Railway Budget 2023: ರೈಲ್ವೇಸ್‌ಗೆ ಈವರೆಗಿನ ದಾಖಲೆಯ ಹಣ ಮೀಸಲಿಟ್ಟ ಕೇಂದ್ರ!

ರೈಲ್ವೇಸ್‌ಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ದಾಖಲೆಯ 2.40 ಲಕ್ಷ ಕೋಟಿ ಹಣವನ್ನು ಮೀಸಲಿಟ್ಟಿದೆ. ಇದು 2013-14ರ ಬಜೆಟ್‌ಗೆ ಹೋಲಿಸಿದರೆ, 9 ಪಟ್ಟು ಅಧಿಕ ಹಣವಾಗಿದೆ.
 

Budget 2023 In Highest Ever Outlay Railway Gets Rs 2 40 Lakh Crore 9 Times Higher Than 2013 14 san

ನವದೆಹಲಿ (ಫೆ.1): ಕೇಂದ್ರ ಬಜೆಟ್‌ನಲ್ಲಿ ರೈಲ್ವೇಸ್‌ಗೆ ದೊಡ್ಡ ಮಟ್ಟದ ಹಣವನ್ನು ಮೀಸಲಿಟ್ಟಿದೆ. ಈ ಬಾರಿಯ ಬಜೆಟ್‌ನಲ್ಲಿ ಒಟ್ಟಾರೆ 2.40 ಲಕ್ಷ ಕೋಟಿ ರೂಪಾಯಿ ಹಣವನ್ನು ರೈಲ್ವೇಸ್‌ನ ಅಭಿವೃದ್ಧಿಗಾಗಿ ಮೀಸಲಿಡಲಾಗುವುದು ಎಂದು ವಿತ್ತ ಸಚಿನೆ ನಿರ್ಮಲಾ ಸೀತಾರಾಮನ್‌ ಸದನದಲ್ಲಿ ಘೋಷಣೆ ಮಾಡಿದ್ದಾರೆ. 2013 ಹಾಗೂ 14ರ ಹಣಕಾಸು ವರ್ಷದ ಬಜೆಟ್‌ನಲ್ಲಿ ಘೋಷಣೆ ಮಾಡಿದ ಹಣಕ್ಕಿಂತ 9 ಪಟ್ಟು ಹೆಚ್ಚು ಹಣವನ್ನು ರೈಲ್ವೇಸ್‌ಗಾಗಿ ಮೀಸಲಿಟ್ಟಿದ್ದೇವೆ ಎಂದು ಘೋಷಣೆ ಮಾಡಿದರು. ರೈಲ್ವೇಸ್‌ಗೆ ದೊಡ್ಡ ಮಟ್ಟದ ಹಣ ಘೋಷಣೆ ಆದ ಬೆನ್ನಲ್ಲಿಯೇ, ರೈಲ್ವೆ ಮೂಲಸೌಕರ್ಯದ ಷೇರುಗಳು ಮಾರುಕಟ್ಟೆಯಲ್ಲಿ ಏರಿಕೆ ಕಂಡವು. ಸಿಮನ್ಸ್‌, ಆರ್‌ವಿಎನ್‌ಎಲ್‌ ಹಾಗೂ ಕೆಇಸಿ ಇಂಟರ್‌ನ್ಯಾಷನಲ್‌ ಷೇರುಗಳು ಏರಿಕೆ ಕಂಡವು. ರೈಲ್ವೇಸ್‌ಗೆ 2009-2014ರ ವರೆಗೆ  ವರ್ಷಕ್ಕೆ ಸರಾಸರಿ 10, 623 ಕೋಟಿ ರೂಪಾಯಿ ಹಣ ಮೀಸಲಿಟ್ಟಿದ್ದರೆ, 2014 ರಿಂದ 2019ರವರೆಗೆ  ಸರಾಸರಿ 25 ಸಾವಿರ ಕೋಟಿ ರೂಪಾಯಿಯನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿತ್ತು. 2022-23ರಲ್ಲಿ 77, 271 ಕೋಟಿ ರೂಪಾಯಿಯನ್ನು ಸರ್ಕಾರ ಮೀಸಲಿಟ್ಟಿದ್ದರೆ, 2023-24ರಲ್ಲಿ ದಾಖಲೆಯ 2.40 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದೆ.

ನಿರ್ಮಲಾ ಸೀತಾರಾಮನ್‌ ಅವರು 100 'ನಿರ್ಣಾಯಕ ಸಾರಿಗೆ ಮೂಲಸೌಕರ್ಯ ಯೋಜನೆಗಳಿಗೆ' ರೂ 75,000 ಕೋಟಿಗಳನ್ನು ಘೋಷಣೆ ಮಾಡಿದ್ದಾರೆ. ಇದು ವಿಶೇಷವಾಗಿ ರೈಲ್ವೆಯ ಸರಕು ವ್ಯಾಪಾರಕ್ಕೆ ಸಹಾಯ ಮಾಡುವ ಸಾಧ್ಯತೆಯಿದೆ. ಕಲ್ಲಿದ್ದಲು, ರಸಗೊಬ್ಬರ ಮತ್ತು ಆಹಾರಧಾನ್ಯ ಕ್ಷೇತ್ರಗಳಿಗೆ ಈ ಯೋಜನೆಗಳನ್ನು ಯೋಜಿಸಲಾಗಿದೆ. ರಾಜಧಾನಿ, ಶತಾಬ್ದಿ, ದುರಂತೋ, ಹಮ್‌ಸಫರ್‌ ಮತ್ತು ತೇಜಸ್‌ನಂತಹ ಪ್ರೀಮಿಯರ್ ರೈಲುಗಳ 1,000 ಕೋಚ್‌ಗಳನ್ನು ನವೀಕರಿಸಲು ರೈಲ್ವೆ ಯೋಜನೆ ರೂಪಿಸುತ್ತಿದೆ.

