Asianet Suvarna News Asianet Suvarna News

ಆಸ್ಟ್ರೇಲಿಯಾದ ರಾತ್ರಿ ಆಕಾಶದಲ್ಲಿ ಕಂಡ ಚಂದ್ರಯಾನ-3, ಫೋಟೋ ವೈರಲ್‌!

ಆಸ್ಟ್ರೇಲಿಯಾದ ರಾತ್ರಿ ಆಕಾಶದಲ್ಲಿ ಚಂದ್ರಯಾನ-3 ರ ವೈರಲ್ ಚಿತ್ರ ಸೆರೆಯಾಗಿದೆ. ಡೈಲನ್ ಓ'ಡೊನೆಲ್ ಅವರು ಈ ಚಿತ್ರವನ್ನು ಸೆರೆಹಿಡಿದಿದ್ದು, ಇದು ಟ್ವಿಟರ್‌ನಲ್ಲಿ ಜನಪ್ರಿಯತೆಯನ್ನು ಗಳಿಸಿದೆ.

Dylan ODonnell picture of Chandrayaan3 night sky in Australia goes viral san
Author
First Published Jul 16, 2023, 4:51 PM IST

ನವದೆಹಲಿ (ಜು.16): ಆಸ್ಟ್ರೇಲಿಯಾದ ರಾತ್ರಿ ಆಕಾಶದಲ್ಲಿ ಕಂಡ ಚಂದ್ರಯಾನ-3 ರ ಚಿತ್ರವು ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ. ಈ ಚಿತ್ರವನ್ನು ಮಿಚಿಗಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಖಗೋಳಶಾಸ್ತ್ರದ ಉತ್ಸಾಹಿ ಡೈಲನ್ ಒ'ಡೊನೆಲ್ ಅವರು ಟ್ವಿಟರ್‌ ಮೂಲಕ ಹಂಚಿಕೊಂಡಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ಇದರ ವಿವರ ಹಂಚಿಕೊಳ್ಳುವ ವೇಳೆ ಬರೆದುಕೊಂಡಿರುವ ಡೊನೆಲ್‌, ನಾನು ಚಂದ್ರಯಾನ-3ರ ಉಡಾವಣೆಯ ನೇರಪ್ರಸಾರವನ್ನು ಯೂಟ್ಯೂಬ್‌ನಲ್ಲಿ ವೀಕ್ಷಣೆ ಮಾಡಿದ್ದೆ. ಅದಾದ 30 ನಿಮಿಷಗಳ ಬಳಿಕ ರಾತ್ರಿಯ ಆಕಾಶದದಲ್ಲಿ ತನ್ನ ಮನೆಯ ಮೇಲಿದ್ದ ಹಾದುಹೋದ ಚಂದ್ರಯಾನ ನೌಕೆಯ ಚಿತ್ರವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ತಿಳಿಸಿದ್ದಾರೆ. ಈ ಚಿತ್ರದಲ್ಲಿ ಚಂದ್ರಯಾನಸ-3 ನೌಕೆಯು ನೀಲಿ ವರ್ಣವನ್ನು ಹೊಂದಿದ್ದು,  ಮಿನುಗುವ ನಕ್ಷತ್ರಗಳ ಹಿನ್ನೆಲೆಯೊಂದಿಗೆ ನೌಕೆಯ ಉಪಸ್ಥಿತಿಯನ್ನು ತೋರಿಸಿದೆ.

