ಸಾಮಾನ್ಯವಾಗಿ ಮೇಕೆಗಳು ಎತ್ತರ ಪ್ರದೇಶ ಏರುತ್ತವೆ. ಆದರೆ ಇಲ್ಲೊಂದು ಮೇಕೆ ಕರೆಂಟ್ ಕಂಬವನ್ನೇ ಏರಿ ನಿಂತಿರುವ ವಿಡಿಯೋ ವೈರಲ್ ಆಗಿದೆ. ಇದು ನಿಜವೋ ಸುಳ್ಳೋ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.

ಸಾಮಾನ್ಯವಾಗಿ ಮೇಕೆಗಳು/ಆಡುಗಳು ಎತ್ತರ ಪ್ರದೇಶಗಳನ್ನು ಸುಲಭವಾಗಿ ಏರುತ್ತವೆ. ಆದರೆ ಕರೆಂಟ್ ಕಂಬ ಏರುವುದು ಎಂದ್ರೆ ಸುಮ್ನೆ ಅಲ್ಲ, ನಂಬಲು ಅಸಾಧ್ಯ ಎನಿಸಿದರು ಇಲ್ಲೊಂದು ಕಡೆ ಮೇಕೆಯೊಂದು ಕರೆಂಟ್ ಕಂಬವನ್ನು ಏರಿ ನಿಂತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ಘಟನೆ ಎಲ್ಲಿ ನಡೆದಿರುವುದು ಎಂಬ ಬಗ್ಗೆ ಮಾಹಿತಿ ಇಲ್ಲ, ಅಲ್ಲದೇ ಕೆಲವರು ಇದು ನಕಲಿ ಎಐ ವೀಡಿಯೋ ಎಂದು ಹೇಳುತ್ತಿದ್ದಾರೆ.

ಆದರೆ ಐರಲ್ ಆದ ವೀಡಿಯೋದಲ್ಲಿ ಎತ್ತರದಲ್ಲಿರುವ ಕರೆಂಟ್ ಕಂಬ ಏರಿದ ಮೇಕೆಯೊಂದು ಅಲ್ಲಿ ಏನೋ ಜಗ್ಗಿಯುತ್ತಾ ಸ್ಥಿರವಾಗಿ ನಿಂತಿರುವುದು ಕಂಡು ಬಂದಿದೆ. ಕರೆಂಟ್‌ ವೈರ್‌ನಲ್ಲಿ ಹಬ್ಬಿರುವ ಬಳ್ಳಿಯೊಂದನ್ನು ಅದು ಮೇಯುತ್ತಿರುವುದು ಕಂಡು ಬಂದಿದೆ. rareindianclips ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, 47 ಸಾವಿರಕ್ಕೂ ಅಧಿಕ ಮಂದಿ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ವೀಡಿಯೋ ನೋಡಿ ಕುತೂಹಲದಿಂದ ಅನೇಕರು ಆ ಮೇಕೆ ಅಲ್ಲಿಗೆ ಹೋಗಿದ್ದಾದರೂ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. 

ಕರೆಂಟ್ ವೈರ್‌ಗಳ ಮೇಲೆ ಯಾವುದೇ ಶ್ರಮವಿಲ್ಲದೇ ಈ ಮೇಕೆ ಸಮತೋಲನ ಸಾಧಿಸಿದ್ದು, ಆತ್ಮವಿಶ್ವಾಸದಿಂದ ಅಲ್ಲಿ ಆಹಾರವನ್ನು ಸೇವಿಸುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದು. ವೀಡಿಯೋದ ಆರಂಭದಲ್ಲಿ ಜನರು ಓಡಾಡುತ್ತಿರುವ ರಸ್ತೆಯೊಂದನ್ನು ತೋರಿಸುತ್ತಿದ್ದು, ಬಳಿಕ ಕರೆಂಟ್ ಕಂಬದ ಮೇಲೆ ನಿಂತು ಮೇಯುತ್ತಿರುವ ಮೇಕೆಯನ್ನು ಪೋಕಸ್ ಮಾಡಲಾಗಿದೆ. ಅಪರಿಚಿತರು ಯಾರೋ ಈ ವೀಡಿಯೋವನ್ನು ಸೆರೆ ಹಿಡಿದಿದ್ದಾರೆ. 

ಈ ವೀಡಿಯೋ ನಿಜವೇ? 
ಮೇಕೆಗಳು ಗೋಡೆ, ಕಟ್ಟಡ, ಮರಗಳು, ಬೆಟ್ಟಗಳನ್ನು ಸುಲಭವಾಗಿ ಏರುವುದಕ್ಕೆ ಹೆಸರುವಾಸಿಯಾಗಿವೆ. ಆದರೆ ಕರೆಂಟ್ ಕಂಬ ಏರಿದ್ದು ಹೇಗೆ ಎಂಬುದೇ ಅಚ್ಚರಿ, ಕೆಳಗಿನ ಬೀದಿ ಜನರು ಮತ್ತು ವಾಹನಗಳಿಂದ ತುಂಬಿದ್ದರೂ, ಮೇಲಿರುವ ಮೇಕೆಯನ್ನು ಯಾರೂ ಗಮನಿಸದೇ ಇರುವುದನ್ನು ನೋಡಿದರೆ ಇದು ಫೇಕ್ ಆಗಿರಬಹುದೇ ಎಂಬ ಅನುಮಾನ ಮೂಡಿಸುತ್ತದೆ. ಆದರೆ ಕಾಮೆಂಟ್‌ನಲ್ಲಿ ಜನ ಕೆಲವರು ಇದು ನಿಜವಾದ ಗೋಟ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದು ಅಷ್ಟು ಮೇಲೆ ಹೋಗಿದ್ದಾದರೂ ಹೇಗೆ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗಿದ್ರೆ ಈ ವೀಡಿಯೋ ರಿಯಲ್ಲಾ ಫೇಕಾ, ನಿಮಗೇನನಿಸುತ್ತಿದೆ ಕಾಮೆಂಟ್ ಮಾಡಿ. 

Scroll to load tweet…