Asianet Suvarna News Asianet Suvarna News

ಮೆಟ್ರೋ ಕೋಚ್‌ನಲ್ಲಿ ಗೀಚಿದ ನಾಲ್ವರು ಇಟಲಿಯನ್ ಪ್ರಜೆಗಳ ಬಂಧನ

ಸಿಕ್ಕ ಸಿಕ್ಕ ಗೋಡೆಯಲ್ಲಿ ಶಾಲೆಯ ಬೆಂಚಿನಲ್ಲಿ, ಬಂಡೆ ಕಲ್ಲುಗಳಲ್ಲಿ, ಬಸ್ ಸೀಟುಗಳಲ್ಲಿ, ಶಾಲೆಯಲ್ಲಿ ಮುಂದೆ ಕೂತ್ತಿದ್ದವರ ಶರ್ಟ್ ಮೇಲೆ ಹೀಗೆ ಎಲ್ಲೆಂದರಲ್ಲಿ ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಮನಸ್ಸಿಗೆ ಅನಿಸಿದ್ದನ್ನು ಗೀಚುವ ಅಭ್ಯಾಸ ನಿಮಗಿದೆಯೇ ಹಾಗಿದ್ರೆ ಈ ಸ್ಟೋರಿ ನೀವು ಓದಲೇಬೇಕು.

Italians arrested, parked coaches, Ahmedabad Metro, graffiti, Apparel Park, Gomtipur, CCTV footage, metro rail service
Author
First Published Oct 5, 2022, 10:45 AM IST

ಅಹ್ಮದಾಬಾದ್: ಸಿಕ್ಕ ಸಿಕ್ಕ ಗೋಡೆಯಲ್ಲಿ ಶಾಲೆಯ ಬೆಂಚಿನಲ್ಲಿ, ಬಂಡೆ ಕಲ್ಲುಗಳಲ್ಲಿ, ಬಸ್ ಸೀಟುಗಳಲ್ಲಿ, ಶಾಲೆಯಲ್ಲಿ ಮುಂದೆ ಕೂತ್ತಿದ್ದವರ ಶರ್ಟ್ ಮೇಲೆ ಹೀಗೆ ಎಲ್ಲೆಂದರಲ್ಲಿ ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಮನಸ್ಸಿಗೆ ಅನಿಸಿದ್ದನ್ನು ಗೀಚುವ ಅಭ್ಯಾಸ ನಿಮಗಿದೆಯೇ ಹಾಗಿದ್ರೆ ಈ ಸ್ಟೋರಿ ನೀವು ಓದಲೇಬೇಕು. ಹೀಗೆ ಗೀಚಲು ಹೋಗಿ ಸಿಕ್ಕಾಕಿಕೊಂಡ ನಾಲ್ವರು ಇಟಲಿ ಪ್ರಜೆಗಳನ್ನು ಅಹ್ಮದಾಬಾದ್ ಪೊಲೀಸರು ಕಂಬಿ ಹಿಂದೆ ಕೂಡಿಸಿದ್ದಾರೆ. 

ಗುಜರಾತ್‌ನ ಅಹ್ಮದಾಬಾದ್‌ನ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಗೋಮಿತ್‌ಪುರದ ಅಪರೆಲ್ ಪಾರ್ಕ್‌ನಲ್ಲಿ, ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಮೆಟ್ರೋ ರೈಲಿನ ಕೋಚ್‌ಗಳ ಮೇಲೆ ಇವರು ಗೀಚಿದ್ದಾರೆ. ಇವರ ಕೃತ್ಯ ಅಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿತ್ತು. ಹೀಗಾಗಿ ಸಿಸಿ ಕ್ಯಾಮರಾದಲ್ಲಿ (CCTV footage) ಇವರ ಚಹರೆ ಗಮನಿಸಿ ಕಾರ್ಯಾಚರಣೆಗೆ ಇಳಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಕಳೆದ ಶುಕ್ರವಾರ ಈ ಘಟನೆ ನಡೆದಿದೆ. ಇದೇ ಸಂದರ್ಭದಲ್ಲಿ ಅಹ್ಮದಾಬಾದ್‌ (Ahmedabad) ನಗರದ ಇನ್ನೊಂದು ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲ ಹಂತದ ಮೆಟ್ರೋ ರೈಲು ಸೇವೆಯನ್ನು ಉದ್ಘಾಟಿಸಿದ್ದರು. 

