ಥಾಯ್ಲೆಂಡ್‌ನ ಪಟ್ಟಾಯದಲ್ಲಿ ಎಸ್ಕಾರ್ಟ್ ಸೇವೆಗಳ ಹಣ ಪಾವತಿ ವಿವಾದದ ಹಿನ್ನೆಲೆಯಲ್ಲಿ, ಟ್ರಾನ್ಸ್‌ಜೆಂಡರ್ ಮಹಿಳೆಯರ ಗುಂಪು 52 ವರ್ಷದ ಭಾರತೀಯ ಪ್ರಜೆ ರಾಜ್ ಜಸುಜಾ ಅವರ ಮೇಲೆ ಹಲ್ಲೆ ನಡೆಸಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನವದೆಹಲಿ (ಜ.5): ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಎಸ್ಕಾರ್ಟ್ ಸೇವೆಗಳನ್ನು ಬಳಸಿಕೊಂಡು, ಹಣ ಆವತಿ ಮಾಡುವ ವಿಚಾರದಲ್ಲಿ ಸಮಸ್ಯೆ ಆದ ನಂತರ ಟ್ರಾನ್ಸ್‌ವುಮೆನ್‌ಗಳ ಗುಂಪು ಭಾರತದ ವ್ಯಕ್ತಿಯ ಮೇಲೆ ಭಾರೀ ಹಲ್ಲೆ ಮಾಡಿದೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಥೈಲ್ಯಾಂಡ್‌ನ ಜನಪ್ರಿಯ ಪ್ರವಾಸಿ ನಗರವಾದ ಪಟ್ಟಾಯದಲ್ಲಿ ಲೈಂಗಿಕ ಸೇವೆಗಳಿಗೆ ಹಣ ಪಾವತಿಸುವ ಬಗ್ಗೆ ವಿವಾದ ಉಂಟಾದ ಹಿನ್ನೆಲೆಯಲ್ಲಿ 52 ವರ್ಷದ ಭಾರತೀಯ ಪ್ರಜೆ ರಾಜ್ ಜಸುಜಾ ಅವರನ್ನು ಟ್ರಾನ್ಸ್‌ಜೆಂಡರ್ ಮಹಿಳೆಯರ ಗುಂಪು ಹಲ್ಲೆ ನಡೆಸಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ರಾಜ್ ಜಸುಜಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಲವಾರು ಸ್ಥಳೀಯ ಮತ್ತು ಅಂತರರಾಷ್ಟ್ರೀಯ ವರದಿಗಳು ತಿಳಿಸಿವೆ.
ಕಳೆದ ಡಿಸೆಂಬರ್ 27ರ ಮುಂದಾಜೆ ಪಟ್ಟಾಯದ ಪ್ರಸಿದ್ಧ ವಾಕಿಂಗ್ ಸ್ಟ್ರೀಟ್‌ನ ಪ್ರವೇಶದ್ವಾರದ ಬಳಿ ಈ ಘಟನೆ ಆಗಿದೆ. ಇದು ಪ್ರವಾಸಿಗರು ಮತ್ತು ಸ್ಥಳೀಯರು ಆಗಾಗ್ಗೆ ಭೇಟಿ ನೀಡುವ ಜನನಿಬಿಡ ನೈಟ್‌ಲೈಫ್ ಮತ್ತು ಮನರಂಜನಾ ಪ್ರದೇಶವಾಗಿದೆ. ಸಾರ್ವಜನಿಕ ರಸ್ತೆಯಲ್ಲಿ ಹಲ್ಲೆ ನಡೆಯುತ್ತಿರುವುದನ್ನು ತೋರಿಸುವ ಘರ್ಷಣೆಯ ವೀಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಕ್ವಿಕ್ ವೈರಲ್ ಆಗಿದ್ದು, ಆನ್‌ಲೈನ್‌ನಲ್ಲಿ ವ್ಯಾಪಕ ಕಾಮೆಂಟ್‌ಗಳು ಬಂದಿವೆ.
ಈ ವಿಡಿಯೋದಲ್ಲಿ ಟ್ರಾನ್ಸ್‌ಜೆಂಡರ್ ಮಹಿಳೆಯರು, ಜಸುಜಾ ಅವರೊಂದಿಗೆ ವಾಗ್ವಾದ ನಡೆಸಿದ್ದು ಕಂಡಿದೆ. ಬಳಿಕ ಆತನನ್ನು ಅವರ ಗಾಡಿಯಿಂದ ಹಿಡಿದು ಎಳೆದು ಹಲ್ಲೆ ಮಾಡಿದ್ದಾರೆ. ಇದಕ್ಕೆ ಅಕ್ಕಪಕ್ಕದವ ಟ್ರಾನ್ಸ್‌ಜೆಂಡರ್‌ಗಳೂ ಸಾಥ್ ನೀಡಿದ್ದಾರೆ. ಜಸುಜಾರನ್ನು ಒದ್ದು, ಚಪ್ಪಲಿಯಲ್ಲಿ ಹೊಡೆದು ಹಲ್ಲೆ ಮಾಡಿದ್ದಾರೆ. ತೀವ್ರವಾದ ಹಲ್ಲೆಮಾಡುತ್ತಿದ್ದರೆ,ಅಕ್ಕಪಕ್ಕದವರು ಇದನ್ನು ನೋಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
19 ವರ್ಷದ ಥಾಯ್ ಪ್ರತ್ಯಕ್ಷದರ್ಶಿಯೊಬ್ಬರು ಹೇಳುವ ಪ್ರಕಾರ,ವಾಕಿಂಗ್ ಸ್ಟ್ರೀಟ್ ಬಳಿ ಜಸುಜಾ ಮತ್ತು ಟ್ರಾನ್ಸ್ಜೆಂಡರ್ ಲೈಂಗಿಕ ಕಾರ್ಯಕರ್ತೆಯರಲ್ಲಿ ಒಬ್ಬರ ನಡುವೆ ಆರಂಭಿಕ ಮಾತಿನ ಚಕಮಕಿ ನಡೆದಿತ್ತು. ಅದನ್ನು ನಾನು ನೋಡಿದೆ ಎಂದಿದ್ದಾರೆ. ಆಕೆಯ ಪ್ರಕಾಯ, ಎರಡೂ ಕಡೆಯವರು ಪರಸ್ಪರ ಬೆನ್ನಟ್ಟಿ ಹೊಡೆದಾಟ ನಡೆಸಿದರು. ನಂತರ ಹೆಚ್ಚಿನ ಸಂಖ್ಯೆಯ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ಸೇರಿಕೊಂಡರು. ಇದರ ಪರಿಣಾಮವಾಗಿ ಗುಂಪು ಹಲ್ಲೆ ನಡೆಯಿತು ಎಂದಿದ್ದಾರೆ.
ಮುಖ ಹಾಗೂ ತಲೆಗೆ ಗಾಯ
ಸವಾಂಗ್ ಬೊರಿಬೂನ್ ಧಮ್ಮಸ್ತಾನ್ ಫೌಂಡೇಶನ್‌ನ ತುರ್ತು ಸಿಬ್ಬಂದಿಗೆ ಬೆಳಿಗ್ಗೆ 5:30 ರ ಸುಮಾರಿಗೆ ಕರೆ ಬಂದಿತು ಮತ್ತು ಅವರು ಸ್ಥಳಕ್ಕೆ ಧಾವಿಸಿದರು. ಜಸುಜಾ ಅವರ ಮುಖ ಮತ್ತು ತಲೆಯ ಹಿಂಭಾಗದಲ್ಲಿ ಗಾಯಗಳಾಗಿದ್ದು ಗೊತ್ತಾಗಿದೆ. ರಸ್ತೆಬದಿಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ, ಅವರನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಪಟ್ಟಮಕುನ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಜಸುಜಾ ಅವರ ಸ್ಥಿತಿ ಸ್ಥಿರವಾಗಿದ್ದು, ಗಾಯಗಳ ತೀವ್ರತೆಗೆ ಆಸ್ಪತ್ರೆಯ ಆರೈಕೆ ಅಗತ್ಯವಾಗಿತ್ತು ಎನ್ನಲಾಗಿದೆ.
ಘಟನೆಯ ಬಗ್ಗೆ ಶೀಘ್ರವೇ ದೂರು
ಘಟನೆಯ ಬಗ್ಗೆ ಥಾಯ್ ಅಧಿಕಾರಿಗಳಿಗೆ ತಿಳಿಸಲಾಗಿದೆ. ಜಸುಜಾ ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಔಪಚಾರಿಕ ದೂರು ದಾಖಲಿಸುವಂತೆ ಕೇಳಿಕೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ, ಇದು ತನಿಖಾಧಿಕಾರಿಗಳಿಗೆ ಥಾಯ್ ಕಾನೂನಿನಡಿಯಲ್ಲಿ ಪ್ರಕರಣವನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಮತ್ತು ತನಿಖೆಯ ಭಾಗವಾಗಿ ಅಧಿಕಾರಿಗಳು ಲಭ್ಯವಿರುವ ಸಿಸಿಟಿವಿ ಮತ್ತು ವೈರಲ್ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ವರದಿಯಾಗಿದೆ.


