ಇಸ್ರೋ ವಿಜ್ಞಾನಿಗಳಿಂದ ತಿರುಪತಿ ದೇಗುಲ ಭೇಟಿ, ಚಂದ್ರಯಾನ ಉಡಾವಣೆ ಯಶಸ್ವಿಗೆ ವಿಶೇಷ ಪೂಜೆ!
ಸಂಪ್ರದಾಯದಂತೆ ಇಸ್ರೋ ವಿಜ್ಞಾನಿಗಳು ಚಂದ್ರಯಾನ-3 ಉಡಾವಣೆಗೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಚಂದ್ರಯಾನ-3 ಉಡಾವಣೆ ಯಶಸ್ವಿಯಾಗಲೆಂದು ಪೂಜೆ ಸಲ್ಲಿಸಿದ್ದಾರೆ. ಇಸ್ರೋ ವಿಜ್ಞಾನಿಗಳು ತಮ್ಮ ಪ್ರತಿ ಉಡಾವಣೆಗೂ ಮುನ್ನ ತಿರುಪತಿಗೆ ತೆರಳಿ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ.
ಶ್ರೀಹರಿಕೋಟಾ(ಜು.13): ಮಹತ್ವಾಕಾಂಕ್ಷಿ ಚಂದ್ರಯಾನ-3 ನೌಕೆ ನಾಳೆ ಮಧ್ಯಾಹ್ನ 2:35:17ಕ್ಕೆ ಉಡಾವಣೆಯಾಗಲಿದೆ. ಮಹತ್ವದ ನೌಕೆ ಯಾವುದೇ ವಿಘ್ನವಿಲ್ಲದೆ ಯಶಸ್ವಿಯಾಗಿ ಉಡಾವಣೆಯಾಗುವಂತೆ ಇಸ್ರೋ ವಿಜ್ಞಾನಿಗಳು ತಿರುಪತಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಚಂದ್ರಯಾನ-3 ವಿಜ್ಞಾನಿಗಳ ತಂಡ ಉಡಾವಣೆ ನೌಕೆಯ ಸಣ್ಣ ಮಾಡೆಲ್‌ನ್ನು ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸಿದ್ದಾರೆ. ನೌಕೆ ಉಡಾವಣೆಗೂ ಮೊದಲು ತಿರುಪತಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ಇದೇ ಮೊದಲಲ್ಲ. ಇಸ್ರೋ ವಿಜ್ಞಾನಿಗಳು ಪ್ರತಿ ಭಾರಿ ನೌಕೆ ಉಡಾವಣೆ ವೇಳೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ.
ಆಂಧ್ರಪ್ರದೇಶದ ತಿರುಪತಿಯ ವೆಂಕಟಾಚಲಪತಿ ದೇವಸ್ಥಾನಕ್ಕೆ ಆಗಮಿಸಿದ ಇಸ್ರೋ ವಿಜ್ಞಾನಿಗಳ ತಂಡ, ಉಡಾವಣೆ ನೌಕೆಯ ಸಣ್ಣ ಮಾಡೆಲ್ ಇಟ್ಟು ದೇವಸ್ಥಾನದಲ್ಲಿ ಪೂಜೆ ನೇರವೇರಿಸಿದ್ದಾರೆ. ಇಸ್ರೋದ ಚಂದ್ರಯಾನ-3 ನೌಕೆ ಯಾವುದೇ ವಿಘ್ನವಿಲ್ಲದೆ ಯಶಸ್ವಿಯಾಗಿ ಉಡಾವಣೆಯಾಗಲು ವಿಜ್ಞಾನಿಗಳು ಪ್ರಾರ್ಥಿಸಿದ್ದಾರೆ.
ಈ ಬಾರಿ ಚಂದ್ರಯಾನದಲ್ಲಿ ಫೇಲ್ಯೂರ್ ಆಧರಿತ ವಿನ್ಯಾಸ: 2019ರ ಸೋಲಿನಿಂದ ಎಚ್ಚೆತ್ತು ಇಸ್ರೋ ಲ್ಯಾಂಡರ್ ನಿರ್ಮಾಣ
ಶುಕ್ರವಾರ ಮಧ್ಯಾಹ್ನ 2 ಗಂಟೆ 35 ನಿಮಿಷ 17 ಸೆಕೆಂಡ್‌ಗೆ ಚಂದ್ರಯಾನ ನೌಕೆಯನ್ನು ಹೊತ್ತ ರಾಕೆಟ್ ಶ್ರೀಹರಿಕೋಟಾದಿಂದ ಉಡಾವಣೆಗೊಳ್ಳಲಿದೆ. ಈ ಉಡಾವಣೆಗೆ ದೇಶೀಯವಾಗಿ ನಿರ್ಮಾಣ ಮಾಡಲಾದ ಲಾಂಚಿಂಗ್ ವಾಹನ ಬಳಸಲಾಗುತ್ತಿದ್ದು, ಲ್ಯಾಂಡರ್ ಮತ್ತು ರೋವರ್‌ಗಳನ್ನು ಸಹ ದೇಶೀಯವಾಗಿ ತಯಾರಿಸಲಾಗಿದೆ. ಲ್ಯಾಂಡರ್ ಆಗಸ್ಟ್‌ನಲ್ಲಿ ಚಂದ್ರನ ಮೇಲೆ ಇಳಿಯಲಿದೆ.
