ಭಾರತದ ಆಪರೇಶನ್ ಸಿಂದೂರ ಬಳಿಕ ಪಾಕಿಸ್ತಾನ ಗಡಿ ತೀರದಲ್ಲಿ ಭಾರಿ ಗುಂಡಿನ ದಾಳಿ ನಡೆಸುತ್ತಿದೆ. ಪಾಕಿಸ್ತಾನ ಇದೀಗ ಯುದ್ಧಕ್ಕೆ ಸನ್ನದ್ಧಗೊಂಡಿದೆ. ಇದರ ಪರಿಣಾಮ ಮೇ.10 ರ ವೆರೆಗೆ ಭಾರತದ 11 ನಗರಗಳಿಗೆ ಇಂಡಿಗೋ ವಿಮಾನ ಸೇವೆ ರದ್ದಾಗಿದೆ.
ನವದೆಹಲಿ(ಮೇ.07) ಪೆಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ ಉಗ್ರರ ತಾಣಗಳ ಮೇಲೆ ದಾಳಿ ಮಾಡಿದೆ. ಆಪರೇಶನ್ ಸಿಂದೂರ ಹೆಸರಿನಲ್ಲಿ ಭಾರತ ಪಾಕಿಸ್ತಾನದ 9 ಉಗ್ರರ ತಾಣಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಿದೆ. ಇದು ಪಾಕಿಸ್ತಾನವನ್ನು ಕೆರಳಿಸಿದೆ. ಗಡಿಯಲ್ಲಿ ಭಾರತದ ಹಲವು ಹಳ್ಳಿಗಳ ಮೇಲೆ, ಶಾಲೆಗಳ ಮೇಲೆ ಪಾಕಿಸ್ತಾನ ಸೇನೆ ದಾಳಿ ಮಾಡಿದೆ. ಸದ್ಯ ಪರಿಸ್ಥಿತಿ ಯುದ್ಧಕ್ಕೆ ಹತ್ತಿರವಾಗುತ್ತಿದೆ. ಪಾಕಿಸ್ತಾನ ಪ್ರತಿದಾಳಿ ನಡೆಸುವುದಾಗಿ ಘೋಷಿಸಿದೆ. ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣ ಭಾರತದಲ್ಲಿ ಹಲವು ಸೇವೆಗಳು ರದ್ದಾಗುತ್ತಿದೆ. ಈ ಪೈಕಿ ಇಂಡಿಗೋ ಸುರಕ್ಷತಾ ಕಾರಣಕ್ಕೆ ಮೇ.10ರ ವರೆಗೆ ಭಾರತದ 11 ನಗರಗಳಿಗೆ ವಿಮಾನ ಸೇವೆ ರದ್ದು ಮಾಡಿದೆ.
11 ನಗರಗಳಿಗೆ ವಿಮಾನ ಸೇವೆ ರದ್ದು
ಮೇ.10 ರವರೆಗೆ ದೇಶದ 11 ನಗರಳಿಗೆ ಬರೋಬ್ಬರಿ 165 ವಿಮಾನ ಸೇವೆ ರದ್ದು ಮಾಡಲಾಗಿದೆ. ಮೇ.10ರ ಬೆಳಗಿನ ಜಾವ 5.29ರ ವರೆಗೆ ಕೆಲ ಮಾರ್ಗದ ವಿಮಾನ ಸೇವೆ ರದ್ದು ಮಾಡಲಾಗಿದೆ. ಶ್ರೀನಗರ, ಜಮ್ಮು, ಅಮೃತಸರ, ಚಂಡೀಘಡ. ಧರ್ಮಶಾಲಾ, ಬಿಕಾನೆರ್, ಜೋಧಪುರ, ಗ್ವಾಲಿಯರ್, ಕೃಷ್ಣಘಡ, ರಾಜ್‌ಕೋಟ್ ನಗರಗಳಿಗೆ ಇಂಡಿಗೋ ವಿಮಾನ ಸೇವೆ ರದ್ದಾಗಿದೆ. ಪಾಕಿಸ್ತಾನದ ಜೊತೆಗೆ ಗಡಿ ಹಂಚಿಕೊಂಡಿರುವ ರಾಜ್ಯಗಳ ಪ್ರಮುಖ ವಿಮಾನ ನಿಲ್ದಾಣಗಳಿಗೆ ವಿಮಾನ ಸೇವೆಯನ್ನು ಇಂಡಿಗೋ ರದ್ದು ಮಾಡಿದೆ.
