ಭೂಮಿಯಿಂದ ಹೊರಗೆ 1 ಗಂಟೆ ಅಂತರಿಕ್ಷದಲ್ಲಿ ಸುತ್ತಾಡುವ ಪ್ರವಾಸಮುಂಬೈನ ಸ್ಪೇಸ್‌ ಔರಾ ಏರೋಸ್ಪೇಸ್‌ ಟೆಕ್‌ ಕಂಪನಿಯಿಂದ ಆಯೋಜನೆಮೊದಲ ಹಾರಾಟದ 6ರ ಪೈಕಿ 4 ಸೀಟು ಭರ್ತಿ: ಇನ್ನೆರಡೇ ಸೀಟು ಬಾಕಿ

ಡೆಹ್ರಾಡೂನ್‌: ಅಮೆಜಾನ್‌ನ ಜೆಫ್‌ ಬೆಜೋಸ್‌, ಸ್ಪೇಸ್‌ ಎಕ್ಸ್‌ನ ಎಲಾನ್‌ ಮಸ್ಕ್ ಮತ್ತು ವರ್ಜಿನ್‌ ಗ್ಯಾಲಾಕ್ಟಿಕ್‌ನ ರಿಚರ್ಡ್‌ ಬ್ರಾನ್ಸನ್‌ ಜಾಗತಿಕ ಮಟ್ಟದಲ್ಲಿ ಬಾಹ್ಯಾಕಾಶ ಪ್ರವಾಸೋದ್ಯಮ ಯೋಜನೆಗೆ ಚಾಲನೆ ನೀಡಿರುವ ಬೆನ್ನಲ್ಲೇ, ಭಾರತದಲ್ಲೂ ಅಂಥದ್ದೇ ಯೋಜನೆಯೊಂದು ಸಿದ್ಧಗೊಳ್ಳುತ್ತಿದೆ. ಮುಂಬೈ ಮೂಲದ ಕಂಪನಿಯೊಂದು ಇನ್ನು 2 ವರ್ಷದಲ್ಲಿ ಅಂದರೆ 2025ರ ವೇಳೆಗೆ ಪ್ರವಾಸಿಗರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯಲು ಎಲ್ಲಾ ಸಿದ್ಧತೆ ಆರಂಭಿಸಿದೆ.

ಮುಂಬೈ ಮೂಲದ ಸ್ಪೇಸ್‌ ಔರಾ ಏರೋಸ್ಪೇಸ್‌ ಟೆಕ್ನಾಲಜಿ (Space Aura Aerospace Technology) ಪ್ರೈ.ಲಿ. ಎಂಬ ಕಂಪನಿ ಭಾರತದಲ್ಲೂ ಬಾಹ್ಯಾಕಾಶ ಪ್ರವಾಸೋದ್ಯಮ ಆರಂಭಕ್ಕೆ ಸಿದ್ಧತೆಗಳನ್ನು ನಡೆಸಿದ್ದು ಬಾಹ್ಯಾಕಾಶ ಪ್ರವಾಸಿಗಳನ್ನು ಕರ್ನಾಟಕ (Karnataka) ಅಥವಾ ಮಧ್ಯಪ್ರದೇಶದ (Madhya Pradesh) ಯಾವುದಾದರೂ ಒಂದು ಸ್ಥಳದಿಂದ ಹಾರಿಬಿಡಲು ಯೋಜಿಸಿದೆ.

ಏನಿದು ಯೋಜನೆ?:

6 ಪ್ರವಾಸಿಗರು ಮತ್ತು ಒಬ್ಬ ಪೈಲಟ್‌ ಸೇರಿ 7 ಪ್ರವಾಸಿಗರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಕ್ಯಾಪ್ಯೂಲ್‌ (capsule) ಅನ್ನು ಮುಂಬೈ ಮೂಲದ ಕಂಪನಿ ಸಿದ್ಧಪಡಿಸುತ್ತಿದೆ. ಇದರಲ್ಲಿ ಅತ್ಯಾಧುನಿಕ ಸೌಕರ್ಯ, ಸಂವಹನ ಉಪಕರಣ ಸೇರಿದಂತೆ ಎಲ್ಲಾ ಔಷಾರಾಮಿ ಸವಲತ್ತುಗಳು ಇರಲಿವೆ.

