Asianet Suvarna News Asianet Suvarna News

World Diabetes Day| 'ಮಧುಮೇಹಕ್ಕೆ ಯೋಗವೇ ಪರಿಹಾರ'

*  ಇಂದು ಮಧುಮೇಹ ದಿನ
*  ವಿವಿಧ ಸಂಶೋಧನೆಯಲ್ಲಿ ಸಾಬೀತು
*  ಕೆಟ್ಟ ಆಹಾರ, ಜೀವನ ಶೈಲಿ ಸಕ್ಕರೆ ಕಾಯಿಲೆ ಆಹ್ವಾನ
 

Yoga is the Cure for Diabetes Says  Dr. HR Nagendra grg
Author
Bengaluru, First Published Nov 14, 2021, 2:07 PM IST
  • Facebook
  • Twitter
  • Whatsapp

ಬೆಂಗಳೂರು(ನ.14):  ಮನುಕುಲವನ್ನು ಅತಿ ಹೆಚ್ಚಾಗಿ ಕಾಡುತ್ತಿರುವ ಮಧುಮೇಹ (Diabetes) ಅಥವಾ ಸಕ್ಕರೆ ಕಾಯಿಲೆ ಬಾರದಂತೆ ತಡೆಯಲು ಹಾಗೂ ಈಗಾಗಲೇ ಡಯಾಬಿಟಿಸ್‌ ಇರುವವರು ನಿಯಂತ್ರಣದಲ್ಲಿಟ್ಟುಕೊಳ್ಳಲು ಯೋಗಾಭ್ಯಾಸ(Yoga) ಒಂದೇ ಜಗತ್ತಿನ ಔಷಧ ರಹಿತ ಪರಿಹಾರ.

ಇಂದು ವಿಶ್ವ ಡಯಾಬಿಟಿಸ್‌ ದಿನ(World Diabetes Day). ಪ್ರತಿಯೊಬ್ಬ ಭಾರತೀಯನೂ(Indian) ಮಧುಮೇಹದ ಬಗ್ಗೆ ಜಾಗೃತಗೊಳ್ಳಬೇಕಾದ ದಿನ. ಮನುಷ್ಯ ಮೊದಲಿನಿಂದಲೇ ಜೀವನದಲ್ಲಿ ನಿತ್ಯ ಯೋಗಾಭ್ಯಾಸ ರೂಢಿಸಿಕೊಂಡರೆ ಮಧುಮೇಹ ಬಾರದಂತೆ ತಡೆಯಬಹುದು. ಮಧುಮೇಹ ಬರಬಹುದಾದ ಹಂತದಲ್ಲಿರುವವರು (Pre-Diabetes) ಅದನ್ನು ಹಿಮ್ಮೆಟ್ಟಿಸಬಹುದು. ಈಗಾಗಲೇ ಮಧುಮೇಹಕ್ಕೆ ತುತ್ತಾಗಿರುವವರು ಅದನ್ನು ನಿಯಂತ್ರಣದಲ್ಲಿಟ್ಟು ಕೊಂಡು ಅದರಿಂದ ಇನ್ನಿತರೆ ಆರೋಗ್ಯ(Health) ಸಮಸ್ಯೆಗಳಿಗೆ ತುತ್ತಾಗುವುದನ್ನು ತಪ್ಪಿಸಬಹುದು. ಇದು ಈಗಾಗಲೇ ನಡೆದಿರುವ ಬಹಳಷ್ಟು ಯೋಗ ಸಂಶೋಧನೆಗಳಲ್ಲಿ(Yoga Research) ಸಾಬೀತಾಗಿದೆ ಎನ್ನುತ್ತಾರೆ ದೇಶದ ಪ್ರಮುಖ ಯೋಗ ವಿಶ್ವವಿದ್ಯಾಲಯಗಳಲ್ಲಿ(Yoga University) ಒಂದಾದ ಜಿಗಣಿ ಬಳಿಯ ಎಸ್‌-ವ್ಯಾಸ ವಿಶ್ವವಿದ್ಯಾಲಯದ(ಸ್ವಾಮಿ ವಿವೇಕಾನಂದ ಯೋಗ ಅನುಸಂದಾನ ಸಂಸ್ಥಾನ) ಕುಲಪತಿ ಡಾ. ಎಚ್‌.ಆರ್‌.ನಾಗೇಂದ್ರ(Dr. HR Nagendra).

