ಕೊಬ್ಬರಿ ಬೆಂಬಲ ಬೆಲೆ ಏರಿಸಿದ ಕೇಂದ್ರ ಸರ್ಕಾರ, 2025ರಲ್ಲಿ ಕ್ವಿಂಟಾಲ್‌ಗೆ 12,100 ರೂಪಾಯಿ!
2025ಕ್ಕೆ ಮಿಲ್ಲಿಂಗ್ ಕೊಬ್ಬರಿಯ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ 420 ರೂಪಾಯಿಗೆ ಏರಿಕೆ ಮಾಡಲಾಗಿದ್ದು, ಈಗ ಪ್ರತಿಕ್ವಿಂಟಾಲ್ ಮಿಲ್ಲಿಂಗ್ ಕೊಬ್ಬರಿ ಬೆಲೆ 11582 ರೂಪಾಯಿ ಆಗಲಿದೆ. ಇನ್ನು ಪೂರ್ಣ ಕೊಬ್ಬರಿಯ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 100 ರೂಪಾಯಿ ಏರಿಕೆ ಮಾಡಲಾಗಿದೆ.
ಬೆಂಗಳೂರು (ಡಿ.21): ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) 2025ಕ್ಕೆ ಕ್ವಿಂಟಾಲ್‌ಗೆ 420 ರೂಪಾಯಿವರೆಗೆ ಏರಿಕೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ. ಇದರೊಂದಿಗೆ ಕೊಬ್ಬರಿಯ ಪ್ರತಿ ಕ್ವಿಂಟಾಲ್ ಬೆಲೆ 12,100 ರೂಪಾಯಿ ಆಗಲಿರಲಿದೆ ಎಂದು ತಿಳಿಸಿದೆ. ಇದಕ್ಕಾಗಿ 2025ರ ಬಜೆಟ್‌ನಲ್ಲಿ 855 ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡಿದೆ.
2025ಕ್ಕೆ ಮಿಲ್ಲಿಂಗ್ ಕೊಬ್ಬರಿಯ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ 420 ರೂಪಾಯಿಗೆ ಏರಿಕೆ ಮಾಡಲಾಗಿದ್ದು, ಈಗ ಪ್ರತಿಕ್ವಿಂಟಾಲ್ ಮಿಲ್ಲಿಂಗ್ ಕೊಬ್ಬರಿ ಬೆಲೆ 11582 ರೂಪಾಯಿ ಆಗಲಿದೆ. ಇನ್ನು ಪೂರ್ಣ ಕೊಬ್ಬರಿಯ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 100 ರೂಪಾಯಿ ಏರಿಕೆ ಮಾಡಲಾಗಿದ್ದು, ಇದರ ಪ್ರತಿ ಕ್ವಿಂಟಾಲ್ ಬೆಲೆ 12,100 ರೂಪಾಯಿ ಆಗಿರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಕ್ವಿಂಟಾಲ್‌ಗೆ 12,000 ದಾಟಿದ ಕೊಬ್ಬರಿ ಬೆಲೆ: ರೈತರಿಗೆ ಸಂತಸ
ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ ಏರಿಕೆಯಿಂದ ಕೇಂದ್ರ ಸರ್ಕಾರಕ್ಕೆ 855 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಲಿದೆ. ಸಹಕಾರಿ ಏಜೆನ್ಸಿಗಳಾದ ನಾಫೆಡ್ ಮತ್ತು ಎನ್‌ಸಿಸಿಎಫ್ ಕೊಬ್ಬರಿ ಖರೀದಿಗೆ ಕೇಂದ್ರ ನೋಡಲ್ ಏಜೆನ್ಸಿಗಳಾಗಿರುತ್ತವೆ ಎಂದು ಮಾಹಿತಿ ನೀಡಿದ್ದಾರೆ.
7500 ಮೆ.ಟನ್ ಕೊಬ್ಬರಿ ಖರೀದಿಗೆ ಕೇಂದ್ರ ಅಸ್ತು: ಕೇಂದ್ರ ಸಚಿವ ಸೋಮಣ್ಣ