Asianet Suvarna News Asianet Suvarna News

Mysterious Metal Dome: ಆಸ್ಟ್ರೇಲಿಯಾ ಬೀಚ್‌ನಲ್ಲಿ ಪತ್ತೆಯಾದ ನಿಗೂಢ ವಸ್ತು, ಇಸ್ರೋದಿಂದ ಸ್ಪಷ್ಟೀಕರಣ

ಆಸ್ಟ್ರೇಲಿಯಾದ ಬೀಚ್‌ನಲ್ಲಿ ಪತ್ತೆಯಾಗಿರುವ ಲೋಹದ ಗುಮ್ಮಟದಂಥ ನಿಗೂಢ ವಸ್ತುವಿನ ಬಗ್ಗೆ ಇಸ್ರೋ ಅಧ್ಯಕ್ಷ ಬುಧವಾರ ಸ್ಪಷ್ಟೀಕರಣ ನೀಡಿದ್ದಾರೆ. ಇದು ನಮ್ಮದೇ ರಾಕೆಟ್‌ನ ಭಾಗವೆಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಇಸ್ರೋ ಅಧ್ಯಕ್ಷ ತಿಳಿಸಿದ್ದಾರೆ.
 

ISRO Chief S Somanath Clarification On Mysterious Metal Dome Found On Australian Beach san
Author
First Published Jul 19, 2023, 2:46 PM IST

ಬೆಂಗಳೂರು (ಜು.19): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ್ ಅವರು ಆಸ್ಟ್ರೇಲಿಯಾದ ಬೀಚ್‌ನಲ್ಲಿ ಪತ್ತೆಯಾಗಿರುವ ದೈತ್ಯ ಲೋಹದ ಗುಮ್ಮಟವು ಖಂಡಿತವಾಗಿಯೂ ರಾಕೆಟ್‌ನ ಭಾಗವಾಗಿದೆ, ಆದರೆ ಅದನ್ನು ವಿಶ್ಲೇಷಿಸದೆ ಇದು ಭಾರತದ್ದು ಎಂದು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಸೋಮನಾಥ್‌ ಅವರ ಹೇಳಿಕೆಯನ್ನು ಬಿಬಿಸಿ ವರದಿ ಮಾಡಿದ್ದು, ನಾವು ಅದನ್ನು ವಿಶ್ಲೇಷಿಸದ ಹೊರತು ಇದು ನಮ್ಮದೇ ಎಂದು ನಾವು ಖಚಿತಪಡಿಸಲು ಸಾಧ್ಯವಿಲ್ಲ." ಎಂದಿದ್ದಾರೆ.  ಇದಕ್ಕೂ ಮುನ್ನ ವಾರಾಂತ್ಯದಲ್ಲಿ ಪರ್ತ್‌ನ ಉತ್ತರಕ್ಕೆ 250 ಕಿಮೀ (155 ಮೈಲುಗಳು) ದೂರದಲ್ಲಿರುವ ಗ್ರೀನ್ ಹೆಡ್ ಬೀಚ್‌ನಲ್ಲಿ ಲೋಹದ ಗುಮ್ಮಟದಂಥ ನಿಗೂಢ ವಸ್ತು  ಪತ್ತೆಯಾದಾಗಿನಿಂದ ಈ ವಸ್ತುವಿನ ಬಗ್ಗೆ ಊಹಾಪೋಹಗಳು ಇದ್ದವು. ಕಳೆದ ಶುಕ್ರವಾರ ಭಾರತ ತನ್ನ ಚಂದ್ರಯಾನ-3ಯನ್ನು ನಭಕ್ಕೆ ಉಡಾವಣೆ ಮಾಡಿತ್ತು. ರಾಕೆಟ್‌ನ ಬಿಡಿಭಾಗಗಳು ಇದಾಗಿರಬಹುದು ಎಂದು ಹಲವು ಹೇಳಿದ್ದರಾದರೂ, ತಜ್ಞರು ಇದು ಚಂದ್ರಯಾನ ರಾಕೆಟ್‌ನ ಬಿಡಿಭಾಗ ಆಗಿರುವ ಸಾಧ್ಯತೆ ಬಹಳ ಕಡಿಮೆ ಎಂದಿದ್ದರು.

"ಸುಮಾರು 2.5 ಮೀ ಅಗಲ ಮತ್ತು 2.5 ಮೀ ಮತ್ತು 3 ಮೀ ಉದ್ದದ ಸಿಲಿಂಡರಾಕಾರದ ವಸ್ತುವು ಗ್ರೀನ್ ಹೆಡ್ ಬೀಚ್‌ನ ನಿವಾಸಿಗಳಲ್ಲಿ ಸಾಕಷ್ಟು ಕುತೂಹಲವನ್ನು ಉಂಟು ಮಾಡಿತ್ತು' ಎಂದು ವರದಿಯಲ್ಲಿ ತಿಳಿಸಲಾಗಿದೆ. ಅದರೊಂದಿಗೆ ಈ ಅವಶೇಷಗಳು ಎಂಎಚ್‌ 370 ವಿಮಾನದಭಾಗವಾಗಿರಬಹುದು ಎಂದು ಆರಂಭದಲ್ಲಿ ಊಹಿಸಲಾಗಿತ್ತು. 2014ರಲ್ಲಿ 239 ಪ್ರಯಾಣಿಕರನ್ನು ಹೊತ್ತೊಯ್ದಿದ್ದ MH370 ವಿಮಾನ ನಿಗೂಢವಾಗಿ ಕಣ್ಮರೆಯಾಗಿತ್ತು. ಇಂದಿಗೂ ಕೂಡ ಈ ವಿಮಾನದ ಅವಶೇಷಗಳು ಸಿಕ್ಕಿಲ್ಲ. ಅದರ ಭಾಗಗಳು ಇದಾಗಿರಬಹುದು ಎಂದು ಊಹಿಸಲಾಗಿತ್ತು.

