ಕೋಲ್ಕತ್ತಾ ಆರ್‌ಜಿ ಕಾರ್ ಆಸ್ಪತ್ರೆಯಲ್ಲಿ ನಡೆದ ಟೈನಿ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ಡಿವೈ ಚಂದ್ರಚೂಡ್ ಅವರು 1973ರಲ್ಲಿ ನಡೆದ ನರ್ಸ್ ಅರುಣಾ ಶಾನುಬಾಗ್‌ ಪ್ರಕರಣವನ್ನು ಉಲ್ಲೇಖಿಸಿದ್ದಾರೆ.

ನವದೆಹಲಿ: ಕೋಲ್ಕತ್ತಾ ಆರ್‌ಜಿ ಕಾರ್ ಆಸ್ಪತ್ರೆಯಲ್ಲಿ ನಡೆದ ಟೈನಿ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ಡಿವೈ ಚಂದ್ರಚೂಡ್ ಅವರು 1973ರಲ್ಲಿ ನಡೆದ ನರ್ಸ್ ಅರುಣಾ ಶಾನುಬಾಗ್‌ ಪ್ರಕರಣವನ್ನು ಉಲ್ಲೇಖಿಸಿದ್ದಾರೆ. ನಮ್ಮ ಸಮಾಜದಲ್ಲಿ ಬೇರೂರಿರುವ ಪುರುಷ ಪ್ರಧಾನವಾದ ಪಕ್ಷಪಾತ ಮನಸ್ಥಿತಿಯಿಂದಾಗಿ ಮಹಿಳಾ ವೈದ್ಯರು ಹೆಚ್ಚು ಟಾರ್ಗೆಟ್ ಆಗುತ್ತಿದ್ದಾರೆ. ಹೆಚ್ಚೆಚ್ಚು ಮಹಿಳೆಯರು ಉದ್ಯೋಗಕ್ಕೆ ಸೇರಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ವ್ಯವಸ್ಥೆ ತಳಮಟ್ಟದಿಂದ ಬದಲಾಗುವುದಕ್ಕೆ ದೇಶ ಇನ್ನೊಂದು ಅತ್ಯಾಚಾರ ಪ್ರಕರಣಕ್ಕೆ ಕಾಯುವಂತಾಗಬಾರದು ಎಂದ ಅವರು, ಅರುಣಾ ಶಾನುಭಾಗ್‌ ಪ್ರಕರಣವನ್ನು ಉಲ್ಲೇಖಿಸಿ ಇದು ವೈದ್ಯಕೀಯ ವೃತ್ತಿಯಲ್ಲಿರುವ ಮಹಿಳೆಯ ವಿರುದ್ಧ ನಡೆದ ಹಿಂಸಾಚಾರಕ್ಕೆ ಮತ್ತೊಂದು ಉದಾಹರಣೆ ಎಂದರು. 

ಯಾರು ಈ ಅರುಣಾ ಶಾನುಭಾಗ್?

ಅಂದು 25 ವರ್ಷದವರಾಗಿದ್ದ ಅರುಣಾ ಶಾನುಭಾಗ್ ಅವರು ಮುಂಬೈನ ಕೆಇಎಂ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು. 1967ರಲ್ಲಿ ಆಸ್ಪತ್ರೆಯ ಸರ್ಜರಿ ವಿಭಾಗಕ್ಕೆ ನರ್ಸ್ ಆಗಿ ಸೇರಿಕೊಂಡ ಅವರಿಗೆ ಅದೇ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದ ಡಾ ಸಂದೀಪ್ ಸರ್ದೇಸಾಯಿ ಜೊತೆ ವಿವಾಹ ವಿವಾಹ ನಿಶ್ಚಯವೂ ಆಗಿತ್ತು. ಆದರೆ 1973ರ ನವಂಬರ್ 27ರ ರಾತ್ರಿ ರಾತ್ರಿಪಾಳಿಯಲ್ಲಿ ಕೆಲಸದಲ್ಲಿದ್ದ ಆಕೆಯ ಮೇಲೆ ವಾರ್ಡ್‌ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಸೋಹನ್‌ಲಾಲ್ ಭರ್ತಾ ವಾಲ್ಮೀಕಿ ಎಂಬಾತ ಲೈಂಗಿಕ ದೌರ್ಜನ್ಯವೆಸಗಿ ಆಕೆಯ ಕುತ್ತಿಗೆಯನ್ನು ನಾಯಿಯನ್ನು ಕಟ್ಟುವಂತಹ ಸಂಕೋಲೆಯಿಂದ ಬಿಗಿದಿದ್ದ. 

