Asianet Suvarna News Asianet Suvarna News

Reliance industries: ಕೌಟುಂಬಿಕ ಕಲಹ ತಪ್ಪಿಸಲು ಟ್ರಸ್ಟ್‌ಗೆ ಅಂಬಾನಿ ಆಸ್ತಿ ಹೊಣೆ

  • ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ, ರಿಲಯನ್ಸ್‌ ಕಂಪನಿ ಮಾಲೀಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್‌ ಅಂಬಾನಿ
  • ತಮ್ಮ 15 ಲಕ್ಷ ಕೋಟಿ ಮೌಲ್ಯದ ಸಾಮ್ರಾಜ್ಯದ ಉತ್ತರಾಧಿಕಾರಕ್ಕಾಗಿ ವಿಶಿಷ್ಟ ಯೋಜನೆ
Mukesh Ambani planning to Give Reliance industries Management responsibility to trust snr
Author
Bengaluru, First Published Nov 24, 2021, 9:13 AM IST

ಮುಂಬೈ (ನ.24): ಏಷ್ಯಾದ (Asia) ಅತ್ಯಂತ ಶ್ರೀಮಂತ ವ್ಯಕ್ತಿ, ರಿಲಯನ್ಸ್‌ ಕಂಪನಿ (Reliance Company) ಮಾಲೀಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್‌ ಅಂಬಾನಿ (Mukesh Ambani) ತಮ್ಮ 15 ಲಕ್ಷ ಕೋಟಿ ಮೌಲ್ಯದ ಸಾಮ್ರಾಜ್ಯದ ಉತ್ತರಾಧಿಕಾರಕ್ಕಾಗಿ ವಾಲ್‌ಮಾರ್ಟ್‌ (Wall mart) ಸಂಸ್ಥಾಪಕ ವಾಲ್ಟನ್‌ ಕುಟುಂಬದ ಮಾದರಿಯಲ್ಲೇ ವಿಶಿಷ್ಟ ಯೋಜನೆಯನ್ನು ಸಿದ್ಧಪಡಿಸಿದ್ದಾರೆ. ಮುಕೇಶ್‌ (64) ಇನ್ನೂ ತಾನು ಕಂಪನಿಯ ಜವಾಬ್ದಾರಿಗಳಿಂದ ನಿವೃತ್ತಿ ಘೋಷಿಸುವ ಬಗ್ಗೆ ಅಧೀಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ತಂದೆ ಧೀರು ಭಾಯಿ ಅಂಬಾನಿ (Dhirubai Ambani) ನಿಧನದ ನಂತರ ಆಸ್ತಿಗಾಗಿ ಅಂಬಾನಿ ಕುಟುಂಬದಲ್ಲಿ ನಡೆದಂತಹ ಒಳ ಜಗಳದ ಪುನರಾವರ್ತನೆಯನ್ನು ತಪ್ಪಿಸಲು ಮುಖೇಶ್‌ ತಮ್ಮ ಉತ್ತರಾಧಿಕಾರವನ್ನು ಟ್ರಸ್ಟ್‌ಗೆ (Trust) ಹಸ್ತಾಂತರಿಸಲು ನಿರ್ಧರಿಸಿದ್ದಾರೆ.

ಈ ಟ್ರಸ್ಟ್‌ನ ಸಂಪೂರ್ಣ ನಿಯಂತ್ರಣವು ರಿಲಯನ್ಸ್‌ ಇಂಡಸ್ಟ್ರೀಸ್‌ (reliance Industries) ಬಳಿ ಇರಲಿದ್ದು, ಇದು ಮುಖೇಶ್‌ ಪತ್ನಿ ನೀತಾ ಅಂಬಾನಿ (Neetha Ambani) ಮತ್ತು ಮೂವರು ಮಕ್ಕಳಾದ ಇಶಾ (Isha), ಆಕಾಶ್‌ ಮತ್ತು ಅನಂತ್‌ ಸೇರಿದಂತೆ ಎಲ್ಲ ಕುಟುಂಬದ ಸದಸ್ಯರನ್ನು ಒಳಗೊಳ್ಳಲಿದೆ. ರಿಲಯನ್ಸ್‌ ವ್ಯವಹಾರ (Business) ನೋಡಿಕೊಳ್ಳುವ ಘಟಕ ಮಂಡಳಿಯಲ್ಲಿ ಮುಖೇಶ್‌ನ ನಿಕಟ ಸಹವರ್ತಿಗಳನ್ನು ಸಹ ಇರಲಿದ್ದಾರೆ. ಜೊತೆಗೆ ಕುಟುಂಬಸ್ಥರ ಹೊರತಾಗಿ ಕಂಪನಿಯ ಮುಖ್ಯ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿರುವ ಹೊರಗಿನ ವ್ಯಕ್ತಿಪರರು ಕೂಡ ಟ್ರಸ್ಟ್‌ನ ಭಾಗವಾಗಿರಲಿದ್ದಾರೆ.

