ದೇವಸ್ಥಾನದ ಹುಂಡಿಗೆ ಬಿತ್ತು ಐಫೋನ್, ದೇವರಿಗೆ ಆಸ್ತಿ ಎನ್ನುತ್ತಿದೆ ಆಡಳಿತಮಂಡಳಿ!
ದೇವಸ್ಥಾನದ ಹುಂಡಿಗೆ ಹಣ ಹಾಕುವಾಗ ಎಚ್ಚರಿಕೆಯಿಂದ ಇರಿ. ಅಪ್ಪಿತಪ್ಪಿ ನಿಮ್ಮ ಮೊಬೈಲ್, ಸರ ಏನಾದ್ರೂ ಬಿದ್ರೆ ಅದು ವಾಪಸ್ ಬರೋದು ಅನುಮಾನ. ಯಾಕೆಂದ್ರೆ ದೇವರ ಹುಂಡಿಗೆ ಬಿದ್ದ ವಸ್ತುವನ್ನು ದೇವರ ಆಸ್ತಿ ಎಂದು ಪರಿಗಣಿಸಲಾಗುತ್ತದೆ.
ತಮಿಳಿನ ಪಲಯತು ಅಮ್ಮನ್ (Palayathu Amman) ಸಿನಿಮಾದಲ್ಲಿ ಮಹಿಳೆಯೊಬ್ಬಳು ಆಕಸ್ಮಿಕವಾಗಿ ತನ್ನ ಮಗುವನ್ನು ದೇವಸ್ಥಾನದ ಹುಂಡಿಗೆ ಹಾಕ್ತಾಳೆ. ಹುಂಡಿಯಲ್ಲಿ ಬಿದ್ದ ಮಗುವನ್ನು ದೇವಾಲಯದ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಇದು ರೀಲ್ ಕಥೆಯಾಗಿದ್ದು, ಜನರು ಇದನ್ನು ಎಂಜಾಯ್ ಮಾಡಿದ್ದರು. ಆದ್ರೆ ಸಿನಿಮಾ (Cinema)ದಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಇಂಥಹದ್ದೇ ಘಟನೆ ನಡೆದಿದೆ. ಇಲ್ಲಿ ಮಗು ಬದಲು ಮಗುವಿನಂತೆ ಪ್ರೀತಿಸುವ ಮೊಬೈಲ್ ಹುಂಡಿಗೆ ಬಿದ್ದಿದೆ. ಸಾಮಾನ್ಯವಾಗಿ ದೇವಸ್ಥಾನದ ಹುಂಡಿಯಲ್ಲಿರುವ ಹಣ ಲೆಕ್ಕ ಹಾಕುವಾಗ ಅನೇಕ ವಿಚಿತ್ರ ವಸ್ತುಗಳು ಸಿಗ್ತಿರುತ್ತವೆ. ಅನೇಕ ಪತ್ರಗಳನ್ನು ಕೂಡ ಭಕ್ತರು ಹುಂಡಿಗೆ ಹಾಕ್ತಾರೆ. ಆದ್ರೆ ಇಲ್ಲಿ ಭಕ್ತ ಹುಂಡಿಗೆ ಹಣ ಹಾಕಿಲ್ಲ, ಆಕಸ್ಮಿಕವಾಗಿ ಮೊಬೈಲ್ ಹುಂಡಿಗೆ ಬಿದ್ದಿದೆ.
ಘಟನೆ ಚೆನ್ನೈ ಬಳಿಯ ತಿರುಪ್ಪೂರ್‌ನಲ್ಲಿರುವ ಅರುಲ್ಮಿಗು ಕಂದಸ್ವಾಮಿ (Arulmigu Kandaswamy) ದೇವಾಲಯದಲ್ಲಿ ನಡೆದಿದೆ. ದೇವಸ್ಥಾನಕ್ಕೆ ಬಂದ ಭಕ್ತರೊಬ್ಬರು ಅಚಾತುರ್ಯದಿಂದ ಹುಂಡಿಗೆ ಮೊಬೈಲ್ ಹಾಕಿದ್ದಾರೆ. ಸಿನಿಮಾದಂತೆ ಇಲ್ಲಿನ ದೇವಸ್ಥಾನದ ಆಡಳಿತಮಂಡಳಿ ಕೂಡ ಫೋನ್ ವಾಪಸ್ ನೀಡದೆ, ಅದನ್ನು ದೇವಸ್ಥಾನದ ಆಸ್ತಿ ಎಂದು ಪರಿಗಣಿಸಿದೆ.
