ಆಸ್ಟ್ರೇಲಿಯಾ ಬೀಚ್‌ನಲ್ಲಿ ಚಂದ್ರಯಾನ-3 ಅವಶೇಷಗಳು ಪತ್ತೆ? ನಿಗೂಢ ವಸ್ತು ಬಗ್ಗೆ ನೆಟ್ಟಿಗರ ಚರ್ಚೆ
ಆಸ್ಟ್ರೇಲಿಯದ ಬಾಹ್ಯಾಕಾಶ ಸಂಸ್ಥೆ ಟ್ವಿಟ್ಟರ್‌ನಲ್ಲಿ ಭಾಗಶಃ ಹಾನಿಗೊಳಗಾದ ನಿಗೂಢ ವಸ್ತುವಿನ ಚಿತ್ರವನ್ನು ಹಂಚಿಕೊಂಡಿದ್ದು, ಇದು ಚಂದ್ರಯಾನ - 3 ಅವಶೇಷ ಇರಬೇಕು ಎಂದು ಟ್ವಿಟ್ಟರ್ ಹಂಚಿಕೊಂಡಿದೆ.
ಸಿಡ್ನಿ (ಜುಲೈ 18, 2023): ಪಶ್ಚಿಮ ಆಸ್ಟ್ರೇಲಿಯಾದ ಜುರಿಯನ್ ಬೇ ಬಳಿಯ ಕಡಲತೀರದಲ್ಲಿ ಪತ್ತೆಯಾದ ನಿಗೂಢ ವಸ್ತುವು ಕುತೂಹಲವನ್ನು ಕೆರಳಿಸಿದೆ.ಇದು ಇಸ್ರೋ ಇತ್ತೀಚೆಗೆ ಉಡಾವಣೆ ಮಾಡಿದ ಚಂದ್ರಯಾನ-3 ಮಿಷನ್‌ನ ಭಾಗವಾಗಿರಬಹುದು ಎಂದು ಹಲವರು ಊಹಿಸಿದ್ದಾರೆ. ಆಸ್ಟ್ರೇಲಿಯ ಬಾಹ್ಯಾಕಾಶ ಸಂಸ್ಥೆ ಪ್ರಸ್ತುತ ಈ ವಸ್ತುವಿನ ಬಗ್ಗೆ ತನಿಖೆ ನಡೆಸುತ್ತಿದೆ ಮತ್ತು ಅದರ ಮೂಲವನ್ನು ನಿರ್ಧರಿಸಲು ಇತರೆ ದೇಶಗಳಿಂದ ಸಹಾಯ ಪಡೆಯುತ್ತಿದೆ.
ಸೋಮವಾರ ಅಸ್ಟ್ರೇಲಿಯದ ಬಾಹ್ಯಾಕಾಶ ಸಂಸ್ಥೆ ಟ್ವಿಟ್ಟರ್‌ನಲ್ಲಿ ಭಾಗಶಃ ಹಾನಿಗೊಳಗಾದ ವಸ್ತುವಿನ ಚಿತ್ರವನ್ನು ಹಂಚಿಕೊಂಡಿದೆ. "ನಾವು ಪ್ರಸ್ತುತ ಪಶ್ಚಿಮ ಆಸ್ಟ್ರೇಲಿಯದ ಜುರಿಯನ್ ಕೊಲ್ಲಿಯ ಸಮುದ್ರತೀರದಲ್ಲಿರುವ ಈ ವಸ್ತುವಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದೇವೆ. ವಸ್ತು ವಿದೇಶಿ ಬಾಹ್ಯಾಕಾಶ ಉಡಾವಣಾ ವಾಹನದಿಂದ ಬಂದಿರಬಹುದು ಮತ್ತು ಹೆಚ್ಚಿನ ಮಾಹಿತಿ ಒದಗಿಸಲು ಸಾಧ್ಯವಾಗುವ ಜಾಗತಿಕ ಇತರೆ ದೇಶಗಳೊಂದಿಗೆ ಹಾಗೂ ಸಂಸ್ಥೆಗಳೊಂದಿಗೆ ನಾವು ಸಂಪರ್ಕ ಹೊಂದಿದ್ದೇವೆ’’ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ವೈರಲ್ ಆಗ್ತಿದ್ದಂತೆ ಕುತೂಹಲಕಾರಿ ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ನಾನಾ ವಿಚಾರಗಳಿಗೆ ಹೋಲಿಸಿದ್ದಾರೆ.
ಇದನ್ನು ಓದಿ: ಪೆಟ್ರೋಲ್ ಟ್ಯಾಂಕ್ ಮೇಲೆ ಕೂತ ಯುವತಿಯಿಂದ ಬೈಕ್ ಸವಾರನಿಗೆ ಅಪ್ಪುಗೆ, ಮುತ್ತುಗಳ ಸುರಿಮಳೆ: ವಿಡಿಯೋ ವೈರಲ್
ಹಲವಾರು ಸಿದ್ಧಾಂತಗಳು ಇತ್ತೀಚೆಗೆ ಉಡಾವಣೆಯಾದ ಭಾರತದ ಚಂದ್ರಯಾನ-3 ಮಿಷನ್‌ನ ಅವಶೇಷಗಳಾಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದಕ್ಕೆ ಸಾಕ್ಷಿಯೆಂಬಂತೆ ನಾನಾ ಹೋಲಿಕೆಗಳನ್ನೂ ಮಾಡಿದ್ದಾರೆ.
