ಅಪ್ರಾಪ್ತ ಬಾಲಕಿಯ ಮೇಲೆ ಬಲಾತ್ಕಾರ ಎಸಗಿ ಗಲ್ಫ್‌ಗೆ ಪರಾರಿಯಾಗಿದ್ದ ಆರೋಪಿಯನ್ನು ಕೇರಳ ಪೊಲೀಸರು ಇಂಟರ್‌ಪೋಲ್ ಸಹಾಯದಿಂದ ಬಂಧಿಸಿದ್ದಾರೆ. 2022ರಲ್ಲಿ ಅತ್ಯಾಚಾರವೆಸಗಿ ಸೌದಿ ಅರೇಬಿಯಾಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಒಂದೂವರೆ ವರ್ಷದ ಬಳಿಕ ಬಂಧಿಸಲಾಗಿದೆ.

ಅಪ್ರಾಪ್ತ ಹುಡುಗಿ ಮೇಲೆ ಬಲಾತ್ಕರ ಮಾಡಿ ಗಲ್ಫ್‌ ಕಂಟ್ರಿಸ್‌ಗೆ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಇಂಟರ್ಪೋಲ್ ಸಹಾಯದಿಂದ ಆರೋಪಿ ಸುಹೈಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. 2022ರಲ್ಲಿ ಅಪ್ರಾಪ್ತ ಹುಡುಗಿಯೊಬ್ಬಳನ್ನು ಅತ್ಯಾಚಾರವೆಸಗಿದ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಈತ ಬಳಿಕ ಸೌದಿ ರಾಷ್ಟ್ರ ಅಬುಧಾಬಿಗೆ ಪರಾರಿಯಾಗಿದ್ದ. ಈಗ ಒಂದೂವರೆ ವರ್ಷದ ನಂತರ ಇಂಟರ್‌ಪೋಲ್ ಸಹಾಯದಿಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ಕೇರಳದ ಮೂವಾಟುಪುಳ ಮೂಲದ ಪುತ್ತನ್ಪುರೈಲ್ ಮನೆಯಲ್ಲಿ ಆರೋಪಿ ಸುಹೈಲ್‌ನಲ್ಲಿ ಪೊಲೀಸರು ಬಂಧಿಸಿದ್ದು ಬಳಿಕ ಮೂವಾಟುಪುಳ ಠಾಣೆಗೆ ಹಾಜರುಪಡಿಸಲಾಗಿದೆ. 2022ರಲ್ಲಿ ಈತ ಅಪ್ರಾಪ್ತ ಹುಡುಗಿಯ ಮನೆಗೆ ನುಗ್ಗಿ ಬಲಾತ್ಕಾರವೆಸಗಿದ ಆರೋಪವಿದೆ. ಒಂದೂವರೆ ವರ್ಷದ ನಂತರ ಇಂಟರ್ಪೋಲ್ ಸಹಾಯದಿಂದ ಆರೋಪಿಯನ್ನು ಊರಿಗೆ ಕರೆತರಲಾಗಿದೆ. 

ಗಂಡು ಮಗುವಿಗೆ ಜನ್ಮ ನೀಡಿದ ಕಾಲೇಜು ವಿದ್ಯಾರ್ಥಿನಿ: 17ರ ಪ್ರಾಯದ ಗೆಳೆಯನ ಬಂಧನ

ಪ್ರಕರಣಕ್ಕೆ ಸಂಬಂಧಿಸಿದಂತೆ 2023ರಲ್ಲಿ ಪೊಲೀಸರು ತನಿಖೆ ಮುಗಿಸಿ ಮೂವಾಟುಪುಳ ಪೋಕ್ಸೋ ಕೋರ್ಟಿಗೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ನಂತರ ಕೋರ್ಟ್ ಆರೋಪಿ ವಿರುದ್ಧ ಓಪನ್ ಎಂಡೆಡ್ ನಾನ್‌ಬೈಲೇಬಲ್‌ ವಾರೆಂಟ್ (ಜಾಮೀನು ರಹಿತ ವಾರೆಂಟ್‌) ಹೊರಡಿಸಿತ್ತು. ಅದಾದ ಮೇಲೆ ಲುಕ್ ಔಟ್ ನೋಟಿಸ್ ಹೊರಡಿಸಿ, ಇಂಟರ್ಪೋಲ್ ಸಹಾಯದಿಂದ ಅಬುಧಾಬಿಯಲ್ಲಿ ಆತನನ್ನು ಹಿಡಿಯಲಾಗಿತ್ತು. ಜಿಲ್ಲಾ ಪೊಲೀಸ್ ಮುಖ್ಯಸ್ಥ ವೈಭವ್ ಸಕ್ಸೇನಾ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಕೈಗೊಳ್ಳಲಾಗಿದೆ. 

ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯ ಸಾವು ಪ್ರಕರಣ: ಶಿಕ್ಷೆಗೆ ತಡೆ ನೀಡುವಂತೆ ಆರೋಪಿಯಿಂದ ಸುಪ್ರೀಂಗೆ ಅರ್ಜಿ