ಅರುಣಾ ಮೇಲೆ ಆತ ಮಾಡಿದ ಲೈಂಗಿಕ ದೌರ್ಜನ್ಯ ಹಾಗೂ ಹಲ್ಲೆಯಿಂದ ಅರುಣಾ ಮಿದುಳಿಗೆ ಗಂಭೀರ ಹಾನಿಯಾಗಿತ್ತು. ಅಲ್ಲದೇ ಆಕೆಯನ್ನು ಶಾಶ್ವತವಾಗಿ ಹಾಸಿಗೆ ಹಿಡಿಯುವಂತೆ ಮಾಡುವ (persistent vegetative state) ಸ್ಥಿತಿಗೆ ತಂದಿತ್ತು. ಲೈಂಗಿಕ ದೌರ್ಜನ್ಯದ ನಂತರ ಅವರೆಂದು ಸಹಜ ಸ್ಥಿತಿಗೆ ಬರಲಿಲ್ಲ, 2015ರಲ್ಲಿ ಘಟನೆ ನಡೆದ 42 ವರ್ಷಗಳ ನಂತರ ಅವರು ಕೊನೆಯುಸಿರೆಳೆಯುವವರೆಗೂ ಅದೇ ಸ್ಥಿತಿಯಲ್ಲಿದ್ದರು ಅರುಣಾ ಶಾನುಭಾಗ್.

ಮಗಳ ಕೈ ಮುರಿದಿತ್ತು, ರಕ್ತ ಸೋರುತ್ತಿತ್ತು, ಪ್ಯಾಂಟ್‌ ತೆರೆದಿತ್ತು: ಭಯಾನಕ ಸ್ಥಿತಿ ವಿವರಿಸಿದ ಕೋಲ್ಕತ್ತಾ ರೇಪ್ ಸಂತ್ರಸ್ತೆ ತಾಯಿ

ತಮ್ಮ ಮೆದುಳಿಗಾದ ಹಾನಿ ಅವರನ್ನು ಶಾಶ್ವತವಾಗಿ ಪಾರ್ಶ್ವವಾಯು ಪೀಡಿತರನ್ನಾಗಿಸಿತು. ಮಾತನಾಡುವುದಕ್ಕೂ ಆಗುತ್ತಿರಲಿಲ್ಲ, ತಮ್ಮ ಮೂಲಭೂತ ಕೆಲಸಗಳಿಗೂ ಅವರು ಬೇರೆಯವರನ್ನು ಅವಲಂಬಿಸುವಂತಾಗಿತ್ತು. 4 ದಶಕಕ್ಕೂ ಅಧಿಕ ಕಾಲ ಕೆಇಎಂ ಆಸ್ಪತ್ರೆಯ ಸಹೃದಯಿ ಸಿಬ್ಬಂದಿ ಆಕೆಗೆ ಒತ್ತಾಯಪೂರ್ವಕವಾಗಿ ಆಹಾರವನ್ನು ತಿನ್ನಿಸುವ ಮೂಲಕ ಆಕೆಯನ್ನು ತಮ್ಮ ಕುಟುಂಬ ಸದಸ್ಯೆಯಂತೆ ನೋಡುವ ಮೂಲಕ ಸೇವೆ ಮಾಡುತ್ತಾ ಆಕೆಯನ್ನು ಜೀವಂತವಾಗಿಟ್ಟಿದ್ದರು. ಇಂತಹ ಸ್ಥಿತಿಯಲ್ಲಿದ್ದ ಆಕೆಗೆ ದಯಾಮರಣ ನೀಡುವಂತೆ 2011ರಲ್ಲಿ ಪತ್ರಕರ್ತೆ ಲಿಂಕಿ ವಿರಾನಿ ಅವರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದಾಗ ಈ ವಿಚಾರ ದೇಶಾದ್ಯಂತ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. 

