CJI ನಿವಾಸದಲ್ಲಿ PM ಮೋದಿ ಗಣಪತಿ ಪೂಜೆ: ನ್ಯಾಯಾಂಗ ಸ್ವಾತಂತ್ರ್ಯದ ಬಗ್ಗೆ ಜೈಸಿಂಗ್ ಕಳವಳ
ಪ್ರಧಾನಿ ಮೋದಿ ಅವರು ಸಿಜೆಐ ಚಂದ್ರಚೂಡ್ ಅವರ ನಿವಾಸದಲ್ಲಿ ಗಣಪತಿ ಪೂಜೆಯಲ್ಲಿ ಭಾಗವಹಿಸಿದ ನಂತರ, ಹಿರಿಯ ವಕೀಲೆ ಇಂದಿರಾ ಜೈಸಿಂಗ್ ನ್ಯಾಯಾಂಗದ ಸ್ವಾತಂತ್ರ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಅಧಿಕಾರವನ್ನು ಬೇರ್ಪಡಿಸುವಲ್ಲಿ ಸಿಜೆಐ ರಾಜಿ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನವದೆಹಲಿ (ಸೆ.12): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ನಿವಾಸದಲ್ಲಿ ಗಣಪತಿ ಪೂಜೆಯಲ್ಲಿ ಭಾಗವಹಿಸಿದ ಬೆನ್ನಲ್ಲಿಯೇ ನ್ಯಾಯಾಂಗದ ಸ್ವಾತಂತ್ರ್ಯದ ಬಗ್ಗೆ ಹಲವರಲ್ಲಿ ಕಳವಳ ವ್ಯಕ್ತವಾಗಿದೆ. ಇದರಲ್ಲಿ ಪ್ರಮುಖವಾಗಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಣೇಶ ಚತುರ್ಥಿ ಹಬ್ಬದಂದು ಮೋದಿಯವರ ವಿಡಿಯೋಗೆ ಪ್ರತಿಕ್ರಿಯಿಸಿದ ಜೈಸಿಂಗ್, ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಅಧಿಕಾರವನ್ನು ಬೇರ್ಪಡಿಸುವಲ್ಲಿ ಸಿಜೆಐ ರಾಜಿ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. “ಭಾರತದ ಮುಖ್ಯ ನ್ಯಾಯಮೂರ್ತಿಗಳು ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಅಧಿಕಾರವನ್ನು ಬೇರ್ಪಡಿಸುವಲ್ಲಿ ರಾಜಿ ಮಾಡಿಕೊಂಡಿದ್ದಾರೆ. ಸಿಜೆಐ ಅವರ ಸ್ವಾತಂತ್ರ್ಯದ ಮೇಲಿನ ಎಲ್ಲಾ ವಿಶ್ವಾಸವನ್ನು ಕಳೆದುಕೊಂಡಿದ್ದೇವೆ, ”ಎಂದು ಭಾರತದ ಅತ್ಯಂತ ಗೌರವಾನ್ವಿತ ಹಿರಿಯ ವಕೀಲರಲ್ಲಿ ಒಬ್ಬರು ಮತ್ತು ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಜೈಸಿಂಗ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅವರು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಆಫ್ ಇಂಡಿಯಾ (SCBA) ಗೆ "ಕಾರ್ಯನಿರ್ವಾಹಕರಿಂದ ಸಿಜೆಐ ಅವರ ಸ್ವಾತಂತ್ರ್ಯವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ ರಾಜಿ" ಯನ್ನು ಖಂಡಿಸಲು ಕರೆ ನೀಡಿದರು. ಜೈಸಿಂಗ್ ತಮ್ಮ ಪೋಸ್ಟ್‌ನಲ್ಲಿ ಎಸ್‌ಸಿಬಿಎ ಅಧ್ಯಕ್ಷ ಕಪಿಲ್ ಸಿಬಲ್ ಅವರನ್ನೂ ಉಲ್ಲೇಖಿಸಿದ್ದಾರೆ.
ಕೋಲ್ಕತ್ತಾ ರೇಪ್ ಕೇಸ್ ವಿಚಾರಣೆ ವೇಳೆ ನರ್ಸ್ ಕರ್ನಾಟಕದ ಅರುಣ್ ಶಾನುಭಾಗ್ ಪ್ರಕರಣ ನೆನೆದ ಸಿಜೆ
ಬುಧವಾರ, ಪ್ರಧಾನಿ ಮೋದಿ ಅವರು ಸಿಜೆಐ ಚಂದ್ರಚೂಡ್ ಅವರ ನಿವಾಸದಲ್ಲಿ ಗಣಪತಿ ಪೂಜೆಯಲ್ಲಿ ಭಾಗವಹಿಸಿದ್ದ ವಿಡಿಯೋವನ್ನು ಪೋಸ್ಟ್ ಮಾಡಲಾಗಿತ್ತು. ಅಲ್ಲಿ ಚಂದ್ರಚೂಡ್ ಮತ್ತು ಅವರ ಪತ್ನಿ ಕಲ್ಪನಾ ದಾಸ್ ಅವರು ಪ್ರಧಾನಿ ಮೋದಿ ಅವರನ್ನು ನಿವಾಸಕ್ಕೆ ಸ್ವಾಗತಿಸಿದರು. ಸಂಭ್ರಮಾಚರಣೆಯ ಸಂದರ್ಭದಲ್ಲಿ ಮಹಾರಾಷ್ಟ್ರದ ಸಾಂಪ್ರದಾಯಿಕ ಟೋಪಿಯನ್ನು ಧರಿಸಿ ಮೋದಿ ಅವರು ಪೂಜೆ ಸಲ್ಲಿಸುತ್ತಿರುವುದು ಕಂಡುಬಂದಿತು. 'ಲೇಡೀಸ್ & ಜಂಟಲ್‌ಮೆನ್ಸ್ ಇದು ಗಣರಾಜ್ಯದ ಸ್ಥಿತಿ.. ಜೈ ಹಿಂದ್..' ಎಂದು ಆರ್‌ಜೆಡಿ ಸಂಸದ ಮನೋಜ್ ಝಾ ಪೋಸ್ಟ್ ಆಡಿದ್ದಾರೆ.
ಸುಪ್ರೀಂ ಕೋರ್ಟಲ್ಲಿ ಲಾಪತಾ ಲೇಡಿಸ್ ಪ್ರದರ್ಶನ ವೀಕ್ಷಿಸಲು ಬಂದ ಆಮೀರ್ ಖಾನ್ ಕಾಲೆಳೆದ ಚೀಫ್ ಜಸ್ಟೀಸ್