ಇನ್ನು ಈ ಚಿತ್ರದಲ್ಲಿರುವ Pernille Folcarelli ಮರವು ವೈರಲ್ ಚಿತ್ರಕ್ಕೆ ಕಲಾತ್ಮಕ ಸ್ಪರ್ಶವನ್ನು ನೀಡಿದೆ. ಈ ಚಿತ್ರ ಈಗಾಗಲೇ ಟ್ವಿಟರ್‌ನಲ್ಲಿ 740K ವೀಕ್ಷಣೆಗಳನ್ನು ಗಳಿಸಿದೆ. ಜುಲೈ 14 ರಂದು ಶ್ರೀಹರಿಕೋಟಾದಿಂದ ಎಲ್‌ಎಂವಿ/ಎಂ3 ರಾಕೆಟ್‌ನಲ್ಲಿ ಉಡಾವಣೆಗೊಂಡ ಚಂದ್ರಯಾನ ನೌಕೆಯ ತನ್ನ ಪ್ರಯಾಣ ಆರಂಭವಾದ ಅರ್ಧಗಂಟೆಗಳ ಬಳಿಕ ಡೈಲನ್ ಓ'ಡೊನೆಲ್ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದೆ.  ಚಿತ್ರವನ್ನು ಹಂಚಿಕೊಳ್ಳುತ್ತಾ, ಡೈಲನ್ ಟ್ವೀಟ್ ಮಾಡಿದ್ದು, "ಭಾರತದ ಬಾಹ್ಯಾಕಾಶ ಸಂಸ್ಥೆ ಚಂದ್ರಯಾನ-3 ನೇರಪ್ರಸಾರದಲ್ಲಿ ರಾಕೆಟ್‌ ಉಡಾವಣೆಯನ್ನು ನೋಡಿದ್ದೆ. ಇದಾದ 30 ನಿಮಿಷದ ಬಳಿಕ ಈ ನೌಕೆ ಮನೆಯ ಮೇಲಿಂದ ಹಾದು ಹೋಗಿದೆ. ಅಭಿನಂದನೆಗಳು ಇಸ್ರೋ. ನೀವು ಯಶಸ್ವಿ ಲ್ಯಾಂಡಿಂಗ್‌ ಮಾಡುವ ವಿಶ್ವಾಸವಿದೆ' ಎಂದು ಬರೆದಿದ್ದಾರೆ.

ISRO ಚಂದ್ರಯಾನ-3 ತಂಡದಲ್ಲಿ ಮಂಗಳೂರಿನ ಸುಮನಾ ವಾಲ್ಕೆ

ಇನ್ನು ಡೊನೆಲ್‌ ಹಂಚಿಕೊಂಡ ಫೋಟೋಗೆ ನೆಟ್ಟಿಗೆ ಸಾಕಷ್ಟು ಕಾಮೆಂಟ್‌ಗಳನ್ನು ಮಾಡಿದ್ದು, ಇದು ಅದ್ಭುತವಾದ ಚಿತ್ರ ಎಂದು ಹೊಗಳಿದ್ದಾರೆ.ಚಿತ್ರವು ದೀರ್ಘವಾದ ಎಕ್ಸ್‌ಪೋಸರ್ ಶಾಟ್ ಅಥವಾ ಪ್ರಮಾಣಿತ ಛಾಯಾಚಿತ್ರದ ಫಲಿತಾಂಶವೇ ಎಂದು ಟ್ವಿಟರ್‌ ಬಳಕೆದಾರರೊಬ್ಬರು ವಿಚಾರಿಸಿದ್ದಾರೆ.  ಹೆಚ್ಚಿನವರು ಇದನ್ನು ಅಚ್ಚರಿ ಮತ್ತು ಮೆಚ್ಚುಗೆಯಿಂದ "ವಾವ್! ಅದ್ಭುತ ಸೆರೆಹಿಡಿಯುವಿಕೆ!" ಎಂದು ಪ್ರತಿಕ್ರಿಯಿಸಿದ್ದಾರೆ.

ಚಂದ್ರಯಾನ-3 ಮೊದಲ ಕಕ್ಷೆ ಎತ್ತರಿಸುವ ಕಾರ್ಯ ಯಶಸ್ವಿ: ಉತ್ತಮ ಸ್ಥಿತಿಯಲ್ಲಿ ವ್ಯೋಮನೌಕೆ

Follow Us:
Download App:
  • android
  • ios