ಮೋದಿ ದೂರವಿಟ್ಟು ತಮ್ಮ ಕ್ಷೇತ್ರದಲ್ಲೇ ಸೋತ ಮಿಜೋರಾಂ ಸಿಎಂ, ಡೆಪ್ಯುಟಿ ಸಿಎಂ: ZPM ಗೆ ಅಧಿಕಾರ ನೀಡಿದ ಮತದಾರ ಪ್ರಭು!

ಝೋರಂತಂಗ ಅವರು ತಮ್ಮ ಕ್ಷೇತ್ರದಲ್ಲೇ ಸೋಲನುಭವಿಸಿದ್ದಾರೆ. ಇನ್ನು, ಅತಂತ್ರ ವಿಧಾನಸಭೆಯಾಗಬಹುದು ಎಂದು ಹಲವು ಸಮೀಕ್ಷೆಗಳು ಹೇಳಿದ್ದವು, ಆದರೆ ಆ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿದೆ. ZPM ಭರ್ಜರಿ ಬಹುಮತ ಸಾಧಿಸಿದೆ. 

mizoram election results 2023 chief minister zoramthanga loses from his constituency mnf loses power zpm crosses half way mark ash

ನವದೆಹಲಿ (ಡಿಸೆಂಬರ್ 4, 2023): ಈಶಾನ್ಯ ರಾಜ್ಯ ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಂಎನ್‌ಎಫ್‌ ಸೋಲು ಬಹುತೇಕ ಖಚಿತಗೊಂಡಿದೆ. ಹಾಗೂ, ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ಅಧಿಕಾರಕ್ಕಿಡಿಯುವುದು ಸಹ ಬಹುತೇಕ ನಿಚ್ಚಳವಾಗಿದೆ. 

ಇನ್ನೊಂದೆಡೆ, ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ಎನ್‌ಡಿಎ ಮೈತ್ರಿಕೂಟದಲ್ಲಿದ್ರೂ, ಅದು ಕೇಂದ್ರದಲ್ಲಿ ಮಾತ್ರ. ವಿಧಾನಸಭೆ ಚುನಾವಣೆಯಲ್ಲಿ ಮೋದಿ ಪ್ರಚಾರಕ್ಕೆ ಬಂದ್ರೆ ಅವರ ಜತೆ ವೇದಿಕೆ ಹಂಚಿಕೊಳ್ಳಲ್ಲ ಎಂದು ಮಿಜೋರಾಂ ಸಿಎಂ ಹಾಗೂ ಎಂಎನ್‌ಎಫ್‌ ಮುಖ್ಯಸ್ಥ ಝೋರಂತಂಗ ಹೇಳಿದ್ರು. ಆದರೆ, ವಿಧಿ ಲಿಖಿತ ಎಂಬಂತೆ ಝೋರಂತಂಗ ಅವರು ತಮ್ಮ ಕ್ಷೇತ್ರದಲ್ಲೇ ಸೋಲನುಭವಿಸಿದ್ದಾರೆ. ಇನ್ನು, ಅತಂತ್ರ ವಿಧಾನಸಭೆಯಾಗಬಹುದು ಎಂದು ಹಲವು ಸಮೀಕ್ಷೆಗಳು ಹೇಳಿದ್ದವು, ಆದರೆ ಆ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿದೆ. 

ಇದನ್ನು ಓದಿ: ಸಂಸತ್ತಿನಲ್ಲಿ ನಮೋಗೆ ಚಪ್ಪಾಳೆಯ ಸ್ವಾಗತ; ಸಂಸದರಿಂದ 3ನೇ ಬಾರಿ ಮೋದಿ ಸರ್ಕಾರ ಘೋಷಣೆ

ಹಾಲಿ ಮುಖ್ಯಮಂತ್ರಿ  ಝೋರಂತಂಗಾ ಐಜ್ವಾಲ್ ಪೂರ್ವ-1 ಕ್ಷೇತ್ರದಲ್ಲಿ ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ನಾಯಕ ಲಾಲ್ತನ್ಸಂಗ ವಿರುದ್ಧ 2,101 ಮತಗಳಿಂದ ಸೋತರು. ಭಾರತೀಯ ಚುನಾವಣಾ ಆಯೋಗದ (ಇಸಿಐ) ಪ್ರಕಾರ, ಮೂರು ಸುತ್ತಿನ ಮತ ಎಣಿಕೆಯ ನಂತರ, ಮುಖ್ಯಮಂತ್ರಿ ಸೋತಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ ಮಾತ್ರವಲ್ಲದೆ, ಮಿಜೋರಾಂ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಆಡಳಿತಾರೂಢ ಎಂಎನ್‌ಎಫ್ ಸಹ ಅಧಿಕಾರ ಕಳೆದುಕೊಂಡಿದೆ. ಸದ್ಯಕ್ಕೆ ವಿರೋಧ ಪಕ್ಷವಾದ ZPM 25 ಸ್ಥಾನಗಳಲ್ಲಿ ಗೆಲುವು ಸಾಧಿಸಿ 2ರಲ್ಲಿ ಮುನ್ನಡೆಯಲ್ಲಿದೆ. ಇನ್ನೊಂದೆಡೆ, ಎಂಎನ್‌ಎಫ್‌ 7 ರಲ್ಲಿ ಗೆದ್ದು 3ರಲ್ಲಿ ಮುನ್ನಡೆ ಸಾಧಿಸಿದೆ. ಮಿಜೋರಾಂ ವಿಧಾನಸಭೆಯ 40 ಸ್ಥಾನಗಳಲ್ಲಿ ZPM ಈಗಾಗಲೇ ಬಹುಮತದ 21 ಅನ್ನು ದಾಟಿದೆ. ಉಳಿದಂತೆ ಬಿಜೆಪಿ 2 ರಲ್ಲಿ ಗೆದ್ದಿದ್ದರೆ, ಕಾಂಗ್ರೆಸ್‌ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. 