ಮೆಟ್ರೋ ಹಳಿ ಮೇಲೆ ಬಿದ್ದು ವಿಲ ವಿಲ ಒದ್ದಾಡ್ತಿದ್ದವನ ರಕ್ಷಿಸಿದ ಯುವಕ : ವಿಡಿಯೋ

ಈ ಆರೋಪಿಗಳಲ್ಲಿ ಮೂವರು ಮಧ್ಯರಾತ್ರಿ 2.37 ರಿಂದ 2.52 ರ ಸಮಯದಲ್ಲಿ ಗೋಮತಿಪುರದ (Gomtipur) ಮೆಟ್ರೋ ರೈಲಿನ ಅಪೆರೆಲ್ ಪಾರ್ಕ್ (Apparel Park) ಡಿಪೋದ ಗೋಡೆ ಹಾರಿದ್ದಾರೆ. ನಂತರ ಅವರು T-14 ಮತ್ತು T-15 ಎಂಬ ಎರಡು ನಿಂತಿದ್ದ ಮೆಟ್ರೋ ಕೋಚ್‌ಗಳ ನಡುವಿನ ಖಾಲಿ ಜಾಗಕ್ಕೆ ಬಂದಿದ್ದಾರೆ. ನಂತರ ಎರಡೂ ಕೋಚ್‌ಗಳ ಹೊರಭಾಗದಲ್ಲಿ ವಿವಿಧ ಬಣ್ಣಗಳಲ್ಲಿ TATA ಎಂದು ಬರೆದಿದ್ದಾರೆ. ನಂತರ ಎರಡು ಮೆಟ್ರೋ ಕೋಚ್‌ಗಳ ನಡುವಿನ ವಿದ್ಯುತ್ ಕಂಬಗಳ ಮೇಲೆಯೂ TAS ಎಂದು ಬರೆದಿದ್ದಾರೆ. ಈ ಮೂಲಕ ಸಾರ್ವಜನಿಕ ಆಸ್ತಿಗೆ (public property) ಸುಮಾರು 50,000 ರೂ.ಗಳಷ್ಟು ಹಾನಿ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ(FIR) ಉಲ್ಲೇಖಿಸಲಾಗಿದೆ.

ಹೀಗೆ ಗೀಚಿದ ಆರೋಪಿಗಳನ್ನು 24 ವರ್ಷದ ಕುಡಿನಿ ಜಿಯಾನ್ಲುಕಾ ಇಟಾಲಿನಾ, 29 ವರ್ಷದ ಬಾಲ್ಡೋ ಸಚಾ ಇಟಾಲಿಯಾ, 21 ವರ್ಷದ ಸ್ಟಾರಿನಿಯರಿ ಡ್ಯಾನಿಲೆಲಿ ಇಟಾಲಿಯಾ ಹಾಗೂ 27 ವರ್ಷದ  ಕ್ಯಾಪೆಸಿ ಪಾವೊಲೊ ಇಟಾಲಿಯಾನಾ ಎಂದು ಗುರುತಿಸಲಾಗಿದೆ. ವಿಚಾರಣೆಯ ಸಮಯದಲ್ಲಿ, ಯುರೋಪ್ (Europe) ಮತ್ತು ಅಮೆರಿಕಾದಲ್ಲಿ (America)  ಇಂತಹ ಗೀಚುವ ಹುಚ್ಚು ಹೆಚ್ಚಾಗಿದ್ದು, ಅದರಿಂದ ಪ್ರೇರಣೆಗೊಂಡು ಇವರು ಭಾರತದಲ್ಲೂ ಈ ರೀತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇವರು ಗ್ರಾಫಿಟಿ-ಏರೋಸಾಲ್ ಪೇಂಟಿಂಗ್‌ ಎಂದು ಕರೆಯಲ್ಪಡುವ ಗೀಚುವ ಹುಚ್ಚಿನ ಗೀಳು ಹೊಂದಿದ್ದು, ಅವಕಾಶ ಸಿಕ್ಕಲೆಲ್ಲಾ ತಮ್ಮ ಈ 'ಕಲೆ' ಪ್ರದರ್ಶಿಸಿ ಖುಷಿ ಪಡುತ್ತಾರೆ ಎಂದು ಪೊಲೀಸರು ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆ ತಿಳಿಸಿದ್ದಾರೆ. 

BMRCL Recruitment 2022: ಫೈರ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ

ಅಹ್ಮದಾಬಾದ್‌ನ ಎಲಿಸ್‌ಬ್ರಿಡ್ಜ್ (Ellisbridge area) ಪ್ರದೇಶದ ವಿಎಸ್ ಆಸ್ಪತ್ರೆಯ ಬಳಿ ಅಪರಾಧ ವಿಭಾಗದ ಪೊಲೀಸ್ ಇನ್‌ಸ್ಪೆಕ್ಟರ್ ಎಚ್‌ಎಂ ವ್ಯಾಸ್ (H M Vyas) ನೇತೃತ್ವದ ತಂಡ ಈ ಗೀಚುವ ಕಲೆಗಾರರನ್ನು ಬಂಧಿಸಿದ್ದಾರೆ! ಇವರಿಂದ ವಿವಿಧ ಬಣ್ಣಗಳ ಸ್ಪೇ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿಸಿಬಿ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಐಪಿಸಿ ಸೆಕ್ಷನ್ 447 (ಕ್ರಿಮಿನಲ್ ಅತಿಕ್ರಮಣ), 427, 34, ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ.
 

Follow Us:
Download App:
  • android
  • ios