ಪ್ರಯಾಣಿಕರಿಗೆ ಗುಡ್‌ನ್ಯೂಸ್, ರೈಲ್ವೆ AC ಎಕಾನಮಿ ಟಿಕೆಟ್ ದರ ಇಳಿಕೆ
ರೈಲ್ವೆ ಇಲಾಖೆಯ ಅಧಿಕಾರಿಗಳ ನೀಡಿರುವ ಪ್ರಕಾರ, ಆನ್‌ಲೈನ್‌ನಲ್ಲಿ ಹಾಗೂ ಕೌಂಟರ್‌ನಲ್ಲಿ ಈಗಾಗಲೇ ಟಿಕೆಟ್ ಬುಕ್ ಮಾಡಿದವರಿಗೆ ರೀಫಂಡ್ ಮಾಡಲಾಗುತ್ತದೆ. ಮಾರ್ಚ್ 22 ಹಾಗೂ ಅದರ ನಂತರದ ಟಿಕೆಟ್‌ಗಳಿಗೆ ಇದು ಅನ್ವಯವಾಗಲಿದೆ ಎಂದಿದೆ.
ಬೆಂಗಳೂರು (ಮಾ.23): ದೇಶದ ಜನಸಾಮಾನ್ಯರ ನರನಾಡಿಯಾಗಿರುವ ಇಂಡಿಯನ್ ರೈಲ್ವೇಸ್, ಪ್ರಯಾಣಿಕರಿಗೆ ಗುಡ್‌ನ್ಯೂಸ್ ನೀಡಿದೆ. ಮಾರ್ಚ್ 22 ರಿಂದ ಜಾರಿಗೆ ಬರುವಂತೆ ರೈಲ್ವೆಯ ಎಸಿ-3 ಎಕಾನಮಿ ದರ್ಜೆಯಸ ಸೀಟ್‌ಗಳ ಟಿಕೆಟ್‌ಗಳ ದರವನ್ನು ಕಡಿಮೆ ಮಾಡಿ ಆದೇಶ ಹೊರಡಿಸಿದೆ. ಬುಧವಾರದಿಂದಲೇ ಇದು ಎಲ್ಲಾ ಕಡೆ ಜಾರಿಯಾಗಿದೆ. ಇದರೊಂದಿಗೆ ಈ ಹಿಂದೆ ಇದ್ದಂತೆ ಈ ಕೋಚ್‌ಗಳಲ್ಲಿ ಬೆಡ್‌ಶೀಟ್‌ಗಳನ್ನು ನೀಡುವ ವ್ಯವಸ್ಥೆಯೂ ಆರಂಭವಾಗಲಿದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ. ರೈಲ್ವೇ ಅಧಿಕಾರಿಗಳ ಪ್ರಕಾರ, ಆನ್‌ಲೈನ್‌ನಲ್ಲಿ ಮತ್ತು ಕೌಂಟರ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಿದ ಪ್ರಯಾಣಿಕರಿಗೆ ಮುಂಚಿತವಾಗಿ ಕಾಯ್ದಿರಿಸಿದ ಟಿಕೆಟ್‌ಗಳಿಗೆ ಹೆಚ್ಚುವರಿ ಮೊತ್ತವನ್ನು ಮರುಪಾವತಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದೆ. ಕಳೆದ ವರ್ಷ ರೈಲ್ವೇಸ್ ನೀಡಿದ್ದ ಸುತ್ತೋಲೆಯಲ್ಲಿ ಎಸಿ-3 ಎಕಾನಮಿ ದರ್ಜೆಯ ಟಿಕೆಟ್‌ಗಳು ಹಾಗೂ ಎಸಿ-3 ದರ್ಜೆಯ ಟಿಕೆಟ್‌ಗಳಿಗೆ ಒಂದೇ ರೀತಿಯ ಬೆಲೆ ನಿಗದಿ ಮಾಡಲಾಗಿತ್ತು. ಆದರೆ, ಈಗ ಎಸಿ-3 ಎಕಾನಮಿ ದರ್ಜೆಯ ಟಿಕೆಟ್‌ಗಳ ಬೆಲೆಯನ್ನು ಕಡಿಮೆ ಮಾಡಿ ಆದೇಶವನ್ನು ಪ್ರಕಟಿಸಿದೆ. ಇನ್ನು ಎಕಾನಮಿ ಎಸಿ ಕೋಚ್‌ಗಳಲ್ಲಿ ಹಿಂದಿನಂತೆಯೇ ಬ್ಲಾಂಕೆಟ್‌ಗಳು ಮತ್ತು ಬೆಡ್‌ಶೀಟ್‌ಗಳನ್ನು ಒದಗಿಸಲಾಗುತ್ತದೆ. ಇದಕ್ಕಾಗಿ ಹೆಚ್ಚಿನ ಮೊತ್ತ ನೀಡುವ ಅಗತ್ಯವಿಲ್ಲ ಎಂದೂ ಹೇಳಿದೆ.