ವಿಮಾನಯಾನ ತಜ್ಞರನ್ನು ಉಲ್ಲೇಖಿಸಿ ವರದಿಯು ಈ ವಸ್ತುವು ವಾಣಿಜ್ಯ ವಿಮಾನದಿಂದ ಬಂದಿರಲು ಸಾಧ್ಯವಿಲ್ಲ ಮತ್ತು ಇದು ಬಹುಶಃ ಕೆಲವು ಹಂತದಲ್ಲಿ ಹಿಂದೂ ಮಹಾಸಾಗರಕ್ಕೆ ಬಿದ್ದ ರಾಕೆಟ್‌ನ ಇಂಧನ ಟ್ಯಾಂಕ್ ಆಗಿರಬಹುದು ಎಂದು ಹೇಳಿದೆ. ಆಸ್ಟ್ರೇಲಿಯನ್ ಬಾಹ್ಯಾಕಾಶ ಸಂಸ್ಥೆ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಸಿಲಿಂಡರ್ "ವಿದೇಶಿ ಬಾಹ್ಯಾಕಾಶ ಉಡಾವಣಾ ವಾಹನ" ದಿಂದ ಬಿದ್ದಿರುವ ಸಾಧ್ಯತೆಯಿದೆ ಎಂದಿತ್ತು.

ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಉಡಾವಣೆ ಮಾಡಲು ನಿಯಮಿತವಾಗಿ ಬಳಸುವ ಪಿಎಸ್‌ಎಲ್‌ವಿ - ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ಸ್‌ನ ಇಂಧನ ಟ್ಯಾಂಕ್ ಆಗಿರಬಹುದು ಎನ್ನುವ ಊಹೆಗೆ ಕಾರಣವಾಗಿತ್ತು.

 

ಆಸ್ಟ್ರೇಲಿಯಾದ ರಾತ್ರಿ ಆಕಾಶದಲ್ಲಿ ಕಂಡ ಚಂದ್ರಯಾನ-3, ಫೋಟೋ ವೈರಲ್‌

ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಕಕ್ಷೆಗೆ ಕಳುಹಿಸಲು ಕಳೆದ ಶುಕ್ರವಾರ ಇದೇ ರೀತಿಯ ಟ್ಯಾಂಕ್‌ ಬಳಸಿದ್ದರಿಂದ, ಈ ಟ್ಯಾಂಕ್‌ಗಳು ಅದರದ್ದೇ ಆಗಿರಬಹುದು ಎನ್ನುವ ಊಹೆಗೆ ಕಾರಣವಾಯಿತು. ಆದರೆ, ತಜ್ಞರು ಹೇಳುವ ಪ್ರಕಾರ, ಇದು ಕಳೆದ ಶುಕ್ರವಾರದ ಉಡಾವಣೆ ಆಗಿರುವ ರಾಕೆಟ್‌ನ ಟ್ಯಾಂಕ್‌ ಆಗಿರುವ ಸಾಧ್ಯತೆ ಕಡಿಮೆ. ಯಾಕೆಂದರೆ, ಇದು ಬಹಳ ತಿಂಗಳಿನಿಂದ ನೀರಿನಲ್ಲಿ ಇದ್ದಿರುವ ಸಾಧ್ಯತೆ ಇದೆ. ಅದೇ ಕಾರಣಕ್ಕಾಗಿಇದರ ಭಾಗಗಳು ತುಕ್ಕುಹಿಡಿದ ರೀತಿಯಲ್ಲಿ ಕಂಡಿವೆ ಎಂದಿದ್ದಾರೆ.

ಆಸ್ಟ್ರೇಲಿಯಾ ಬೀಚ್‌ನಲ್ಲಿ ಚಂದ್ರಯಾನ-3 ಅವಶೇಷಗಳು ಪತ್ತೆ? ನಿಗೂಢ ವಸ್ತು ಬಗ್ಗೆ ನೆಟ್ಟಿಗರ ಚರ್ಚೆ

ಇಸ್ರೋ ಅಧ್ಯಕ್ಷ ಸೋಮನಾಥ್‌ ಈ ವಸ್ತುವಿನ ಬಗ್ಗೆ ಇದ್ದ ಕುತೂಹಲಗಳನ್ನು ತಣಿಸಿದ್ದು, ಇದು ಯಾವುದೇ ನಿಗೂಢ ವಸ್ತುವಲ್ಲ. ಇದು ಯಾವುದೋ ಒಂದು ರಾಕೆಟ್‌ನ ಭಾಗ ಎಂದು ದೃಢಪಡಿಸಿದ್ದಾರೆ. "ಇದು ಪಿಎಸ್‌ಎಲ್‌ವಿ ಅಥವಾ ಇನ್ನಾವುದೇ ಆಗಿರಬಹುದು ಮತ್ತು ನಾವು ಅದನ್ನು ನೋಡಿ ಮತ್ತು ವಿಶ್ಲೇಷಿಸದ ಹೊರತು ಅದನ್ನು ಖಚಿತಪಡಿಸಲು ಸಾಧ್ಯವಿಲ್ಲ" ಎಂದು ಅವರು ತಿಳಿಸಿದ್ದಾರೆ.

Follow Us:
Download App:
  • android
  • ios