Asianet Suvarna News Asianet Suvarna News

ಚೀನಾದಿಂದ ಮಹತ್ವದ ಹೆಜ್ಜೆ, ಅಧ್ಯಯನಕ್ಕಾಗಿ ಬಾಹ್ಯಾಕಾಶಕ್ಕೆ ಕೋತಿ ಕಳುಹಿಸಲು ನಿರ್ಧಾರ!

ಚೀನಾ ಬಾಹ್ಯಾಕಾಶ ಸಂಸ್ಥೆ ಇದೀಗ ಮಹತ್ವದ ಹೆಜ್ಜೆ ಇಟ್ಟಿದೆ. ಶೂನ್ಯ ಗುತ್ವಾಕರ್ಷಣೆಯಲ್ಲಿ ಪ್ರಾಣಿಗಳು ವಾಸಿಸಲು ಸಾಧ್ಯವೇ ಅನ್ನೋದನ್ನು ತಿಳಿಯಲು ಚೀನಾ ಮುಂದಾಗಿದೆ. ಇದಕ್ಕಾಗಿ ಕೋತಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುತ್ತಿದೆ.

china Tiangong station plan to send monkeys to space for study how they grow zero gravity environment ckm
Author
First Published Nov 6, 2022, 3:53 PM IST

ಬೀಜಿಂಗ್(ನ.06): ಬಾಹ್ಯಾಕಾಶ ವಿಸ್ಮಯಗಳ ಆಗರ, ಜೊತೆಗೆ ಅಧ್ಯಯನದ ತಾಣ. ಈಗಾಗಲೇ ಬಾಹ್ಯಾಕಾಶ ಅಧ್ಯಯನವನ್ನು ಭಾರತ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ನಡೆಸುತ್ತಲೇ ಇದೆ. ಚಂದ್ರ ಸೇರಿದಂತೆ ಇತರ ಗ್ರಹಗಳಲ್ಲಿ ಪ್ರಾಣಿಗಳ ವಾಸ, ಸೇರಿದಂತೆ ಹಲವು ವಿಚಾರಗಳ ಕುರಿತು ನಿರಂತರ ಅಧ್ಯಯನ ನಡೆಯುತ್ತಿದೆ. ಇದೀಗ ಚೀನಾದ ತಿಯಾಂಗಾಂಗ್ ಬಾಹ್ಯಾಕಾಶ ಸಂಸ್ಥೆ ಮಹತ್ವದ ನಿರ್ಧಾರ ಪ್ರಕಟಿಸಿದೆ. ಶೀಘ್ರದಲ್ಲೇ ಬಾಹ್ಯಾಕಾಶಕ್ಕೆ ಕೋತಿಗಳನ್ನು ಕಳುಹಿಸುತ್ತಿದೆ. ಶೂನ್ಯ ಗುರುತ್ವಾಕರ್ಷಣೆಯಲ್ಲಿ ಪ್ರಾಣಿಗಳ ವಾಸಿಸಲು ಸಾಧ್ಯವೇ? ಈ ಕುರಿತು ಅಧ್ಯಯನ ನಡೆಸುತ್ತಿರುವ ಚೀನಾ ಬಾಹ್ಯಾಕಾಶ ಸಂಸ್ಥೆ, ಕೋತಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಅಧ್ಯಯನ ಮಾಡುತ್ತಿದೆ ಎಂದು ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಈ ಅಧ್ಯಯನದಿಂದ ಬಾಹ್ಯಾಕಾಶದಲ್ಲಿ ಪ್ರಾಣಿಗಳ ಇರುವಿಕೆ, ಶೂನ್ಯ ಗುರುತ್ವಾಕರ್ಷಣೆ ವಾತಾವರಣದಲ್ಲಿನ ಪ್ರಾಣಿಗಳು ಪರಿಸ್ಥಿತಿಗೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ಅಧ್ಯಯನ ಮಾಡಲು ಸಾಧ್ಯವಾಗಲಿದೆ ಎಂದು ಚೀನಾದ ವಿಜ್ಞಾನ ಶೈಕ್ಷಣಿ ಸಂಸ್ಥೆ ಸಂಶೋಧಕ ಝಾಂಗ್ ಲು ಹೇಳಿದ್ದಾರೆ.

ಶೂನ್ಯ ಗುತ್ವಾಕರ್ಷಣೆಯಲ್ಲಿ ಕೋತಿಗಳು ಪ್ರತಿ ನಿಮಿಷ ಇರುವುದು ಕಷ್ಟವಾಗಲಿದೆ ಅನ್ನೋದು ನಮಗೆ ತಿಳಿದಿದೆ. ಆದರೆ ಈ ಪರಿಸ್ಥಿತಿಯನ್ನು ಕೋತಿಗಳು ಹೇಗೆ ನಿಭಾಯಿಸಲಿದೆ ಅನ್ನೋದು ಮಹತ್ವವಾಗಲಿದೆ. ಕೋತಿಗಳ ಮೂಲಕ ಬಾಹ್ಯಾಕಾಶದಲ್ಲಿ ಪ್ರಾಣಿಗಳ ಇರುವಿಕೆಯನ್ನು ಅಧ್ಯಯನ ಮಾಡಲು ಸಾಧ್ಯವಿದೆ. ಮೊದಲು ಕೋತಿಗಳು ಪರಿಸ್ಥಿತಿಯನ್ನು ನಿಭಾಯಿಸಿದರೆ, ಬಾಹ್ಯಾಕಾಶದಲ್ಲೇ ಕೋತಿಗಳ ಸಂತತಿ ಹೆಚ್ಚಿಸಲು ನಿರ್ಧರಿಸಲಾಗಿದೆ. ಇನ್ನು ಬಾಹ್ಯಾಕಾಶದಲ್ಲಿ ಕೋತಿಗಳ ಮಲ ಹಾಗೂ ಮೂತ್ರ ಅಧ್ಯಯನ ವಿಚಾರವಾಗಿ ಮಹತ್ವವಾಗಲಿದೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ.