ಆಪರೇಶನ್ ಸಿಂಧೂರ್‌ಗೆ ಯುಕೆ ಮಾಜಿ ಪ್ರಧಾನಿ ಬೆಂಬಲ, ಸಂಚಲನ ಸೃಷ್ಟಿಸಿದ ಕಾಶ್ಮೀರ ಹೇಳಿಕೆ
ಸದ್ಯದ ಪರಿಸ್ಥಿತಿಯನ್ನು ಇಂಡಿಗೋ ಸೂಕ್ಷ್ಮವಾಗಿ ಗಮಿಸುತ್ತಿದೆ. ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅನಾನುಕೂಲಕ್ಕೆ ವಿಷಾಧಿಸುತ್ತೇವೆ ಎಂದು ಇಂಡಿಗೋ ವಿಮಾನ ಸಂಸ್ಥೆ ಹೇಳಿದೆ. ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಘೋಷಿಲಾಗುತ್ತದೆ ಎಂದಿದೆ. ಈ ಮೂಲಕ ಇತರ ನಗರಗಳ ವಿಮಾನ ಸೇವೆ ರದ್ದಾದರೂ ಅಚ್ಚರಿ ಇಲ್ಲ ಅನ್ನೋ ಸೂಚನೆಯನ್ನು ಇಂಡಿಗೋ ವಿಮಾನ ಸಂಸ್ಥೆ ನೀಡಿದೆ.
ಪ್ರಯಾಣಿಕರು ಪ್ರಯಾಣಕ್ಕೂ ಮುನ್ನ ಮಾಹಿತಿ ಪರಿಶೀಲಿಸಿ
ಇಂಡಿಗೋ ವಿಮಾನ ಪ್ರಯಾಣಿಕರು ಪ್ರಯಾಣಕ್ಕಾಗಿ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸುವ ಮೊದಲು ಮಾಹಿತಿ ಪರಿಶೀಲಿಸಿ. ಪ್ರಯಾಣದ ಮಾಹಿತಿ, ವಿಮಾನ ಲಭ್ಯತೆ ಖಚಿತಪಡಿಸಿಕೊಳ್ಳಿ. ಸದ್ಯದ ತುರ್ತು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತೀರಿ ಅನ್ನೋ ವಿಶ್ವಾಸದಲ್ಲಿ ಇಂಡಿಗೋ ವಿಮಾನ ಸಂಸ್ಥೆ ಸೂಚಿಸುತ್ತಿದೆ. ಯಾವುದೇ ಸಮಯದಲ್ಲಿ ವಿಮಾನ ಇಂಡಿಗೋ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಇಂಡಿಗೋ ಹೇಳಿದೆ.
ಆಪರೇಶನ್ ಸಿಂದೂರಕ್ಕೆ ಪಾಕಿಸ್ತಾನ ಪ್ರತಿದಾಳಿ ಸಾಧ್ಯತೆ
ಪೆಹಲ್ಗಾಂ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿದೆ. ಆದರೆ ಈಗಾಗಲೇ ಪಾಕಿಸ್ತಾನ ಗಡಿ ಭಾಗದಲ್ಲಿ ಭಾರತೀಯ ನಾಗರೀಕರ ಮೇಲೆ ದಾಳಿ ಮಾಡಿದೆ. ಇತ್ತ ಭಾರತದ ಆಪರೇಶನ್ ಸಿಂದೂರಕ್ಕೆ ಪ್ರತಿಯಾಗಿ ಸೇನಾ ದಾಳಿ ಮಾಡುವುದಾಗಿ ಹೇಳಿದೆ. ಪಾಕಿಸ್ತಾನ ದಾಳಿಯನ್ನು ಹಿಮ್ಮೆಟ್ಟಿಸಲು ಭಾರತೀಯ ಸೇನೆ ಕೂಡ ಸಜ್ಜಾಗಿದೆ. ಹೀಗಾಗಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಕಿಸ್ತಾನಕ್ಕೆ ಚೀನಾ, ಟರ್ಕಿ ಸೇರಿದಂತೆ ಹಲವು ರಾಷ್ಟ್ರಗಳು ಬೆಂಬಲ ಸೂಚಿಸಿದೆ.
ಭಾರತ ಹಿಂದೆ ಸರಿದರೆ ನಾವು ನಿಲ್ಲಿಸುತ್ತೇವೆ, ದಾಳಿಗೆ ಬೆಚ್ಚಿ ಪಾಕ್ ರಕ್ಷಣಾ ಸಚಿವನ ವರಸೆ ಬದಲು