ಒಂದೇ ದಿನದಲ್ಲಿ 70 ಸಾವಿರ ಕೋಟಿ ನಷ್ಟ  : ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಸೌದಿ ಅರಾಮ್ಕೊ ನಡುವಿನ ಒಪ್ಪಂದ ರದ್ದುಗೊಳಿಸಲಾಗಿದೆ ((Reliance Industries and Saudi Aramco Deal Cancelled) ಎಂಬ ಸುದ್ದಿ ಹೊರ ಬಂದ ಬಳಿಕ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮೌಲ್ಯ ಭಾರೀ ಕುಸಿತ ಕಂಡಿದೆ. ಹೂಡಿಕೆದಾರರ ಜೊತೆಗೆ, ರಿಲಯನ್ಸ್ ಇಂಡಸ್ಟ್ರೀಸ್‌ನ (Reliance Industries) ಮಾರುಕಟ್ಟೆ ಕ್ಯಾಪ್ ಸಹ 70 ಸಾವಿರ ಕೋಟಿ ರೂಪಾಯಿಗಳಷ್ಟು ಕಡಿಮೆಯಾಗಿದೆ, ಇದರ ಬೆನ್ನಲ್ಲೇ ಕಂಪನಿಯ ಮಾರುಕಟ್ಟೆ ಮೌಲ್ಯ (Reliance Industries Market Cap) ) 15 ಲಕ್ಷ ಕೋಟಿ ರೂಪಾಯಿಗಳಿಗಿಂತ ಕಡಿಮೆಗೊಂಡಿದೆ. ರಿಲಯನ್ಸ್ ಷೇರುಗಳ ಮಹಾ ಕುಸಿತದ ಪರಿಣಾಮ ಇಡೀ ಷೇರು ಮಾರುಕಟ್ಟೆಯ ಮೇಲೂ ಕಂಡುಬಂದಿದೆ ಎಂಬುವುದು ಉಲ್ಲೇಖನೀಯ. ಇಂದು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ (Bombay Stock and National Exchange) ಪ್ರಮುಖ ಸೂಚ್ಯಂಕಗಳು ಸುಮಾರು ಶೇಕಡಾ 2ರಷ್ಟು ಕುಸಿತದೊಂದಿಗೆ ವ್ಯವಹಾರ ಮುಗಿಸಿವೆ.

ರಿಲಯನ್ಸ್ ಷೇರುಗಳಲ್ಲಿ ಭಾರೀ ಕುಸಿತ :  ಇಂದು ರಿಲಯನ್ಸ್ ಷೇರುಗಳಲ್ಲಿ (Reliance Industries) ದಾಖಲೆಯ ಕುಸಿತ ಕಂಡು ಬಂದಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ಪ್ರಮುಖ ಸೂಚ್ಯಂಕ ಸೆನ್ಸೆಕ್ಸ್‌ನಲ್ಲಿ (Sensex) ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇಕಡಾ 4.42 ರಷ್ಟು ಕುಸಿದು ಅಂದರೆ, 109.35 ರೂಪಾಯಿಯಷ್ಟು ಇಳಿಕೆಯಾಗಿ ದಿನದಂತ್ಯಕ್ಕೆ 2363.40 ರೂ. ತಲುಪಿದೆ. ವಹಿವಾಟಿನ ಅವಧಿಯಲ್ಲಿ ಕಂಪನಿಯ ಷೇರು 2351 ರೂ.ಗೆ ತಲುಪಿತ್ತು. ಅದಕ್ಕೂ ಮೊದಲು ಕಂಪನಿಯ ಷೇರುಗಳು 2440 ರೂ.ನಲ್ಲಿ ವಹಿವಾಟು ಆರಂಭಿಸಿದ್ದವು. ಶುಕ್ರವಾರ ಪ್ರತಿ ಷೇರಿಗೆ 2472.75 ರೂ. ಆಗಿತ್ತು. 