Union Budget 2023: ನಿರೀಕ್ಷೆಯಂತೆ ಕರ್ನಾಟಕಕ್ಕೆ ವಿಶೇಷ ಅನುದಾನ ಘೋಷಿಸಿದ ನಿರ್ಮಲಾ...

ರೈಲುಗಳು ವೇಗವಾಗಿ ಚಲಿಸಲು ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್‌ನಂತಹ ಹೆಚ್ಚಿನ ರೈಲುಗಳನ್ನು ಪ್ರಾರಂಭಿಸಲು ಹಳೆಯ ಟ್ರ್ಯಾಕ್‌ಗಳನ್ನು ಬದಲಿಸಲು ರೈಲೇಸ್‌ ಬಜೆಟ್‌ನ ಹೆಚ್ಚಿನ ಹಣ ವಿನಿಯೋಗವಾಗಲಿದೆ. ಬಜೆಟ್ ಪ್ರಕಾರ, 35 ಹೈಡ್ರೋಜನ್ ಇಂಧನ ಆಧಾರಿತ ರೈಲುಗಳನ್ನು ತಯಾರಿಸಲು ಸರ್ಕಾರವು ಪ್ರಸ್ತಾಪಿಸಿದೆ. ಇದು ರಾಷ್ಟ್ರೀಯ ಸಾರಿಗೆ ಎಂದೇ ಹೇಳಲಾಗುವ ರೈಲ್ವೇಸ್‌ಗೆ ಇದುವರೆಗಿನ ಅತಿ ಹೆಚ್ಚು ಹಂಚಿಕೆಯಾಗಿದೆ.

Union Budget 2023 ಕೊಟ್ಟ ಮಾತಿನಂತೆ ನಡೆದುಕೊಂಡ ಮೋದಿ, ಉತ್ತಮ ಬಜೆಟ್ ಎಂದ ಯಡಿಯೂರಪ್ಪ!

ರೈಲ್ವೆಗೆ 2.41 ಲಕ್ಷ ಕೋಟಿ ರೂ. ಹಣ ಮೀಸಲಿಡಲಾಗಿದೆ. ಇದು ಒಂದು ದೊಡ್ಡ ಬದಲಾವಣೆ ಮತ್ತು ಇದು ಪ್ರಯಾಣಿಕರ ಆಕಾಂಕ್ಷೆಗಳನ್ನು ಪೂರೈಸುತ್ತದೆ. 'ಅಮೃತ್ ಭಾರತ್ ಸ್ಟೇಷನ್' ಯೋಜನೆಯಡಿ, 1275 ನಿಲ್ದಾಣಗಳನ್ನು ಮರು-ಅಭಿವೃದ್ಧಿ ಮಾಡಲಾಗುತ್ತಿದೆ. ವಂದೇ ಭಾರತ್ ರೈಲುಗಳ ಉತ್ಪಾದನೆಯನ್ನು ನವೀಕರಿಸಲಾಗುವುದು ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಹರಿಯಾಣ, ಮಹಾರಾಷ್ಟ್ರದಲ್ಲಿ ವಂದೇ ಭಾರತ್ ಉತ್ಪಾದನೆ: ಈಗ ಐಸಿಎಫ್ ಚೆನ್ನೈ ಅಲ್ಲದೆ, ಹರಿಯಾಣದ ಸೋನಿಪತ್ ಮತ್ತು ಮಹಾರಾಷ್ಟ್ರದ ಲಾತೂರ್‌ನಲ್ಲಿ ವಂದೇ ಭಾರತ್ ರೈಲುಗಳನ್ನು ತಯಾರಿಸಲಾಗುವುದು ಎಂದು ರೈಲ್ವೆ ಸಚಿವ ತಿಳಿಸಿದ್ದಾರೆ. ದೇಶದ ಪ್ರತಿ ಮೂಲೆ ಮೂಲೆಗೆ ವಂದೇ ಭಾರತ್‌ ರೈಲುಗಳನ್ನು ಸಂಪರ್ಕ ಮಾಡುವ ಪ್ರಧಾನಿ ಮೋದಿಯವರ ಕನಸು ನನಸಾಗಿಸುತ್ತದೆ ಎಂದು ಹೇಳಿದ್ದಾರೆ.
 

Latest Videos
Follow Us:
Download App:
  • android
  • ios