ಶಾಲೆಯಲ್ಲಿ ಮಕ್ಕಳಿಂದ ವಶಪಡಿಸಿಕೊಂಡ ಫೋನ್‌ಗಳಿಗೆ ಬೆಂಕಿ ಇಟ್ಟ ಶಿಕ್ಷಕರು
- ನಿಷೇಧವಿದ್ದರೂ ಮೊಬೈಲ್ ಫೋನ್ ಬಳಸುತ್ತಿದ್ದ ಮಕ್ಕಳು
- ಬುದ್ಧಿ ಕಲಿಸಲು ಮುಂದಾದ ಇಂಡೋನೇಷ್ಯಾದ ಶಿಕ್ಷಕರು
- ಮಕ್ಕಳೆದುರೇ ಮೊಬೈಲ್‌ಗೆ ಬೆಂಕಿ ಇಟ್ಟ ಶಿಕ್ಷಕರು
ಇಂಡೋನೇಷ್ಯಾದಲ್ಲಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಂದ ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳನ್ನು ಬೆಂಕಿ ಹಾಕಿ ಸುಟ್ಟು ಹಾಕಿದ್ದು, ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿಗಳು ದೂರದಿಂದ ಭಯಭೀತರಾಗಿ ನೋಡುತ್ತಿರುವಾಗಲೇ ಅವರೆದುರೇ ಶಿಕ್ಷಕರು ಸ್ಮಾರ್ಟ್‌ಫೋನ್‌ಗಳನ್ನು ಬೆಂಕಿ ಇರುವ ಬ್ಯಾರೆಲ್‌ಗೆ ಎಸೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಮಕ್ಕಳು ಶಾಲೆಗೆ ಸ್ಮಾರ್ಟ್‌ಫೋನ್ ಕೊಂಡೊಯ್ಯುವ ವಿಚಾರ ಬಹಳ ಹಿಂದಿನಿಂದಲೂ ಚರ್ಚಾಸ್ಪದ ವಿಷಯವಾಗಿದೆ. ಆದರೆ ಕೋವಿಡ್ ನಂತರ ಬಂದ ಆನ್‌ಲೈನ್ ತರಗತಿಗಳಿಂದಾಗಿ ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ಅನಿವಾರ್ಯವಾಗಿವೆ. ಹಾಗಾಗಿಯೇ ಶಿಕ್ಷಕರು ನೀಡಿದ ಈ ಕಠಿಣ ಶಿಕ್ಷೆ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ. ಸಾವಿರಾರು ರೂ ಬೆಲೆ ಬಾಳುವ ಸ್ಮಾರ್ಟ್‌ಫೋನ್‌ಗಳಿಗೆ ಬೆಂಕಿ ಹಚ್ಚಿದ್ದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೀಡಿಯೊದಲ್ಲಿ, ವಿದ್ಯಾರ್ಥಿಗಳು ಭಯಭೀತರಾಗಿ ದೂರದಿಂದ ನೋಡುತ್ತಿರುವಾಗಲೇ ಶಿಕ್ಷಕರೊಬ್ಬರು ಬೆಂಕಿಯ ಬ್ಯಾರೆಲ್‌ಗೆ ಸ್ಮಾರ್ಟ್‌ಫೋನ್‌ಗಳನ್ನು ಎಸೆಯುತ್ತಿರುವುದು ಕಂಡುಬಂದಿದೆ. ಈ ವೇಳೆ ಹಲವಾರು ವಿದ್ಯಾರ್ಥಿಗಳು ಬೇಡಿಕೊಂಡರು ಫೋನ್ ಸುಡದಂತೆ, ಈ ಕಠಿಣ ಕ್ರಮ ಕೈಗೊಳ್ಳದಂತೆ ಶಿಕ್ಷಕರನ್ನು ಕೇಳಿಕೊಂಡರು, ಆದರೆ ಎಲ್ಲವೂ ವ್ಯರ್ಥವಾಗಿದೆ. ಇದೇ ವೇಳೆ ಜೊತೆಗಿದ್ದ ಮತ್ತೊಬ್ಬ ಶಿಕ್ಷಕಿ ಕೂಡ ಐಫೋನ್ ಒಂದನ್ನು ಬೆಂಕಿಗೆಸೆದಿದ್ದಾರೆ.
Yadagir: ಸ್ವಂತ ಖರ್ಚಿನಲ್ಲಿ ಗಣಿತದ ಲ್ಯಾಬ್ ನಿರ್ಮಾಣ ಮಾಡಿದ ಶಿಕ್ಷಕ
ಇಂಡೋನೇಷಿಯನ್ ವೆಬ್‌ಸೈಟ್ Suara.com ಪ್ರಕಾರ, ವೀಡಿಯೊವನ್ನು ಎಲ್ಲಿ ಅಥವಾ ನಿರ್ದಿಷ್ಟವಾಗಿ ಯಾವಾಗ ರೆಕಾರ್ಡ್ ಮಾಡಲಾಗಿದೆ ಎಂಬುದರ ಕುರಿತು ಯಾವುದೇ ಉಲ್ಲೇಖವಿಲ್ಲ, ಏಕೆಂದರೆ ಹಾಜರಿದ್ದ ವಿದ್ಯಾರ್ಥಿಗಳು ಅಥವಾ ಶಿಕ್ಷಕರು ಮಾಸ್ಕ್‌ಗಳನ್ನು ಧರಿಸಿಲ್ಲ. ನಿಷೇಧವಿದ್ದರೂ ಮಕ್ಕಳು ಗುಪ್ತವಾಗಿ ಮೊಬೈಲ್ ಫೋನ್‌ಗಳನ್ನು ಬಳಸುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಇಸ್ಲಾಮಿಕ್ ಬೋರ್ಡಿಂಗ್ ಶಾಲೆಗಳಲ್ಲಿ ದಾಳಿ ನಡೆಸಿ ಸೆಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗುತ್ತದೆ ಮತ್ತು ಸುಡಲಾಗುತ್ತದೆ ಎಂದು ತಿಳಿದು ಬಂದಿದೆ. ಈ ವಿಡಿಯೋವನ್ನು 8 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, ವಿಧ ವಿಧ ಕಾಮೆಂಟ್‌ಗಳನ್ನು ಮಾಡಿದ್ದಾರೆ.
