Asianet Suvarna News Asianet Suvarna News

ಇಂದಿರಾ ಗಾಂಧಿ ಭದ್ರತಾ ಅಧಿಕಾರಿಯೇ ಮಿಜೋರಾಂ ಮುಂದಿನ ಸಿಎಂ! ಮಾಜಿ IPS ಅಧಿಕಾರಿ ರಾಜಕೀಯ ಹಾದಿ ಇಲ್ಲಿದೆ..

ಲಾಲ್ದುಹೋಮ ಮಾಜಿ ಐಪಿಎಸ್ ಅಧಿಕಾರಿಯಾಗಿದ್ದು, ಆಗಿನ ಪ್ರಧಾನಿ ಇಂದಿರಾ ಗಾಂಧಿ ಭದ್ರತೆಯಲ್ಲಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಸೇರಲು ತಮ್ಮ ಕೆಲಸವನ್ನು ತೊರೆದರು ಮತ್ತು ಲಂಡನ್‌ನಲ್ಲಿ ಮಿಜೋ ಉಗ್ರಗಾಮಿ ನಾಯಕ ಲಾಲ್ಡೆಂಗಾರೊಂದಿಗೆ ಮಾತುಕತೆ ನಡೆಸಲು ಮತ್ತು ಶಾಂತಿ ಮಾತುಕತೆಗೆ ಮನವೊಲಿಸಲು ಇಂದಿರಾ ಗಾಂಧಿ ಲಾಲ್ದುಹೋಮರನ್ನು ಕಳುಹಿಸಿದ್ದರು.

indira gandhi s guard ex cop and peace envoy lalduhoma set to rule mizoram ash
Author
First Published Dec 4, 2023, 3:33 PM IST

ನವದೆಹಲಿ (ಡಿಸೆಂಬರ್ 4, 2023): ಮಿಜೋರಾಂನಲ್ಲಿ ಹೊಸ ರಾಜಕೀಯ ಪಕ್ಷವಾದ ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ಈ ಬಾರಿ ಅಧಿಕಾರವನ್ನೇ ರಚಿಸುತ್ತಿದೆ. ಈಶಾನ್ಯ ರಾಜ್ಯದಲ್ಲಿ ಬಹುತೇಕ ಮತದಾನ ಮುಗಿದಿದ್ದು,  40 ಸ್ಥಾನಗಳ ವಿಧಾನಸಭೆಯಲ್ಲಿ ಬಹುಮತದ ಗಡಿ ದಾಟಿದೆ. ವಿಜೇತರಾದ ZPM ಅನ್ನು 74 ವರ್ಷದ ಲಾಲ್ದುಹೋಮ ಅವರು ನೇತೃತ್ವ ವಹಿಸಿದ್ದು, ಅವರೇ ಮುಂದಿನ ಸಿಎಂ ಎಂದು ಬಿಂಬಿತವಾಗ್ತಿದೆ. ಮಿಜೋರಾಂನಲ್ಲಿ ಲಾಲ್ದುಹೋಮ ಮತ್ತು ಝೋರಂತಂಗ ಇಬ್ಬರೂ ಪ್ರಮುಖ ರಾಜಕೀಯ ನಾಯಕರಾಗಿದ್ದಾರೆ ಇನ್ನು, ಲಾಲ್ದುಹೋಮರ ಉದಯ ಮತ್ತು ಝೋರಂತಂಗರ ಪತನವು ಕುತೂಹಲಕಾರಿಯಾಗಿದೆ. 

1987 ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಮಿಜೋ ಉಗ್ರಗಾಮಿ ನಾಯಕ ಮತ್ತು ಝೋರಂತಂಗಾದ ಮಾರ್ಗದರ್ಶಕ ಲಾಲ್ಡೆಂಗಾ ಅವರೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಮಿಜೋರಾಂ ರಾಜ್ ರಚನೆಯಾದಾಗ ಝೋರಂತಂಗ ಉಗ್ರಗಾಮಿ ನಾಯಕರಾಗಿದ್ದರು. ಅವರು 6 ಬಾರಿ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ ಮತ್ತು ಮೂರು ಅವಧಿಗೆ (1998-2008 ಮತ್ತು 2018-2023) ಮುಖ್ಯಮಂತ್ರಿಯಾಗಿದ್ದರು.

ಇದನ್ನು ಓದಿ: ಮೋದಿ ದೂರವಿಟ್ಟು ತಮ್ಮ ಕ್ಷೇತ್ರದಲ್ಲೇ ಸೋತ ಮಿಜೋರಾಂ ಸಿಎಂ, ಡೆಪ್ಯುಟಿ ಸಿಎಂ: ZPM ಗೆ ಅಧಿಕಾರ ನೀಡಿದ ಮತದಾರ ಪ್ರಭು!