ಇದನ್ನು ಓದಿ: 3 ರಾಜ್ಯಗಳಲ್ಲಿ ಕಮಲ ಕಿಲಕಿಲ: ಷೇರುಪೇಟೆಯಲ್ಲಿ ಭರ್ಜರಿ ಜಿಗಿತ; 15 ನಿಮಿಷದಲ್ಲಿ ಹರಿದುಬಂತು 4 ಲಕ್ಷ ಕೋಟಿ!

ಮತ್ತೊಂದು ಆಘಾತಕಾರಿ ಫಲಿತಾಂಶದಲ್ಲಿ ಮಿಜೋರಾಂ ಉಪಮುಖ್ಯಮಂತ್ರಿ ತೌನ್ಲುಯಾ ಕೂಡ ಟುಯಿಚಾಂಗ್‌ನಲ್ಲಿ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಎಂಎನ್‌ಎಫ್ ನಾಯಕರನ್ನು ZPM ಅಭ್ಯರ್ಥಿ W Chhuanawma 909 ಮತಗಳ ಅಂತರದಿಂದ ಸೋಲಿಸಿದ್ದಾರೆ. ಹಾಗೂ, ಮಿಜೋರಾಂ ಆರೋಗ್ಯ ಸಚಿವ ಆರ್. ಲಾಲ್ತಾಂಗ್ಲಿಯಾನಾ ದಕ್ಷಿಣ ತುಯಿಪುಯಿಯಿಂದ ZPM ಅಭ್ಯರ್ಥಿ ಮತ್ತು ಭಾರತದ ಮಾಜಿ ಫುಟ್ಬಾಲ್ ಆಟಗಾರ ಜೆಜೆ ಲಾಲ್ಪೆಖ್ಲುವಾ ವಿರುದ್ಧ 135 ಮತಗಳಿಂದ ಸೋತಿದ್ದಾರೆ. ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಲಾಲ್ರುತ್ಕಿಮಾ ಅವರು ಐಜ್ವಾಲ್ ವೆಸ್ಟ್-II ನಲ್ಲಿ ZPM ನ ಲಾಲ್ಘಿಂಗ್ಲೋವಾ ಹ್ಮಾರ್ ವಿರುದ್ಧ 4,819 ಮತಗಳಿಂದ ಸೋತಿದ್ದಾರೆ.

ಈ ಮಧ್ಯೆ, ZPM ಮುಖ್ಯಸ್ಥ ಮತ್ತು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಲಾಲ್ದುಹೋಮ ಅವರು ಸರ್ಚಿಪ್‌ನಿಂದ ಗೆದ್ದಿದ್ದಾರೆ, MNF ನ ಜೆ ಮಲ್ಸಾಮ್‌ಜುವಾಲಾ ವಂಚವಾಂಗ್ ಅವರನ್ನು 2,982 ಮತಗಳಿಂದ ಸೋಲಿಸಿದ್ದಾರೆ. ಪಕ್ಷ ಅಧಿಕಾರಕ್ಕೆ ಬರುವ ಮುನ್ಸೂಚನೆ ಸಿಗುತ್ತಿದ್ದಂತೆ ಮಂಗಳವಾರ ಅಥವಾ ಬುಧವಾರ ರಾಜ್ಯಪಾಲರನ್ನು ಭೇಟಿಯಾಗಲಿದ್ದು, ಒಂದು ತಿಂಗಳೊಳಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಲಾಲ್ದುಹೋಮ ಹೇಳಿದ್ದಾರೆ. 

ಇದನ್ನು ಓದಿ: ಈಶಾನ್ಯ ಮಿಜೋರಾಂನಲ್ಲಿ ZPM ಮ್ಯಾಜಿಕ್‌; ಮೋದಿ ದೂರ ಮಾಡಿಕೊಂಡ MNFಗೆ ಕೈ ತಪ್ಪುತ್ತಾ ಅಧಿಕಾರ?

Latest Videos
Follow Us:
Download App:
  • android
  • ios