ನವದೆಹಲಿ(ಸೆ.25): ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ಭಾರತದ ತನಿಖಾ ಸಂಸ್ಥೆಗಳಿಂದ ಬಂಧನ ಭೀತಿ ಎದುರಿಸುತ್ತಿರುವ ವಿವಾದಾತ್ಮಕ ಮುಸ್ಲಿಂ ಧರ್ಮ ಪ್ರಚಾರ ಝಾಕೀರ್‌ ನಾಯ್‌್ಕ ಮಲೇಷ್ಯಾದಿಂದ ಮಾಲ್ಡೀವ್‌್ಸಗೆ ಪರಾರಿಯಾಗಲು ಯತ್ನ ನಡೆಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.

ಮಲೇಷ್ಯಾದಲ್ಲಿರುವ ಝಾಕೀರ್‌ನನ್ನು ಭಾರತಕ್ಕೆ ವಾಪಸ್‌ ಕರೆತರುವ ಯತ್ನವನ್ನು ಭಾರತ ತೀವ್ರಗೊಳಿಸಿರುವ ನಡುವೆಯೇ, ಈ ವಿಚಾರ ಗೊತ್ತಾಗಿದೆ. ಭಾರತಕ್ಕೆ ಆಗಮಿಸಿದ ಮಾಲ್ಡೀವ್‌್ಸ ಸಂಸತ್ತಿನ ನಿಯೋಗದ ನೇತೃತ್ವದ ವಹಿಸಿದ ಮಾಲ್ಡೀವ್‌್ಸನ ಹಾಲಿ ಸ್ಪೀಕರ್‌ ಸಹ ಆಗಿರುವ ನಶೀದ್‌, ಝಾಕೀರ್‌ ನಾಯ್‌್ಕ ಮಾಲ್ಡೀವ್‌್ಸಗೆ ಆಗಮಿಸಲು ಯತ್ನಸಿದ್ದ. ಆದರೆ, ಆತನನ್ನು ನಾವು ನಮ್ಮ ರಾಷ್ಟ್ರಕ್ಕೆ ಬಿಟ್ಟುಕೊಳ್ಳಲಿಲ್ಲ ಎಂದು ಹೇಳಿದರು.

‘ಸಿಎಂ ಬದಲಾವಣೆ’ ಎಲ್ಲಿಗೆ ಬಂತು? ಇನ್ನೂ 15 ದಿನ ಶಾ ಸಿಗೋದಿಲ್ಲ..!

ಜನರಲ್ಲಿ ಭಾವನಾತ್ಮಕವಾಗಿ ಮತ ಸಂಬಂಧಿ ವಿಚಾರ ಹಬ್ಬಿ ವಿರೋಧ ಸೃಷ್ಟಿಸುತ್ತಿರುವುದಕ್ಕೆ ನಾಯ್ಕ್ ಖಾಸಗಿ ಟಿವಿ ಚಾನೆಲ್, ಮೊಬೈಲ್ ಎಪ್ಲಿಕೇಷನ್ ಹಾಗೂ ಯೂಟ್ಯೂಬ್‌ ಚಾನೆಲ್ ಮೇಲೆ ನಿಷೇಧ ಹೇರುವ ಬಗ್ಗೆ ಗೃಹ ಸಚಿವಾಲಯ ಗುರುವಾರ ಪ್ರಸ್ತಾಪ ಮಾಡಿತ್ತು.

ಮುಗ್ಧ ಮುಸ್ಲಿಮರನ್ನು ಬಳಸಿಕೊಂಡು, ನಿಯೋಜಿಸಿಕೊಂಡು ದೇಶ ವಿರೋಧಿ ಕೆಲಸ ಮಾಡುತ್ತಿರುವುದಾಗಿ ಇಂಟೆಲಿಜೆನ್ಸ್ ಬ್ಯುರೋ ತಿಳಿಸಿತ್ತು. ನಾಯ್ಕ್ ಜಿಹಾದಿ ಸಂಘಟನೆಗಳೊಂದಿಗೆ ಆತ್ಮೀಯ ಸಂಬಂಧ ಇರಿಸಿಕೊಂಡು ಅವುಗಳಿಂದ ಫಂಡ್ ಗಳಿಸುತ್ತಿದ್ದುದಾಗಿ ತಿಳಿದುಬಂದಿದೆ.  ಜಿಹಾದಿಯನ್ನು ಭಾರತದಲ್ಲಿ ಹಬ್ಬಿಸಲು ಈತ ಪ್ರಯತ್ನಿಸುವುದಾಗಿ ತಿಳಿದುಬಂದಿತ್ತು.