ಇಂದಿರಾ ಗಾಂಧಿ ಭದ್ರತಾ ಅಧಿಕಾರಿ
ಲಾಲ್ದುಹೋಮ ಮಾಜಿ ಐಪಿಎಸ್ ಅಧಿಕಾರಿಯಾಗಿದ್ದು, ಆಗಿನ ಪ್ರಧಾನಿ ಇಂದಿರಾ ಗಾಂಧಿ ಭದ್ರತೆಯಲ್ಲಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಸೇರಲು ತಮ್ಮ ಕೆಲಸವನ್ನು ತೊರೆದರು ಮತ್ತು ಲಂಡನ್‌ನಲ್ಲಿ ಮಿಜೋ ಉಗ್ರಗಾಮಿ ನಾಯಕ ಲಾಲ್ಡೆಂಗಾರೊಂದಿಗೆ ಮಾತುಕತೆ ನಡೆಸಲು ಮತ್ತು ಶಾಂತಿ ಮಾತುಕತೆಗೆ ಮನವೊಲಿಸಲು ಇಂದಿರಾ ಗಾಂಧಿ ಲಾಲ್ದುಹೋಮರನ್ನು ಕಳುಹಿಸಿದ್ದರು. ಲಾಲ್ಡೆಂಗಾ 1987 ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು. ಈ ಹಿನ್ನಲೆ ಲಾಲ್ದುಹೋಮ ಮಿಜೋರಾಂ ರಾಜ್ಯದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕೀರ್ತಿ ಇದೆ.

ಲಾಲ್ದುಹೋಮ 1984 ರಲ್ಲಿ ಮಿಜೋರಾಂನಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಲೋಕಸಭಾ ಸ್ಥಾನ ಗೆದ್ದರು. ಆದರೆ ನಂತರ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು ಮತ್ತು ಪಕ್ಷದ ವಿಪ್ ಅನ್ನು ಧಿಕ್ಕರಿಸಿ ಅನರ್ಹಗೊಂಡರು, 1988 ರಲ್ಲಿ ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಅನರ್ಹಗೊಂಡ ಮೊದಲ ಲೋಕಸಭಾ ಸಂಸದರಾದರು.

ಇದನ್ನು ಓದಿ: ಈಶಾನ್ಯ ಮಿಜೋರಾಂನಲ್ಲಿ ZPM ಮ್ಯಾಜಿಕ್‌; ಮೋದಿ ದೂರ ಮಾಡಿಕೊಂಡ MNFಗೆ ಕೈ ತಪ್ಪುತ್ತಾ ಅಧಿಕಾರ?

2018 ರಲ್ಲಿ, ಲಾಲ್ದುಹೋಮ ಸ್ವತಂತ್ರ ಅಭ್ಯರ್ಥಿಯಾಗಿ ಐಜ್ವಾಲ್ ವೆಸ್ಟ್ - 1 ಮತ್ತು ಸೆರ್ಚಿಪ್ ಎಂಬ ಎರಡು ಸ್ಥಾನಗಳಿಂದ ಚುನಾವಣೆಯಲ್ಲಿ ಗೆದ್ದರು. ನಂತರ, ಸೆರ್ಚಿಪ್ ಉಳಿಸಿಕೊಂಡಿದ್ದು, ಈ ಚುನಾವಣೆಯಲ್ಲೂ ಲಾಲ್ದುಹೋಮ ಸೆರ್ಚಿಪ್‌ನಿಂದ ಗೆದ್ದಿದ್ದಾರೆ.

ಲಾಲ್ದುಹೋಮ ಸ್ವಚ್ಛ ಆಡಳಿತದ ಭರವಸೆ ನೀಡಿದ್ದು, ರಾಜ್ಯ ರಾಜಕೀಯದಲ್ಲಿ MNF - ಕಾಂಗ್ರೆಸ್ ಪ್ರಾಬಲ್ಯಕ್ಕೆ ಬ್ರೇಕ್‌ ಹಾಕಿದ್ದಾರೆ. ಎಂಎನ್‌ಎಫ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಬಿಜೆಪಿಯೊಂದಿಗೆ ರಹಸ್ಯ ಮೈತ್ರಿ ಮಾಡಿಕೊಂಡಿವೆ ಎಂದು ಆರೋಪಿಸಿದ್ದವು. ಚುನಾವಣೋತ್ತರ ಮೈತ್ರಿಗಾಗಿ ಕೇಸರಿ ಪಕ್ಷ ಮತ್ತು ZPM ನಡುವಿನ ರಹಸ್ಯ ತಿಳುವಳಿಕೆಯು ಬಹಿರಂಗಗೊಂಡಿದೆ ಎಂದು MNF ಆರೋಪಿಸಿದೆ. ಹಾಗೂ, MNF ಮತ್ತು ZPM ಇವೆರಡೂ ಮಿಜೋರಾಂನಲ್ಲಿ RSS ಮತ್ತು BJPಗೆ ಪ್ರವೇಶ ಬಿಂದು ಮತ್ತು ವೇದಿಕೆ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಇದನ್ನು ಓದಿ: 3 ರಾಜ್ಯಗಳಲ್ಲಿ ಕಮಲ ಕಿಲಕಿಲ: ಷೇರುಪೇಟೆಯಲ್ಲಿ ಭರ್ಜರಿ ಜಿಗಿತ; 15 ನಿಮಿಷದಲ್ಲಿ ಹರಿದುಬಂತು 4 ಲಕ್ಷ ಕೋಟಿ!

Follow Us:
Download App:
  • android
  • ios