Warning Signs of Diabetes: ಈ 11 ರೋಗಲಕ್ಷಣಗಳು ಮಧುಮೇಹದ ಚಿಹ್ನೆಗಳಾಗಿರಬಹುದು ಎಚ್ಚರ

ಮಧುಮೇಹಕ್ಕೆ ನಾಲ್ಕು ಕಾರಣ: 

ಕೆಟ್ಟ ಆಹಾರ ಪದ್ಧತಿ(Eating Habit)ಮತ್ತು ಜೀವನ ಶೈಲಿ, ಒತ್ತಡ ಮತ್ತು ದೇಹಕ್ಕೆ ವ್ಯಾಯಾಮ(Exercise) ಇಲ್ಲದಿರುವುದು ಮಧುಮೇಹ ಬರಲು ಪ್ರಮುಖ ಕಾರಣಗಳಾಗಿವೆ. ನಿತ್ಯವೂ ಯೋಗಾಭ್ಯಾಸ ಮಾಡುವುದರಿಂದ ಮಧುಮೇಹ ಬಾರದಂತೆ ತಡೆಯಬಹುದು. ಜತೆಗೆ ರಕ್ತದಲ್ಲಿ(Blood) ಸಕ್ಕರೆ ಅಂಶ ಊಟಕ್ಕೆ ಮುಂಚೆ 100ರಿಂದ 124 ಮಿ.ಗ್ರಾಂ/ಡಿಎಲ್‌, ಊಟದ ನಂತರ 140ಮಿ.ಗ್ರಾಂ/ಡಿಎಲ್‌ ಇರುವುದು ಕಂಡುಬಂದರೆ ಅಂತಹವರಿಗೆ ಭವಿಷ್ಯದಲ್ಲಿ ಮಧುಮೇಹ ಬರುವ ಸಾಧ್ಯತೆಯಿರುತ್ತದೆ ಎಂದು ಎಸ್‌-ವ್ಯಾಸ ನಡೆಸಿರುವ ಅನೇಕ ಸಂಶೋಧನೆಗಳಲ್ಲಿ ಖಚಿತಪಟ್ಟಿದೆ ಎಂದು ಯೋಗ ವೈದ್ಯರು ತಿಳಿಸಿದ್ದಾರೆ.

600ಕ್ಕೂ ಹೆಚ್ಚು ಸಂಶೋಧನೆ

ಯೋಗಾಭ್ಯಾಸ ಕೇವಲ ಮಧುಮೇಹ ತಡೆಗೆ ಮಾತ್ರವಲ್ಲದೆ, ಬಹುತೇಕ ಸಾಕಷ್ಟು ರೋಗಗಳು(Diseases) ಬಾರದಂತೆ ತಡೆಯಲು ಹಾಗೂ ರೋಗ ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಕಾರಯಾಗಿದೆ. ಈ ನಿಟ್ಟಿನಲ್ಲಿ ಎಸ್‌-ವ್ಯಾಸ ಈಗಾಗಲೇ ನಡೆಸಿರುವ 600ಕ್ಕೂ ಹೆಚ್ಚು ಸಂಶೋಧನೆಗಳಲ್ಲಿ ಸಾಬೀತಾಗಿದೆ. ಅತ್ಯಂತ ಸ್ವಾಸ್ತ್ಯ ಮತ್ತು ಆರೋಗ್ಯಪೂರ್ಣ ಜೀವನಕ್ಕೆ ಯೋಗ ಔಷಧರಹಿತ ಪರಿಹಾರ ಕ್ರಮವಾಗಿದೆ. ವಿವಿಯಲ್ಲಿ ಯೋಗದಿಂದ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕೆ ನಿಯಂತರ ಸಂಶೋಧನೆಗಳು ನಡೆಯುತ್ತಿದೆ ಎಂದು ಇಲ್ಲಿನ ಯೋಗ ಸಂಶೋಧನಾ ಕೇಂದ್ರದ ಡಾ. ಎನ್‌.ಕೆ.ಮಂಜುನಾಥ್‌ ಹೇಳುತ್ತಾರೆ.