Davanagere Child Marriage: ದಾವಣಗೆರೆಯಲ್ಲಿ ಬಾಲ್ಯ ವಿವಾಹದಿಂದ 5ನೇ ತರಗತಿ ವಿದ್ಯಾರ್ಥಿಯನ್ನು ಕಾಪಾಡಿದ ಶಿಕ್ಷಕರು
ಬಹುಶಃ ಶಾಲೆಗೆ ಮೊಬೈಲ್ ತರುವುದನ್ನು ಬೋರ್ಡಿಂಗ್ ಶಾಲೆಯು (boarding school) ಅನೇಕ ಬಾರಿ ಖಂಡಿಸಿದೆ. ಅದಾಗ್ಯೂ ಮಕ್ಕಳು ಫೋನ್ ತಂದಾಗ ಈ ರೀತಿ ಬೆಂಕಿ ಹಚ್ಚಲಾಗಿದು. ಹೀಗೆ ಮಾಡಿದರೆ ವಿದ್ಯಾರ್ಥಿಗಳು ಸೆಲ್‌ಫೋನ್‌ಗಳನ್ನು ತರುವುದನ್ನು ಬಿಟ್ಟುಬಿಡುತ್ತಾರೆ ಎಂದು ನಿರ್ಧರಿಸಿ ಹೀಗೆ ಮಾಡಿರಬೇಕು ಎಂದು ಇನ್ಸ್ಟಾಗ್ರಾಮ್( Instagram) ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಹೆಸರಿನಿಂದ ಮಾತ್ರ ಇವರು ಶುಶಿಕ್ಷಿತರು, ಯಾವುದೇ ವಸ್ತು ನಮಗೆ ಸೇರದಿದ್ದರೆ ಅದನ್ನು ನಾಶ ಮಾಡುವ ಹಕ್ಕು ನಮಗಿಲ್ಲ. ಅದನ್ನು ವಶಕ್ಕೆ ಪಡೆದು ಒಂದು ವಾರದ ನಂತರ ವಿದ್ಯಾರ್ಥಿಗಳಿಗೆ ಫೋನ್‌ಗಳನ್ನು ಹಿಂತಿರುಗಿಸಬಹುದಿತ್ತು ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ಮುಂದೆ 6-8 ಕ್ಲಾಸ್ ಶಿಕ್ಷಕ ಹುದ್ದೆಗೆ ಪದವಿ ಕಡ್ಡಾಯ
ರಾಜ್ಯ ಸರ್ಕಾರಿ ಶಾಲೆಗಳಲ್ಲಿನ(Government Schools) 6ರಿಂದ 8ನೇ ತರಗತಿ ಬೋಧನೆಗೆ 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧ ರಾಷ್ಟ್ರೀಯ ಶಿಕ್ಷಣ ನೀತಿಗೆ(National Education Policy) ಪೂರಕವಾಗಿ ಶಿಕ್ಷಕರ ನೇಮಕಾತಿ ನಿಯಮಗಳಲ್ಲಿ ಅನೇಕ ಬದಲಾವಣೆ ಮಾಡಿ ಸರ್ಕಾರ ಕರಡು ನಿಯಮಾವಳಿ ಪ್ರಕಟಿಸಿದೆ.
ಸರ್ಕಾರದ ಕರಡು ನಿಯಮಾವಳಿ ಪ್ರಕಾರ 6ರಿಂದ 8ನೇ ತರಗತಿ ಶಿಕ್ಷಕರಾಗಲು ಇನ್ನು ಮುಂದೆ ಡಿ.ಎಡ್(D.ed) ಅಥವಾ ಬಿ.ಎಡ್.(B.ed) ಜತೆಗೆ ದ್ವಿತೀಯ ಪಿಯುಸಿ ತೇರ್ಗಡೆಯಾಗಿದ್ದರೆ ಸಾಲದು. ಪದವಿಯಲ್ಲಿ ಕಡ್ಡಾಯವಾಗಿ ಶೇ.50ಕ್ಕಿಂತ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಯಾವುದೇ ಭಾಷಾ ವಿಷಯದ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಆ ಭಾಷಾ ವಿಷಯವನ್ನು ಪದವಿಯಲ್ಲಿ ಐಚ್ಛಿಕ ವಿಷಯವಾಗಿ ಅಭ್ಯಾಸ ಮಾಡಿರಬೇಕು. ಜತೆಗೆ ಇತಿಹಾಸ, ಸಮಾಜ ಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ , ಭೂಗೋಳಶಾಸ್ತ್ರ ಈ ಯಾವುದಾದರೂ ಒಂದು ವಿಷಯವನ್ನು ಮತ್ತೊಂದು ಐಚ್ಛಿಕ ವಿಷಯವಾಗಿ ಓದಿರಬೇಕು. ವ್ಯಾಸಂಗ ಸಂಬಂಧಿಸಿದ ಭಾಷೆಯಲ್ಲೇ ಆಗಿರಬೇಕು. ಈ ಎರಡೂ ವಿಷಯಗಳಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.