ಪಿಂಕಿ ವಿರಾನಿ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಅರುಣಾಸ್‌ ಸ್ಟೋರಿ ಎಂಬ ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ ಅವರು ತಿಳಿಸಿದಂತೆ ಆರೋಪಿ ಸೊಹನ್‌ಲಾಲ್, ಆಸ್ಪತ್ರೆಯಲ್ಲಿ ವೈದ್ಯಕೀಯ ಪ್ರಯೋಗಕ್ಕಾಗಿ ಇದ್ದ ನಾಯಿಗಳಿಗೆ ಮೀಸಲಾಗಿಟ್ಟಿದ್ದ ಆಹಾರವನ್ನು ಕದ್ದಿದ್ದನ್ನು ನೋಡಿದ್ದ ಅರುಣಾ ಅದನ್ನು ಆಸ್ಪತ್ರೆ ಆಡಳಿತ ಮಂಡಳಿಗೆ ಹೇಳುವುದಾಗಿ ಆತನಿಗೆ ಬೆದರಿಸಿದ್ದರಂತೆ. ಇದರಿಂದ ಅರುಣಾ ಮೇಲೆ ಆತ ದ್ವೇಷ ಹೊಂದಿದ್ದ. 

ಗರ್ಭಿಣಿ ಪತ್ನಿಗೆ ಚಿತ್ರಹಿಂಸೆ ನೀಡುತ್ತಿದ್ದ, ಸಂಜಯ್ ರಾಯ್ ಮನುಷ್ಯನಲ್ಲ ಪ್ರಾಣಿ: ಅತ್ತೆ

ಇತ್ತ ಪಿಂಕಿ ವಿರಾನಿ ಅವರ ಅರ್ಜಿಗೆ ಸಂಬಂಧಿಸಿದಂತೆ 2011ರಲ್ಲಿ ತೀರ್ಪು ನೀಡಿದ ನ್ಯಾಯಾಲಯ ಪಿಂಕಿ ವಿರಾನಿ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಅರುಣಾ ಅವರ ಮೆದುಳು ಡೆಡ್ ಆಗಿಲ್ಲ, ಆಸ್ಪತ್ರೆಯ ಸಿಬ್ಬಂದಿ ಗಮನಿಸಿದಂತೆ ಆಕೆ ಪ್ರಚೋದನೆಗಳಿಗೆ ಪ್ರತಿಕ್ರಿಯಿಸುತ್ತಾಳೆ. ಹೀಗಾಗಿ ಆಕೆಗೆ ದಯಾಮರಣ ನೀಡಲು ಸಾಧ್ಯವಿಲ್ಲ ಎಂಬ ತೀರ್ಪು ನೀಡಿತ್ತು. ಇದಾದ ನಂತರ ನ್ಯೂಮೊನಿಯಾಗೆ ಒಳಗಾದ ಅರುಣಾ 2015ರ ಮೇ 18 ರಂದು ಕೊನೆಯುಸಿರೆಳೆದಿದ್ದರು. ಅಂದಿನ ಭಾರತೀಯ ಕಾನೂನಿನ ಪ್ರಕಾರ ಇತ್ತ ಆರೋಪಿ ಸೋಹನ್‌ಲಾಲ್ ಭರ್ತ ವಾಲ್ಮೀಕಿ ಕೇವಲ ಕೊಲೆ ಹಾಗೂ ದರೋಡೆ ಪ್ರಕರಣದಲ್ಲಿ ಮಾತ್ರ ತಪ್ಪಿತಸ್ಥ ಎಂದು ಸಾಬೀತಾಗಿತ್ತು. ಹೀಗಾಗಿ 7 ವರ್ಷಗಳ ಜೈಲು ಶಿಕ್ಷೆಯ ನಂತರ ಆತ ಬಿಡುಗಡೆಗೊಂಡಿದ್ದ