್ಧಕ ವಸತಿ ನಿಲಯದಲ್ಲಿ(Hostel) ಗುರುವಾರ ಬೆಳಿಗ್ಗೆ ತಯಾರಿಸಿದ ಉಪಹಾರದಲ್ಲಿ(Breakfast) ಸತ್ತುಬಿದ್ದ ಸತ್ತ ಹಾವು ಪತ್ತೆಯಾಗಿದ್ದು, ಉಪಾಹಾರ ಸೇವಿಸಿದ ಐವರು ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗಿ, ಕೆಲವರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಹುಲ್‌, ಮಲ್ಲಪ್ಪ, ವಿಶ್ವಕರ್ಣ, ಬಸವರಾಜ, ಯುವರಾಜ ವಿದ್ಯಾರ್ಥಿಗಳು(Students) ತಲೆ ಸುತ್ತು, ವಾಂತಿಯಿಂದ ಅಸ್ವಸ್ಥರಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ(Treatment) ನೀಡಲಾಗುತ್ತಿದೆ.

50 ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಪಾಸಣೆ:  ಉಪಾಹಾರ ಸೇವಿಸಿದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳ ಆರೋಗ್ಯವನ್ನು ತಪಾಸಣೆ(Health Checkup) ಮಾಡಲಾಗಿದೆ. ಇದರಲ್ಲಿ ಐವರು ವಿದ್ಯಾರ್ಥಿಗಳು ಮಾತ್ರ ತಲೆ ಸುತ್ತು, ವಾಂತಿಯಿಂದ ಅಸ್ವಸ್ಥರಾಗಿದ್ದಾರೆ. ಉಳಿದವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಜಿಲ್ಲಾಸ್ಪತ್ರೆಯ ವೈದ್ಯರು(Doctor) ಮಾಹಿತಿ ನೀಡಿದರು.

ಶಾಸಕರ ಭೇಟಿ:  ಸ್ಥಳೀಯ ಶಾಸಕ ವೆಂಕಟರೆಡ್ಡಿ ಮುದ್ನಾಳ(Venkatreddy Mudnal) ಅವರು ವಿಷಯ ತಿಳಿಯುತ್ತಲೇ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ನಂತರ ವೈದ್ಯರಿಂದ ಮಾಹಿತಿ ಪಡೆದ ಅವರು, ಸದ್ಯಕ್ಕೆ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿಲ್ಲ. ಬಹುಶಃ ಉಪ್ಪಿಟ್ಟುನಲ್ಲಿ ಪತ್ತೆಯಾಗಿರುವ ಹಾವಿನ ಮರಿ ಸತ್ತದ್ದಾಗಿದೆ. ಉಪಾಹಾರ ತಯಾರಿಸುವ ವೇಳೆ ಸ್ವಚ್ಛತೆ ಕಾಪಾಡದ ಕಾರಣ ಇದು ಸಂಭವಿಸಿರುವ ಸಾಧ್ಯತೆ ಇದೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಮುಂದೆಯೂ ವಸತಿ ಶಾಲೆಗಳಿಗೆ ದಿಢೀರ್‌ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ ಪರಿಶೀಲನೆ ಮಾಡಲಾಗುವುದು. ಈಗಾಗಲೇ ಹಲವು ವಸತಿನಿಲಯಗಳಿಗೆ ಭೇಟಿ ನೀಡಲಾಗಿದೆ’ ಎಂದರು. ಇದಕ್ಕೂ ಮೊದಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಿ.ಬಿ.ವೇದಮೂರ್ತಿ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.

ಉಪಾಹಾರ ಸೇವಿಸುವ ವೇಳೆ ಒಬ್ಬ ವಿದ್ಯಾರ್ಥಿ ತಟ್ಟೆಯಲ್ಲಿ ಹಾವಿನ ಮರಿ ಪತ್ತೆಯಾಗಿದೆ. ಇದನ್ನು ಸೇವಿಸಿದ ನಂತರ ತಲೆ ಸುತ್ತು ಬಂದಿದೆ. ನಂತರ ಎಲ್ಲರಿಗೂ ಹೇಳಿದ ನಂತರ ಉಪಾಹಾರ ಬಿಟ್ಟು ಆಸ್ಪತ್ರೆಗೆ ಬಂದಿದ್ದಾರೆ’ ಎಂದು ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಜೀವಕುಮಾರ ರಾಯಚೂರಕರ್‌ ಮಾತನಾಡಿ, ’ಉಪಾಹಾರ ಸೇವಿಸಿದ ವಿದ್ಯಾರ್ಥಿಗಳ ಆರೋಗ್ಯ ಮೇಲೆ ನಿಗಾ ಇರಿಸಲಾಗಿದೆ. ಯಾರಿಗೂ ಜೀವಕ್ಕೆ ಅಪಾಯವಿಲ್ಲ. ಮಕ್ಕಳ ನಿಗಾ ಘಟಕದಲ್ಲಿ ಆರೈಕೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

Follow Us:
Download App:
  • android
  • ios