ಅಗ್ಗದ ಎಸಿ ಪ್ರಯಾಣ: ಪ್ರಯಾಣಿಕರಿಗೆ ಉತ್ತಮ ರೀತಿಯ ಅಗ್ಗದ ಎಸಿ ಪ್ರಯಾಣ ವ್ಯವಸ್ಥೆ ನೀಡಬೇಕು ಎನ್ನುವ ಕಾರಣಕ್ಕಾಗಿ ರೈಲ್ವೇ ಮಂಡಳಿ ಎಸಿ-3 ಎಕಾನಮಿ ದರ್ಜೆಯ ಕೋಚ್‌ಗಳನ್ನು ಪರಿಚಯ ಮಾಡಿತ್ತು. ಎಂದಿನ ಎಸಿ-3 ಕೋಚ್‌ಗಳಿಂತ ಈ ಕೋಚ್‌ಗಳಲ್ಲಿ ದರ ಶೇ. 6 ರಿಂದ 7 ರಷ್ಟು ಕಡಿಮೆ ಇರುತ್ತದೆ. ರೈಲ್ವೆ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಎಸಿ-3 ದರ್ಜೆಯ ಕೋಚ್‌ಗಳಲ್ಲಿ ಬಟ್ಟು 72 ಸೀಟ್‌ಗಳು ಇರುತ್ತದೆ. ಇನ್ನು ಎಸಿ-3 ಎಕಾನಮಿ ದರ್ಜೆಯಲ್ಲಿ 80 ಸೀಟ್‌ಗಳು ಇರುತ್ತದೆ.
ಹಿರಿ ಜೀವಕ್ಕೆ ತೋರಿದ ಕಾಳಜಿ, ಒಂದು ಮೆಸೇಜ್‌ಗೆ ವಹಿಸಿದ ಮುತುವರ್ಜಿ, ಭಾರತೀಯ ರೈಲ್ವೇಸ್‌ಗೆ ನಮೋ ನಮಃ
ಅಗ್ಗದ ಎಸಿ ಪ್ರಯಾಣಕ್ಕಾಗಿ ರೈಲ್ವೆ ಪರಿಚಯಿಸಿದ್ದ ಎಸಿ-3 ಎಕಾನಮಿ ಕ್ಲಾಸ್‌ನಿಂದ ರೈಲ್ವೆ ಮೊದಲ ವರ್ಷದಲ್ಲಿಯೇ 231 ಕೋಟಿ ರೂಪಾಯಿಯ ಆದಾಯವನ್ನು ಗಳಿಸಿದೆ. ಮಾಹಿತಿಯ ಪ್ರಕಾರ, ಏಪ್ರಿಲ್-ಆಗಸ್ಟ್, 2022 ರ ಅವಧಿಯಲ್ಲಿ, 15 ಲಕ್ಷ ಜನರು ಈ ಬೋಗಿಗಳಲ್ಲಿ ಪ್ರಯಾಣಿಸಿದ್ದು, 177 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿದೆ.
Railway Budget 2023: ರೈಲ್ವೇಸ್‌ಗೆ ಈವರೆಗಿನ ದಾಖಲೆಯ ಹಣ ಮೀಸಲಿಟ್ಟ ಕೇಂದ್ರ!
ಇನ್ನೊಂದೆಡೆ ಎಕಾನಮಿ ಕ್ಲಾಸ್‌ನ ಎಸಿ ಬೋಗಿಗಳು ಪರಿಚಯ ಮಾಡಿದ್ದರಿಂದ ಎಸಿ ಬೋಗಿಗಳ ಬೇಡಿಕೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆ ಕಾರಣಕ್ಕಾಗಿ ಎಕಾನಮಿ ಕ್ಲಾಸ್‌ನ ಎಸಿ ಟಿಕೆಟ್ ದರವನ್ನು ಕಡಿಮೆ ಮಾಡುವ ತೀರ್ಮಾನ ಮಾಡಿದೆ.