ಇಸ್ರೋ ಮತ್ತೊಂದು ಮೈಲಿಗಲ್ಲು; ಭಾರತದ ಮೊದಲ ಅನಲಾಗ್ ಅಂತರಿಕ್ಷ ಮಿಷನ್ ಕಾರ್ಯಾಚರಣೆ ಶುರು!
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಶುಕ್ರವಾರ ತನ್ನ ಮೊದಲ ಅನಲಾಗ್ ಬಾಹ್ಯಾಕಾಶ ಕಾರ್ಯಾಚರಣೆಯ ಮಿಷನ್ ಅನ್ನು ಲಡಾಖ್‌ನ ಲೇಹ್‌ನಲ್ಲಿ ಆರಂಭಿಸಿದೆ.
ನವದೆಹಲಿ (ನ.2): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಶುಕ್ರವಾರ ತನ್ನ ಮೊದಲ ಅನಲಾಗ್ ಬಾಹ್ಯಾಕಾಶ ಕಾರ್ಯಾಚರಣೆಯ ಮಿಷನ್ ಅನ್ನು ಲಡಾಖ್‌ನ ಲೇಹ್‌ನಲ್ಲಿ ಆರಂಭಿಸಿದೆ.
ಈ ನಿಮಿತ್ತ ಹ್ಯಾಬ್-1 ಎಂಬ ಕಾಂಪ್ಯಾಕ್ಟ್ ಸಾಧನ ಇರಿಸಲಾಗಿದ್ದು, ಇದು ಅಂತರಗ್ರಹಗಳ ಆವಾಸಸ್ಥಾನದಲ್ಲಿ ಜೀವನವನ್ನು ಅನುಕರಿಸಿ ಅಧ್ಯಯನ ಮಾಡುತ್ತದೆ.
ಭವಿಷ್ಯದ ಗಗನಯಾತ್ರಿಗಳು ಭೂಮಿಯ ಆಚೆಗಿನ ಕಾರ್ಯಾಚರಣೆಗಳಲ್ಲಿ ಎದುರಿಸಬಹುದಾದ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಹೊಸ ಮಿಷನ್ ಸಹಾಯ ಮಾಡುತ್ತದೆ ಹಾಗೂ ಭೂಮಿಯ ಆಚೆಯ ಸ್ಥಿತಿಗಳನ್ನು ಈ ಮಿಷನ್‌ನಲ್ಲಿ ಅಧ್ಯಯನ ಮಾಡಲಾಗುತ್ತದೆ.
8 ವರ್ಷಗಳ ಹಿಂದೆ 104 ಸ್ಯಾಟಲೈಟ್‌ಅನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದ್ದ PSLV-C37 ನೌಕೆಯ ಭಾಗ ಭೂಮಿಗೆ ವಾಪಸ್!
ಲಡಾಖ್‌ನಲ್ಲೇಕೆ ಅಧ್ಯಯನ?: ಮಂಗಳ ಮತ್ತು ಚಂದ್ರನ ಭೂದೃಶ್ಯಗಳನ್ನು ಹೋಲುವ ವಿಶಿಷ್ಟ ಭೌಗೋಳಿಕ ಗುಣಲಕ್ಷಣಗಳಿಂದಾಗಿ ಲಡಾಖ್ ಅನ್ನು ಕಾರ್ಯಾಚರಣೆಯ ಸ್ಥಳವಾಗಿ ಆಯ್ಕೆ ಮಾಡಲಾಗಿದೆ. ಅಲ್ಲಿನ ಶೀತ, ಶುಷ್ಕ ಪರಿಸ್ಥಿತಿಗಳು ಮತ್ತು ಹೆಚ್ಚಿನ ಎತ್ತರವು ದೀರ್ಘಾವಧಿಯ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಅಗತ್ಯವಾದ ತಂತ್ರಜ್ಞಾನ ಮತ್ತು ತಂತ್ರಗಳನ್ನು ಪರೀಕ್ಷಿಸಲು ಸೂಕ್ತ ವಾತಾವರಣವನ್ನು ಒದಗಿಸುತ್ತದೆ.