ಇದು ಚಂದ್ರಯಾನ-2 ಯೋಜನೆಯ ಮುಂದುವರೆದ ಭಾಗವಾದ ಕಾರಣ ಈ ಯೋಜನೆಯನ್ನು ಆರ್ಬಿಟರನ್ನು ಕೈಬಿಡಲಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಲು ಇಸ್ರೋ ಸಿದ್ಧತೆ ನಡೆಸಿದ್ದು, ಈ ಬಾರಿ ಸಕಲ ಪೂರ್ವ ತಯಾರಿಯೊಂದಿಗೆ ನೌಕೆಯನ್ನು ಸಿದ್ಧಪಡಿಸಲಾಗಿದೆ.ಚಂದ್ರಯಾನ-2 ಯೋಜನೆಯ ಮುಂದುವರೆದ ಭಾಗವಾದ ಈ ಯೋಜನೆ ಲ್ಯಾಂಡರ್ ಮತ್ತು ರೋವರ್‌ಗಳನ್ನು ಒಳಗೊಂಡಿದ್ದು, ಇದು ಚಂದ್ರನ ಮೇಲೆ ಇಳಿದು ಅಲ್ಲಿನ ಪ್ಲಾಸ್ಮಾ ಪರಿಸರ, ಚಂದ್ರನ ಪರಿಸರದ ಅಧ್ಯಯನ ನಡೆಸಲಿದೆ.
Breaking: ಜುಲೈ 14 ಮಧ್ಯಾಹ್ನ 2.35ಕ್ಕೆ ಚಂದ್ರಯಾನ-3 ಉಡ್ಡಯನ: ಇಸ್ರೋ ಅಧಿಕೃತ ಘೋಷಣೆ
ಈ ಮುನ್ನ ಜು.13ರಂದು ಉಡ್ಡಯನಕ್ಕೆ ಇಸ್ರೋ ನಿರ್ಧರಿಸಿತ್ತು. ಆದರೆ ಕಲ ತಾಂತ್ರಿಕ ಕಾರಣ ಹಾಗೂ ಹವಾಮಾನ ಕಾರಣದಿಂದ ದಿನಾಂಕ ಬದಲಾವಣೆ ಮಾಡಲಾಗಿತ್ತು. ಇದೀಗ ಜುಲೈ 14ರಂದು ಚಂದ್ರಯಾನ ಬಾಹ್ಯಾಕಾಶದತ್ತ ಚಿಮ್ಮಲಿದೆ. ಇದಕ್ಕಾಗಿ ಎಲ್ಲಾ ತಯಾರಿ ಮಾಡಲಾಗಿದೆ. ಚಂದ್ರಯಾನ 3 ನೌಕೆಯನ್ನು ಒಳಗೊಂಡ ಭಾಗವನ್ನು ಎಲ್‌ವಿಎಂ3 ರಾಕೆಟ್‌ಗೆ ಯಶಸ್ವಿಯಾಗಿ ಜೋಡಿಸಲಾಗಿದೆ. ಕಳೆದೊಂದು ವಾರದಿಂದ ಸಕಲ ಸಿದ್ಧತೆ ಮಾಡಿಕೊಂಡು ರಿಹರ್ಸಲ್ ಮಾಡಲಾಗಿದೆ.
ಚಂದ್ರಯಾನ 2 ಯೋಜನೆಯಲ್ಲಿ ಲ್ಯಾಂಡರ್ ಕ್ರಾಶ್‌ಲ್ಯಾಂಡ್ ಆಗುವ ಮೂಲಕ ಯೋಜನೆಯ ಅರ್ಧಭಾಗ ವಿಫಲಗೊಂಡಿತ್ತು. ಇದರಲ್ಲಿದ್ದ ಆರ್ಬಿಟರ್ ಇನ್ನೂ ಸಹ ಕೆಲಸ ಮಾಡುತ್ತಿದೆ.