IITಯಲ್ಲಿ ರ‍್ಯಾಂಕ್, ಇಂಗ್ಲೆಂಡ್‌ನಲ್ಲಿ Ph.D, ಅಮೇರಿಕದಲ್ಲಿ ಉದ್ಯೋಗ ಕೈತುಂಬ ಸಂಬಳ ಎಣಿಸುತ್ತಿದ್ದ ಉದ್ಯೋಗ ತೊರೆದ ಕನ್ನಡಿಗ ಹೈನುಗಾರಿಗೆ ಮಾಡಿ ವಾರ್ಷಿಕ 44 ಕೋಟಿ ರೂಪಾಯಿ ಆದಾಯ

ಹೈದರಾಬಾದ್(ಮೇ.18): ಲಕ್ಷ ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ ಕೆಲವರು ಉದ್ಯೋಗ ತೊರೆದು ಕೃಷಿ, ಹೈನುಗಾರಿಕೆಗೆ ಮರಳುತ್ತಿರುವುದು ಮೊದಲಲ್ಲ. ಬಹುತೇಕರು ಯಶಸ್ಸು ಕಂಡಿದ್ದಾರೆ. ಹೀಗಿ ಅಮೇರಿಕದಲ್ಲಿ ಉದ್ಯೋಗ ತೊರೆದು ಭಾರತಕ್ಕೆ ಬಂದು ಹೈನುಗಾರಿ ಮಾಡಿ ಇದೀಗ ವರ್ಷಕ್ಕೆ 44 ಕೋಟಿ ರೂಪಾಯಿ ಆದಾಯ ಗಳಿಸುವ ಸ್ಪೂರ್ತಿಯ ಹಾಗೂ ಸಾಧನೆಯ ಕತೆ ಇಲ್ಲಿದೆ.

ಒಂಚೂರು ಜಮೀನಿಲ್ಲ, ಹೈನುಗಾರಿಕೆ ಮಾಡಿ ಇವರು ತಿಂಗಳಿಗೆ ಗಳಿಸ್ತಿರೋದು 45 ಸಾವಿರ

ಕಿಶೋರ್ ಇಂದುಕುರಿ, ಮೂಲ ಕರ್ನಾಟಕವಾದರೂ ಹೈದರಾಬಾದ್‌ನಲ್ಲಿ ಸೆಟಲ್. ಕಿಶೋರ್ ಪೋಷಕರು ಕರ್ನಾಟಕದಲ್ಲಿ ಕೃಷಿ ಭೂಮಿ ಹೊಂದಿದ್ದಾರೆ. ವಿದ್ಯಾಭ್ಯಾಸ ಸಮಯದಲ್ಲಿ, ಅಮೆರಿಕದಲ್ಲಿ ಕೆಲಸ ಮಾಡುತ್ತಿರುವಾಗ ಕಿಶೋರ್ ಪೋಷಕರ ಕೃಷಿ ಭೂಮಿಗೆ ತೆರಳಿ ನೆರವಾಗುತ್ತಿದ್ದರು. ಕೃಷಿಯಲ್ಲಿನ ಆಸಕ್ತಿ ಹೆಚ್ಚಾಗುತ್ತಿದ್ದಂತೆ ಕಿಶೋರ್, ಅಮೆರಿಕದ ಉದ್ಯೋಗ ತೊರದು ನೇರವಾಗಿ ಹೈದರಾಬಾದ್‌ಗೆ ಆಗಮಿಸಿ, ಹೈನುಗಾರಿಕೆಯಲ್ಲಿ ತೊಡಗಿದ್ದಾರೆ.

ಹರ್ಯಾಣದಲ್ಲಿ ದೇಶದ ಮೊದಲ ಕತ್ತೆ ಹಾಲಿನ ಡೈರಿ: 1 ಲೀ.ಗೆ 7000 ರೂ!

6 ವರ್ಷಗಳ ಉದ್ಯೋಗದಲ್ಲಿ ಕಿಶೋರ್‌ಗೆ ತೃಪ್ತಿ ಇರಲಿಲ್ಲ. 2012ರಲ್ಲಿ ಹೈದರಾಬಾದ್‌ಗೆ ಆಗಮಿಸಿದ ಕಿಶೋರ್, ಹಾಲಿನ ಕುರಿತು ಅಧ್ಯಯನ, ಸಂಶೋಧನೆ ಆರಂಭಿಸಿದ್ದರು. ಈ ವೇಳೆ ಹೈದರಾಬಾದ್‌ನಲ್ಲಿ ಆರೋಗ್ಯಭರಿತ ಹಾಲು ವಿರಳವಾಗಿತ್ತು. ಜೊತೆಗೆ ಕೈಗೆಟುವ ದರ ಕೂಡ ಇರಲಿಲ್ಲ. 

ಪರಿಣಾಣ ಕೊಯಂಬತ್ತೂರಿನಿಂದ 20 ಹಸುಗಳನ್ನು ಖರೀದಿಸಿದ ಕಿಶೋರ್, ಹೈನುಗಾರಿಕೆ ಆರಂಭಿಸಿದರು. ಸಿದ್ ಫಾರ್ಮ್ ಎಂಬ ಹೈನುಗಾರಿಕೆ ಸಂಸ್ಥೆ ರಿಜಿಸ್ಟ್ರೇಶನ್ ಮಾಡಲಾಯಿತು. ವರ್ಷದಿಂದ ವರ್ಷಕ್ಕೆ ಹೈನುಗಾರಿಕೆ ಅಭಿವೃದ್ಧಿ ಪಥದಲ್ಲಿ ಸಾಗಿತು. ಇದೀಗ ಪ್ರತಿ ದಿನ 10,000 ಲೀಟರ್ ಪ್ರತಿ ದಿನ ಗ್ರಾಹಕರಿಗೆ ನೀಡಲಾಗುತ್ತಿದೆ. 120ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಕಿಶೋರ್ ಗಳಿಸಿದ ವಾರ್ಷಿಕ ಆದಾಯ 44 ಕೋಟಿ ರೂಪಾಯಿ.

1 ಕೋಟಿ ರೂಪಾಯಿ ಬಂಡವಾಳ ಹಾಕಿ ಆರಂಭಿಸಿದ ಹೈನುಗಾರಿಕೆ ಇದೀಗ ಸಾವಿರ ಕೋಟಿ ರೂಪಾಯಿ ಸಂಸ್ಥೆಯಾಗಿ ಬೆಳೆದು ನಿಂತಿದೆ. ಕೊರೋನಾ ಸಮಯದಲ್ಲೂ ಕಿಶೋರ್ ಡೈರಿ ಹಾಲು ಪೂರೈಕೆ ಮಾಡುವುದನ್ನು ನಿಲ್ಲಿಸಿಲ್ಲ. ಹೀಗಾಗಿ ಆದಾಯದಲ್ಲೂ ಯಾವುದೇ ಕೊರತೆ ಆಗಿಲ್ಲ.