ಯೋಗ-ಆಯುರ್ವೇದ ನ್ಯಾಚುರೋಪತಿ ಚಿಕಿತ್ಸೆ

ಮಧುಮೇಹ, ಬೆನ್ನು ನೋವು(Back Pain), ನರರೋಗ(Neuropathy), ಸ್ಟ್ರೋಕ್‌(Stroke) ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಎಸ್‌-ವ್ಯಾಸದಲ್ಲಿ ಬೇರೆ ಬೇರೆ ಮಾದರಿಯ ಯೋಗ ಚಿಕಿತ್ಸೆಗಳು ಲಭ್ಯವಿದೆ. ಜತೆಗೆ ಆಯುರ್ವೇದ(Ayurveda), ನ್ಯಾಚುರೋಪತಿ(Naturopathy ಸೇರಿದಂತೆ ಇನ್ನು ಕೆಲ ದೇಸೀ ಪದ್ಧತಿ ಚಿಕಿತ್ಸೆಗಳು ಲಭ್ಯವಿದೆ. ಎಲ್ಲದಕ್ಕೂ ಪ್ರತ್ಯೇಕ ವಿಭಾಗಗಳಿದ್ದು, ಆಸಕ್ತರು ವಿವಿಯ ಸೂಕ್ತ ವಿಭಾಗದಲ್ಲಿ ದಾಖಲಾತಿ ನಿಗದಿತ ಶುಲ್ಕ ಪಾವತಿಸಿ ಕನಿಷ್ಠ 6 ದಿನಗಳಿಂದ ತಿಂಗಳ ಕಾಲದವರೆಗೆ ತಮಗೆ ಸೂಕ್ತ ಚಿಕಿತ್ಸೆ(Treatment) ಪಡೆದುಕೊಳ್ಳುವ ಅವಕಾಶವೂ ಇದೆ. ಯೋಗ ಥೆರಪಿ, ಮಣ್ಣು, ನೀರಿನ ಥೆರಪಿ, ಕ್ಲಿನಿಕಲ್‌ ನ್ಯಾಚುರೋಪತಿ, ಆಕ್ಯುಪಂಚರ್‌(Acupuncture), ಆಕ್ಯುಪ್ರೆಷರ್‌(Acupressure), ಮಾನ್ಯುಪುಲೇಟ್‌ ಥೆರಪಿ(Manipulate Therapy) ಸೇರಿದಂತೆ ಸಾಕಷ್ಟು ದೇಸೀ ಚಿಕಿತ್ಸಾ ವಿಧಾನಗಳು ಇಲ್ಲಿ ಲಭ್ಯವಿದೆ ಎಂದು ಎಸ್‌-ವ್ಯಾಸದ ಆರೋಗ್ಯಧಾಮ ಉಸ್ತುವಾರಿ ಡಾ. ಅಮಿತ್‌ ಸಿಂಗ್‌ ವಿವರಿಸಿದರು.

Pain and Causes: ಕಾಲಲ್ಲಿ ನೋವು ಕಾಣಿಸಿಕೊಂಡಿದೆಯೇ? ಹಾಗಿದ್ರೆ ಈ ಭಯಾನಕ ರೋಗ ಕಾಡಬಹುದು

ನ.15ರಂದು ಮಧುಮೇಹ ತಡೆ ಜನಜಾಗೃತಿ ಕಾರ್ಯಕ್ರಮ

ಮಂಗಳೂರು(Mangaluru): ಕೆಎಂಸಿ ಆಸ್ಪತ್ರೆ(KMC Hospital) ಅತ್ತಾವರದಲ್ಲಿ ಮಧುಮೇಹ ನಿರ್ವಹಣೆ ಮತ್ತು ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಕಾರ್ಯಕ್ರಮ ಹಾಗೂ ಉಚಿತ ಬಿ.ಪಿ., ಬ್ಲಡ್‌ ಶುಗರ್‌ ಮತ್ತು ಮೂಳೆ ಸಾಂದ್ರತೆ ತಪಾಸಣೆ ಶಿಬಿರ ನ.15ರಂದು ಆಸ್ಪತ್ರೆಯ 7ನೇ ಮಹಡಿಯ ಸಂಜೀವಿನಿ ಸಭಾಂಗಣದಲ್ಲಿ ನಡೆಯಲಿದೆ.

ಮಧುಮೇಹದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು(Awareness Program) ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ಅಸೋಸಿಯೇಟ್‌ ಪೊ›ಫೆಸರ್‌ ಆಫ್‌ ಮೆಡಿಸಿನ್‌ ಮತ್ತು ಜೀರಿಯಾಟ್ರಿಕ್‌ ಕನ್ಸಲ್ಟೆಂಟ್‌ (ಹಿರಿಯ ನಾಗರಿಕರ ತಜ್ಞೆ)ಆಗಿರುವ ಡಾ. ಶೀತಲ್‌ರಾಜ್‌ ಮತ್ತು ಆಸ್ಪತ್ರೆಯ ಆಹಾರ ತಜ್ಞೆ ಮನಿಷಾ ನಡೆಸಿಕೊಡಲಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಉಚಿತವಾಗಿ ಬಿ.ಪಿ., ಬ್ಲಡ್‌ ಶುಗರ್‌ ಪರೀಕ್ಷೆ ಜೊತೆಗೆ ಮೂಳೆ ಸಾಂದ್ರತೆಯ ತಪಾಸಣೆ ನಡೆಸಲಾಗುವುದು. ವಿವರಕ್ಕೆ ದೂರವಾಣಿ ಸಂಖ್ಯೆ 7022078002ಕ್ಕೆ (ಬೆಳಗ್ಗೆ 9ರಿಂದ 5ರ ವರೆಗೆ) ಕರೆಮಾಡಿ ತಮ್ಮ ಹೆಸರು ನೋಂದಾಯಿಸಬೇಕು ಎಂದು ಕೆಎಂಸಿ ಅತ್ತಾವರದ ವೈದ್ಯಕೀಯ ಅಧೀಕ್ಷಕ ಡಾ. ಜಾನ್‌ ರಾಮಪುರಮ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Follow Us:
Download App:
  • android
  • ios