ಮಾರುಕಟ್ಟೆ ಬಂಡವಾಳದಿಂದಾಗಿ ಸುಮಾರು 70 ಸಾವಿರ ಕೋಟಿ ನಷ್ಟ :  ಕಂಪನಿಯ ಷೇರುಗಳ ಕುಸಿತದಿಂದಾಗಿ ಕಂಪನಿಯ ಮಾರುಕಟ್ಟೆ ಕ್ಯಾಪ್ (Market Cap) ಭಾರೀ ನಷ್ಟವನ್ನು ಅನುಭವಿಸಿದೆ. ಮಾರುಕಟ್ಟೆ ಮುಚ್ಚುವ ಹೊತ್ತಿಗೆ, ಕಂಪನಿಯ ಮಾರುಕಟ್ಟೆ ಮೌಲ್ಯವು ಸುಮಾರು 70 ಸಾವಿರ ಕೋಟಿ ರೂ.ನಿಂದ 15 ಲಕ್ಷ ಕೋಟಿ ರೂ.ಗಿಂತ ಕೆಳಗಿಳಿದಿದೆ. ಅಂಕಿಅಂಶಗಳ ಬಗ್ಗೆ ಗಮನಿಸುವುದಾದರೆ, ಶುಕ್ರವಾರದಂದು ಕಂಪನಿಯ ಮಾರುಕಟ್ಟೆ ಮೌಲ್ಯವು 15,68,550.17 ಕೋಟಿ ರೂ.ಗಳಷ್ಟಿತ್ತು, ಇದು ಇಂದು ರೂ.14,99,185.71 ಕೋಟಿಗೆ ಇಳಿದಿದೆ. ಅಂದರೆ ಕಂಪನಿಯ ಮಾರುಕಟ್ಟೆ ಮೌಲ್ಯ 69,364.46 ರೂ.ಗಳಷ್ಟು ಇಳಿಕೆಯಾಗಿದೆ.

ಕಳೆದ ವಾರ 76 ಸಾವಿರ ಕೋಟಿ ನಷ್ಟವಾಗಿತ್ತು : ಕಳೆದ ವಾರವೂ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳಲ್ಲಾದ ಗಮನಾರ್ಹ ಕುಸಿತದಿಂದಾಗಿ ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು 76 ಸಾವಿರ ಕೋಟಿ ರೂ. ಕುಸಿತವಾಗಿತ್ತು. ಅಂದರೆ ಕಳೆದ ವಾರದ ನಷ್ಟ ಮತ್ತು ಇಂದಿನ ನಷ್ಟವನ್ನು ಸೇರಿಸಿದರೆ 1.46 ಲಕ್ಷ ಕೋಟಿ ರೂ. ತಜ್ಞರ ಅನ್ವಯ ರಿಲಯನ್ಸ್ ಷೇರುಗಳಲ್ಲಿ ಇನ್ನೂ ಸ್ವಲ್ಪ ಇಳಿಕೆಯಾಗಬಹುದು ಎನ್ನಲಾಗದೆ. ಆದರೆ ಸ್ಟಾಕ್ ಮಾರುಕಟ್ಟೆಯ ತಜ್ಞರು ಇನ್ನೂ ಈ ಸ್ಟಾಕ್ನಲ್ಲಿ ತಮ್ಮ ನಂಬಿಕೆ ಇರಿಸಿದ್ದಾರೆ.

ಇಂದು ಹೂಡಿಕೆದಾರರು ನಷ್ಟ : ಇನ್ನು ಹೂಡಿಕೆದಾರರ ಬಗ್ಗೆ ಗಮನಿಸುವುದಾದರೆ, ಅವರು ದೊಡ್ಡ ನಷ್ಟವನ್ನು ಅನುಭವಿಸಿದ್ದಾರೆ. ಇಂದು ಕಂಪನಿಯು ತನ್ನ ಒಂದು ಷೇರಿನಲ್ಲಿ 109.35 ರೂ.ಗಳನ್ನು ಕಳೆದುಕೊಂಡಿದೆ. ಹೂಡಿಕೆದಾರರು 1,000 ಷೇರುಗಳನ್ನು ಹೊಂದಿದ್ದರೆ, ಅವರು ರೂ 1,09,350 ನಷ್ಟವನ್ನು ಅನುಭವಿಸುತ್ತಾರೆ. ಕಳೆದ ವಾರಕ್ಕೆ ಈ ನಷ್ಟವನ್ನು ಸೇರಿಸಿದರೆ, ಅದು ಇನ್ನೂ ದೊಡ್ಡದಾಗಿರುತ್ತದೆ.

Follow Us:
Download App:
  • android
  • ios