'ನನ್ನ ಗರ್ಲ್‌ಫ್ರೆಂಡ್ ನಿಂಗೆ, ನಿಂದು ನನಗೆ..' ಬೆಂಗ್ಳೂರಲ್ಲಿ ಹೊಸ ವರ್ಷಕ್ಕೆ ನಡೀತಾ ಇದೆ
ಹುಂಡಿಯಲ್ಲಿ ಬಿದ್ದ ಐಫೋನ್ ದೇವರಿಗೆ ಸೇರಿದ್ದು ಎಂದು ದೇವಸ್ಥಾನದ ಅಧಿಕಾರಿಗಳು ಹೇಳಿದ್ದಾರೆ. ಇದ್ರಿಂದ ಭಕ್ತ ವಿನಯಗಾಪುರದ ದಿನೇಶ್ ಐಫೋನ (iPhone)ನ್ನು ದೇವರಿಗೆ ನೀಡಿ, ಬರಿಗೈನಲ್ಲಿ ಮನೆಗೆ ವಾಪಸ್ ಆಗಿದ್ದಾರೆ. ಆಡಳಿತ ಮಂಡಳಿ ಫೋನನ್ನು ದೇವಸ್ಥಾನದ ಆಸ್ತಿ ಎಂದು ಪರಿಗಣಿಸಿದೆ, ಆದ್ರೆ ಸಿಮ್ ಕಾರ್ಡ್ (SIM card) ಮತ್ತು ಡೇಟಾವನ್ನು ಇನ್ನೊಂದು ಮೊಬೈಲ್ಗೆ ಹಸ್ತಾಂತರಿಸಿಕೊಳ್ಳಲು ಅನುಮತಿ ನೀಡಿದೆ.
ಹುಂಡಿಗೆ ಹೇಗೆ ಬಿತ್ತು ಮೊಬೈಲ್ ? : ಒಂದು ತಿಂಗಳ ಹಿಂದೆ ದಿನೇಶ್ ಕುಟುಂಬ ಸಮೇತ ದೇವಸ್ಥಾನಕ್ಕೆ ಹೋಗಿದ್ದರು. ಪೂಜೆ ಮುಗಿಸಿ ಹುಂಡಿಗೆ ಹಣ ಹಾಕಲು ಮುಂದಾಗಿದ್ದಾರೆ. ಆಗ ಅವರ ಶರ್ಟ್ ಜೇಬಿನಿಂದ ನೋಟುಗಳನ್ನು ತೆಗೆಯುತ್ತಿದ್ದಾಗ ಆಕಸ್ಮಿಕವಾಗಿ ಅವರ ಐಫೋನ್ ಹುಂಡಿಗೆ ಬಿದ್ದಿದೆ. ಹುಂಡಿ ಕೈ ಹಾಕಿ ಫೋನ್ ತೆಗೆಯಲು ಸಾಧ್ಯವಾಗ್ಲಿಲ್ಲ. ಗಾಬರಿಗೊಂಡ ದಿನೇಶ್ ದೇವಸ್ಥಾನದ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.
ಕೊಬ್ಬರಿ ಬೆಂಬಲ ಬೆಲೆ ಏರಿಸಿದ ಕೇಂದ್ರ ಸರ್ಕಾರ, 2025ರಲ್ಲಿ ಕ್ವಿಂಟಾಲ್‌ಗೆ 12,100 ರೂಪಾಯಿ!
ಸಾಮಾನ್ಯವಾಗಿ ಹುಂಡಿಯನ್ನು ಪದೇ ಪದೇ ತೆಗೆಯುವುದಿಲ್ಲ. ಎರಡು ತಿಂಗಳಿಗೊಮ್ಮೆ ಹುಂಡಿ ಓಪನ್ ಮಾಡಲಾಗುತ್ತದೆ. ಹುಂಡಿಗೆ ಫೋನ್ ಬಿದ್ದಿದ್ದು, ಅದನ್ನು ಹಿಂತಿರುಗಿಸಲು ಸಾಧ್ಯವಿಲ್ಲ ಎಂದು ದೇವಸ್ಥಾನದ ಸಿಬ್ಬಂದಿ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ದಿನೇಶ್ ಅವರು ಮಾನವ ಸಂಪನ್ಮೂಲ ಮತ್ತು ಸಿಇ ಅಧಿಕಾರಿಗಳಿಗೆ ದೂರು ನೀಡಿದರು. ದೇವಸ್ಥಾನದ ಅಧಿಕಾರಿಗಳು ಶುಕ್ರವಾರ ಹುಂಡಿಯನ್ನು ತೆರೆದಿದ್ದಾರೆ. ದಿನೇಶ್ ದೇವಸ್ಥಾನಕ್ಕೆ ಬಂದು ಫೋನ್ ನೀಡುವಂತೆ ವಿನಂತಿಸಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಫೋನ್ ನೀಡಲು ನಿರಾಕರಿಸಿದ್ದಾರೆ. ಸಿಮ್ ಕಾರ್ಡ್ ತೆಗೆಯಲು ಮತ್ತು ಫೋನ್‌ನಿಂದ ಯಾವುದೇ ಪ್ರಮುಖ ಡೇಟಾವನ್ನು ಡೌನ್‌ಲೋಡ್ ಮಾಡುವ ಆಯ್ಕೆಯನ್ನು ಅವರಿಗೆ ನೀಡಲಾಗಿದೆ.
ಹುಂಡಿಯಲ್ಲಿ ಬೀಳುವ ಯಾವುದೇ ವಸ್ತುವನ್ನು ದೇವಸ್ಥಾನಕ್ಕೆ ಮತ್ತು ದೇವರಿಗೆ ಸೇರಿದ್ದೆಂದು ಪರಿಗಣಿಸುವ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ. ಈ ಫೋನ್ ಅನ್ನು ದೇವಸ್ಥಾನದ ಬಳಿಯೇ ಇಡಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮೊಬೈಲ್ ನೀಡಲು ನಿರಾಕರಿಸಿದೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕುಮಾರವೇಲ್ ಹೇಳಿದ್ದಾರೆ.