ಹೊತ್ತಿ ಉರಿಯುವ ಸೂರ್ಯನೂ ನಗುವ... ಫೋಟೋ ಶೇರ್ ಮಾಡಿದ ನಾಸಾ

ಅಧ್ಯಯನದ ವೇಳೆ ಕೋತಿಗಳಿಗೆ ವಿವಿಧ ಆಹಾರಗಳನ್ನು ನೀಡಲಾಗುತ್ತದೆ. ಇವುಗಳ ಯಾವ ರೀತಿ ಜೀರ್ಣವಾಗಲಿದೆ ಅನ್ನೋದು ಅಧ್ಯಯನ ನಡೆಸಲಾಗುತ್ತದೆ. ಸಾಮಾನ್ಯವಾಗಿ ಕೋತಿಗಳಲ್ಲಿ ಕಾಣಿಸಿಕೊಳ್ಳಲಿರುವ ಆರೋಗ್ಯ ಸಮಸ್ಯೆಗಳೂ ಬಾಹ್ಯಾಕಾಶದಲ್ಲಿ ಎದುರಾದರೆ ಚಿಕಿತ್ಸೆಗೂ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಕೋತಿಗಳು ವಾಸ ಯಶಸ್ವಿಯಾದರೆ ಮನುಷ್ಯ ಸೇರಿದಂತೆ ಇತರ ಪ್ರಾಣಿಗಳಿಗೂ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗಲಿದೆ. ಹೀಗಾಗಿ ಈ ಬಾರಿ ತತಿಯಾಂಗಾಂಗ್ ಬಾಹ್ಯಾಕಾಶ ಸಂಸ್ಥೆಯ ಅಧ್ಯಯನ ಅತ್ಯಂತ ಮಹತ್ವ ಪಡೆದುಕೊಂಡಿದೆ.

ಬಾಹ್ಯಾಕಾಶ ನಿಲ್ದಾಣ ಸೇರಿದ ಚೀನಾದ 2ನೇ ಲ್ಯಾಬ್‌ ಮಾಡ್ಯೂಲ್‌
ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ತನ್ನ ಬಾಹ್ಯಾಕಾಶ ನಿಲ್ದಾಣದಲ್ಲಿ 2ನೇ ಲ್ಯಾಬ್‌ ಮಾಡ್ಯೂಲ್‌ ಅನ್ನು ಸ್ಥಾಪಿಸುವುದರಲ್ಲಿ ಚೀನಾ ಸೋಮವಾರ ಯಶಸ್ಸುಗಳಿಸಿದೆ. ಈ ಲ್ಯಾಬ್‌ ಮಾಡ್ಯೂಲ್‌ಗೆ ಮೆಂಗ್ಟಿಯನ್‌ ಎಂದು ಹೆಸರಿಸಲಾಗಿದ್ದು, ಚೀನಾದ ಅತಿದೊಡ್ಡ ರಾಕೆಡ್‌ ಲಾಂಗ್‌ಮಾಚ್‌ರ್‍-5ಬಿ ವೈ4 ರಾಕೆಟ್‌ ಬಳಸಿ ವೆನ್‌ಚಾಂಗ್‌ನಿಂದ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗಿದೆ. ರಾಕೆಟ್‌ ಉಡಾವಣೆಯಾದ 10 ನಿಮಿಷಗಳಲ್ಲೇ ನಿಗದಿತ ಕಕ್ಷೆಗೆ ಸರಿಯಾಗಿ ತಲುಪಿದ್ದು ಚೀನಾದ ಬಾಹ್ಯಾಕಾಶ ಸಂಶೋಧನಾ ಏಜೆನ್ಸಿ ಈ ಮಿಷನ್‌ ಯಶಸ್ವಿಯಾಗಿದೆ ಎಂದು ಘೋಷಣೆ ಮಾಡಿದ್ದಾರೆ. ಮೆಂಗ್ಟಿಯನ್‌ ಮಾಡ್ಯೂಲ್‌ನಲ್ಲಿ ವೈಜ್ಞಾನಿಕ ಉಪಕರಣಗಳಿದ್ದು, ಸೂಕ್ಷ್ಮ ಗುರುತ್ವಾಕರ್ಷಣೆ (ಮೈಕ್ರೋಗ್ರಾವಿಟಿ), ದ್ರವ ಭೌತಶಾಸ್ತ್ರ, ವಸ್ತು ವಿಜ್ಞಾನ ಮೊದಲಾದವುಗಳ ಅಧ್ಯಯನಕ್ಕೆ ಇದನ್ನು ಬಳಸಲಾಗುವುದು ಎಂದು ಚೀನಾ ಮಾಧ್ಯಮಗಳು ತಿಳಿಸಿವೆ.

 

NASA ರಾಕೆಟ್‌ ಡಿಕ್ಕಿ ಹೊಡೆಸಿ ಕ್ಷುದ್ರಗ್ರಹದ ದಿಕ್ಕೇ ಬದಲು: ಅಮೆರಿಕ ಅಪೂರ್ವ ಸಾಹಸ
 

Follow Us:
Download App:
  • android
  • ios