"ಪ್ರಾಮಾಣಿಕವಾಗಿ ಹೇಳಬೇಕೆಂದರೆ? @isro ವಾಹನವೇ ಇರಬೇಕು. ಅದು ಅಂತರರಾಷ್ಟ್ರೀಯ ನೀರಿನ ಮೇಲೆ ಯಶಸ್ವಿಯಾಗಿ ಮತ್ತು ಸುರಕ್ಷಿತವಾಗಿ ಉಡಾವಣೆಯಾಯಿತು. ಇಲ್ಲಿ @AusSpaceAgency ನಿರೀಕ್ಷೆ ನಿಖರವಾಗಿ ಏನು?" ಎಂದೂ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ಫೋಟೋಗಳನ್ನು ಹೋಲಿಕೆ ಮಾಡಿದ್ದು ಮತ್ತು ಇದು ಭಾರತದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಮೂರನೇ ಹಂತದ್ದು ಎಂದು ವಾದ ಮಾಡಿದ್ದಾರೆ.
ಇದನ್ನೂ ಓದಿ: ಪ್ರಧಾನಿಯಾಗಲು ಏನ್ ಮಾಡ್ಬೇಕು ಅಂತ ಕೇಳಿದ ಯುವತಿಗೆ ಜೈಶಂಕರ್ ಹೇಳಿದ್ದೇನು? ವಿಡಿಯೋ ವೈರಲ್
ಆದರೂ, ಆಸ್ಟ್ರೇಲಿಯದ ಬಾಹ್ಯಾಕಾಶ ಸಂಸ್ಥೆಯು, ಅವಶೇಷಗಳ ತಗ್ಗಿಸುವಿಕೆ ಸೇರಿದಂತೆ ಬಾಹ್ಯಾಕಾಶ ಚಟುವಟಿಕೆಗಳ ದೀರ್ಘಾವಧಿಯ ಸುಸ್ಥಿರತೆಗೆ ನಾವು ಬದ್ಧರಾಗಿದ್ದೇವೆ ಮತ್ತು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಇದನ್ನು ಹೈಲೈಟ್ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.
ಕಣ್ಮರೆಯಾದ MH370 ಮಲೇಷಿಯಾದ ವಿಮಾನ ಭಾಗಗಳು
2.5 ರಿಂದ 3 ಮೀಟರ್ ಉದ್ದದ ಈ ನಿಗೂಢ ವಸ್ತುವಿನ ಮೇಲೆ ಬಾರ್ನಾಕಲ್‌ಗಳು ಮತ್ತು ಸಮುದ್ರ ಜೀವಿಗಳು ಬೆಳೆಯುತ್ತಿದ್ದವು ಎಂದು ಎಬಿಸಿ ನ್ಯೂಸ್‌ನ ವರದಿ ಹೇಳುತ್ತದೆ.
ಇದನ್ನೂ ಓದಿ: ನರ್ಸ್‌ಗಳ ಜತೆ ಬಜ್ಜಿ ತಿನ್ನೋಕೆ ಆಂಬ್ಯುಲೆನ್ಸ್ ಸೈರನ್ ಹಾಕ್ಕೊಂಡು ಬಂದ ಚಾಲಕ: ವಿಡಿಯೋ ವೈರಲ್
ಮಾರ್ಚ್ 8, 2014 ರಂದು ಕೌಲಾಲಂಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೀನಾದ ಬೀಜಿಂಗ್ ಕ್ಯಾಪಿಟಲ್ ಇಂಟರ್ನ್ಯಾಷನಲ್ ಏರ್‌ಪೋರ್ಟ್‌ಗೆ ತೆರಳಬೇಕಿದ್ದ 227 ಪ್ರಯಾಣಿಕರೊಂದಿಗೆ ನಾಪತ್ತೆಯಾದ MH370 ಮಲೇಷ್ಯಾ ಏರ್‌ಲೈನ್ಸ್ ವಿಮಾನದ ಭಾಗವಾಗಿರಬಹುದೇ ಎಂದು ಹಲವಾರು ಜನರು ಚರ್ಚಿಸಿದ್ದಾರೆ. ಆದರೆ, ವಾಯುಯಾನ ತಜ್ಞ ಜೆಫ್ರಿ ಥಾಮಸ್ ಪ್ರಕಾರ, "ಇದು ಬೋಯಿಂಗ್ 777 ನ ಯಾವುದೇ ಭಾಗವಲ್ಲ ಮತ್ತು ವಾಸ್ತವವೆಂದರೆ MH370 ಒಂಬತ್ತೂವರೆ ವರ್ಷಗಳ ಹಿಂದೆ ಕಳೆದುಹೋಗಿದೆ’’ ಎಂದು ಅವರು ಬಿಬಿಸಿ ನ್ಯೂಸ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ವೈದ್ಯರಿಗೆ ನಕಲಿ 500 ರೂ. ಫೀಸ್ ಕೊಟ್ಟು ಹೋದ ರೋಗಿ: ಮೋಸ ಹೋದ ಬಗ್ಗೆ ಡಾಕ್ಟರ್ ಹೇಳಿಕೊಂಡಿದ್ದು ಹೀಗೆ..