ಹಾರಾಟ ಹೇಗೆ?:

ಈ ಕ್ಯಾಪ್ಯೂಲ್‌ ಅನ್ನು ಹೀಲಿಯಂ ಅಥವಾ ಹೈಡ್ರೋಜನ್‌ ತುಂಬಿದ ಬಲೂನ್‌ಗಳು ಭೂಮಿಯಿಂದ 35 ಕಿ.ಮೀ. ಎತ್ತರ ಅಂದರೆ ಸುಮಾರು 100000 ಅಡಿ ಎತ್ತರದ ಭೂಮಿಯ ಅಂಚಿನವರೆಗೆ ಕೊಂಡೊಯ್ಯಲಿದೆ. ಅಲ್ಲಿ ಪ್ರವಾಸಿಗರು ಒಂದು ಗಂಟೆ ಕಾಲ ಇದ್ದು ಬಳಿಕ ಭೂಮಿಗೆ ಮರಳಬಹುದು. ಮರಳು ವೇಳೆ ಬಲೂನ್‌ನಲ್ಲಿ ಗಾಳಿಯನ್ನು ಹೊರತೆಗೆದು ಬಳಿಕ ಪ್ಯಾರಾಚೂಟ್‌ (parachute) ಮೂಲಕ ಕ್ಯಾಪ್ಯೂಲ್‌ (capsule) ಅನ್ನು ನಿಧಾನವಾಗಿ ಭೂಮಿಯಲ್ಲಿ ನಿಗದಿತ ಸ್ಥಾನಕ್ಕೆ ಕರೆ ತರಲಾಗುವುದು.

ಹೊತ್ತಿ ಉರಿಯುವ ಸೂರ್ಯನೂ ನಗುವ... ಫೋಟೋ ಶೇರ್ ಮಾಡಿದ ನಾಸಾ

5 ಗಂಟೆ:

ಭೂಮಿಯಿಂದ ಹಾರಾಟ ಆರಂಭಿಸಿ, ಭೂಮಿಯ ಅಂಚಿನಲ್ಲಿ 1 ಗಂಟೆ ಭೂಮಿಯ ಸೌಂದರ್ಯ ಸವಿದು ಮರಳಿ ಭೂಮಿಗೆ ಮರಳುವ ಎಲ್ಲಾ ಸಮಯ ಸೇರಿ ಒಟ್ಟಾರೆ ಪ್ರಯಾಣದ ಅವಧಿ 5 ಗಂಟೆಗಳಾಗಿರಲಿದೆ

4 ಸೀಟ್‌ ಬುಕ್‌:

ಮೊದಲ ಪ್ರಯಾಣಕ್ಕೆ ಲಭ್ಯವಿರುವ 6 ಸೀಟುಗಳ ಪೈಕಿ ಈಗಾಗಲೇ 4 ಸೀಟು ಮುಂಗಡ ಕಾದಿರಿಸಲಾಗಿದ್ದು, ಉಳಿದ 2 ಸೀಟು ಪ್ರವಾಸಿಗರಿಗೆ ಲಭ್ಯವಿದೆ ಎಂದು ಕಂಪನಿ ಹೇಳಿಕೊಂಡಿದೆ. ಪ್ರತಿ ಪ್ರಯಾಣಿಕರಿಗೆ ಎಷ್ಟುಶುಲ್ಕ ವಿಧಿಸಲಾಗುವುದು ಎಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲವಾದರೂ, ಪ್ರತಿಯೊಬ್ಬರಿಗೆ ಕನಿಷ್ಠ 50 ಲಕ್ಷ ರು. ವೆಚ್ಚವಾಗಲಿದೆ ಎನ್ನಲಾಗಿದೆ.

ಚೀನಾದಿಂದ ಮಹತ್ವದ ಹೆಜ್ಜೆ, ಅಧ್ಯಯನಕ್ಕಾಗಿ ಬಾಹ್ಯಾಕಾಶಕ್ಕೆ ಕೋತಿ ಕಳುಹಿಸಲು ನಿರ್ಧಾರ!

ಪ್ರದರ್ಶನ:

ಪ್ರವಾಸಿಗರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಕ್ಯಾಪ್ಯೂಲ್‌ಗೆ ಎಸ್‌ಕೆಎಪಿ 1 ಎಂದು ಹೆಸರಿಡಲಾಗಿದ್ದು, ಅದನ್ನು ಉತ್ತರಾಖಂಡದ (Uttarakhand) ಡೆಹ್ರಾಡೂನ್‌ನಲ್ಲಿ (Dehradun) ಆಯೋಜಿಸಿರುವ ‘ಅಕ್ಷಯ್‌ ತತ್ವ’ ವಿಜ್ಞಾನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿದೆ.