ಅಯೋಧ್ಯೆ ರಾಮಮಂದಿರಕ್ಕೆ ಬರಲಿದೆ ಥಾಯ್ಲೆಂಡ್ ಮಣ್ಣು, ಕಾರಣವೇನು?
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಮುಕ್ತಾಯವಾಗುವ ದಿನ ಹತ್ತಿರವಾಗುತ್ತಿದ್ದು, ಪ್ರಾಣಪ್ರತಿಷ್ಠಾಪನೆಯ ದಿನ ಕೂಡ ಸಮೀಪಿಸುತ್ತಿದೆ. ಈ ನಡುವೆ ರಾಮಮಂದಿರಕ್ಕೆ ಥಾಯ್ಲೆಂಡ್ ದೇಶದಿಂದ ಮಣ್ಣು ಬರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ನವದೆಹಲಿ (ನ.28): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವು ಮುಕ್ತಾಯದ ಹಂತದಲ್ಲಿದೆ ಮತ್ತು 2024 ರಲ್ಲಿ ಅದರ ಭವ್ಯ ಉದ್ಘಾಟನೆಗೆ ಇಡೀ ದೇಶವು ಕುತೂಹಲದಿಂದ ಕಾಯುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಗೆ ಮುಂಚಿತವಾಗಿ ವಿಶೇಷ ಎನಿಸುವ ರೀತಿಯಲ್ಲಿ ಥಾಯ್ಲೆಂಡ್‌ನಿಂದ ರಾಮಜನ್ಮಭೂಮಿಗೆ ಮಣ್ಣನ್ನು ಕಳುಹಿಸಲಾಗುತ್ತದೆ. ರಾಮ್ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾ ಸಮಾರಂಭ ಮುಂದಿನ ವರ್ಷ ಜನವರಿ 22 ರಂದು ನಡೆಯಲಿದೆ. ಅಯೋಧ್ಯೆಯಲ್ಲಿ ಸುಮಾರು 80,000 ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲು ಹಲವಾರು ಟೆಂಟ್ ಸಿಟಿಗಳನ್ನು ನಿರ್ಮಿಸಲಾಗುತ್ತಿದೆ, ಲಕ್ಷಾಂತರ ಭಕ್ತಾದಿಗಳು ಮಹಾ ಕಾರ್ಯಕ್ರಮಕ್ಕಾಗಿ ದೇವಾಲಯದ ಪಟ್ಟಣಕ್ಕೆ ಆಗಮಿಸುವ ನಿರೀಕ್ಷೆಯಿದೆ. “ನಾವು ಈಗಾಗಲೇ ಥೈಲ್ಯಾಂಡ್‌ನ ಎರಡು ನದಿಗಳಿಂದ ನೀರನ್ನು ಪ್ರಭು ಶ್ರೀರಾಮನ ದೇವಸ್ಥಾನಕ್ಕೆ ಕಳುಹಿಸಿದ್ದೇವೆ. ಈಗ ಇಲ್ಲಿಂದ ಮಣ್ಣು ಕಳುಹಿಸುತ್ತೇವೆ. ಭಾರತದೊಂದಿಗೆ ಥೈಲ್ಯಾಂಡ್ ಆಳವಾದ ಸಾಂಸ್ಕೃತಿಕ ಸಂಬಂಧವನ್ನು ಹೊಂದಿದೆ. ಇದು ಮತ್ತಷ್ಟು ಬಲಗೊಳ್ಳುತ್ತದೆ. ಗೋವಿಂದ ಬ್ರಿಜ್ ಮಹಾರಾಜರು ಇಲ್ಲಿಗೆ ಬಂದಿದ್ದಾರೆ. ಮಣ್ಣನ್ನು ಅಯೋಧ್ಯೆಗೆ ಕೊಂಡೊಯ್ಯಲು ನಾವು ಅವರಿಗೆ ಹಸ್ತಾಂತರಿಸಲಿದ್ದೇವೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಥಾಯ್ಲೆಂಡ್ ಅಧ್ಯಕ್ಷ ಸುಶೀಲ್‌ಕುಮಾರ್ ಸರಾಫ್ ಮಾಧ್ಯಮ ಪೋರ್ಟಲ್‌ಗೆ ತಿಳಿಸಿದ್ದಾರೆ.
ಶ್ರೀರಾಮ ಎಂದಿಗೂ ಈಗಿನ ಥಾಯ್ಲೆಂಡ್ ದೇಶವಾಗಿರುವ ಪ್ರದೇಶಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಮಣ್ಣಿನಲ್ಲಿ ಕಾಲಿಟ್ಟಿದ್ದರು ಎನ್ನುವ ಇತಿಹಾಸವಿಲ್ಲ. ಆದರೆ ರಾಮಾಯಣವು ಥೈಲ್ಯಾಂಡ್, ಕಾಂಬೋಡಿಯಾ, ಇಂಡೋನೇಷಿಯಾ ಮತ್ತು ಲಾವೋಸ್ ಸೇರಿದಂತೆ ಆಗ್ನೇಯ ಏಷ್ಯಾದ ವಿವಿಧ ಸಂಸ್ಕೃತಿಗಳ ಮೇಲೆ ಮಹತ್ವದ ಪ್ರಭಾವವನ್ನು ಬೀರಿದೆ.
ಥೈಲ್ಯಾಂಡ್‌ನಲ್ಲಿ, ರಾಮಾಯಣದ ಥಾಯ್ ಆವೃತ್ತಿಯನ್ನು ರಾಮಕಿಯನ್ ಅಥವಾ ರಾಮಕೀರ್ತಿ ಎಂದು ಕರೆಯಲಾಗುತ್ತದೆ. ಕಥೆಯನ್ನು ಥಾಯ್ ಕಲೆ, ಸಾಹಿತ್ಯ, ನೃತ್ಯ, ರಂಗಭೂಮಿ ಮತ್ತು ದೇವಾಲಯಗಳು ಮತ್ತು ಅರಮನೆಗಳ ವಾಸ್ತುಶಿಲ್ಪದಲ್ಲಿ ಅಳವಡಿಸಲಾಗಿದೆ ಮತ್ತು ಸಂಯೋಜಿಸಲಾಗಿದೆ.
ಅಯೋಧ್ಯೆ ರಾಮ ಪ್ರತಿಷ್ಠಾಪನೆಗೆ ಜ.22ರ ಮಧ್ಯಾಹ್ನ 12.20ರ ಮುಹೂರ್ತ
ಇದಲ್ಲದೆ, ಭಗವಾನ್ ರಾಮನ ಕಥೆಗೆ ಥೈಲ್ಯಾಂಡ್‌ನ ಗೌರವವು ಪ್ರಾಚೀನ ಭಾರತ ಮತ್ತು ಥೈಲ್ಯಾಂಡ್ ನಡುವಿನ ಹಂಚಿಕೆಯ ಸಂಸ್ಕೃತಿಯಲ್ಲಿ ಬೇರುಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಹಿಂದೂ-ಬೌದ್ಧ ಪ್ರಭಾವವು ಕನಿಷ್ಠ 11 ನೇ ಶತಮಾನದಿಂದಲೂ ಥೈಲ್ಯಾಂಡ್‌ನಲ್ಲಿ ಧಾರ್ಮಿಕ ದೃಶ್ಯದ ಭಾಗವಾಗಿದೆ.
ಆಯೋಧ್ಯೆ ರಾಮ ಮಂದಿರ ಅರ್ಚಕ ಸೇವೆಗೆ 3,000 ಅರ್ಜಿ, 20 ಮಂದಿ ಆಯ್ಕೆ!